Border row

ಗಡಿ ವಿವಾದ: ನಾಗ್ಪುರ ಅಧಿವೇಶನದ ಬಳಿಕ ಬೆಳಗಾವಿಗೆ ಭೇಟಿ ನೀಡುತ್ತೇವೆ: ಮಹಾರಾಷ್ಟ್ರ ಸಚಿವರು
ಕರ್ನಾಟಕದ ಬೆಳಗಾವಿಯಲ್ಲಿ ಮತ್ತು ಮಹಾರಾಷ್ಟ್ರದ ನಾಗ್ಪುರದಲ್ಲಿ ಚಳಿಗಾಲದ ಅಧಿವೇಶನಗಳು ಪೂರ್ಣಗೊಂಡ ನಂತರ ಬೆಳಗಾವಿಗೆ ಭೇಟಿ ನೀಡುತ್ತೇವೆಂದು ಮಹಾರಾಷ್ಟ್ರ ಸಚಿವರು ಹೇಳಿದ್ದಾರೆ.

ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ: ಅಮಿತ್ ಶಾ ಸೂಚನೆ ಬಳಿಕವೂ 'ಮಹಾಮೇಳಾವ' ನಡೆಸಲು ಎಂಇಎಸ್ ಮುಂದು!
ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ತೀರ್ಪಿನವರೆಗೆ ಕಾಯುವಂತೆ ಕರ್ನಾಟಕ ಮತ್ತು ಮಹಾರಾಷ್ಟ್ರದ ಮುಖ್ಯಮಂತ್ರಿಗಳಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೂಚನೆ ನೀಡಿದ್ದರೂ, ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಮಹಾಮೇಳಾವವನ್ನು ಮುಂದುವರಿಸಲು ನಿರ್ಧರಿಸಿದೆ.

ಗಡಿ ವಿವಾದ: ದೆಹಲಿಯಲ್ಲಿ ನಡೆದ ಸಿಎಂಗಳ ಸಭೆ ಏನನ್ನೂ ಸಾಧಿಸಿಲ್ಲ; ಕರ್ನಾಟಕದ ಪರವಾಗಿದೆ ಎಂದ ಉದ್ಧವ್
ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಮತ್ತು ಕರ್ನಾಟಕದ ಮುಖ್ಯಮಂತ್ರಿಗಳೊಂದಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ನಡೆಸಿದ ಸಭೆಯಿಂದ ಏನನ್ನೂ ಸಾಧಿಸಿಲ್ಲ ಎಂದು ಶಿವಸೇನೆ ಅಧ್ಯಕ್ಷ ಉದ್ಧವ್ ಠಾಕ್ರೆ ಅವರು ಗುರುವಾರ ಹೇಳಿದ್ದಾರೆ.

ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ: ನಾಳೆ ಅಮಿತ್ ಶಾ ಸಂಧಾನ ಸಭೆ, ಸಿಎಂ ಬೊಮ್ಮಾಯಿ-ಶಿಂಧೆ ಭಾಗಿ
ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಕಳೆದ ಹಲವು ದಿನಗಳಿಂದ ಉಲ್ಭಣಿಸಿರುವ ಕರ್ನಾಟಕ-ಮಹಾರಾಷ್ಟ್ರ ನಡುವಿನ ತ್ವೇಷಮಯ ವಾತಾವರಣಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಪರಿಹಾರ ನೀಡುವ ನಿರೀಕ್ಷೆಗಳಿವೆ.

ಗಡಿ ವಿವಾದ: ರಾಜ್ಯ ಚಳಿಗಾಲ ಅಧಿವೇಶನದ ಮೊದಲ ದಿನ ಸಭೆ ನಡೆಸಲು ಎಂಇಎಸ್ ನಿರ್ಧಾರ
ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದದ ನಡುವೆಯೇ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಕರ್ನಾಟಕ ಚಳಿಗಾಲದ ಅಧಿವೇಶನದ ಮೊದಲ ದಿನವಾದ ಡಿಸೆಂಬರ್ 19 ರಂದು ಬೆಳಗಾವಿಯಲ್ಲಿ ಸಭೆ ನಡೆಸಲು ಮುಂದಾಗಿದೆ ಎಂದು ತಿಳಿದುಬಂದಿದೆ.

