bed

ಸಾಕಷ್ಟು ಹಾಸಿಗೆ ಇದೆ, ಆದರೆ, ಆರೋಗ್ಯ ಸಿಬ್ಬಂದಿಗಳೇ ಇಲ್ಲ: ಕೊರೋನಾ ವಿರುದ್ಧದ ಮೈಸೂರು ಹೋರಾಟಕ್ಕೆ ಹಿನ್ನಡೆ? 
ರಾಜ್ಯ

ಸಾಕಷ್ಟು ಹಾಸಿಗೆ ಇದೆ, ಆದರೆ, ಆರೋಗ್ಯ ಸಿಬ್ಬಂದಿಗಳೇ ಇಲ್ಲ: ಕೊರೋನಾ ವಿರುದ್ಧದ ಮೈಸೂರು ಹೋರಾಟಕ್ಕೆ ಹಿನ್ನಡೆ? 

ಕೊರೋನಾ ವಿರುದ್ಧ ಮೈಸೂರು ಜಿಲ್ಲಾ ಆಡಳಿತ ಮಂಡಳಿ ದಿಟ್ಟ ಹೋರಾಟ ನಡೆಸುತ್ತಿರುವ ನಡುವಲ್ಲೇ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಸೋಂಕಿತರು ದಾಖಲಾಗಲು ಹಾಸಿಗೆಗಳು ಖಾಲಿಯಿದ್ದರೂ, ಆರೋಗ್ಯ ಸಿಬ್ಬಂದಿಗಳ ಕೊರತೆ ದೊಡ್ಡ ತಲೆನೋವಾಗಿ ಪರಿಣಮಿಸಿದ್ದು, ಇದರಿಂದ ಆತಂಕ ಹೆಚ್ಚಾಗುವಂತೆ ಮಾಡಿದೆ. 

2030ರ ವೇಳೆಗೆ ಶಿಕ್ಷಕರ ನೇಮಕಾತಿಗೆ 4 ವರ್ಷಗಳ ಬಿಇಡಿ ಪದವಿ ಕಡ್ಡಾಯ
ದೇಶ

2030ರ ವೇಳೆಗೆ ಶಿಕ್ಷಕರ ನೇಮಕಾತಿಗೆ 4 ವರ್ಷಗಳ ಬಿಇಡಿ ಪದವಿ ಕಡ್ಡಾಯ

 2030 ರ ವೇಳೆಗೆ 4 ವರ್ಷಗಳ ಇಂಟಿಗ್ರೇಟೆಡ್ ಬಿಇಡಿ ಕೋರ್ಸ್ ಶಿಕ್ಷಕ ಹುದ್ದೆಗೆ ಕನಿಷ್ಠ ಪದವಿ ಅರ್ಹತೆ ಆಗಿರಲಿದೆ, ಹೊಸ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಪ್ರಕಾರ "ಗುಣಮಟ್ಟದ" ಶಿಕ್ಷಣವನ್ನು ನೀಡದ  ಶಿಕ್ಷಕ ಶಿಕ್ಷಣ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎನ್ನಲಾಗಿದೆ.

ನಟಿ ಸುಧಾರಾಣಿಗೆ ಒಂದು ಗಂಟೆ ಕಾಯಿಸಿದ ಆಸ್ಪತ್ರೆ: ಕಮಿಷನರ್ ಕರೆ ಮಾಡಿದ ನಂತರ ಅಡ್ಮಿಟ್
ರಾಜ್ಯ

ನಟಿ ಸುಧಾರಾಣಿಗೆ ಒಂದು ಗಂಟೆ ಕಾಯಿಸಿದ ಆಸ್ಪತ್ರೆ: ಕಮಿಷನರ್ ಕರೆ ಮಾಡಿದ ನಂತರ ಅಡ್ಮಿಟ್

ಖ್ಯಾತ ನಟಿ ಸುಧಾರಾಣಿ ಅಣ್ಣನ ಮಗಳಿಗೆ ಆಸ್ಪತ್ರೆಯಲ್ಲಿ ಬೆಡ್ ಸಿಗದೇ ಪರದಾಟ ನಡೆಸಿರುವ ಘಟನೆ ರಾಜಧಾನಿಯಲ್ಲಿ ನಡೆದಿದೆ. ಆಸ್ಪತ್ರೆ ಸಿಬ್ಬಂದಿ ರೋಗಿಯನ್ನು ಅಡ್ಮಿಟ್ ಮಾಡಿಕೊಳ್ಳದೇ ಆಸ್ಪತ್ರೆ ಹೊರಗೆ ಸುಮಾರು ಒಂದು ಗಂಟೆ ಸಮಯ ಕಾಯಿಸಿದ್ದಾರೆ.

