Bengaluru police

ಪರಪ್ಪನ ಅಗ್ರಹಾರದಿಂದ ದರ್ಶನ್, ಇತರ ಆರೋಪಿಗಳನ್ನು ಮೊದಲು ಸ್ಥಳಾಂತರಿಸಿ: ಬೆಂಗಳೂರು ಪೊಲೀಸರ ಮನವಿ
ಪರಪ್ಪನ ಅಗ್ರಹಾರ ಜೈಲಿನಲ್ಲಿ ಸಾಕಷ್ಟು ರೌಡಿಗಳು ಇದ್ದಾರೆ. ರೌಡಿಗಳು ಅಕ್ರಮದಲ್ಲಿ ಭಾಗಿಯಾಗುವ ಸಾಧ್ಯತೆಗಳಿರುವುದರಿಂದ ಅವರನ್ನು ಬೇರೆಡೆಗೆ ಸ್ಥಳಾಂತರಿಸುವಂತೆ ಮನವಿ ಮಾಡಿದ್ದೇವೆ.

ಜೈಲಲ್ಲಿ ರಾಜಾತಿಥ್ಯ: ನಟ ದರ್ಶನ್ ಗೆ ಫುಲ್ ಡ್ರಿಲ್; ಕೋರ್ಟ್ ಅನುಮತಿಗೆ ಪೊಲೀಸರ ಸಿದ್ಧತೆ!
ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟ ದರ್ಶನ್ಗೆ (Actor Darshan) ರಾಜಾತಿಥ್ಯ ಹಾಗೂ ಮೊಬೈಲ್ ಬಳಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ವಿಚಾರಣೆಗೆ ಸಿದ್ಧತೆ ನಡೆಸಿದ್ದು, ದರ್ಶನ್ ವಿಚಾರಣೆಗೆ ಕೋರ್ಟ್ ಅನುಮತಿ ಪಡೆಯಲು ಅಧಿಕಾರಿಗಳು ಮುಂದಾಗಿದ್ದಾರೆ.

Bengaluru Road Rage: ಕಾರಿಗೆ ಬೈಕ್ ಟಚ್ ಆಗಿದ್ದಕ್ಕೆ ಹಿಂಬಾಲಿಸಿ ಗುದ್ದಿ ಯುವಕನ ಕೊಲೆ, ಇಬ್ಬರ ಬಂಧನ
ಕಾರಿಗೆ ಬೈಕ್ ಟಚ್ ಆಗಿದ್ದಕ್ಕೇ ಆಕ್ರೋಶಗೊಂಡ ಗುಂಪೊಂದು ಬೈಕ್ ಸವಾರನನ್ನು ಹಿಮ್ಮೆಟ್ಟಿ ಕಾರಿನಲ್ಲಿ ಗುದ್ದಿ ಕೊಲೆ ಮಾಡಿದೆ. ಬೆಂಗಳೂರಿನ ವಿದ್ಯಾರಣ್ಯಪುರದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಮೃತ ಯುವಕನನ್ನು ಡೆಲಿವರಿ ಬಾಯ್ ಮಹೇಶ್ ಎಂದು ಗುರುತಿಸಲಾಗಿದೆ.

ಬೆಂಗಳೂರಿನಲ್ಲಿ ರೋಡ್ ರೇಜ್: ಮಗು ಕಿರುಚಿಕೊಂಡರೂ ಸುಮ್ಮನಾಗದೆ ಕಾರಿನ ಮೇಲೆ ಕಲ್ಲು ಎತ್ತಿಹಾಕಿ ಪುಂಡಾಟ, ವಿಡಿಯೋ
ಕೋರಮಂಗಲದ ಪಬ್ನಲ್ಲಿ ಬೌನ್ಸರ್ ಆಗಿರುವ 26 ವರ್ಷದ ನವೀನ್ ರೆಡ್ಡಿ ಎಂಬಾತ ಬೈಕ್ ನಲ್ಲಿ ಕಾರನ್ನು ಹಿಂಬಾಲಿಸಿ ಅಡ್ಡಗಟ್ಟಿ ದಾಂದಲೆ ನಡೆಸಿದ್ದಾನೆ.

