Ballari

ಬಳ್ಳಾರಿಯಲ್ಲಿ ಮಾನವ–ಪ್ರಾಣಿ ಸಂಘರ್ಷ ತೀವ್ರ: ಕರಡಿ ದಾಳಿಗೆ ರೈತ ಗಂಭೀರ ಗಾಯ, ಹೆಚ್ಚಿದ ಆತಂಕ
ಬಳ್ಳಾರಿ ಜಿಲ್ಲೆಯಲ್ಲಿ ವರದಿಯಾದ ಎರಡು ಪ್ರತ್ಯೇಕ ಘಟನೆಗಳಲ್ಲಿ, ಬುಧವಾರ ರಸ್ತೆ ಅಪಘಾತದಲ್ಲಿ ಗಂಡು ಕರಡಿ ಸಾವನ್ನಪ್ಪಿದ್ದರೆ, ಕರಡಿ ದಾಳಿಯಲ್ಲಿ ರೈತನೊಬ್ಬ ಗಂಭೀರವಾಗಿ ಗಾಯಗೊಂಡಿದ್ದಾನೆ.

ಬಳ್ಳಾರಿಯಲ್ಲಿ LPG ಕಾಳಸಂತೆ ದಂಧೆ ಬಯಲು: 2,000 ರೂ ಗೆ ಗೃಹ ಬಳಕೆ ಸಿಲಿಂಡರ್ ಮಾರಾಟ; 9 ಸಿಲಿಂಡರ್ ವಶಕ್ಕೆ
ಗೃಹ ಬಳಕೆಗೆ ಸರ್ಕಾರದಿಂದ ಅನುದಾನಿತ ದರದಲ್ಲಿ ನೀಡಲಾಗುವ LPG ಸಿಲಿಂಡರ್‌ಗಳನ್ನು ಕೆಲವು ದುಷ್ಕರ್ಮಿಗಳು ಸಂಗ್ರಹಿಸಿ, ಅವನ್ನು ವಾಣಿಜ್ಯ ಉದ್ದೇಶಗಳಿಗೆ ಬಳಸುವ ಹೋಟೆಲ್‌ಗಳು ಮತ್ತು ಟೀ ಅಂಗಡಿಗಳಿಗೆ ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿದ್ದರು.

ಉಗ್ರರೊಂದಿಗೆ ನಂಟು ಆರೋಪ: ಬಳ್ಳಾರಿ ಯುವಕ ಸೇರಿ ದೇಶಾದ್ಯಂತ 12 ಮಂದಿ ಬಂಧನ
ಖಚಿತ ಮಾಹಿತಿ ಆಧರಿಸಿ ಬಳ್ಳಾರಿಗೆ ಆಗಮಿಸಿದ್ದ ಆಂಧ್ರ ಪ್ರದೇಶ ಪೊಲೀಸರು, ಕೌಲ್ ಬಜಾರ್ ಪೊಲೀಸ್ ಠಾಣೆಯ ಸಿಬ್ಬಂದಿ ನೆರವಿನೊಂದಿಗೆ ಅಬ್ದುಲ್ ಸಲಾಮ್ ನನ್ನು ಬಂಧಿಸಿದ್ದಾರೆ.

ಬಳ್ಳಾರಿ: ಜಾತಿ ವೈಷಮ್ಯದಿಂದ ಇಡೀ ಗ್ರಾಮವೇ ಇಬ್ಭಾಗ; ಸಂಕಷ್ಟದಲ್ಲಿ ಕ್ಷೌರಿಕರು..!
ಕಳೆದ ಕೆಲವು ವಾರಗಳಿಂದ ಗ್ರಾಮದಲ್ಲಿರುವ ಎಲ್ಲಾ ಎಂಟು ಕ್ಷೌರಿಕ ಅಂಗಡಿಗಳು ಸಂಪೂರ್ಣವಾಗಿ ಬಂದ್ ಆಗಿವೆ. ಎಲ್ಲಾ ಸಮುದಾಯಗಳಿಗೂ ಸೇವೆ ನೀಡುವ ಕ್ಷೌರಿಕರು, ಈಗ ಈ ಸಂಘರ್ಷದ ಮಧ್ಯೆ ಸಿಲುಕಿಕೊಂಡು, ಸಂಕಷ್ಟ ಅನುಭವಿಸುತ್ತಿದ್ದಾರೆ.

ಬಳ್ಳಾರಿ ವಸತಿ ಶಾಲೆಯಲ್ಲಿ ಮನಸೋ ಇಚ್ಛೆ ಹಲ್ಲೆ: ಓರ್ವನ ಸಾವಿಗೆ ಕಾರಣನಾಗಿದ್ದ ಬಾಲಕ ಕೊನೆಗೂ ಬಂಧನ
ಮಾರ್ಚ್ 7 ರಾತ್ರಿಯಿಂದ ನಾಪತ್ತೆಯಾಗಿದ್ದ ಬಾಲಕನ ಪತ್ತೆಗಾಗಿ ಬಳ್ಳಾರಿ ಪೊಲೀಸರು ಪ್ರತ್ಯೇಕ ಏಳು ತಂಡ ರಚನೆ ಮಾಡಿದ್ದರು. ಬಳ್ಳಾರಿ ನಗರದ ಸುಮಾರು 7 ಸಾವಿರ ಸಿಸಿಟಿವಿ ಪರಿಶೀಲಿಸಿದ ಪೊಲೀಸರು, ಖಚಿತ ಮಾಹಿತಿ ಮೇರೆಗೆ ಬಾಲಕನನ್ನು ಪತ್ತೆ ಹಚ್ಚಿದ್ದಾರೆ.

