bribe

‘ಡ್ರಿಂಕ್ ಆ್ಯಂಡ್ ಡ್ರೈವ್’ ಪ್ರಕರಣ: ಲಂಚ ಕೊಡಲು ನಿರಾಕರಿಸಿದ್ದಕ್ಕೆ ಹಲ್ಲೆ; ಪೊಲೀಸರ ವಿರುದ್ಧ ಯುವಕನ ಆರೋಪ
ನ್ಯಾಯಾಲಯಕ್ಕೆ ಹೋದರೆ 10,000 ರೂ.ದಂಡ ಕಟ್ಟಬೇಕಾಗುತ್ತದೆ, ಇಲ್ಲಿಯೇ 3,000 ರೂ. ಕೊಟ್ಟು ಹೋಗು ಎಂದು ಪೊಲೀಸರು ಹೇಳಿದ್ದರು.

Watch | ಮಂಡ್ಯದ ವಿಸಿ ನಾಲೆಗೆ ಬಿದ್ದ ಕಾರು, ಓರ್ವ ಸಾವು; ಲಂಚಕ್ಕೆ ಬೇಡಿಕೆ ಇಟ್ಟ ಪ್ರಾಧ್ಯಾಪಕಿ ಬಂಧನ; footpath ಮೇಲೆ ದ್ವಿಚಕ್ರ ವಾಹನ ಓಡಿಸಿದರೆ DL ರದ್ದು!

ವಿದ್ಯುತ್ ಸಂಪರ್ಕ ಕಡಿತಗೊಳಿಸುವ ಬೆದರಿಕೆ: ವೈದ್ಯರಿಂದ 20 ಸಾವಿರ ರೂ ಲಂಚ ಪಡೆದ ಬೆಸ್ಕಾಂ ಅಧಿಕಾರಿಗಳು!
ಸಹಾಯಕ ಇಂಜಿನಿಯರ್ ವೀರೇಶ್ ಮತ್ತು ಅವರ ಸಹೋದ್ಯೋಗಿ ಸುಬ್ರಮಣಿಯನ್ ಅವರು ನನಗೆ 1 ಲಕ್ಷ ರೂಪಾಯಿ ದಂಡ ವಿಧಿಸುವುದಾಗಿ ಬೆದರಿಕೆ ಹಾಕಿದರು. ನಾನು ಕಾನೂನನ್ನು ಉಲ್ಲಂಘಿಸಿಲ್ಲ ಎಂದು ನನಗೆ ತಿಳಿದಿದ್ದರಿಂದ ನಾನು ಅಷ್ಟು ಹಣ ಪಾವತಿಸಲು ಸಿದ್ಧನಿರಲಿಲ್ಲ.

ಫೋನ್ ಪೇ ಮೂಲಕ ಲಂಚ ಪಡೆದ ಆರೋಪ: 3 ಅಧಿಕಾರಿಗಳ ವಿರುದ್ದ FIR ದಾಖಲು
ಎಚ್.ಡಿ.ಕೋಟೆ ತಾಲೂಕಿನ ತಹಶೀಲ್ದಾರ್ ಶ್ರೀನಿವಾಸ್, ಅಂತರಸಂತೆ ಕಂದಾಯ ನಿರೀಕ್ಷಕ ಗೋವಿಂದರಾಜು, ಎನ್.ಬೆಳತ್ತೂರು ಗ್ರಾಮದ ಗ್ರಾಮ ಲೆಕ್ಕಾಧಿಕಾರಿ ನಾಗರಾಜ್ ವಿರುದ್ಧ ಪ್ರಕರಣ ದಾಖಲಾಗಿದೆ.

