Bengaluru police

ಸಾರ್ವಜನಿಕ ಸಂವಹನ: ಬೆಂಗಳೂರು ಪೊಲೀಸ್ ಇಲಾಖೆ AI ಅವತಾರ ಅಳವಡಿಕೆ
ಜಂಟಿ ಪೊಲೀಸ್ ಆಯುಕ್ತ ಎಂ.ಎನ್. ಅನುಚೇತ್ ಇತ್ತೀಚೆಗೆ ಶಿವಾಜಿ ಸರ್ಕಲ್ ಮತ್ತು ಜ್ಯೋತಿ ಕೆಫೆಯಲ್ಲಿ ಮೆಟ್ರೋ ಕಾಮಗಾರಿಯಿಂದಾಗಿ ಟ್ರಾಫಿಕ್ ತಿರುವುಗಳ ಕುರಿತು ಚರ್ಚಿಸುತ್ತಿರುವ ಎಐ-ರಚಿಸಿದ ವೀಡಿಯೊದಲ್ಲಿ ಕಾಣಿಸಿಕೊಂಡಿದ್ದರು.

Drink And Drive: ಬೆಂಗಳೂರಿನಲ್ಲಿ ಮಹಿಳೆ ಬಲಿ; ಕೇಸ್ ವಾಪಸ್ ಗೆ ಕೋಟಿ ಕೋಟಿ ಆಫರ್!.. Benz ಕಾರು ಮಾಲೀಕ ಯಾರು?
ಭಾನುವಾರ ಸಂಜೆ 6.45ಕ್ಕೆ ಆರೋಪಿ ಧನುಷ್ ಹಾಗೂ ಗೆಳೆಯರು ಭರ್ಜರಿ ಪಾರ್ಟಿ ಮುಗಿಸಿ ರೋಡ್ನಲ್ಲಿ ವೇಗದಲ್ಲಿ ಡ್ರೈವಿಂಗ್ ಮಾಡುತ್ತಿದ್ದರು. ಕೆಂಗೇರಿ ಬಸ್ ನಿಲ್ದಾಣದ ಬಳಿ ಟೆಕ್ಕಿ ಸಂಧ್ಯಾ ಅವರು ರಸ್ತೆ ಕ್ರಾಸ್ ಮಾಡುತ್ತಿದ್ದರು.

'ತಪ್ಪಾಯ್ತು ದಯವಿಟ್ಟು ಕ್ಷಮಿಸಿ': ಕನ್ನಡಿಗರು, ಕರ್ನಾಟಕದ ವಿರುದ್ಧ ಅವಾಚ್ಯ ನಿಂದನೆ ಮಾಡಿದ್ದ Instagrammer ಕ್ಷಮೆ ಯಾಚನೆ!
ಬೆಂಗಳೂರು ಪೊಲೀಸರು ಮತ್ತು ಮುಂಬೈ ಪೊಲೀಸರ ಎಚ್ಚರಿಕೆ ಬಳಿಕ Instagrammer ದೇವ್ ಶರ್ಮಾ ಇದೀಗ ವಿಡಿಯೋ ಮಾಡಿ ಕನ್ನಡಿಗರು ಮತ್ತು ಕರ್ನಾಟಕದ ಕ್ಷಮೆಯಾಚಿಸಿದ್ದಾನೆ.

ಪೊಲೀಸರ ಸಮಯ ಪ್ರಜ್ಞೆ: ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ ಸಾವಿನಿಂದ ಪಾರು
ಕೂಲಿ ಕಾರ್ಮಿಕ ಸತೀಶ್ (ಹೆಸರು ಬದಲಾಯಿಸಲಾಗಿದೆ) ತನ್ನ ಪತ್ನಿಯೊಂದಿಗೆ ಜಗಳವಾಡಿಕೊಂಡು ಮನೆಯಿಂದ ಹೊರ ಬಂದಿದ್ದಾನೆ. ಬಳಿಕ ಆತ್ಮಹತ್ಯೆಗೆ ಶರಣಾಗಲು ನಿರ್ಧರಿಸಿ ರಾಜನಕುಂಟೆ ರೈಲ್ವೆ ಹಳಿ ಕಡೆಗೆ ಹೋಗಿದ್ದಾನೆ.

ಬೆಂಗಳೂರಿನಲ್ಲಿ ಹಾಡಹಗಲೇ ಕರ್ತವ್ಯ ನಿರತ ಪೊಲೀಸ್ ಮೇಲೆ ಮಹಿಳೆಯಿಂದ ಹಲ್ಲೆ; Video Viral
ಬೆಂಗಳೂರಿನ ಇಂದಿರಾನಗರದಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗಿದ್ದು, ಸಂಚಾರಿ ನಿಯಮ ಉಲ್ಲಂಗಿಸಿ ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ ಮಹಿಳೆಯನ್ನು ಸಂಚಾರಿ ಪೊಲೀಸ್ ಪೇದೆ ನಿಲ್ಲಿಸಿ ಪ್ರಶ್ನಿದಾಗ ಆಕೆ ಸಂಘರ್ಷಕ್ಕಿಳಿದಿದ್ದಾಳೆ.