ಗಡಿ ವಿವಾದ: ಕರ್ನಾಟಕದ ಸಿಎಂ ಹೇಳಿಕೆ ಅಮಿತ್ ಶಾ ಗೆ ಅಗೌರವ, ಚುನಾವಣಾ ದೃಷ್ಟಿಯಿಂದ ಹೇಳಿಕೆ; ಎಂವಿಎ
ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಸಿಎಂ ಬಸವರಾಜ ಬೊಮ್ಮಾಯಿ ಅವರ ಹೇಳಿಕೆ ಅಮಿತ್ ಶಾ ಗೆ ಅಗೌರವ ಉಂಟುಮಾಡಿದೆ ಎಂದು ಶಿವಸೇನೆಯ ಉದ್ಧವ್ ಠಾಕ್ರೆ ಬಣ ಹೇಳಿದೆ.

ಗಡಿ ವಿವಾದ: ಮಹಾರಾಷ್ಟ್ರ, ಕರ್ನಾಟಕ ಸಿಎಂಗಳೊಂದಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ!
ಮಹಾರಾಷ್ಟ್ರ, ಕರ್ನಾಟಕ ಎರಡು ರಾಜ್ಯಗಳ ನಡುವಿನ ಗಡಿ ವಿವಾದವನ್ನು ಶಮನಗೊಳಿಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಉಭಯ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಮಹತ್ವ ಸಭೆ ಕರೆದಿದ್ದಾರೆ ಎಂದು ತಿಳಿದುಬಂದಿದೆ.

ಗಡಿ ವಿವಾದ: ಬಸ್ ಗಳಿಗೆ ರಕ್ಷಣೆ ನೀಡಿದ ಬೆಳಗಾವಿ ಪೊಲೀಸರಿಗೆ ಮಹಾರಾಷ್ಟ್ರ ಸಾರಿಗೆ ಸಂಸ್ಥೆ ಧನ್ಯವಾದ!
ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವೆ ನಡೆಯುತ್ತಿರುವ ಗಡಿ ವಿವಾದದ ನಡುವೆಯೂ ಬಸ್ ಹಾಗೂ ವಾಹನಗಳಿಗೆ ರಕ್ಷಣೆ ನೀಡಿದ ಬೆಳಗಾವಿ ಪೊಲೀಸರಿಗೆ ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಎಂಎಸ್‌ಆರ್‌ಟಿಸಿ)ಯು ಧನ್ಯವಾದಗಳನ್ನು ತಿಳಿಸಿದೆ.

ಕರ್ನಾಟಕ ಸೇರಲು ಮಹಾರಾಷ್ಟ್ರದ ಮತ್ತೊಂದು ಗ್ರಾಮ ಉತ್ಸುಕ..!
ಮಹಾರಾಷ್ಟ್ರದ ಹಲವು ಗಡಿ ಗ್ರಾಮ ಪಂಚಾಯಿತಿಗಳು ಏಕನಾಥ ಶಿಂಧೆ ಸರ್ಕಾರದ ಮೇಲೆ ಒತ್ತಡ ಹೇರುತ್ತಲೇ ಇದ್ದು, ಕೂಡಲೇ ಮೂಲ ಸೌಕರ್ಯ ಕಲ್ಪಿಸದಿದ್ದಲ್ಲಿ ತಮ್ಮ ಗ್ರಾಮಗಳನ್ನು ಕರ್ನಾಟಕದೊಂದಿಗೆ ವಿಲೀನಗೊಳಿಸುವಂತೆ ಒತ್ತಾಯಿಸಿದ್ದಾರೆ.

