bribe

ಲಂಚ ಸ್ವೀಕರಿಸುತ್ತಿದ್ದಾಗ ಸಿಕ್ಕಿಬಿದ್ದ 'ಪ್ರಾಮಾಣಿಕ ಪ್ರಶಸ್ತಿ' ಪಡೆದಿದ್ದ ಮಹಿಳಾ ಎಸ್ಐ: ವಿಡಿಯೋ ವೈರಲ್!
ಪ್ರಮಾಣಿಕತೆಗಾಗಿ ಪ್ರಶಸ್ತಿ ಪಡೆದಿದ್ದ ಭಿವಾನಿಯಲ್ಲಿ ಬವಾನಿ ಖೇಡಾ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಲಂಚ ಪಡೆಯುತ್ತಿದ್ದಾಗ ವಿಜಿಲೆನ್ಸ್ ತಂಡ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದೆ. ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿದ ಹಿಸಾರ್ ಮತ್ತು ಭಿವಾನಿ ವಿಜಿಲೆನ್ಸ್ ಇಲಾಖೆಯ ಜಂಟಿ ತಂಡವು ಅವರನ್ನು ಬಂಧಿಸಿದೆ.

ಲಂಚ ಸ್ವೀಕರಿಸಿದ್ದ ಕಂದಾಯ ನಿರೀಕ್ಷಕನಿಗೆ 5 ವರ್ಷ ಜೈಲು ಶಿಕ್ಷೆ, ರೂ 4 ಲಕ್ಷ ದಂಡ ವಿಧಿಸಿದ ನ್ಯಾಯಾಲಯ
ಲಂಚಕ್ಕೆ ಬೇಡಿಕೆ ಇಟ್ಟು ಸಿಕ್ಕಿಬಿದ್ದಿದ್ದ ಕಂದಾಯ ನಿರೀಕ್ಷಕನೊಬ್ಬನಿಗೆ ವಿಶೇಷ ನ್ಯಾಯಾಲಯ ಐದು ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿದ್ದು, 4 ಲಕ್ಷ ರೂಪಾಯಿ ದಂಡ ಪಾವತಿಸುವಂತೆ ಆದೇಶಿಸಿದೆ.

ಲಂಚದ ಆಮಿಷ: ಡಿಸೈನರ್ ವಿರುದ್ಧ ದೂರು ದಾಖಲಿಸಿದ ಮಹಾರಾಷ್ಟ್ರ ಡಿಸಿಎಂ ಫಡ್ನವಿಸ್ ಪತ್ನಿ!
ತಮಗೆ ಲಂಚದ ಆಮಿಷವೊಡ್ಡಲು ಬಂದಿದ್ದ ಡಿಸೈನರ್ ವಿರುದ್ಧ ಮಹಾರಾಷ್ಟ್ರ ಡಿಸಿಎಂ ದೇವೇಂದ್ರ ಫಡ್ನವೀಸ್ ಪತ್ನಿ ಅಮೃತಾ ಫಡ್ನವೀಸ್ ಪೊಲೀಸರಿಗೆ ದೂರು ನೀಡಿದ್ದಾರೆ.

ಲೋಕಾಯುಕ್ತ ದಾಳಿ: ಶಾಸಕ ಪುತ್ರನ ಕಚೇರಿ-ನಿವಾಸದಲ್ಲಿ ಸಿಕ್ಕಿದ್ದು 8 ಕೋಟಿ ರೂ. ಗೂ ಅಧಿಕ ನಗದು, ಸಿಎಂ ಹೇಳಿದ್ದೇನು?
ಗುತ್ತಿಗೆದಾರರಿಂದ 40 ಲಕ್ಷ ಲಂಚ ಪಡೆದು ಸಿಕ್ಕಿಬಿದ್ದಿದ್ದ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ಪುತ್ರ ಮಾಡಾಳ್ ಪ್ರಶಾಂತ್‌ಕುಮಾರ್ ಮನೆಯಲ್ಲಿ ಲೋಕಾಯುಕ್ತ ಪೊಲೀಸರು 6 ಕೋಟಿ 10 ಲಕ್ಷ ರೂಪಾಯಿ ವಶಪಡಿಸಿಕೊಂಡಿದ್ದಾರೆ. ಅವರ ಕಚೇರಿಯಲ್ಲಿ 2 ಕೋಟಿ 2 ಲಕ್ಷ ರೂಪಾಯಿ ಪತ್ತೆಯಾಗಿದೆ.

