Basavaraja horatti

'ಇಂದು ರಾಜಕೀಯದಲ್ಲಿ ನೈತಿಕ ಮೌಲ್ಯ ಇಲ್ಲದಂತಾಗಿದೆ; ಮಹಿಳೆಯರು ಪತಿ ಅಥವಾ ಮಗನನ್ನು ಅಧಿಕಾರ ನಡೆಸಲು ಬಿಡುತ್ತಾರೆ': ಬಸವರಾಜ ಹೊರಟ್ಟಿ
ಕೊಪ್ಪಳದ ಗವಿಮಠ ಆವರಣದಲ್ಲಿ ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಇಂದು ಜನಪ್ರತಿನಿಧಿಗಳು ಹೇಳುವುದು ಒಂದು ಮಾಡುವುದು ಇನ್ನೊಂದು ಎಂಬಂತಾಗಿದೆ ಎಂದರು.

ಯುವ ರಾಜಕಾರಣಿಗಳಿಗೆ ಶಿಕ್ಷಣ ನೀಡಲು ಸರ್ಕಾರದಿಂದ ರಾಜಕೀಯ ಕಾಲೇಜು ಸ್ಥಾಪನೆಗೆ ಯೋಜನೆ: ಬಸವರಾಜ ಹೊರಟ್ಟಿ
ಇಂದಿನ ಅನೇಕ ಯುವ ರಾಜಕಾರಣಿಗಳಿಗೆ ರಾಮಕೃಷ್ಣ ಹೆಗಡೆ, ಕೆ.ಹೆಚ್. ಪಾಟೀಲ್ ಮತ್ತು ಬಿ. ಬಸವಲಿಂಗಪ್ಪ ಅವರಂತಹ ನಾಯಕರ ಬಗ್ಗೆ ಅರಿವು ಇಲ್ಲ. ಅವರಿಗೆ ಶಿಕ್ಷಣ ನೀಡುವ ಅಗತ್ಯವಿದೆ. ಹೊಸದಾಗಿ ಆಯ್ಕೆಯಾದ ಶಾಸಕರಿಗೆ ತರಬೇತಿ ನೀಡಬೇಕು. ಎಷ್ಟು ಜನ ಪುಸ್ತಕಗಳನ್ನು ಓದುತ್ತಾರೆ ಎಂದು ಕೇಳಿದರು.

ಸಭಾಪತಿಗಳ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದ ಇತಿಹಾಸವಿಲ್ಲ, ನಿಸ್ಪಕ್ಷಪಾತವಾಗಿ ಕೆಲಸ ಮಾಡಿದ್ದೇನೆ: ಬಸವರಾಜ ಹೊರಟ್ಟಿ
30 ಹುದ್ದೆಗಳಿಗೆ ಪರೀಕ್ಷೆ ಮತ್ತು ಮೆರಿಟ್ ಪಟ್ಟಿಯ ಆಧಾರದ ಮೇಲೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಮೂಲಕ ನೇಮಕಾತಿ ನಡೆಸಲಾಯಿತು. ಸಮಿತಿಯೂ ಅದನ್ನು ಪರಿಶೀಲಿಸಿತು ಎಂದು ಅವರು ಹೇಳಿದರು.

ಬೆಂಗಳೂರಿನಲ್ಲಿ ಮುಂದಿನ ಜೂನ್ ನಲ್ಲಿ ರಾಜಕೀಯ ಪದವಿ ಕಾಲೇಜು ಆರಂಭ: ಬಸವರಾಜ ಹೊರಟ್ಟಿ
ಪಠ್ಯಕ್ರಮವನ್ನು ಸಿದ್ಧಪಡಿಸುವಾಗ ನಿವೃತ್ತ ಪ್ರಾಧ್ಯಾಪಕರು, ಹಿರಿಯ ರಾಜಕಾರಣಿಗಳು ಮತ್ತು ರಾಜಕೀಯದ ಬಗ್ಗೆ ಜ್ಞಾನವಿರುವ ಸಾರ್ವಜನಿಕರನ್ನು ಸಂಪರ್ಕಿಸಲಾಗುವುದು ಎಂದು ಹೊರಟ್ಟಿ ಹೇಳಿದರು.

ಸಿಟಿ ರವಿ ಪ್ರಕರಣದಲ್ಲಿ ನನ್ನ ತೀರ್ಪೇ ಅಂತಿಮ, ಸಿಐಡಿಗೆ ನೀಡಿದ್ದು ಸರಿಯಲ್ಲ ಎಂದ ಹೊರಟ್ಟಿ; ಪರಮೇಶ್ವರ ಗರಂ
ಅವಾಚ್ಯ ಶಬ್ದವನ್ನು ಬಳಸಿರುವುದಕ್ಕೆ ಯಾವುದೇ ಸಾಕ್ಷ್ಯ ಲಭ್ಯವಾಗಿಲ್ಲ ಎಂದು ತಾವು ತೀರ್ಮಾನ ಮಾಡಿದ ಬಳಿಕವೂ ಸರ್ಕಾರ ಪ್ರಕರಣವನ್ನು ಸಿಐಡಿಗೆ ವಹಿಸಿದ್ದು ಸರಿಯಲ್ಲ.

