BJP vs Congress

ಕರ್ನಾಟಕದ ಬಳಿಕ ತೆಲಂಗಾಣ: ಕಾಂಗ್ರೆಸ್ ಗೆ ಮತ್ತೊಂದು ಗೆಲುವು ತಂದ ಚುನಾವಣಾ ಚಾಣಕ್ಯ, ಸುನಿಲ್ ಬಿಟ್ಟು ಕೈ ಸುಟ್ಟುಕೊಂಡರೇ ಕೆಸಿಆರ್!
ಕಳೆದ ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಪರ ಕೆಲಸ ಮಾಡಿ ಅಭೂತಪೂರ್ವ ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸಿದ್ದ ಚುನಾವಣಾ ತಂತ್ರಗಾರ ಸುನಿಲ್ ಕನುಗೋಲು ಇದೀಗ ತೆಲಂಗಾಣದಲ್ಲೂ ಮ್ಯಾಜಿಕ್ ಮಾಡಿದ್ದಾರೆ.

ಛತ್ತೀಸ್ಗಢದಲ್ಲಿ ತಲೆಕೆಳಗಾದ ಸಮೀಕ್ಷಾ ವರದಿ: ಕಾಂಗ್ರೆಸ್ ಗೆ ಭಾರಿ ಹಿನ್ನಡೆ, ಸ್ಪಷ್ಟ ಬಹುಮತದತ್ತ ಬಿಜೆಪಿ
ತೀವ್ರ ಕುತೂಹಲ ಕೆರಳಿಸಿರುವ 4 ರಾಜ್ಯಗಳ ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟವಾಗುತ್ತಿದ್ದು, ತೀವ್ರ ಪೈಪೋಟಿಯಿಂದ ಕೂಡಿದ್ದ ಛತ್ತೀಸ್ ಘಡದಲ್ಲಿ ಇದೀಗ ಬಿಜೆಪಿ ಕಮಾಲ್ ಮಾಡುತ್ತಿದ್ದ ತನ್ನ ಅಂತರವನ್ನು ಭಾರಿ ಸಂಖ್ಯೆಯಲ್ಲಿ ಹೆಚ್ಚಿಸಿಕೊಂಡಿದೆ.

10 ವರ್ಷಗಳ ಕೆಸಿಆರ್ ಆಡಳಿತದಿಂದ ಜನ ಬೇಸತ್ತಿದ್ದರು: ತೆಲಂಗಾಣ ಗೆಲುವಿನ ಕುರಿತು ಡಿಕೆ ಶಿವಕುಮಾರ್ ಹೇಳಿಕೆ
10 ವರ್ಷಗಳ ಕೆಸಿಆರ್ ಆಡಳಿತದಿಂದ ಜನ ಬೇಸತ್ತು, ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆಗಳನ್ನು ನಂಬಿ ತೆಲಂಗಾಣದಲ್ಲಿ ಗೆಲುವು ನೀಡಿದ್ಜದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಹಾಗೂ ಕರ್ನಾಟಕ ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.

ಛತ್ತೀಸ್ ಗಢ ಚುನಾವಣಾ ಫಲಿತಾಂಶ: 'ಆಘಾತ, ಆಶ್ಚರ್ಯ' ಎಂದ ಕಾಂಗ್ರೆಸ್ ನಾಯಕಿ ರೇಣುಕಾ ಚೌದರಿ
ತೀವ್ರ ಕುತೂಹಲ ಕೆರಳಿಸಿರುವ ಛತ್ತೀಸ್ ಗಢ ಚುನಾವಣಾ ಫಲಿತಾಂಶದಲ್ಲಿ ಬಿಜೆಪಿ ಅಧಿಕಾರದ ಗದ್ದುಗೆಯತ್ತ ಸಾಗಿದ್ದು, ಈ ಫಲಿತಾಂಶದ ಬೆನ್ನಲ್ಲೇ ಈ ಕುರಿತು ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ನಾಯಕಿ ರೇಣುಕಾ ಚೌದರಿ 'ಆಘಾತಕಾರಿ ಆಶ್ಚರ್ಯ' ತಂದಿದೆ ಎಂದು ಹೇಳಿದ್ದಾರೆ.

