BSNL

ಹದಗೆಟ್ಟ ಸಂಬಂಧ: 4ಜಿಗೆ ಚೀನಾ ಉಪಕರಣ ಬಳಸದಂತೆ ಬಿಎಸ್ಎನ್ಎಲ್'ಗೆ ಕೇಂದ್ರ ಸೂಚನೆ?
ಲಡಾಖ್ ಗಡಿಯಲ್ಲಿ ಭಾರತದ ಯೋಧರನ್ನು ಚೀನಾ ಹತ್ಯೆಗೈದ ಬೆನ್ನಲ್ಲೇ, ಬಿಎಸ್ಎನ್ಎಲ್ ಜಾಲವನ್ನು 4ಜಿಗೆ ಉನ್ನತೀಕರಿಸುವ ಪ್ರಕ್ರಿಯೆಯಲ್ಲಿ ಚೀನಾ ಸಲಕರಣೆಗಳನ್ನು ಬಳಕೆ ಮಾಡದಂತೆ ಕೇಂದ್ರ ಸರ್ಕಾರ ಸೂಚಿಸಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಬಿಎಸ್ ಎನ್ ಎಲ್ ನಿಂದ ತಿಂಗಳ ಕಾಲ ಉಚಿತ ಬ್ರಾಡ್ ಬ್ಯಾಂಡ್ ಸೇವೆ
ಸರ್ಕಾರಿ ಸ್ವಾಮ್ಯದ ಬಿಎಸ್ ಎನ್ ಎಲ್ ಲ್ಯಾಂಡ್ ಲೈನ್ ಗ್ರಾಹಕರು ಮತ್ತು ಹೊಸ ಗ್ರಾಹಕರು 'ಮನೆಯಿಂದಲೇ ತಮ್ಮ ಕೆಲಸ ಮಾಡಲು ಅನುಕೂಲವಾಗುವಂತೆ ಒಂದು ತಿಂಗಳ ಉಚಿತ ಬ್ರಾಡ್ ಬ್ಯಾಂಡ್ ಸೇವೆ ಒದಗಿಸುವುದಾಗಿ ಘೋಷಣೆ ಮಾಡಿದೆ

ಕೊರೋನಾ ವೈರಸ್ ಕುರಿತು ಅರಿವು ಮೂಡಿಸಲು ಕಾಲರ್ ಟ್ಯೂನ್ ಬಳಕೆ
ಚೀನಾದಲ್ಲಿ ಮರಣ ಮೃದಂಗ ಬಾರಿಸುತ್ತಿರುವ ಕೊರೋನಾ ವೈರಸ್ ಇದೀಗ ಭಾರತದಲ್ಲೂ ಭೀತಿಯನ್ನು ಹುಟ್ಟಿಸಿದ್ದು, ಈ ಹಿನ್ನೆಲೆಯಲ್ಲಿ ವೈರಸ್ ಕುರಿತು ಅರಿವು ಮೂಡಿಸುವ ಸಲುವಾಗಿ ರಿಂಗ್ ಟೋನ್ ಬದಲಿಗೆ ಕೊರೋನಾ ಜಾಗೃತಿ ಕುರಿತ ಸಂದೇಶಗಳನ್ನು ಕಾಲ್ ಟ್ಯೂನ್ ಆಗಿ ಹಾಕುವಂತೆ ಟಲಿಕಾಂ ಇಲಾಖೆ (ಡಿಒಟಿ) ಟೆಲಿಕಾಂ ಆಪರೇಟರ್ ಗಳಿಗೆ ಸೂಚಿಸಿದೆ ಎಂದು ತಿಳಿದುಬಂದಿದೆ.

1,000 ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಲು ಇಇಎಸ್ಎಲ್ ಬಿಎಸ್ಎನ್ಎಲ್ ಒಡಂಬಡಿಕೆ
ಎಲೆಕ್ಟ್ರಿಕ್ ವಾಹನಗಳಿಗೆ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಲು ಬಿಎಸ್ಎನ್ಎಲ್ ಜೊತೆ ಆರಂಭಿಕ ಒಪ್ಪಂದಕ್ಕೆ ಸಹಿ ಹಾಕಲಾಗಿದೆ ಎಂದು ಸರ್ಕಾರಿ ಸ್ವಾಮ್ಯದ ಎನರ್ಜಿ ಎಫಿಷಿಯೆನ್ಸಿ ಸರ್ವೀಸಸ್ ಲಿಮಿಟೆಡ್ (ಇಇಎಸ್ಎಲ್) ಮಂಗಳವಾರ ತಿಳಿಸಿದೆ.

ಬಿಎಸ್ಎನ್ ಎಲ್ ವಿಆರ್ ಎಸ್ ಯೋಜನೆಗೆ ಅರ್ಜಿ ಹಾಕಿದವರು 77 ಸಾವಿರಕ್ಕೂ ಅಧಿಕ ಸಿಬ್ಬಂದಿ!
ಸ್ವಯಂ ನಿವೃತ್ತಿ ಯೋಜನೆ(ವಿಆರ್ ಎಸ್)ಗೆ ಭಾರತೀಯ ದೂರ ಸಂಚಾರ ನಿಗಮದ 77 ಸಾವಿರಕ್ಕೂ ಅಧಿಕ ಉದ್ಯೋಗಿಗಳು ಮೊರೆ ಹೋಗಿದ್ದಾರೆ.