ಬಳ್ಳಾರಿ: ಲಂಚ ಪಡೆಯುತ್ತಿದ್ದ ಮೂವರು ಪುರಾತತ್ವ ಇಲಾಖೆಯ ಅಧಿಕಾರಿಗಳನ್ನು ಬಂಧಿಸಿದ ಸಿಬಿಐ
ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ (ಎಎಸ್‌ಐ) ಮೂವರು ಉದ್ಯೋಗಿಗಳನ್ನು ಕೇಂದ್ರೀಯ ತನಿಖಾ ದಳ (ಸಿಬಿಐ) ಗುರುವಾರ ಬಳ್ಳಾರಿಯಲ್ಲಿ ಬಂಧಿಸಿದೆ.

ರಾಮನಗರ: ಬಾಣಂತಿ ಡಿಸ್ಚಾರ್ಜ್ ಗೆ ಲಂಚಕ್ಕೆ ಬೇಡಿಕೆ ಇಟ್ಟಿದ್ದ ವೈದ್ಯರಾದ ಶಶಿಕಲಾ, ಐಶ್ವರ್ಯ ಅಮಾನತು
ಬಾಣಂತಿಯನ್ನು ಡಿಸ್ಚಾರ್ಜ್ ಮಾಡಲು 6000 ಲಂಚ ಕೇಳಿದ್ದ ರಾಮನಗರ ಜಿಲ್ಲೆ ಬಿಡದಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಲ್ಲಿ ಒಬ್ಬರಾಗಿರುವ ಪ್ರಸೂತಿ ತಜ್ಞೆ ಡಾ. ಶಶಿಕಲಾ ಹಾಗೂ ಡಾ. ಐಶ್ವರ್ಯರನ್ನು ಅಮಾನತು ಮಾಡಲಾಗಿದೆ.

ಜಮೀನಿನ ಖಾತೆ ಬದಲಾವಣೆಗಾಗಿ ಲಂಚ ಸ್ವೀಕಾರ: ಕಿತ್ತೂರು ತಹಶೀಲ್ದಾರ್ ಲೋಕಾಯುಕ್ತ ಬಲೆಗೆ, ಹಲವು ದಾಖಲೆ, 10 ಲಕ್ಷ ನಗದು ವಶ
ಲಂಚ ತೆಗೆದುಕೊಳ್ಳುತ್ತಿದ್ದ ಸಂದರ್ಭದಲ್ಲೇ ಸಿಕ್ಕಿಬಿದ್ದ ಚನ್ನಮ್ಮನ ಕಿತ್ತೂರು ತಹಶೀಲ್ದಾರ್ ಮನೆ ಹಾಗೂ ಕಚೇರಿಯನ್ನು ಲೋಕಾಯುಕ್ತ ಪೊಲೀಸರು ಶುಕ್ರವಾರ ತಡರಾತ್ರಿಯೂ ಜಾಲಾಡಿದರು.

ಇದು ಹೈಟೆಕ್ ಭ್ರಷ್ಟಾಚಾರ: ಚೆಕ್ ಪೋಸ್ಟ್ ನಲ್ಲಿ ಯುಪಿಐ ಆಪ್ ಮೂಲಕ ಲಂಚ ಪಡೆಯುವ ಅಧಿಕಾರಿಗಳು!
ಕರಾವಳಿ ನಗರ ಮಂಗಳೂರು ಸಮೀಪದ ಗಡಿ ತಲಪಾಡಿಯಲ್ಲಿರುವ ಅಂತಾರಾಜ್ಯ ಚೆಕ್‌ಪೋಸ್ಟ್‌ನಲ್ಲಿ ಸಾರಿಗೆ ಇಲಾಖೆ ಅಧಿಕಾರಿಗಳ ಮೇಲೆ ಮಂಗಳೂರು ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ.

ಬೆಂಗಳೂರು: ಪಡೆದ ಲಂಚದ ಹಣವನ್ನು ಹಿಂತಿರುಗಿಸುವ ವೇಳೆ ಪೊಲೀಸರಿಂದ ಕೆಎಎಸ್ ಅಧಿಕಾರಿ ಬಂಧನ
ಲಂಚ ಪಡೆಯುವಾಗ ಅಧಿಕಾರಿಗಳನ್ನು ಲೋಕಾಯುಕ್ತ ಪೊಲೀಸರು ಬಂಧಿಸುವುದು ವಾಡಿಕೆ. ಆದರೆ ಇಲ್ಲೊಂದು ವಿಭಿನ್ನ ಪ್ರಕರಣದಲ್ಲಿ ಪಡೆದ ಲಂಚದ ಹಣವನ್ನು ವಾಪಸ್ ನೀಡುವ ವೇಳೆ ಕೆ ಎಎಸ್ ಅಧಿಕಾರಿಯೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

