BJD

ವಿಧಾನಸಭಾ ಚುನಾವಣೆ Exit polls: ಆಂಧ್ರದಲ್ಲಿ NDA ಗೆ ಬಹುಮತ; ಒಡಿಶಾದಲ್ಲಿ ಬಿಜೆಪಿ-ಬಿಜೆಡಿ ನಡುವೆ ತೀವ್ರ ಜಿದ್ದಾಜಿದ್ದಿ!
ಲೋಕಸಭಾ ಚುನಾವಣೋತ್ತರ ಸಮೀಕ್ಷೆಗಳು ಪ್ರಕಟಗೊಂಡ ನಂತರ ಹಲವು ರಾಜ್ಯಗಳಿಗೆ ನಡೆದಿದ್ದ ವಿಧಾನಸಭಾ ಚುನಾವಣೋತ್ತರ ಸಮೀಕ್ಷೆಗಳು ಇಂದು ಪ್ರಕಟವಾಗಿವೆ.

ಲೋಕಸಭೆ, ವಿಧಾನಸಭೆ ಚುನಾವಣೆ: ಒಡಿಶಾದಲ್ಲಿ ಬಿಜೆಪಿ ಏಕಾಂಗಿ ಸ್ಪರ್ಧೆ, ಬಿಜೆಡಿ ಜೊತೆ ಮೈತ್ರಿ ಇಲ್ಲ
ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸುವುದಾಗಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಶುಕ್ರವಾರ ಘೋಷಿಸಿದೆ.

ಮಾಜಿ ಐಎಎಸ್ ಅಧಿಕಾರಿ, ಸಿಎಂ ನವೀನ್ ಪಟ್ನಾಯಕ್ ಆಪ್ತ ವಿಕೆ ಪಾಂಡಿಯನ್ ಬಿಜೆಡಿಗೆ ಸೇರ್ಪಡೆ
ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿರುವ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರ ವಿಶ್ವಾಸಾರ್ಹ ಸಹಾಯಕ ಮತ್ತು ಮಾಜಿ ಐಎಎಸ್ ಅಧಿಕಾರಿ ವಿಕೆ ಪಾಂಡಿಯನ್ ಅವರು ಸೋಮವಾರ ಆಡಳಿತಾರೂಢ ಬಿಜು ಜನತಾ...

ಮಹಿಳಾ ಮೀಸಲಾತಿ ಮಸೂದೆಯನ್ನು ಬಿಜೆಡಿ ಬಲವಾಗಿ ಬೆಂಬಲಿಸುತ್ತದೆ: ಒಡಿಶಾ ಸಿಎಂ ಪಟ್ನಾಯಕ್
ಸಂಸತ್ತಿನಲ್ಲಿ ಮಂಡಿಸಲಾದ ಮಹಿಳಾ ಮೀಸಲಾತಿ ಮಸೂದೆಯನ್ನು ತಮ್ಮ ಪಕ್ಷ ಬಲವಾಗಿ ಬೆಂಬಲಿಸುತ್ತದೆ ಎಂದು ಬಿಜೆಡಿ ಅಧ್ಯಕ್ಷ ಮತ್ತು ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಗುರುವಾರ ಹೇಳಿದ್ದಾರೆ.

ಉಪ ಚುನಾವಣೆ: ಜಲಂಧರ್ ಲೋಕಸಭಾ ಕ್ಷೇತ್ರದಲ್ಲಿ ಎಎಪಿ, ಜಾರ್ಸುಗುಡ ವಿಧಾನಸಭೆಯಲ್ಲಿ ಬಿಜೆಡಿ ಮುನ್ನಡೆ
ಜಲಂಧರ್ ಲೋಕಸಭೆ ಉಪ ಚುನಾವಣೆಯಲ್ಲಿ ಇತ್ತೀಚಿನ ಟ್ರೆಂಡ್‌ಗಳ ಪ್ರಕಾರ ಎಎಪಿ ಅಭ್ಯರ್ಥಿ ಸುಶೀಲ್ ರಿಂಕು ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ ಅಭ್ಯರ್ಥಿ ಕರಮ್‌ಜಿತ್ ಕೌರ್ ಚೌಧರಿ ಅವರಿಗಿಂತ 48,000 ಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವಿನತ್ತ ದಾಪುಗಾಲು ಹಾಕುತ್ತಿದ್ದಾರೆ.