ವಿಧಾನಸಭೆ ಚುನಾವಣಾ ಫಲಿತಾಂಶ: 3 ರಾಜ್ಯಗಳಲ್ಲಿ ಬಿಜೆಪಿ ಮುನ್ನಡೆ, ತೆಲಂಗಾಣದಲ್ಲಿ ಕಾಂಗ್ರೆಸ್ ಕಮಾಲ್
2024ರ ಲೋಕಸಭಾ ಚುನಾವಣೆಗೆ ದಿಕ್ಸೂಚಿ ಎಂದೇ ಹೇಳಲಾಗುತ್ತಿದ್ದ ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆಯ ಪೈಕಿ 4 ರಾಜ್ಯಗಳ ಚುನಾವಣಾ ಫಲಿತಾಂಶ ಪ್ರಕಟವಾಗುತ್ತಿದ್ದು, ಮೂರು ರಾಜ್ಯಗಳಲ್ಲಿ ಬಿಜೆಪಿ ಮತ್ತು 1 ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಮುನ್ನಡೆಯಲ್ಲಿದೆ.

ಮಹಿಳಾ ಮೀಸಲಾತಿ ಮಸೂದೆಯಲ್ಲಿ ಒಬಿಸಿ ಕೂಡ ಸೇರಿಸಬೇಕು; ತಕ್ಷಣ ಜಾರಿಗೊಳಿಸಿ: ಸೋನಿಯಾ ಗಾಂಧಿ
ಮಹಿಳಾ ಮೀಸಲಾತಿ ಮಸೂದೆಯಲ್ಲಿ ಒಬಿಸಿ ಕೂಡ ಸೇರಿಸಬೇಕು ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಹೇಳಿದ್ದಾರೆ.

ಲಿಂಗ ಸಮಾನತೆ ನ್ಯಾಯಕ್ಕಾಗಿ ಮಹಿಳಾ ಮೀಸಲಾತಿ ಮಸೂದೆ ಅತ್ಯಂತ ಪರಿವರ್ತಕ ಕ್ರಾಂತಿ: ರಾಷ್ಟ್ರಪತಿ ದ್ರೌಪದಿ ಮುರ್ಮು
ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ 33ರಷ್ಟು ಮೀಸಲಾತಿ ಕಲ್ಪಿಸುವ ಮಸೂದೆಯನ್ನು ಸರ್ಕಾರ ಮಂಡಿಸಿದ ಒಂದು ದಿನದ ನಂತರ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಲಿಂಗ ಸಮಾನತೆ ನ್ಯಾಯಕ್ಕಾಗಿ ಇದು ನಮ್ಮ ಕಾಲದಲ್ಲಿ ಅತ್ಯಂತ ಪರಿವರ್ತನೆಯ ಕ್ರಾಂತಿಯಾಗಲಿದೆ ಎಂದು ಬುಧವಾರ ಹೇಳಿದ್ದಾರೆ.

ಡಿಎಂಕೆ ಓಲೈಸಲು ತಮಿಳುನಾಡಿಗೆ ನೀರು; ಬಿಜೆಪಿಯಿಂದ ಕಾವೇರಿ ರಕ್ಷಣಾ ಯಾತ್ರೆ: ಬೊಮ್ಮಾಯಿ, ಬಿಎಸ್ ವೈ
ಡಿಎಂಕೆ ಪಕ್ಷವನ್ನು ಓಲೈಸಲು ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿದ್ದು, ಇದನ್ನು ವಿರೋಧಿಸಿ ಕಾವೇರಿ ಜಲಾನಯನ ಪ್ರದೇಶದಲ್ಲಿ ಬಿಜೆಪಿ ಕಾವೇರಿ ರಕ್ಷಣಾ ಯಾತ್ರೆ ನಡೆಸುತ್ತದೆ ಎಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಮತ್ತು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ರಾಜ್ಯಕ್ಕೆ ಅಕ್ಕಿ ಕೊಡಲು ನಿರಾಕರಿಸಿದ ಬಿಜೆಪಿ ಬಡವರ ವಿರೋಧಿ: ಸಿಎಂ ಸಿದ್ದರಾಮಯ್ಯ
ಬಡವರಿಗೆ ಅಕ್ಕಿ ನಿರಾಕರಿಸಿದ ಕೇಂದ್ರದ ಬಿಜೆಪಿ ಸರ್ಕಾರವು ಬಡವರ ವಿರೋಧಿಯಾಗಿದ್ದು, ಅವರ ನಡೆ ಅಮಾನವೀಯ.. 2024 ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕಬೇಡಿ ಎಂದು ರಾಜ್ಯದ ಜನತೆಗೆ ಗುರುವಾರ ಸಿಎಂ ಸಿದ್ದರಾಮಯ್ಯ ಮನವಿ ಮಾಡಿದರು.

