Bharat Jodo Yatra

ಮಹಾರಾಷ್ಟ್ರ: ಭಾರತ್ ಜೋಡೋ ಯಾತ್ರೆಯಲ್ಲಿ ನಟ ಅಮೋಲ್ ಪಾಲೇಕರ್, ಸಂಧ್ಯಾ ಗೋಖಲೆ ಭಾಗಿ
ಮಹಾರಾಷ್ಟ್ರದ ಬುಲ್ಧಾನ ಜಿಲ್ಲೆಯಲ್ಲಿ ಭಾನುವಾರ ಭಾರತ್ ಜೋಡೋ ಯಾತ್ರೆಯಲ್ಲಿ ಹಿರಿಯ ನಟ ಅಮೋಲ್ ಪಾಲೇಕರ್ ಮತ್ತು ಅವರ ಪತ್ನಿ, ಲೇಖಕಿ-ಚಲನಚಿತ್ರ ನಿರ್ಮಾಪಕಿ ಸಂಧ್ಯಾ ಗೋಖಲೆ ಅವರು ಭಾಗವಹಿಸಿದ್ದರು.

ಭಾರತ್ ಜೋಡೋ ಯಾತ್ರೆಯ ಧನಾತ್ಮಕ ಶಕ್ತಿಗೆ ಸಾವರ್ಕರ್ ವಿರುದ್ಧದ ಟೀಕೆಯಿಂದ ರಾಹುಲ್ ನೀರೆರೆಚಿದ್ದಾರೆ: ಸಂಜಯ್ ರಾವುತ್
ಕಾಂಗ್ರೆಸ್‌ನ ಭಾರತ್ ಜೋಡೋ ಯಾತ್ರೆಯಿಂದ ಉಂಟಾದ ಸಕಾರಾತ್ಮಕ ಶಕ್ತಿಗೆ ರಾಹುಲ್ ಗಾಂಧಿಯವರು ಸ್ವಾತಂತ್ರ್ಯ ಹೋರಾಟಗಾರ ಸಾವರ್ಕರ್ ಅವರನ್ನು ಟೀಕಿಸುವ ಮೂಲಕ ನೀರೆರೆಚಿದ್ದಾರೆ ಎಂದು ಉದ್ಧವ್ ಠಾಕ್ರೆ ಬಣದ ಶಿವಸೇನೆ ಸಂಸದ ಸಂಜಯ್ ರಾವುತ್ ತಿಳಿಸಿದ್ದಾರೆ.

ಮಧ್ಯ ಪ್ರದೇಶ: ಭಾರತ್ ಜೋಡೋ ಯಾತ್ರೆಗೆ ಬಾಂಬ್ ಬೆದರಿಕೆ, ಇಬ್ಬರ ಬಂಧನ
ರಾಹುಲ್ ಗಾಂಧಿ ಸಾರಥ್ಯದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆ ಇದೇ 28 ರಂದು ಖಾಲ್ಸಾ ಸ್ಟೇಡಿಯಂನಲ್ಲಿ ತಂಗುವುದಾದರೆ ಬಾಂಬ್ ಸ್ಫೋಟಿಸುವುದಾಗಿ ಅನಾಮಧೇಯ ಪತ್ರ ಬಂದ ನಂತರ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಭಾರತ್ ಜೋಡೋ ಯಾತ್ರೆ ವೇಳೆ ರಾಹುಲ್ ಗಾಂಧಿಗೆ ಫೂಲ್‌ಪ್ರೂಫ್ ಭದ್ರತೆ ಒದಗಿಸಲು ಬದ್ಧ: ಮಧ್ಯ ಪ್ರದೇಶದ ಸಚಿವ
ಭಾರತ್ ಜೋಡೋ ಯಾತ್ರೆಯ ವೇಳೆ ಇಂದೋರ್‌ನಲ್ಲಿ ಬಾಂಬ್ ಸ್ಫೋಟಿಸುವ ಬಗ್ಗೆ ಬೆದರಿಕೆಯೊಡ್ಡಿರುವ ಅನಾಮಧೇಯ ಪತ್ರದ ಕುರಿತು ಪ್ರತಿಕ್ರಿಯಿಸಿರುವ ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ, ಈ ಪಾದಯಾತ್ರೆಯ ನೇತೃತ್ವ ವಹಿಸಿರುವ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿಗೆ ಭದ್ರತೆ ಒದಗಿಸುವುದು ರಾಜ್ಯ ಸರ್ಕಾರದ ಜವಾಬ್ದಾರಿ ಎಂದು ಶನಿವಾರ ಹೇಳಿದ್ದಾರೆ.