7 ವರ್ಷಗಳಿಂದ 10,000 ಜೋಡಿ ಬ್ರಾಂಡೆಡ್ ಶೂ ಕಳ್ಳತನ; ಇಬ್ಬರು ಖದೀಮರ ಬಂಧನ!
ಆರೋಪಿಗಳನ್ನು ಬಂಧಿಸಿದ ನಂತರ ಪೊಲೀಸರು ಅವರ ಮನೆಗೆ ಭೇಟಿ ನೀಡಿ ಪರಿಶೀಲಿಸಿದಾಗ ಸುಮಾರು 715 ಜೋಡಿ ಬ್ರಾಂಡೆಡ್ ಶೂಗಳನ್ನು ಕಂಡು ಆಘಾತಕ್ಕೊಳಗಾಗಿದ್ದಾರೆ.

Spa Extortion Case: ಕೇರಳದಲ್ಲಿ ಬೆಂಗಳೂರು ಪೊಲೀಸರ ಕಾರ್ಯಾಚರಣೆ, ಕನ್ನಡ ಟಿವಿ ನಿರೂಪಕಿ Divya Vasantha ಬಂಧನ
ಇಂದಿರಾನಗರದ ಟ್ರೀ ಸ್ಪಾ ಮತ್ತು ಬ್ಯೂಟಿ ಪಾರ್ಲರ್ ಮಾಲೀಕನನ್ನು ಒಳಗೊಂಡ ಹಲವರನ್ನು ಬ್ಲ್ಯಾಕ್ಮೇಲ್ ಮಾಡಿರುವ ಸುಲಿಗೆ ಪ್ರಕರಣದಲ್ಲಿ ದಿವ್ಯ ವಸಂತ ಆರೋಪಿಯಾಗಿದ್ದಾರೆ.

ದೇಗುಲಕ್ಕೆ ಹೋಗುತ್ತಿದ್ದ ಮಹಿಳೆಗೆ ಪುಂಡರ ಕಾಟ; ಪೋಸ್ಟ್ ಮಾಡಿ ಅಳಲು ತೋಡಿಕೊಂಡ ಸಂತ್ರಸ್ಥೆ!
ಕುಟುಂಬ ಸಮೇತರಾಗಿ ಮಲೆ ಮಹದೇಶ್ವರ ದೇಗುಲಕ್ಕೆ ಹೋಗುತ್ತಿದ್ದ ಮಹಿಳೆಗೆ ಪುಂಡರು ಕಾಡಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಸಂಚಾರ ಉಲ್ಲಂಘನೆ ಮತ್ತು ಅಪಘಾತ ತಗ್ಗಿಸಲು ಶಾಲಾ ಪಠ್ಯಕ್ರಮದಲ್ಲಿ ರಸ್ತೆ ಸುರಕ್ಷತೆ ಪಾಠ ಸೇರ್ಪಡೆ: ಪೊಲೀಸರ ಒತ್ತಾಯ
ಪೊಲೀಸರು, ತಜ್ಞರ ಜೊತೆಗೂಡಿ ಪಠ್ಯಕ್ರಮವನ್ನು ಸಿದ್ಧಪಡಿಸಿದ್ದು, ಅದನ್ನು ಶೈಕ್ಷಣಿಕ ಪುಸ್ತಕಗಳಲ್ಲಿ ಅಳವಡಿಸಬಹುದಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ತಿಳಿಸಿದ್ದಾರೆ.

ನೋಯ್ಡಾ ಸುಳ್ಳು ಸುದ್ದಿ ಪ್ರಕರಣ: ಸಾಮಾಜಿಕ ಜಾಲತಾಣ influencer ಅಜಿತ್ ಭಾರ್ತಿಗೆ ಬೆಂಗಳೂರು ಪೊಲೀಸ್ ನೊಟೀಸ್
ಅಯೋಧ್ಯೆಯ ರಾಮ ಮಂದಿರ ವಿಚಾರವಾಗಿ ಸುಳ್ಳು ಸುದ್ದಿ ಹಂಚುತ್ತಿದ್ದ ಆರೋಪದಲ್ಲಿ ಸಾಮಾಜಿಕ ಜಾಲತಾಣ influencer ಅಜಿತ್ ಭಾರ್ತಿ ವಿರುದ್ಧ FIR ದಾಖಲಾಗುತ್ತಿದ್ದಂತೆಯೇ ಬೆಂಗಳೂರಿನ ಪೊಲೀಸರು ಆತನಿಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ಗುರುವಾರ ನೊಟೀಸ್ ಜಾರಿಗೊಳಿಸಿದ್ದಾರೆ.