ಬೆಂಗಳೂರು ಕಟ್ಟಡ ಕುಸಿತ ಪ್ರಕರಣ: ಪೊಲೀಸರಿಂದ ಮಾಲೀಕ ಹಾಗೂ ಗುತ್ತಿಗೆದಾರನ ಬಂಧನ
ಕಟ್ಟಡ ಮಾಲೀಕ ಭುವನ್ ರೆಡ್ಡಿ ನಾಲ್ಕು ಮಹಡಿ ನಿರ್ಮಾಣಕ್ಕೆ ಅನುಮತಿ ಪಡೆದು, ಆರು ಮಹಡಿಯ ಕಟ್ಟಡ ಕಟ್ಟಿಸುತ್ತಿದ್ದ. ಇದರಿಂದ ಕಟ್ಟಡ ಕುಸಿದು ಬಿದ್ದಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.

ಟಿಕೆಟ್ ಕೊಡಿಸುವುದಾಗಿ 2 ಕೋಟಿ ರೂ ವಂಚನೆ: ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಸಹೋದರನ ಬಂಧನ
ದೂರು ದಾಖಲಾಗುತ್ತಿದ್ದಂತೆ ಗೋಪಾಲ್ ಜೋಶಿ ತಲೆಮರೆಸಿಕೊಂಡಿದ್ದರು. ತನಿಖೆ ಕೈಗೊಂಡಿದ್ದ ಪೊಲೀಸರು ಗೋಪಾಲ್ ಜೋಶಿ ಕೊಲ್ಲಾಪುರದಲ್ಲಿ ತಲೆಮರೆಸಿಕೊಂಡಿರುವುದನ್ನು ಪತ್ತೆ ಹಚ್ಚಿ ಅವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Mangaluru: ಅತಿದೊಡ್ಡ ಡ್ರಗ್ಸ್ ಜಾಲ ಪತ್ತೆ; 6 ಕೋಟಿ ರೂ ಮೌಲ್ಯದ ಮಾದಕ ವಸ್ತು ವಶ; ನೈಜೀರಿಯನ್ ಪ್ರಜೆ ಬಂಧನ!
ಮಂಗಳೂರಿನ ಇತಿಹಾಸದಲ್ಲೇ ಅತೀ ದೊಡ್ಡ ಡ್ರಗ್ಸ್ ಜಾಲವನ್ನು ಪೊಲೀಸರು ಪತ್ತೆ ಮಾಡಿದ್ದು, ಈ ಸಂಬಂಧ ಮಂಗಳೂರು ಸಿಸಿಬಿ ಪೊಲೀಸರು ಬೆಂಗಳೂರಿನಲ್ಲಿ ಕಾರ್ಯಾಚರಣೆ ನಡೆಸಿ ನೈಜೀರಿಯಾ ಪ್ರಜೆಯನ್ನು ವಶಕ್ಕೆ ಪಡೆದಿದ್ದಾರೆ.

BMTC ಬಸ್ನಲ್ಲಿ ಹುಚ್ಚಾಟ ಮೆರೆದ ಪ್ರಯಾಣಿಕ; ಕಂಡಕ್ಟರ್ ಹೊಟ್ಟೆಗೆ ಚೂರಿ ಇರಿತ: ಆರೋಪಿಯ ಅಟ್ಟಹಾಸ CCTVಯಲ್ಲಿ ಸೆರೆ!
ವೈಟ್ಫೀಲ್ಡ್ನ ಐಟಿಪಿಎಲ್ ಸಮೀಪದ ವೈದೇಹಿ ಆಸ್ಪತ್ರೆ ಜಂಕ್ಷನ್ ಬಳಿ ಘಟನೆ ನಡೆದಿದೆ. ಸುಮಾರು 7 ಗಂಟೆ ಸುಮಾರಿಗೆ ಜಾರ್ಖಂಡ್ ಮೂಲದ ಆರೋಪಿ 25 ವರ್ಷದ ಹರ್ಷ ಸಿನ್ಹಾ ಬಿಎಂಟಿಸಿ 13ನೇ ಘಟಕದ ವೋಲ್ವೋ ಬಸ್ ನಿರ್ವಾಹಕ 45 ವರ್ಷದ ಯೋಗೇಶ್ ಗೆ ಚಾಕು ಇರಿದಿದ್ದಾನೆ.