ಬಳ್ಳಾರಿ ವಸತಿ ಶಾಲೆಯಲ್ಲಿ ಅಘಾತಕಾರಿ ಘಟನೆ: ಸಹಪಾಠಿಗಳ ಮೇಲೆ ವಿದ್ಯಾರ್ಥಿ ದಾಳಿ; ಓರ್ವ ಸಾವು, 7 ಮಂದಿ ಸ್ಥಿತಿ ಗಂಭೀರ
ರಾತ್ರಿ ಊಟದ ಬಳಿಕ ವಿದ್ಯಾರ್ಥಿಗಳು ಹಾಸ್ಟೆಲ್‌ನಲ್ಲಿ ಮಲಗಿದ್ದರು. ಈ ವೇಳೆ ಆರೋಪಿತ ವಿದ್ಯಾರ್ಥಿ ಮಂಚದ ರಾಡ್, ಸ್ಕ್ರೂ ಡ್ರೈವರ್ ಹಾಗೂ ರೇಡಿಯಮ್ ಕಟರ್, ಚಾಕುವಿನಿಂದ ಸಹಪಾಠಿಗಳ ಮೇಲೆ ದಾಳಿ ನಡೆಸಿದ್ದಾನೆ ಎನ್ನಲಾಗಿದೆ.

ಪಡಿತರ ಅಕ್ಕಿ ಅಕ್ರಮ ಸಾಗಾಟ: ಬಳ್ಳಾರಿಯಲ್ಲಿ ಪೊಲೀಸರ ಭರ್ಜರಿ ಕಾರ್ಯಾಚರಣೆ, 2 ತಿಂಗಳಲ್ಲಿ 50ಕ್ಕೂ ಹೆಚ್ಚು ಮಂದಿ ಬಂಧನ
ಮುಕ್ತ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇರುವುದರಿಂದ, ಆರೋಪಿಗಳು ಈ ಅಕ್ಕಿಯನ್ನು ನೆರೆಯ ಆಂಧ್ರ ಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಿಗೆ ಸಾಗಿಸುತ್ತಿದ್ದರು.

ದುಬೈ ವಿಮಾನ ನಿಲ್ದಾಣ ಬಂದ್: ಬಳ್ಳಾರಿ ಶಾಸಕ ಭರತ್ ರೆಡ್ಡಿ ಸೇರಿ 50ಕ್ಕೂ ಹೆಚ್ಚು ಪ್ರವಾಸಿಗರು ಸಂಕಷ್ಟದಲ್ಲಿ; Video
ನಾವು ಮುಂಚಿತವಾಗಿ ಒಳಗೆ ಪ್ರವೇಶಿಸಿದ್ದರೆ ವಸತಿ ವ್ಯವಸ್ಥೆ ಸಾಧ್ಯವಾಗುತ್ತಿತ್ತು ಎಂದು ಅಧಿಕಾರಿಗಳು ಹೇಳಿದರು. ಇದೀಗ ನಾವು ಹೊರಗಡೆ ನಿಂತುಕೊಂಡಿದ್ದೇವೆ. ಎಲ್ಲಿಯೂ ಹೋಗಲು ಸಾಧ್ಯವಾಗುತ್ತಿಲ್ಲ.

ಮೊಬೈಲ್ ಪಾಸ್‌ವರ್ಡ್ ನಿನ್ನ ಹೆಂಡ್ತಿಗೆ ಕೊಡ್ತೀಯಾ? ಖಬರಸ್ಥಾನ ಆಸ್ತಿ ಬೇರೆಯವರಿಗೆ ವರ್ಗಾವಣೆಯಾಗಿದ್ದು ಹೇಗೆ? ಸಂಸದ ನಾಸೀರ್ ಹುಸೇನ್
ಖಬರಸ್ಥಾನ ಆಸ್ತಿಗೆ ನಕಲು ದಾಖಲೆ ಸೃಷ್ಟಿಸಿ ಮಾರಾಟ ಮಾಡಲು ಕಂದಾಯ ಅಧಿಕಾರಿಯೇ ಕಾರಣರಾಗಿದ್ದಾರೆ. ಅವರ ಲಾಗಿನ್ ಮೂಲಕವೇ ಭೂ ಕಬಳಿಕೆಯ ಕೃತ್ಯ ನಡೆದಿದೆ ಎಂದು ಗೊತ್ತಾಗಿಯೂ ಎಫ್‌ಐಆರ್‌ನಲ್ಲಿ ಅವರ ಹೆಸರು ಸೇರಿಸಿಲ್ಲ

