Bus Driver

ಬೆಂಗಳೂರು: ಕರ್ತವ್ಯ ನಿರತ BMTC ಬಸ್ ಚಾಲಕನ ಮೇಲೆ ಹಲ್ಲೆ
ಹಲ್ಲೆಯಿಂದ ಗಾಯಗೊಂಡ ಚಾಲಕ ಇಮಾಮ್ ಅವರನ್ನು ವೈದ್ಯಕೀಯ ಚಿಕಿತ್ಸೆಗಾಗಿ ತಕ್ಷಣವೇ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಯಿತು.

ಮಂಗಳೂರು: ಎದೆನೋವು ಕಾಣಿಸಿಕೊಂಡ ಯುವತಿಯ ಜೀವ ಉಳಿಸಿದ ಬಸ್ ಚಾಲಕ, ಕಂಡಕ್ಟರ್!
'ಬಸ್ ನ ಹಾರ್ನ್ ಅನ್ನು ಸೈರಲ್ ಆಗಿ ಬಳಸಿ, ಕೇವಲ ಆರು ನಿಮಿಷಗಳಲ್ಲಿ ಆರು ಕಿಲೋಮೀಟರ್ ದೂರದಲ್ಲಿದ್ದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

ಛತ್ರಿ ಹಿಡಿದು ಬಸ್ ಚಲಾಯಿಸಿದ್ದ ವಿಡಿಯೋ ವೈರಲ್; ಬಸ್‌ಗಳು ಸೋರಿಕೆಯಾಗದಂತೆ ನೋಡಿಕೊಳ್ಳಲು KSRTC ಮುಂದು
ಬಸ್‌ಗಳನ್ನು ಮುಂಗಾರಿಗೆ ಸಿದ್ಧವಾಗಿಡಲು ಮತ್ತು ಯಾವುದೇ ಬಸ್‌ನಲ್ಲಿ ಸೋರಿಕೆಯಾಗದಂತೆ ನೋಡಿಕೊಳ್ಳಲು ಅಗತ್ಯ ಕ್ರಮ ಕೈಗೊಳ್ಳುವಂತೆ ಕೆಎಸ್‌ಆರ್‌ಟಿಸಿ ಎಲ್ಲ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಸೂಚನೆ ನೀಡಿದೆ.

ಬುರ್ಖಾ ಧರಿಸಿ ಬಾ... ಇಲ್ಲದಿದ್ದರೆ ಬಸ್ಸಿಗೆ ಹತ್ತಲು ಬಿಡೋದಿಲ್ಲ: ಕಲಬುರಗಿಯಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರ ಮೇಲೆ ಬಸ್ ಚಾಲಕ ಆವಾಜ್!
ಬುರ್ಖಾ ಧರಿಸದೆ ಬಂದ ವಿದ್ಯಾರ್ಥಿನಿಯನ್ನು ಬಸ್ಸಿಗೆ ಹತ್ತಲು ಚಾಲಕ ಬಿಡದಿದ್ದ ಘಟನೆ ಕಲಬುರಗಿಯಲ್ಲಿ ನಡೆದಿದೆ. ತಮ್ಮೂರಿಗೆ ಹೊರಟಿದ್ದ ಹಿಜಬ್‌ಧಾರಿ ವಿದ್ಯಾರ್ಥಿನಿಯರಿಗೆ, ಬುರ್ಖಾ (Burqa) ಧರಿಸಿ ಬರುವಂತೆ ಹೇಳಿ ಬಸ್ ಹತ್ತಲು ಸರ್ಕಾರಿ ಬಸ್ ಚಾಲಕ ಅವಕಾಶ ನೀಡಲಿಲ್ಲ.

ಬಸ್ ಚಾಲಕನಿಗೆ ಹೃದಯಾಘಾತ: ಸ್ಟೀರಿಂಗ್ ಹಿಡಿದು ಬಸ್ ನಿಲ್ಲಿಸಿ ದೊಡ್ಡ ಅನಾಹುತ ತಪ್ಪಿಸಿದ ವಿದ್ಯಾರ್ಥಿನಿ!
ಬಸ್ ಚಲಾಯಿಸುತ್ತಿದ್ದಾಗಲೇ ಚಾಲಕನಿಗೆ ಹೃದಯಾಘಾತವಾಗಿದ್ದು ನೋವಿನಿಂದ ಬಳಲಿದ್ದಾನೆ. ಈ ವೇಳೆ ಸಮಯಪ್ರಜ್ಞೆ ಮೆರೆದ ವಿದ್ಯಾರ್ಥಿನಿಯೊಬ್ಬಳು ಬಸ್ ಸ್ಟೀರಿಂಗ್ ಹಿಡಿದು ಬಸ್ ನಿಲ್ಲಿಸಿ ದೊಡ್ಡ ಅನಾಹುತ ತಪ್ಪಿದ್ದಾಳೆ. ಇದೀಗ ವಿದ್ಯಾರ್ಥಿನಿಯ ಧೈರ್ಯವನ್ನು ಎಲ್ಲರೂ ಶ್ಲಾಘಿಸುತ್ತಿದ್ದಾರೆ.