ಬಿಜೆಡಿ ದೇಶದಲ್ಲಿ ಎರಡನೇ ಶ್ರೀಮಂತ ಪ್ರಾದೇಶಿಕ ಪಕ್ಷ: ಆದಾಯ ಶೇ.318ರಷ್ಟು ಹೆಚ್ಚಳ
2021-22ರಲ್ಲಿ ವಾರ್ಷಿಕ ಆದಾಯ ಶೇಕಡಾ 318ರಷ್ಟು ಏರಿಕೆಯಾಗುವ ಮೂಲಕ ಭಾರತ ದೇಶದಲ್ಲಿ ಡಿಎಂಕೆ ನಂತರ ಬಿಜು ಜನತಾ ದಳ(BJD) ಎರಡನೇ ಸಂಪದ್ಭರಿತ ಸ್ಥಳೀಯ ಪಕ್ಷವಾಗಿ ಹೊರಹೊಮ್ಮಿದೆ.

ಒಡಿಶಾ ಉಪಚುನಾವಣೆ: ಹಣ ಹಂಚುತ್ತಿದ್ದ ಮೂವರು ಬಿಜೆಡಿ ಕಾರ್ಯಕರ್ತರು, ಬಿಜೆಪಿ ನಾಯಕನ ಬಂಧನ
ಪದಂಪುರ ಉಪಚುನಾವಣೆಗೆ ಒಂದು ದಿನ ಮೊದಲು, ಭಾನುವಾರ ಮತದಾರರಿಗೆ ಹಣ ಹಂಚುತ್ತಿದ್ದಾಗ ಮೂವರು ಬಿಜೆಡಿ ಕಾರ್ಯಕರ್ತರನ್ನು ಗ್ರಾಮಸ್ಥರು ಹಿಡಿದು ಪೊಲೀಸರಿಗೆ ಒಪ್ಪಿಸಿದ ನಂತರ ಸರಿಕೆಲಾದಲ್ಲಿ ಉದ್ವಿಗ್ನತೆ ಉಂಟಾಗಿದೆ.

ಎನ್‌ಡಿಎ ಅಧ್ಯಕ್ಷೀಯ ಅಭ್ಯರ್ಥಿ ದ್ರೌಪದಿ ಮುರ್ಮು ಹಾದಿ ಬಿಜೆಡಿ ಬೆಂಬಲದೊಂದಿಗೆ ಸುಗಮ!
ಬಿಜೆಪಿ ನೇತೃತ್ವದ ಎನ್‌ಡಿಎ ಅಧ್ಯಕ್ಷೀಯ ಅಭ್ಯರ್ಥಿಯಾಗಿ ದ್ರೌಪದಿ ಮುರ್ಮು ಅವರನ್ನು ನಾಮನಿರ್ದೇಶನ ಮಾಡಿರುವ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಬಿಜೆಡಿ ಮುಖ್ಯಸ್ಥ ಮತ್ತು ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಇದು ತಮ್ಮ ರಾಜ್ಯದ ಜನತೆಗೆ ಹೆಮ್ಮೆಯ ಕ್ಷಣ ಎಂದು ಹೇಳಿದ್ದಾರೆ.

ರಾಜ್ಯಸಭಾ ಉಪಾಧ್ಯಕ್ಷ ಹುದ್ದೆ: ಜೆಡಿಯು ಅಭ್ಯರ್ಥಿ ಹರಿವಂಶ್ ಗೆ ಬಿಜೆಡಿ ಬೆಂಬಲ
ಒಡಿಶಾ ಮುಖ್ಯಮಂತ್ರಿ ಹಾಗೂ ಬಿಜೆಡಿ ಮುಖ್ಯಸ್ಥ ನವೀನ್ ಪಟ್ನಾಯಕ್ ಅವರು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರೊಂದಿಗೆ ಮಾತನಾಡಿದ ನಂತರ, ರಾಜ್ಯಸಭೆಯ ಉಪಾಧ್ಯಕ್ಷ ಸ್ಥಾನಕ್ಕೆ ಜೆಡಿಯು ಅಭ್ಯರ್ಥಿ ಹರಿವಂಶ್ ನಾರಾಯಣ್ ಸಿಂಗ್ ಅವರಿಗೆ ಬೆಂಬಲ ಘೋಷಿಸಿದ್ದಾರೆ.