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಸಿ.ಟಿ ರವಿ ಮಾತನಾಡಿದ್ದು ರೆಕಾರ್ಡ್ ಆಗಿಲ್ಲ: ಸಭಾಪತಿ ಹೊರಟ್ಟಿ
ಸಿ.ಟಿ ರವಿಯವರು ಮಾತನಾಡಿದ್ದು ಆಡಿಯೋ ರೆಕಾರ್ಡ್ ಆಗಿಲ್ಲ ಸಾಕ್ಷಿಗಳು ಮಾತ್ರ ಇವೆ. ರೆಕಾರ್ಡ್ ಹುಡುಕಿದ್ದೇನೆ ನಮಗೆ ಆಡಿಯೋ ಸಿಕ್ಕಿಲ್ಲ. ನಾಲ್ಕು ಜನರು ಸಾಕ್ಷಿ ಹೇಳಿದ್ದಾರೆ. ಸಿಟಿ ರವಿ ಮತ್ತು ಲಕ್ಷ್ಮೀ ಹೆಬ್ಬಾಳ್ಕರ್ ಇಬ್ಬರ ದೂರನ್ನೂ ಪಡೆದಿದ್ದೇವೆ ಎಂದು ತಿಳಿಸಿದರು.

ವಿಧಾನಸೌಧ ವಾಸ್ತು ಪ್ರಕಾರ ನಿರ್ಮಾಣಗೊಂಡಿದೆ: 'ಶಕ್ತಿಸೌಧ' ನವೀಕರಣ ವಿಚಾರದಲ್ಲಿ ಹೊರಟ್ಟಿ-ಖಾದರ್ ನಡುವೆ ಜಟಾಪಟಿ
ಸೋಮವಾರದಿಂದ ಆರಂಭವಾಗಲಿರುವ ರಾಜ್ಯ ವಿಧಾನಮಂಡಲದ ಮುಂಬರುವ ಮುಂಗಾರು ಅಧಿವೇಶನದ ಕುರಿತು ವಿವರ ನೀಡಲು ವಿಧಾನಸಭಾಧ್ಯಕ್ಷ ಖಾದರ್ ಮತ್ತು ಪರಿಷತ್ ಸಭಾಪತಿ ಹೊರಟ್ಟಿ ಶುಕ್ರವಾರ ಸುದ್ದಿಗೋಷ್ಠಿ ಕರೆದಿದ್ದ ವೇಳೆ ಈ ಭಿನ್ನಮತ ಕಂಡು ಬಂದಿದೆ.

ರಾಜೀನಾಮೆ ಪತ್ರ ತೋರಿಸಿ MLC ಗಳ ಹೈಡ್ರಾಮಾ; ಸ್ವೀಕರಿಸಲಿಲ್ಲ ಎಂದ ಬಸವರಾಜ ಹೊರಟ್ಟಿ!
ಕೋಲಾರ ಕ್ಷೇತ್ರದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಸಚಿವ ಕೆ ಹೆಚ್ ಮುನಿಯಪ್ಪ ಅವರ ಅಳಿಯ ಕೆ.ಜಿ.ಚಿಕ್ಕ ಪೆದ್ದಣ್ಣ ಅವರಿಗೆ ನೀಡಲು ಪಕ್ಷ ನಿರ್ಧಾರ ಮಾಡಿರುವ ಬೆನ್ನಲ್ಲೇ ಅದನ್ನು ಖಂಡಿಸಿ ಕೋಲಾರ ಭಾಗದ ಶಾಸಕರು, ವಿಧಾನ ಪರಿಷತ್ ಸದಸ್ಯರು ರಾಜೀನಾಮೆ ನೀಡಲು ಮುಂದಾದರು.

ಒಂದೇ ಕ್ಷೇತ್ರದಿಂದ 8ನೇ ಬಾರಿಗೆ ಪರಿಷತ್‌ಗೆ ಆಯ್ಕೆ: ಬಸವರಾಜ ಹೊರಟ್ಟಿಗೆ ಲಿಮ್ಕಾ ದಾಖಲೆ ಗರಿ!
ಒಂದೇ ಕ್ಷೇತ್ರದಿಂದ ಸತತವಾಗಿ ಎಂಟನೇ ಬಾರಿಗೆ ವಿಧಾನ ಪರಿಷತ್‌ಗೆ ಆಯ್ಕೆಯಾಗಿ ದಾಖಲೆ ನಿರ್ಮಿಸಿರುವ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರ ಹೆಸರು ಲಿಮ್ಕಾ ವಿಶ್ವ ದಾಖಲೆ ಪುಸ್ತಕಕ್ಕೆ ಸೇರಿದೆ.