ಮಾಸ್ಕ್ ಧರಿಸಿ ಎಂದ ಬಸ್ ಚಾಲಕನ ಪ್ರಾಣ ತೆಗೆದ ಮೂವರು ಪ್ರಯಾಣಿಕರು!
ಬಸ್ ಏರಿದ ಪ್ರಯಾಣಿಕರಿಗೆ ಮುಖ ಗವುಸು ಧರಿಸಲು ಸೂಚಿಸಿದ ಬಸ್ ಚಾಲಕನ ಮೇಲೆ ಕುಪಿತಗೊಂಡ ಮೂವರು ಕಬ್ಬಿಣದ ರಾಡುಗಳಿಂದ ಮನಸೋಇಚ್ಚೆ ಥಳಿಸಿದರು. ಇದರಿಂದ ತೀವ್ರ ಗಾಯಗೊಂಡ ಚಾಲಕ ಆಸ್ಪತ್ರೆಯಲ್ಲಿ ಶುಕ್ರವಾರ ಮೃತಪಟ್ಟಿದ್ದಾನೆ. ತಮ್ಮ ಒಳಿತಿಗಾಗಿ ಹೇಳಿದ್ದನ್ನು ಅರ್ಥ ಮಾಡಿಕೊಳ್ಳದೆ ವ್ಯಕ್ತಿಯ ಪ್ರಾಣವನ್ನು ತೆಗೆದ ಘಟನೆ ಫ್ರಾನ್ಸ್ ನಲ್ಲಿ ನಡೆದಿದೆ.

ಕಾಲೇಜು ಹುಡುಗಿಯರನ್ನು ಗೋವಾ ಟ್ರಿಪ್ ಗೆ ಕರೆದೊಯ್ದ ಬಸ್ ಚಾಲಕನ ಲೈಸೆನ್ಸ್ ರದ್ದು!
ಕಾಲೇಜ್ ಹುಡುಗಿಯರನ್ನು ಗೋವಾ ಟ್ರಿಪ್ ಗೆ ಕರೆದೊಯ್ದ ಬಸ್ ಚಾಲಕನ ಲೈಸೆನ್ಸ್ ರದ್ದುಗೊಂಡಿರುವ ಘಟನೆ ಕೇರಳದ ವೈನಾಡಿನಲ್ಲಿ ನಡೆದಿದೆ.

ಮಂಡ್ಯ ಬಸ್ ದುರಂತ: 30 ಜನರ ಸಾವಿಗೆ ಕಾರಣನಾದ ಚಾಲಕನಿಗೆ ನ್ಯಾಯಾಂಗ ಬಂಧನ
ನವೆಂಬರ್ 24ರಂದು ಮಂಡ್ಯದ ಪಾಂಡವಪುರ ಕನಗನಮರಡಿ ನಲ್ಲಿ ಸಂಭವಿಸಿದ ಭೀಕರ ಬಸ್ ದುರಂತದಲ್ಲಿ 30 ಜನರ ಸಾವಿಗೆ ಕಾರಣವಾಗಿದ್ದ ಬಸ್ ಚಾಲಕನನ್ನು ಬಂಧಿಸಲಾಗಿದೆ.

ದಾವಣಗೆರೆ: ಮಂಗನ ಕೈಗೆ ಸ್ಟಿಯರಿಂಗ್ ಕೊಟ್ಟ ಚಾಲಕ, ಜೀವ ಕೈಯ್ಯಲ್ಲಿ ಹಿಡಿದು ಕೂತ ಪ್ರಯಾಣಿಕರು! ವಿಡಿಯೋ ವೈರಲ್
ಕೋತಿಯೊಂದು ಚಾಲಕನೊಂದಿಗೆ ಸ್ಟಿಯರಿಂಗ್ ಮೇಲೆ ಕುಳಿತು ತಾನೂ ಡ್ರೈವಿಂಗ್ ಮಾಡಿದ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ...