ಗುಜರಾತ್: ಲಂಚಕ್ಕೆ ಐಫೊನ್ 16 ಪ್ರೋ ಬೇಡಿಕೆ ಮುಂದಿಟ್ಟ ಪೊಲೀಸ್ ಅಧಿಕಾರಿ ಬಂಧನ
ಗುಜರಾತ್ ನ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) 1.44 ಲಕ್ಷ ರೂಪಾಯಿ ಮೌಲ್ಯದ ಫೋನ್ ನೀಡುವಂತೆ ಇಂಧನ ವ್ಯಾಪಾರಿಯ ಬಳಿ ಬೇಡಿಕೆ ಇಟ್ಟಿದ್ದರು ಎಂದು ಎಸಿಬಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

16.5 ಲಕ್ಷ ರೂ ಲಂಚ ಸ್ವೀಕರಿಸುತ್ತಿದ್ದ ಇಬ್ಬರು BESCOM ಅಧಿಕಾರಿಗಳು ಲೋಕಾಯುಕ್ತ ಬಲೆಗೆ
ವಿಜಯ ಕುಮಾರ್ ಅವರು ನೀಡಿದ ದೂರಿನ ಮೇರೆಗೆ ಕರ್ನಾಟಕ ಲೋಕಾಯುಕ್ತ ಬೆಂಗಳೂರು ಗ್ರಾಮಾಂತರ ಜಿಲ್ಲೆ ಪೊಲೀಸ್ ಠಾಣೆ ಮೊಸಂ: 16/2024 ಕಲಂ 7(a) ಪಿ.ಸಿ ಕಾಯ್ದೆ 1988 (ತಿದ್ದುಪಡಿ 2018) ರಂತೆ ಪ್ರಕರಣ ದಾಖಲಾಗಿತ್ತು.

ಮಾಸಿಕ 6,000 ರೂ ಲಂಚಕ್ಕೆ ಪೇದೆ ಡಿಮ್ಯಾಂಡ್: KSRP ಇನ್ಸ್ಪೆಕ್ಟರ್ ಲೋಕಾಯುಕ್ತ ಬಲೆಗೆ
ಪೊಲೀಸ್ ಪೇದೆ ಪ್ರತಿ ತಿಂಗಳು ಇನ್ಸ್ಪೆಕ್ಟರ್ ಗೆ 6,000 ರೂಪಾಯಿ ಲಂಚ ನೀಡುತ್ತಿದ್ದ ಈ ವರೆಗೂ 50,000 ರೂಪಾಯಿ ನೀಡಿದ್ದಾನೆ ಎಂದು ತಿಳಿದುಬಂದಿದೆ.

ಮಹರ್ಷಿ ವಾಲ್ಮೀಕಿ ನಿಗಮ ಅವ್ಯವಹಾರ: ಕರ್ನಾಟಕ ಸರ್ಕಾರ ಎಷ್ಟು ಪರ್ಸೆಂಟ್ ಕಪ್ಪ ನೀಡಿದೆ?: ರಾಹುಲ್ ಗಾಂಧಿಗೆ ಬಿಜೆಪಿ ಪ್ರಶ್ನೆ
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪಾಸ್ಟ್ ಮಾಡಿರುವ ಬಿಜೆಪಿ ನಾಯಕ ಸುನೀಲ್ ಕುಮಾರ್, ಮಹರ್ಷಿ ವಾಲ್ಮೀಕಿ ನಿಗಮದಲ್ಲಿ ರಾಜ್ಯ ಸರ್ಕಾರ ಹೈಕಮಾಂಡ್ ಗೆ ಎಷ್ಟು ಪರ್ಸೆಂಟ್ ಕಪ್ಪ ನೀಡಿದೆ? ಈ ಕಪ್ಪವನ್ನು ಯಾವ ರಾಜ್ಯದ ಚುನಾವಣೆಗೆ ಬಳಸಿಕೊಂಡಿರಿ? ಎಂದು ಪ್ರಶ್ನೆ ಮಾಡಿದ್ದಾರೆ.

ಲಂಚ ಪಡೆಯುತ್ತಿದ್ದಾಗ ಬಳ್ಳಾರಿ ಬಿಯುಡಿಎ ಆಯುಕ್ತ ಲೋಕಾಯುಕ್ತ ಬಲೆಗೆ
ಲಂಚ ಪಡೆಯುತ್ತಿದ್ದಾಗ ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರ (ಬಿಯುಡಿಎ) ಆಯುಕ್ತ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

