Bjp Ticket

ನನಗೆ ಬಿಜೆಪಿಯಲ್ಲಿ ಟಿಕೆಟ್ ತಪ್ಪಲು ಬಿ ಎಲ್ ಸಂತೋಷ್ ಕಾರಣ: ಜಗದೀಶ್ ಶೆಟ್ಟರ್ ಗಂಭೀರ ಆರೋಪ
ಬಿಜೆಪಿಯಲ್ಲಿ ಈ ಬಾರಿ ನನಗೆ ಟಿಕೆಟ್ ತಪ್ಪಲು ಕೆಲವು ನಾಯಕರು ಕಾರಣರಾಗಿದ್ದಾರೆ, ಅವರ ಹೆಸರನ್ನು ಬಹಿರಂಗಪಡಿಸುವ ಸಮಯ ಇಂದು ಬಂದಿದೆ. ನನಗೆ ಟಿಕೆಟ್ ಕೈತಪ್ಪಲು ಬಿ ಎಲ್ ಸಂತೋಷ್ ಕಾರಣ ಎಂದು ನೇರ ಗಂಭೀರ ಆರೋಪ ಮಾಡಿದ್ದಾರೆ ಮಾಜಿ ಸಿಎಂ ಜಗದೀಶ್ ಶೆಟ್ಟರ್.

ನನ್ನ ಪ್ರಾಮಾಣಿಕತೆಯೇ ನನಗೆ ಮುಳುವಾಗಿದೆ, ಲಾಬಿ ಮಾಡುವುದು ನನ್ನ ಗುಣವಲ್ಲ: ಸಕ್ರಿಯ ರಾಜಕಾರಣಕ್ಕೆ ಎಸ್ ಅಂಗಾರ ಗುಡ್ ಬೈ!
ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಬೆನ್ನಲ್ಲೇ ಬಂಡಾಯ ಜೋರಾಗಿದ್ದು, ಇದೀಗ ಮತ್ತೋರ್ವ ಹಿರಿಯ ನಾಯಕ ರಾಜಕೀಯಕ್ಕೆ ನಿವೃತ್ತಿ ಘೋಷಣೆ ಮಾಡಿದ್ದಾರೆ

ನಂಗೆ ಟಿಕೆಟ್ ಇಲ್ಲ ಅನ್ನೋದನ್ನ ಟಿವಿಯಲ್ಲಿ ನೋಡ್ಬೇಕಾ? ಪಕ್ಷ ನಡೆಸಿಕೊಂಡ ರೀತಿ ನೋವು ತಂದಿದೆ, ಗಳಗಳನೆ ಅತ್ತ ರಘುಪತಿ ಭಟ್!
ಟಿಕೆಟ್ ಸಿಕ್ಕಿಲ್ಲ ಎನ್ನುವುದಕ್ಕೆ ಬೇಸರವಿಲ್ಲ. ಆದರೆ, ಪಕ್ಷ ನಡೆಸಿಕೊಂಡ ರೀತಿ ನೋವು ತಂದಿದೆ. ಅದೇ ಶಾಕ್‌ನಲ್ಲಿದ್ದೇನೆ. ನನಗೆ ಟಿಕೆಟ್ ಇಲ್ಲ ಎನ್ನುವುದನ್ನು ಟಿವಿಯಲ್ಲಿ ನೋಡಿ ತಿಳಿದುಕೊಳ್ಳಬೇಕಾ ಎಂದು ಉಡುಪಿಯ ಶಾಸಕ ಕೆ ರಘುಪತಿ ಭಟ್ ಬೇಸರ ವ್ಯಕ್ತಪಡಿಸಿದ್ದಾರೆ.

ವರಿಷ್ಠರು ಎರಡು ಕಡೆಗೆ ಟಿಕೆಟ್ ಕೊಡುತ್ತಾರೆ ಎಂದುಕೊಂಡಿರಲಿಲ್ಲ; ಮಗನಿಗೆ ಗುಬ್ಬಿ ಅಥವಾ ಗೋವಿಂದರಾಜನಗರ ಕ್ಷೇತ್ರ ಕೇಳಿದ್ದೇನೆ: ವಿ ಸೋಮಣ್ಣ
ಎರಡು ಕಡೆ ವರಿಷ್ಠರು ಟಿಕೆಟ್ ಕೊಡುತ್ತಾರೆ ಎಂದು ಕನಸು ಮನಸಲ್ಲೂ ಅಂದುಕೊಂಡಿರಲಿಲ್ಲ. ವಿಧಿ ನಿಯಮ, ವರಿಷ್ಠರ ತೀರ್ಮಾನ ಎಂದು ಸಚಿವ ವಿ. ಸೋಮಣ್ಣ ಇಂದು ಬುಧವಾರ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸಿದ್ದಾರೆ.