ಸೋಂಕಿತರಿಗೆ ಹಾಸಿಗೆ ನೀಡಿ, ಇಲ್ಲವೇ ವಿದ್ಯುತ್, ನೀರು ಸರಬರಾಜು ಕಡಿತ ಎದುರಿಸಿ: ಮಣಿಪಾಲ್ ಆಸ್ಪತ್ರೆ ಸಿಇಒಗೆ ಸಚಿವ ಖಡಕ್ ಎಚ್ಚರಿಕೆ
ರಾಜ್ಯ

ಸೋಂಕಿತರಿಗೆ ಹಾಸಿಗೆ ನೀಡಿ, ಇಲ್ಲವೇ ವಿದ್ಯುತ್, ನೀರು ಸರಬರಾಜು ಕಡಿತ ಎದುರಿಸಿ: ಮಣಿಪಾಲ್ ಆಸ್ಪತ್ರೆ ಸಿಇಒಗೆ ಸಚಿವ ಖಡಕ್ ಎಚ್ಚರಿಕೆ

ಕೊರೋನಾ ಸೋಂಕಿತರಿಗೆ ಶೇ.50ರಷ್ಟು ಹಾಸಿಗೆಗಳನ್ನು ನೀಡಿ ಸರ್ಕಾರದೊಂದಿಗೆ ಸಹಕಾರ ನೀಡದೇ ಹೋದಲ್ಲಿ ಆಸ್ಪತ್ರೆ ನೀಡಲಾಗುತ್ತಿರುವ ವಿದ್ಯುತ್ ಹಾಗೂ ನೀರು ಸರಬರಾಜನ್ನು ಕಡಿತಗೊಳಿಸಲಾಗುತ್ತದೆ ಎಂದು ವೈಟ್'ಫೀಲ್ಡ್'ನಲ್ಲಿರುವ ಮಣಿಪಾಲ್ ಆಸ್ಪತ್ರೆಯ ಸಿಇಒಗೆ ಸಚಿವ ಭೈರತಿ ಬಸವರಾಜ್ ಅವರು ಖಡಕ್ ಎಚ್ಚರಿಕೆ ನೀಡಿದ್ದಾರೆ. 

ಕೋವಿಡ್-19 ರೋಗಿಗಳನ್ನು ನೋಡಿಕೊಳ್ಳಲು ಆಸ್ಪತ್ರೆಗಳಲ್ಲಿ ನರ್ಸ್, ಸಿಬ್ಬಂದಿ ಕೊರತೆ: ಸೇವೆ ವ್ಯತ್ಯಯ
ರಾಜ್ಯ

ಕೋವಿಡ್-19 ರೋಗಿಗಳನ್ನು ನೋಡಿಕೊಳ್ಳಲು ಆಸ್ಪತ್ರೆಗಳಲ್ಲಿ ನರ್ಸ್, ಸಿಬ್ಬಂದಿ ಕೊರತೆ: ಸೇವೆ ವ್ಯತ್ಯಯ

ಎರಡು ದಿನಗಳ ಹಿಂದೆ ಕೋವಿಡ್-19ನಿಗೆ ಚಿಕಿತ್ಸೆ ಪಡೆದು ಗುಣಮುಖರಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ 27 ವರ್ಷದ ಯುವಕ ಆಸ್ಪತ್ರೆಯಲ್ಲಿ ಪಟ್ಟ ಕಷ್ಟವನ್ನು ಹಂಚಿಕೊಂಡರು.

'ಸತ್ತವರ ದೇಹ ಮುಟ್ಟಲು ಹೆದರುವ ಸರ್ಕಾರ ಸೋಂಕಿತರು ಬಳಸಿದ ಬೆಡ್ ಗಳನ್ನು ವಿದ್ಯಾರ್ಥಿಗಳಿಗೆ ನೀಡುವುದು ಸರಿಯೇ?'
ರಾಜಕೀಯ

'ಸತ್ತವರ ದೇಹ ಮುಟ್ಟಲು ಹೆದರುವ ಸರ್ಕಾರ ಸೋಂಕಿತರು ಬಳಸಿದ ಬೆಡ್ ಗಳನ್ನು ವಿದ್ಯಾರ್ಥಿಗಳಿಗೆ ನೀಡುವುದು ಸರಿಯೇ?'

