Bharat Jodo Yatra

ಗುಳ್ಳೆಗಳು ನಮ್ಮನ್ನು ತಡೆಯುವುದಿಲ್ಲ, ನಾವು ಭಾರತವನ್ನು ಒಂದುಗೂಡಿಸುತ್ತೇವೆ: ರಾಹುಲ್ ಗಾಂಧಿ
ಎಡಬಿಡದೆ ಸುರಿಯುತ್ತಿರುವ ಮಳೆ ಮತ್ತು ಸಾರ್ವಜನಿಕರ ದಟ್ಟಣೆಯ ನಡುವೆ ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಯು ಕೇರಳದಲ್ಲಿ ಮಂಗಳವಾರ ಮೂರನೇ ದಿನಕ್ಕೆ ಕಾಲಿಟ್ಟಿದೆ. ಮಳೆ ಬರುತ್ತಿದ್ದರೂ ಕೂಡ, ಛತ್ರಿಯಿಲ್ಲದೆ ರಾಹುಲ್ ಸೇರಿದಂತೆ ಕಾಂಗ್ರೆಸ್ ನಾಯಕರು ಮತ್ತು ಹಲವಾರು ಬೆಂಬಲಿಗರು ಬೀದಿಗಳಲ್ಲಿ ಮೆರವಣಿಗೆ ನಡೆಸಿದರು.

'ಪ್ರತಿಪಕ್ಷಗಳ ಒಗ್ಗಟ್ಟಿನ ಆಧಾರ ಸ್ತಂಭವೇ ಪ್ರಬಲ ಕಾಂಗ್ರೆಸ್': ಪಕ್ಷದ 2024ರ ಭವಿಷ್ಯ ಕುರಿತು ಜೈರಾಮ್ ರಮೇಶ್
ಬಲಿಷ್ಠ ಕಾಂಗ್ರೆಸ್ ಪಕ್ಷವು ಪ್ರತಿಪಕ್ಷಗಳ ಒಗ್ಗಟ್ಟಿನ ಪ್ರಮುಖ ಆಧಾರಸ್ತಂಭವಾಗಿದ್ದು, ಪಕ್ಷವು ದುರ್ಬಲಗೊಳ್ಳಲು ಬಿಡುವುದಿಲ್ಲ ಎಂಬುದನ್ನು ಅದರ ಮಿತ್ರಪಕ್ಷಗಳು ಅರ್ಥಮಾಡಿಕೊಳ್ಳಬೇಕು ಎಂದು ಹಿರಿಯ ನಾಯಕ ಜೈರಾಮ್ ರಮೇಶ್ ಸೋಮವಾರ ಹೇಳಿದ್ದಾರೆ.

5ನೇ ದಿನಕ್ಕೆ ಕಾಲಿಟ್ಟ ಕಾಂಗ್ರೆಸ್ 'ಭಾರತ್ ಜೋಡೊ ಯಾತ್ರೆ', ಕೇರಳದಲ್ಲಿ ರಾಹುಲ್ ಗಾಂಧಿ, ಶಶಿ ತರೂರ್ ಭರ್ಜರಿ ರೋಡ್ ಶೋ!
ಕಾಂಗ್ರೆಸ್ ಪಕ್ಷದ 'ಭಾರತ್ ಜೋಡೊ ಯಾತ್ರೆ' 5ನೇ ದಿನಕ್ಕೆ ಕಾಲಿಟ್ಟಿದ್ದು, ತಮಿಳುನಾಡಿನ ಕನ್ಯಾಕುಮಾರಿಯಿಂದ ಆರಂಭವಾದ 150 ದಿನಗಳ 3,500 ಕಿಮೀ ಯಾತ್ರೆ ಇದೀಗ ಕೇರಳದಲ್ಲಿ ಸಾಗಿದೆ.

ಭಾರತ್ ಜೋಡೋ ಯಾತ್ರೆಗೆ ಆಹ್ವಾನ: ಉಮಾ ಭಾರತಿ ಪ್ರತಿಕ್ರಿಯಿಸಿದ್ದು ಹೀಗೆ...
ರಾಹುಲ್ ಗಾಂಧಿಯವರ 'ಭಾರತ್ ಜೋಡೋ ಯಾತ್ರೆ'ಯಲ್ಲಿ ಭಾಗವಹಿಸಲು ಮಧ್ಯಪ್ರದೇಶ ಕಾಂಗ್ರೆಸ್ ಮುಖ್ಯಸ್ಥ ಕಮಲ್ ನಾಥ್ ಅವರ ಆಹ್ವಾನಕ್ಕೆ ಭಾರತೀಯ ಜನತಾ ಪಕ್ಷದ ಹಿರಿಯ ನಾಯಕಿ ಉಮಾಭಾರತಿ ಭಾನುವಾರ ಪ್ರತಿಕ್ರಿಯಿಸಿದ್ದು, ಅಂತಹ 'ಜೋಕ್'ಗಳಿಗೆ ನಾನು ಒಗ್ಗಿಕೊಂಡಿಲ್ಲ ಎಂದು ಹೇಳಿದ್ದಾರೆ.

