Bharat Jodo Yatra

ಬಿಜೆಪಿ, ಆರ್ ಎಸ್ಎಸ್ ದೇಶವನ್ನು ಒಡೆಯುತ್ತಿದೆ, ದ್ವೇಷ ಹರಡುವವರ ವಿರುದ್ಧ ನಮ್ಮ ಹೋರಾಟ: ರಾಹುಲ್ ಗಾಂಧಿ
ಭಾರತ್ ಜೋಡೋ ಯಾತ್ರೆ (Bharat Jodo Yatra) ಇಂದು ಶನಿವಾರ ತುಮಕೂರು ಜಿಲ್ಲೆಯಲ್ಲಿ ಸಾಗುತ್ತಿದೆ. ಈ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ತುಮಕೂರಿನ ತುರುವೇಕೆರೆಯಲ್ಲಿರುವ ಕಾಸ್ಮೊ ಪಾಲಿಟನ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.

ಹಿಂದಿಯನ್ನು ಮಾತ್ರ ರಾಷ್ಟ್ರ ಭಾಷೆಯನ್ನಾಗಿ ಮಾಡುವ ಉದ್ದೇಶವಿಲ್ಲ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ
ಹಿಂದಿಯನ್ನು ಮಾತ್ರ ರಾಷ್ಟ್ರ ಭಾಷೆಯನ್ನಾಗಿ ಮಾಡುವ ಮತ್ತು ಕನ್ನಡದಂತಹ ಪ್ರಾದೇಶಿಕ ಭಾಷೆಗಳ ಅಸ್ಮಿತೆಗೆ ಧಕ್ಕೆ ತರುವ ಉದ್ದೇಶವಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶುಕ್ರವಾರ ಹೇಳಿದ್ದಾರೆ.

‘ಕಡಿಮೆ ಮಾತನಾಡಿ, ಹೆಚ್ಚು ಕೇಳಿಸಿಕೊಳ್ಳಿ’: ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆಯ ಮಂತ್ರ!
ಎಲ್ಲಾ ನೇತಾಗಿರಿ ಮರೆತು ಸಾಮಾನ್ಯ ಜನರಲ್ಲಿ ಸಾಮಾನ್ಯರಂತೆ ಬೆರೆತಿದ್ದ ರಾಹುಲ್ ಗಾಂಧಿ, ಸಮಸ್ಯೆಗಳನ್ನು ಹೇಳಿಕೊಳ್ಳಲು ಬರುವವರ ಮಾತುಗಳನ್ನು ತಾಳ್ಮೆಯಿಂದ ಕೇಳುತ್ತಿದ್ದಾರೆ, ಪರಿಹಾರಗಳನ್ನು ಸೂಚಿಸುವಂತೆ ವಿನಮ್ರವಾಗಿ ತಿಳಿಸಿದ್ದಾರೆ.

9ನೇ ದಿನಕ್ಕೆ ಉತ್ಸಾಹದಿಂದ ಕಾಲಿಟ್ಟ ಕಾಂಗ್ರೆಸ್ ನ 'ಭಾರತ್ ಜೋಡೋ' ಯಾತ್ರೆ: ತುಮಕೂರಿನಲ್ಲಿ ಜೆಡಿಎಸ್ ಶಾಸಕ ಭಾಗಿ
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಕರ್ನಾಟಕದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆಯ 8ನೇ ದಿನವಾದ ನಿನ್ನೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಗೈರು ನಡುವೆಯೂ ಕಾರ್ಯಕರ್ತರು ಮತ್ತು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದ ಜನರ ಉತ್ಸಾಹ ಮಾತ್ರ ಕಡಿಮೆಯಾಗಿರಲಿಲ್ಲ.

ಭಾರತ್ ಜೋಡೊ ಯಾತ್ರೆಯಲ್ಲಿ ಗೌರಿ ಲಂಕೇಶ್ ತಾಯಿ ಇಂದಿರಾ, ಕವಿತಾ ಲಂಕೇಶ್ ಭಾಗಿ
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಭಾರತ್ ಜೋಡೋಯಾತ್ರೆಯಲ್ಲಿ ಖ್ಯಾತ ಪತ್ರಕರ್ತೆ ದಿ.ಗೌರಿ ಲಂಕೇಶ್ ತಾಯಿ ಇಂದಿರಾ ಮತ್ತು ಸಹೋದರಿ ಕವಿತಾ ಲಂಕೇಶ್ ಭಾಗಿಯಾಗಿದ್ದರು.

