Bengaluru South district

ಬೆಂಗಳೂರು ದಕ್ಷಿಣ ಜಿಲ್ಲೆಯಿಂದ ಹೊರಗಿರುವಂತೆ 'ರೌಡಿ ಶೀಟರ್'ಗೆ ಆದೇಶ!
30 ವರ್ಷದ ಚಂದ್ರಶೇಖರ್ ಅಲಿಯಾಸ್ ಚಂದ್ರ, ಕಗ್ಗಲಿಪುರ ಪೊಲೀಸ್ ಠಾಣೆಯಲ್ಲಿ ರೌಡಿ ಶೀಟರ್ ಆಗಿದ್ದಾರೆ. ಇವರು ಕಗ್ಗಲಿಪುರದಲ್ಲಿ ನಾಲ್ಕು ಮತ್ತು ತಲಘಟ್ಟಪುರದಲ್ಲಿ ಎರಡು ಪ್ರಕರಣಗಳಲ್ಲಿ ಆರೋಪಿಯಾಗಿದ್ದು, ಷರತ್ತುಬದ್ಧ ಜಾಮೀನಿನ ಮೇಲೆ ಹೊರಗಿದ್ದರು.

ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ನಕಲಿ ಔಷಧಿ ಮರುಪ್ಯಾಕಿಂಗ್ ಬೃಹತ್ ಜಾಲ ಪತ್ತೆ: 5 ಕೋಟಿ ರೂ ಮೌಲ್ಯದ ವಸ್ತುಗಳು ವಶಕ್ಕೆ!
ಪ್ರಶಾಂತ್ ಎಂಬ ವ್ಯಕ್ತಿ ಸ್ಥಳೀಯರಿಂದ ಫಾರ್ಮ್‌ಹೌಸ್ ಅನ್ನು ಲೀಸ್‌ಗೆ ಪಡೆದು, ಕಳೆದ ಒಂದು ವರ್ಷದಿಂದ ಈ ನಕಲಿ ದಂಧೆಯಲ್ಲಿ ತೊಡಗಿದ್ದ. ತೆಲಂಗಾಣ ಮತ್ತು ಹಿಮಾಚಲ ಪ್ರದೇಶ ಮೂಲದಿಂದ ಕಡಿಮೆ ಮೌಲ್ಯದ ಔಷಧಿಗಳನ್ನು ಆರೋಪಿ ಆಮದು ಮಾಡಿಕೊಳ್ಳುತ್ತಿದ್ದ ಎನ್ನಲಾಗಿದೆ.

ನಾವು ಸುಳ್ಳು ಹೇಳುವವರಲ್ಲ, ಅತ್ತು-ಕರೆದು ನಾಟಕ ಮಾಡೋರಲ್ಲ; ಬೆಂಗಳೂರು ದಕ್ಷಿಣ ಜಿಲ್ಲೆಯನ್ನು ನಂ.1 ಮಾಡುವುದು ಡಿಕೆಶಿ ಕನಸು: ಡಿ.ಕೆ ಸುರೇಶ್
ನಾವು ಸುಳ್ಳು ಹೇಳಿ ಕೆಲಸ ಮಾಡುವವರಲ್ಲ. ನಿಮ್ಮ ಬಳಿ ಅತ್ತು ಕರೆದು ನಾಟಕ ಮಾಡುವವರಲ್ಲ. ನಾನು ಕೊಟ್ಟ ಮಾತನ್ನು ಉಳಿಸಿಕೊಳ್ಳುವವನು, ಕೊಟ್ಟ ಭರವಸೆ ಈಡೇರುವ ತನಕ ವಿಶ್ರಾಂತಿ ತೆಗೆದುಕೊಳ್ಳುವುದಿಲ್ಲ ಎಂದು ಹೇಳಿದರು.

ರಾಮಕೃಷ್ಣ ಹೆಗಡೆ ಸರ್ಕಾರದಲ್ಲಿ ಕೊಟ್ಟ ಜಾಗ ನುಂಗಿದ್ದು ಯಾರು? ಚಿನ್ನ ತರುವ ಮಾಹಿತಿ ಕೊಟ್ಟಿದ್ದೇ ಕಾಂಗ್ರೆಸ್ ನಾಯಕ: ಎಚ್.ಡಿ ಕುಮಾರಸ್ವಾಮಿ
ಇವರು ಶಾಶ್ವತವಾಗಿ ಇರುತ್ತಾರಾ? ಮುಂದೆ ಬದಲಾಗಲಿದೆ, ಅದು ನನಗೆ ಗೊತ್ತಿದೆ. ಈಗ ಜಮೀನುಗಳಿಗೆ ಬೆಲೆ ಇಲ್ವಾ? ಅವರ ಜಮೀನುಗಳಿಗೆ ಬೆಲೆ ಏರಬಹುದು.

News headlines 22-05-2025 | ರಾಮನಗರ ಇನ್ನು ಮುಂದೆ ಬೆಂಗಳೂರು ದಕ್ಷಿಣ ಜಿಲ್ಲೆ; ಪರಮೇಶ್ವರ್ ಒಡೆತನದ ಸಂಸ್ಥೆಗಳ ಮೇಲೆ ಮುಂದುವರೆದ ED ದಾಳಿ; ಅತ್ಯಾಚಾರ ಆರೋಪ: ಕಿರುತೆರೆ ಕಲಾವಿದ ಮಡೆನೂರು ಮನು ಪೊಲೀಸ್ ವಶಕ್ಕೆ

DK Shivakumar ಕನಸು ನುಚ್ಚುನೂರು!: ಕೇಂದ್ರದಿಂದ ತಣ್ಣೀರು!
ಈಗ ಕರ್ನಾಟಕ ಸಚಿವ ಸಂಪುಟದ ಪ್ರಸ್ತಾವನೆಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಗೃಹ ಇಲಾಖೆ, ರಾಮನಗರ ಜಿಲ್ಲೆಯ ಮರುಣಾಮಕರಣ ಸಾಧ್ಯವಿಲ್ಲ ಎಂದು ಹೇಳಿದೆ.

ಪ್ರತಿ ತಿಂಗಳ 2, 4ನೇ ಶನಿವಾರ ಕನಕಪುರಕ್ಕೆ ಭೇಟಿ, ಕುಂದುಕೊರತೆ ಪರಿಹಾರ ಸಭೆ: ಡಿಕೆ ಶಿವಕುಮಾರ್
ಜುಲೈ 26 ರಂದು ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿತ್ತು. ಜಿಲ್ಲೆಯು ರಾಮನಗರ, ಮಾಗಡಿ, ಕನಕಪುರ, ಚನ್ನಪಟ್ಟಣ ಮತ್ತು ಹಾರೋಹಳ್ಳಿ ತಾಲ್ಲೂಕುಗಳನ್ನು ಒಳಗೊಂಡಿದೆ.