ಕೋವಿಡ್-19 ಸೋಂಕಿತರು ಬಳಸಿದ ಹಾಸಿಗೆಗಳನ್ನು ಹಾಸ್ಟೆಲ್ ವಿದ್ಯಾರ್ಥಿಗಳಿಗೆ ನೀಡಲು ಸರ್ಕಾರ ನಿರ್ಧರಿಸಿದೆ. ಇದರ ವಿರುದ್ಧ ಆಂದೋಲನ ಆರಂಭಿಸುವುದಾಗಿ   ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್  ಎಚ್ಚರಿಕೆ ನೀಡಿದ್ದಾರೆ.

ಸೋಂಕಿತರ ಚಿಕಿತ್ಸೆಗೆ ಶೇ.50 ಹಾಸಿಗೆ ನೀಡಲು ಖಾಸಗಿ ಆಸ್ಪತ್ರೆ ಒಪ್ಪಿಗೆ
ರಾಜ್ಯ

ಸೋಂಕಿತರ ಚಿಕಿತ್ಸೆಗೆ ಶೇ.50 ಹಾಸಿಗೆ ನೀಡಲು ಖಾಸಗಿ ಆಸ್ಪತ್ರೆ ಒಪ್ಪಿಗೆ

ಕೊರೋನಾ ಸೋಂಕಿತರಿಗೆ ಉಂಟಾಗುತ್ತಿರುವ ಹಾಸಿಗೆ ಕೊರತೆ ನೀಗಿಸಲು ಒಂದು ವಾರದೊಳಗಾಗಿ ಆಸ್ಪತ್ರೆಯ ಸಾಮರ್ಥ್ಯದ ಶೇ.50ರಷ್ಟು ಹಾಸಿಗೆಗಳನ್ನು ಕೊರೋನಾ ಸೋಂಕಿತರಿಗೆ ಮೀಸಲಿಡಲು ಖಾಸಗಿ ವೈದ್ಯಕೀಯ ಕಾಲೇಜುಗಳು ಮತ್ತು ಬೆಂಗಳೂರಿನ ಆಸ್ಪತ್ರೆಯ ಆಡಳಿತ ಮಂಡಳಿಗಳು ಕೊನೆಗೂ ಒಪ್ಪಿಗೆ ನೀಡಿವೆ. 

ಕೊರೋನಾ ಸೋಂಕಿತರಿಗೆ ಮತ್ತಷ್ಟು ಹಾಸಿಗೆ ಮೀಸಲು: ಖಾಸಗಿ ಆಸ್ಪತ್ರೆಗಳೊಂದಿಗೆ ಇಂದು ಸಿಎಂ ಯಡಿಯೂರಪ್ಪ ಸಭೆ
ರಾಜ್ಯ

ಕೊರೋನಾ ಸೋಂಕಿತರಿಗೆ ಮತ್ತಷ್ಟು ಹಾಸಿಗೆ ಮೀಸಲು: ಖಾಸಗಿ ಆಸ್ಪತ್ರೆಗಳೊಂದಿಗೆ ಇಂದು ಸಿಎಂ ಯಡಿಯೂರಪ್ಪ ಸಭೆ

ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದ್ದು, ಈಗಾಗಲೇ ಹಾಸಿಗೆಗಳ ಕೊರತೆ ಎದುರಾಗತೊಡಗಿದೆ.

ಬೆಡ್, ವೆಂಟಿಲೇಟರ್ ಇವೆ ಎನ್ನುತ್ತಿದೆ ಬಿಬಿಎಂಪಿ ಪೋರ್ಟಲ್, ಇನ್ನೊಂದೆಡೆ ರೋಗಿಗಳ ಸಾವು: ಟಿಎನ್ಐಇ ರಿಯಾಲಿಟಿ ಚೆಕ್!
ರಾಜ್ಯ

ಬೆಡ್, ವೆಂಟಿಲೇಟರ್ ಇವೆ ಎನ್ನುತ್ತಿದೆ ಬಿಬಿಎಂಪಿ ಪೋರ್ಟಲ್, ಇನ್ನೊಂದೆಡೆ ರೋಗಿಗಳ ಸಾವು: ಟಿಎನ್ಐಇ ರಿಯಾಲಿಟಿ ಚೆಕ್!

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವೆಬ್ ಸೈಟ್(chbms.bbmpgov.in)ನಲ್ಲಿ ಕೋವಿಡ್-19 ರೋಗಿಗಳಿಗೆ ಬೆಡ್ ಗಳ ಕೊರತೆಯಿಲ್ಲ ಎಂದು ಹಾಕಲಾಗಿದೆಯಾದರೂ ಅಲ್ಲಲ್ಲಿ ಸೂಕ್ತ ಸಮಯದಲ್ಲಿ ಚಿಕಿತ್ಸೆ ದೊರಕದೆ ಮೃತಪಟ್ಟ ಘಟನೆಗಳಿವೆ.