ಮದುವೆ ಕುರಿತಾದ ಮಹಿಳೆಯೊಬ್ಬರ ಮಾತುಗಳಿಂದ ರಾಹುಲ್ ಗಾಂಧಿ ಸಂತಸ: ತಮಿಳುನಾಡಿನ ಚಿತ್ರಗಳನ್ನು ಹಂಚಿಕೊಂಡ ಜೈರಾಮ್ ರಮೇಶ್
ಪಕ್ಷದ ಭಾರತ್ ಜೋಡೋ ಯಾತ್ರೆಯಲ್ಲಿ 3ನೇ ದಿನದಂದು ತಮಿಳುನಾಡಿನ ಮಹಿಳಾ ನರೇಗಾ ಕೂಲಿಗಾರರೊಂದಿಗೆ ರಾಹುಲ್ ಗಾಂಧಿ ಸಂವಾದ ನಡೆಸುತ್ತಿರುವ ಚಿತ್ರಗಳನ್ನು ಕಾಂಗ್ರೆಸ್ ಹಿರಿಯ ನಾಯಕ ಜೈರಾಮ್ ರಮೇಶ್ ಶನಿವಾರ ಹಂಚಿಕೊಂಡಿದ್ದಾರೆ.

'ವಣಕ್ಕಂನಿಂದ ನಮಸ್ಕಾರಂ'ಗೆ: ಕೇರಳ ಪ್ರವೇಶಿಸಿದ ಭಾರತ್ ಜೋಡೋ, 19 ದಿನಗಳ ಕಾಲ ದೇವರ ನಾಡಿನಲ್ಲಿ ಯಾತ್ರೆ
ಕಾಂಗ್ರೆಸ್ ಪಕ್ಷದ 'ಭಾರತ್ ಜೋಡೋ' ಯಾತ್ರೆಯು ಪಕ್ಷದ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ತನ್ನ 19 ದಿನಗಳ ಸುದೀರ್ಘ ಯಾತ್ರೆಗೆ ಇಂದು ಭಾನುವಾರ ದೇವರ ನಾಡು ಕೇರಳ ಪ್ರವೇಶಿಸಿದೆ. ಕೇರಳದ ತಿರುವನಂತಪುರಂ ಜಿಲ್ಲೆಯ ಪರಸ್ಸಾಲಾದಿಂದ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ನಾಯಕರು ಯಾತ್ರೆಯ 5 ನೇ ದಿನವನ್ನು ಪ್ರಾರಂಭಿಸಿದರು.

ಆಕ್ರಮಣಕಾರಿ ಅವತಾರದಲ್ಲಿ ಕಾಂಗ್ರೆಸ್, ಭಾರತ್ ಜೋಡೋ ಯಾತ್ರೆ ಬಳಿಕ ಲಘುವಾಗಿ ತೆಗೆದುಕೊಳ್ಳದಿರಿ: ಜೈರಾಮ್ ರಮೇಶ್
ಭಾರತ್ ಜೋಡೋ ಯಾತ್ರೆಯನ್ನು 'ಜೀವ ರಕ್ಷಕ' ಎಂದು ಕರೆದಿರುವ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಗುರುವಾರ, ದೇಶದಾದ್ಯಂತ ನಡೆಯುತ್ತಿರುವ ಈ ತಳಮಟ್ಟದ ಅಭಿಯಾನದಿಂದ ಪಕ್ಷವು ಹೊಸ 'ಆಕ್ರಮಣಕಾರಿ' ಅವತಾರದಲ್ಲಿ ಹೊರಹೊಮ್ಮಲಿದೆ. ಇದನ್ನು ಸ್ನೇಹಿತರು ಅಥವಾ ರಾಜಕೀಯ ವಿರೋಧಿಗಳು ಲಘುವಾಗಿ ತೆಗೆದುಕೊಳ್ಳುವಂತಿಲ್ಲ ಎಂದು ಹೇಳಿದ್ದಾರೆ.

ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ: ಕಾಂಗ್ರೆಸ್ 'ಭಾರತ್ ಜೋಡೋ' ಯಾತ್ರೆಗೆ ರಾಹುಲ್ ಗಾಂಧಿ ಚಾಲನೆ
2024ರ ಸಾರ್ವತ್ರಿಕ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಕಾಂಗ್ರೆಸ್‌ನ ರಾಹುಲ್ ಗಾಂಧಿ ಅವರು ಪಕ್ಷದ ಬೃಹತ್ ಜನಸಂಪರ್ಕ ಕಾರ್ಯಕ್ರಮ 'ಭಾರತ್ ಜೋಡೋ ಯಾತ್ರೆ'ಗೆ ಇಂದು ಕನ್ಯಾಕುಮಾರಿಯಿಂದ ಚಾಲನೆ ನೀಡಿದರು.

ರಾಬರ್ಟ್ ವಾದ್ರಾ ಇರುವ ಪೋಸ್ಟರ್: ಕಾಂಗ್ರೆಸ್ ನ 'ಪರಿವಾರ್ ಜೋಡೋ' ಎಂದು ಬಿಜೆಪಿ ಟೀಕೆ
ರಾಬರ್ಟ್ ವಾದ್ರಾ ಹಂಚಿಕೊಂಡ ಪೋಸ್ಟರ್ ವಿರುದ್ಧ ಕಿಡಿಕಾರಿರುವ ಬಿಜೆಪಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದು, ಭಾರತ್ ಜೋಡೋ ಯಾತ್ರೆ ನಿಜವಾಗಿಯೂ 'ಪರಿವಾರ ಜೋಡೋ' ಎಂದು ಹೇಳಿದೆ.