'ಖಾಸಗಿ' ಫೋಟೋ ಎಫೆಕ್ಟ್: ಸಂಜೀವ ಮಠಂದೂರಿಗೆ ತಪ್ಪಿದ ಟಿಕೆಟ್; ಸುಳ್ಯದಿಂದ ಸಚಿವ ಅಂಗಾರ ಡ್ರಾಪ್ ಔಟ್!
ಮಂಗಳವಾರ ರಾತ್ರಿ ಬಿಜೆಪಿಯ 189 ಅಭ್ಯರ್ಥಿಗಳ ಪಟ್ಟಿ ಪ್ರಕಟವಾಗಿದ್ದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೂವರು ಹೊಸ ಮುಖಗಳಿಗೆ ಟಿಕೆಟ್ ನೀಡಲಾಗಿದೆ.

ಭಗವಂತನ ಸಂದೇಶ ಎಂದು ಕಾಣುತ್ತದೆ, ನಿರೀಕ್ಷೆ ಮಾಡಿರಲಿಲ್ಲ: ವರುಣಾ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾದ ವಿ ಸೋಮಣ್ಣ
ವರಿಷ್ಠರ ತೀರ್ಮಾನಕ್ಕೆ ಬದ್ದನಾಗಿದ್ದೇನೆ, ರಾಷ್ಟ್ರೀಯ ನಾಯಕರ ಗಮನಕ್ಕೆ ತರಬೇಕಾದ ವಿಷಯಗಳನ್ನು ತಂದಿದ್ದೆ. ನಮ್ಮ ಬಿಜೆಪಿ ರಾಷ್ಟ್ರೀಯ ಪಕ್ಷ ಶಿಸ್ತಿನ ಪಕ್ಷವಾಗಿದ್ದು ನನಗೆ ತಾಯಿ ಇದ್ದ ಹಾಗೆ ಎಂದು ವಸತಿ ಸಚಿವ ಮೈಸೂರಿನ ವರುಣಾ ಕ್ಷೇತ್ರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಎದುರು ಸ್ಪರ್ಧಿಸುತ್ತಿರುವ ವಿ ಸೋಮಣ್ಣ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸಿದ್ದಾರೆ.

ಐಎಂಎ ಹಗರಣದ ಆರೋಪಿ ಎಲ್ ಸಿ ನಾಗರಾಜ್ ಮಧುಗಿರಿಯ ಬಿಜೆಪಿ ಅಭ್ಯರ್ಥಿ!
ಬಿಜೆಪಿ ತನ್ನ 189 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರಕಟಿಸಿದ್ದು, ಬಹುಕೋಟಿ ಐ ಮಾನಿಟರಿ ಅಡ್ವೈಸರಿ (IMA) ಪೊಂಜಿ ಹಗರಣದ ಆರೋಪಿ ಮತ್ತು ಮಾಜಿ ಕೆಎಎಸ್ ಅಧಿಕಾರಿ ಎಲ್ ಸಿ ನಾಗರಾಜ್ ಅವರನ್ನು ಅಭ್ಯರ್ಥಿಯನ್ನಾಗಿಸಿ ಬಿಜೆಪಿ ಅಚ್ಚರಿ ಮೂಡಿಸಿದೆ.

189 ಅಭ್ಯರ್ಥಿಗಳ ಬಿಜೆಪಿ ಪಟ್ಟಿ ಬಿಡುಗಡೆ: ಟಿಕೆಟ್ ವಂಚಿತರು & ಸ್ಪರ್ಧಿಸಲು ಅವಕಾಶ ಪಡೆದ ಅಭ್ಯರ್ಥಿಗಳು ಇವರು
ಕೊನೆಗೂ ಬಿಜಿಪಿ ಹೈಕಮಾಂಡ್ ಒಪ್ಪಿಗೆ ಮೇರೆಗೆ ಕರ್ನಾಟಕ ವಿಧಾನಸಭೆ ಚುನಾವಣೆಗೆ 189 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. 52 ಕ್ಷೇತ್ರಗಳಿಗೆ ಹೊಸ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗಿದೆ. ಕೆಲವು ಹಾಲಿ ಶಾಸಕರು, ಸಚಿವರುಗಳಿಗೆ ಟಿಕೆಟ್ ಕೈತಪ್ಪಿ ಹೋಗಿದೆ.

ಶಾಸಕ ಗೂಳಿಹಟ್ಟಿ ಶೇಖರ್ ಗೆ ಸಿಗದ ಟಿಕೆಟ್: ಜನಾರ್ದನ ರೆಡ್ಡಿಯ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಸೇರ್ಪಡೆ ಸಾಧ್ಯತೆ
ಹೊಸದುರ್ಗ ಕ್ಷೇತ್ರದ ಶಾಸಕ ಗೂಳಿಹಟ್ಟಿ ಶೇಖರ್ ಗೆ ಬಿಜೆಪಿಯಿಂದ ಈ ಬಾರಿ ಟಿಕೆಟ್ ಘೋಷಣೆಯಾಗಿಲ್ಲ. ಇದರಿಂದ ಬೇಸತ್ತಿರುವ ಗೂಳಿಹಟ್ಟಿ ಶೇಖರ್ ಜನಾರ್ದನ ರೆಡ್ಡಿಯವರ ಕಲ್ಯಾಣ ರಾಜ್ಯ ಪ್ರಗತಿ ಪಕ್ಷಕ್ಕೆ ಸೇರ್ಪಡೆಯಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