70,000 ಬಿಎಸ್‌ಎನ್‌ಎಲ್ ಉದ್ಯೋಗಿಗಳಿಂದ ವಿಆರ್‌ಎಸ್ ಆಯ್ಕೆ
ಕಳೆದ ವಾರ ಪ್ರಾರಂಭಿಸಲಾದ ವಿಆರ್‌ಎಸ್ ಯೋಜನೆಗೆ ಉತ್ತಮ ಪ್ರತಿಕಿಯೆ ವ್ಯಕ್ತವಾಗಿದ್ದು ಬಿಎಸ್‌ಎನ್‌ಎಲ್‌ನ 70,000 ಉದ್ಯೋಗಿಗಳು ಈಗಾಗಲೇ ಯೋಜನೆಗೆ ತಮ್ಮ ಆಯ್ಕೆಯನ್ನು ಸೂಚಿಸಿದ್ದಾರೆ ಎಂದು ಸರ್ಕಾರಿ ಸ್ವಾಮ್ಯದ ಟೆಲಿಕಾಂ ನಿಗಮದ ಅಧ್ಯಕ್ಷ ಮತ್ತು ಎಂಡಿ ಪಿ ಕೆ ಪುರ್ವಾರ್ ತಿಳಿಸಿದ್ದಾರೆ.

10 ತಿಂಗಳ ವೇತನ ಬಾಕಿ: ಕಚೇರಿಯಲ್ಲೇ ಬಿಎಸ್ ಎನ್ ಎಲ್ ಉದ್ಯೋಗಿ ಆತ್ಮಹತ್ಯೆಗೆ ಶರಣು
ಕಳೆದ 10 ತಿಂಗಳಿಂದಲೂ ವೇತನ ಬಾರದಕ್ಕೆ ಜಿಗುಪ್ಸೆಗೊಂಡ ಸರ್ಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ ನಿಯಮಿತ(ಬಿಎಸ್ಎನ್ಎಲ್)ದ ಗುತ್ತಿಗೆ ನೌಕರರೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೇರಳದ ಮಲಾಪುರಂ ಜಿಲ್ಲೆಯಲ್ಲಿ ನಡೆದಿದೆ.

ಬಿಎಸ್ಎನ್ಎಲ್, ಎಂಟಿಎನ್ಎಲ್ ವಿಲೀನಕ್ಕೆ ಕೇಂದ್ರ ಸಂಪುಟ ಅಸ್ತು, ಟೆಲಿಕಾಂ ಸಂಸ್ಥೆಗಳ ಪುನರುಜ್ಜೀವನಕ್ಕೆ 4 ಹಂತಗಳ ಯೋಜನೆ
ನಷ್ಟದ ಹಾದಿ ಹಿಡಿರಿರುವ ಟೆಲಿಕಾಂ ಕಂಪೆನಿಗಳಾದ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (ಬಿಎಸ್ಎನ್ಎಲ್) ಮತ್ತು ಮಹಾನಗರ ಟೆಲಿಫೋನ್ ನಿಗಮ್ ಲಿಮಿಟೆಡ್ (ಎಂಟಿಎನ್ಎಲ್) ನ ಪುನರುಜ್ಜೀವನ ಪ್ಯಾಕೇಜ್ ಗೆ ಕೇಂದ್ರ ಸಚಿವ ಸಂಪುಟ ಮಹತ್ವದ ತೀರ್ಮಾನ ತೆಗೆದುಕೊಂಡಿದೆ. ಅಂತೆಯೇ ಈ ಎರಡೂ ಸಂಸ್ಥೆಗಳ ವಿಲೀನ ಪ್ರಸ್ತಾಪಕ್ಕೆ ಸಹ ಸಚಿವ ಸಂಪುಟ ಅನುಮೋದನೆ ನೀಡಿದೆ.

4ಜಿ ಸೇವೆ ಪ್ರಾರಂಭಕ್ಕೆ ಬಿಎಸ್ಎನ್ಎಲ್ ಸಿದ್ದತೆ, ಶೀಘ್ರದಲ್ಲೇ ಗ್ರಾಹಕರಿಗೆ ವೀಡಿಯೊ ಕರೆ ಸೌಲಭ್ಯ
ತನ್ನ ಪ್ರತಿಸ್ಪರ್ಧಿ ಸಂಸ್ಥೆಗಲಾದ ರಿಲಯನ್ಸ್ ಜಿಯೋ, ಏರ್‌ಟೆಲ್, ವೊಡಾಫೋನ್ ಗಳಿಂದ ಗ್ರಾಹಕರನ್ನು ಪುನಃ ತನ್ನತ್ತ ಸೆಳೆದುಕೊಳ್ಳಲು ಬಿಎಸ್‌ಎನ್‌ಎಲ್ ಮುಂದಾಗಿದ್ದು ಈ ನಿಟ್ಟಿನಲ್ಲಿ ’ತನ್ನ 4ಜಿ ಸೇವೆಯನ್ನು ದೇಶಾದ್ಯಂತ ವಿಸ್ತರಿಸಲು ತೀರ್ಮಾನಿಸಿದೆ.