ಭಾರತ್ ಜೋಡೋ ಯಾತ್ರೆ: ಮಂಡ್ಯದ ಜನರ ಹೃದಯ ಗೆಲ್ಲಲು ಸೋನಿಯಾ, ರಾಹುಲ್ ಗಾಂಧಿ ಪಾದಯಾತ್ರೆ
ಎರಡು ದಿನಗಳ ವಿರಾಮದ ಬಳಿಕ ಪಾಂಡವಪುರದ ಟಿ.ಎಸ್. ಛತ್ರದಿಂದ ಆರಂಭವಾದ ಭಾರತ್ ಜೋಡೋ ಯಾತ್ರೆ ಒಕ್ಕಲಿಗ ಸಮುದಾಯದವರೇ ಅಧಿಕವಾಗಿರುವ ಜೆಡಿಎಸ್ ಭದ್ರಕೋಟೆಗೆ ಪ್ರವೇಶಿಸುತ್ತಿದ್ದಂತೆಯೇ ಕಾಂಗ್ರೆಸ್‌ಗೆ ಭರ್ಜರಿ ಪ್ರತಿಕ್ರಿಯೆ ಕಾದಿತ್ತು.

ಪಾದಯಾತ್ರೆಯಿಂದ ಆಯಾಸವಾಗಿಲ್ಲ, ಜನರ ಶಕ್ತಿ ನನ್ನನ್ನು ಕರೆದುಕೊಂಡು ಹೋಗುತ್ತಿದೆ: ಮಂಡ್ಯದಲ್ಲಿ ರಾಹುಲ್ ಗಾಂಧಿ
ಎರಡು ದಿನಗಳ ವಿರಾಮದ ನಂತರ ಆರಂಭವಾದ ಭಾರತ್ ಜೋಡೋ ಯಾತ್ರೆಯಲ್ಲಿ ಗುರುವಾರ 25 ಕಿ.ಮೀಗೂ ಹೆಚ್ಚು ಕಾಲ ನಡೆದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪಾದಯಾತ್ರೆ ಸುಲಭದ ಮಾತಲ್ಲ ಎಂದರು.

ತಾಯಿ-ಮಗನ ಭಾರತ್ ಜೋಡೋ ಯಾತ್ರೆಯಿಂದ ಯಾವುದೇ ಪರಿಣಾಮ ಬೀರದು, ನಾಗರಹೊಳೆಯ ಮರಿ ಆನೆಗೆ ಸೂಕ್ತ ಚಿಕಿತ್ಸೆ: ಸಿಎಂ ಬೊಮ್ಮಾಯಿ
ನಾಗರಹೊಳೆ ಅಭಯಾರಣ್ಯದಲ್ಲಿ ಮರಿ ಆನೆಗೆ ತೀವ್ರ ಗಾಯಗೊಂಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ವರದಿ ತರಿಸಿಕೊಂಡು ಅಧಿಕಾರಿಗಳ ಜೊತೆ ಚರ್ಚಿಸಿದ್ದೇನೆ. ಮರಿ ಆನೆಗೆ ಉತ್ತಮ ಚಿಕಿತ್ಸೆ ನೀಡಲು ಇರುವ ಸಾಧ್ಯತೆಗಳೆಲ್ಲವನ್ನೂ ಗಮನಿಸಿ ನಿರ್ದೇಶನ ನೀಡಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

2023ರ ವಿಧಾನಸಭೆ ಚುನಾವಣೆ: ಕೆಲವೇ ಕಾಂಗ್ರೆಸ್ ಸೀಟುಗಳನ್ನು ಹೊಂದಿರುವ ಪ್ರದೇಶಗಳಲ್ಲಿ ಸಾಗಲಿದೆ ಭಾರತ್ ಜೋಡೋ ಯಾತ್ರೆ
ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಆರಂಭಿಸಿರುವ ಮಹತ್ವಾಕಾಂಕ್ಷೆಯ ಭಾರತ್ ಜೋಡೋ ಯಾತ್ರೆಯ ಪರಿಣಾಮ ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆ ವೇಳೆಗೆ ಸಾಕಾರಗೊಳ್ಳುವ ನಿರೀಕ್ಷೆಯಿದೆ.