ಭಾರತ್ ಜೋಡೋ ಯಾತ್ರೆ ಮೂಲಕ ಕಾಂಗ್ರೆಸ್ ದೇಶವನ್ನು ಒಡೆಯಬಹುದು, ಒಗ್ಗೂಡಿಸಲು ಸಾಧ್ಯವಿಲ್ಲ: ಜೆಪಿ ನಡ್ಡಾ
ಭಾರತೀಯ ಜನತಾ ಪಕ್ಷದ (ಬಿಜೆಪಿ) ಅಧ್ಯಕ್ಷ ಜೆಪಿ ನಡ್ಡಾ ಅವರು ಶುಕ್ರವಾರ ಭಾರತ್ ಜೋಡೋ ಯಾತ್ರೆಯ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆದಿದ್ದು, ವಿರೋಧ ಪಕ್ಷವು ದೇಶವನ್ನು ಒಡೆಯಬಹುದು ಹೊರತು ಅದು ಒಗ್ಗೂಡಿಸಲು ಸಾಧ್ಯವಿಲ್ಲ ಎಂದು ಆರೋಪಿಸಿದ್ದಾರೆ.

ಬಾಂಬ್ ಸ್ಫೋಟಿಸಿ ಕೊಲ್ಲುತ್ತೇವೆ: ಇಂದೋರ್‌ನಲ್ಲಿ ರಾಹುಲ್ ಗಾಂಧಿ ಭಾರತ್ ಜೋಡೊ ಯಾತ್ರೆಗೆ ಬಾಂಬ್ ಬೆದರಿಕೆ; ತನಿಖೆ
ಮಧ್ಯಪ್ರದೇಶದ ಇಂದೋರ್‌ನಲ್ಲಿ ಭಾರತ್ ಜೋಡೊ ಯಾತ್ರೆಗೆ ಬಾಂಬ್ ಬೆದರಿಕೆ ಪತ್ರ ಬಂದಿದ್ದರಿಂದ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಬಾಂಬ್ ಸ್ಪೋಟಿಸಿ ಕೊಲ್ಲುತ್ತೇವೆ ಎಂಬ ಬೆದರಿಕೆ ಪತ್ರವೊಂದು ವ್ಯಾಪಕ ಸುದ್ದಿಗೆ ಗ್ರಾಸವಾಗಿದೆ.

ಕಾಂಗ್ರೆಸ್ ಜೋಡೋ ಯಾತ್ರೆ, ರಾಹುಲ್ ಜೊತೆ ಮಹಾತ್ಮ ಗಾಂಧಿ ಮೊಮ್ಮಗ ತುಷಾರ್ ಗಾಂಧಿ ಹೆಜ್ಜೆ!
ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಜೋಡೋ ಯಾತ್ರೆ 12 ನೇ ದಿನಕ್ಕೆ ಕಾಲಿಟ್ಟಿದ್ದು, ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಮೊಮ್ಮಗ ತುಷಾರ್ ಗಾಂಧಿ ಕೂಡಾ ಇಂದು ರಾಹುಲ್ ಗಾಂಧಿ ಜೊತೆಗೆ ಹೆಜ್ಜೆ ಹಾಕಿದ್ದಾರೆ.

ಭಾರತ್ ಜೋಡೋ ಯಾತ್ರೆ, ಯಾವುದೇ ವೋಟ್ ಬ್ಯಾಂಕ್ ನೊಂದಿಗೆ ಸಂಬಂಧಿಸಿದ್ದಲ್ಲ: ಜೈರಾಮ್ ರಮೇಶ್
ಭಾರತ್ ಜೋಡೋ ಯಾತ್ರೆ ಯಾವುದೇ ವೋಟ್ ಬ್ಯಾಂಕ್ ನೊಂದಿಗೆ ಸಂಪರ್ಕ ಹೊಂದಿಲ್ಲ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ, ಸಂವಹನ ವಿಭಾಗದ ಮುಖ್ಯಸ್ಥ ಜೈರಾಮ್ ರಮೇಶ್ ಹೇಳಿದ್ದಾರೆ.

ಭಾರತ್ ಜೋಡೋ ಯಾತ್ರೆ ದೇಶವನ್ನು ಒಂದುಗೂಡಿಸುವ ಚಳುವಳಿ; ಶರದ್ ಪವಾರ್ ಭೇಟಿ ಬಳಿಕ ಸಂಜಯ್ ರಾವುತ್
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆಯು "ಕಹಿ ವಾತಾವರಣ"ವನ್ನು ಕೊನೆಗೊಳಿಸಲು ಮತ್ತು ದೇಶವನ್ನು ಒಂದುಗೂಡಿಸಲು ನಡೆಯುತ್ತಿರುವ ಚಳುವಳಿಯಾಗಿದೆ ಎಂದು ಶಿವಸೇನೆ ನಾಯಕ ಸಂಜಯ್ ರಾವುತ್ ಗುರುವಾರ ಹೇಳಿದ್ದಾರೆ.

