Ballari

ಅಕ್ರಮ ಮರಳು ಸಾಗಾಣಿಕೆ ತಡೆದ ಕಂದಾಯ ನಿರೀಕ್ಷಕ ಮತ್ತವರ ಕುಟುಂಬದವರ ಮೇಲೆ ಹಲ್ಲೆ: 10 ಆರೋಪಿಗಳ ಬಂಧನ
ಕಂದಾಯ ನಿರೀಕ್ಷಕ (Revenue inspector)ಹಾಗೂ ಅವರ ಕುಟುಂಬದವರ ಮೇಲೆ ಹಲ್ಲೆ ನಡೆಸಿದ 10 ಮಂದಿ ಆರೋಪಿಗಳನ್ನು ಬಳ್ಳಾರಿ ಪೊಲೀಸರು ಬಂಧಿಸಿದ್ದಾರೆ.

ಬಳ್ಳಾರಿ: ಮರಳು ಮಾಫಿಯಾ ತಂಡದಿಂದ ಕಂದಾಯ ನಿರೀಕ್ಷಕ-ಮತ್ತವರ ಕುಟುಂಬಸ್ಥರ ಮೇಲೆ ಹಲ್ಲೆ
ಬಳ್ಳಾರಿಯ ರೂಪನಗುಡಿ ಹೋಬಳಿಯಲ್ಲಿ 53 ವರ್ಷದ ಕಂದಾಯ ನಿರೀಕ್ಷಕ(Revenue inspector) ಹಾಗೂ ಗ್ರಾಮ ಲೆಕ್ಕಿಗನ(Village Accountant) ಮೇಲೆ 15 ಜನರ ತಂಡವೊಂದು ಹಲ್ಲೆ ಮಾಡಿರುವ ಘಟನೆ ಮೊನ್ನೆ ಬುಧವಾರ ರಾತ್ರಿ ನಡೆದಿದೆ.

ಬಳ್ಳಾರಿ ಜನತೆಗೆ ನೀರು ಸರಬರಾಜು ಮಾಹಿತಿ ಇನ್ಮುಂದೆ ಆನ್'ಲೈನ್ ಮೂಲಕವೂ ಲಭ್ಯ!
ಬಳ್ಳಾರಿ ನಗರ ಪಾಲಿಕೆಯು ನಿವಾಸಿಗಳಿಗೆ ವಿಶಿಷ್ಟ ಸೌಲಭ್ಯ ಕಲ್ಪಿಸಿದೆ. ಇನ್ನು ಮುಂದೆ ಜನರು ನೀರು ಸರಬರಾಜು ಸಮಯವನ್ನು ಆನ್'ಲೈನ್ ಮೂಲಕ ತಿಳಿದುಕೊಳ್ಳಬಹುದಾಗಿದೆ.

ಬಳ್ಳಾರಿ: ಒಂದೇ ರಾತ್ರಿಯಲ್ಲಿ 1 ಕೋಟಿ ರೂ. ಮೌಲ್ಯದ ಮೆಣಸಿನಕಾಯಿ ಹಾನಿ!
ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಕುರುಗೋಡು ತಾಲೂಕಿನ ಮೆಣಸಿನಕಾಯಿ ಬೆಳೆಗಾರರು ಕಂಗಾಲಾಗಿದ್ದಾರೆ.

ಬಳ್ಳಾರಿ ರಸ್ತೆಯಲ್ಲಿ ಅಪಘಾತ ತಡೆಯಲು ಕ್ರಮಕೈಗೊಳ್ಳಿ: ಎನ್‌ಎಚ್‌ಎಐಗೆ ಪೊಲೀಸರು
ಬಳ್ಳಾರಿ ರಸ್ತೆಯ ಚಿಕ್ಕಜಾಲದಲ್ಲಿ ಗುರುವಾರ ಕ್ಯಾಬ್‌ಗೆ ಎಸ್‌ಯುವಿ ಢಿಕ್ಕಿಯಾಗಿ ಅಪಘಾತ ಸಂಭವಿಸಿದ ಸ್ಥಳವನ್ನು ಹಿರಿಯ ಪೊಲೀಸ್ ಅಧಿಕಾರಿಗಳು ಶುಕ್ರವಾರ ಪರಿಶೀಲಿಸಿದ್ದು, ಇಂತಹ ಅಪಘಾತಗಳನ್ನು ತಡೆಯಲು ಕ್ರಮಗಳ ಕೈಗೊಳ್ಳುವಂತೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ)ದ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಬಳ್ಳಾರಿ: ಕಾರ್ಖಾನೆಗಳ ಧೂಳಿನಿಂದಾಗಿ ಇಡೀ ಸುಲ್ತಾನಪುರದ ಗ್ರಾಮಸ್ಥರ ಸ್ಥಳಾಂತರ?
ವಿದ್ಯುತ್ ಉತ್ಪಾದನಾ ಸ್ಥಾವರ ಮತ್ತು ಇತರ ಗಣಿಗಾರಿಕೆ ಕಂಪನಿಗಳಿಂದ ಉತ್ಪತ್ತಿಯಾಗುವ ಧೂಳು ಹಳ್ಳಿಯ ಜನರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಲು ಆರಂಭಿಸಿದೆ

ನರೇಗಾ ಅನುಷ್ಠಾನದಲ್ಲಿ ಕರ್ನಾಟಕ ದೇಶಕ್ಕೆ ಮಾದರಿ: ಕೆ.ಎಸ್. ಈಶ್ವರಪ್ಪ
ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಕಳೆದ ವರ್ಷ 15 ಕೋಟಿ ಮಾನವ ದಿನಗಳನ್ನು ಸೃಜನೆ ಮಾಡುವ ಮೂಲಕ ನರೇಗಾ ಪರಿಣಾಮಕಾರಿ ಅನುಷ್ಠಾನದಲ್ಲಿ ರಾಜ್ಯ ಇಡೀ ದೇಶಕ್ಕೆ ಮಾದರಿಯಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ.

ಬಳ್ಳಾರಿ: ತುಂಗಭದ್ರಾ ಕಾಲುವೆಗೆ ಹಾರಿ ತಾಯಿ-ಮಕ್ಕಳು ಆತ್ಮಹತ್ಯೆ
ತುಂಗಭದ್ರಾ ಕಾಲುವೆಗೆ ಹಾರಿ ತಾಯಿ ಮತ್ತು ಇಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಳ್ಳಾರಿ ಜಿಲ್ಲೆಯ ಸಂಡೂರು ತಾಲ್ಲೂಕಿನಲ್ಲಿ ಸೋಮವಾರ ನಡೆದಿದೆ.

ಅಫ್ಘಾನ್ ಬೆಳವಣಿಗೆ: ಬಳ್ಳಾರಿಯಲ್ಲಿನ ಅಂಜೂರ ರೈತರು ಕಂಗಾಲು!
ಅಫ್ಘಾನಿಸ್ತಾನದ ದುರಂತ ಬೆಳವಣಿಗೆಗಳು ದೂರದ ಬಳ್ಳಾರಿಯಲ್ಲಿ ಆರ್ಥಿಕ ಪರಿಣಾಮಗಳನ್ನು ಬೀರಿದೆ. ಅಂಜೂರದ ಹಣ್ಣುಗಳನ್ನು ಬೆಳೆಯುವ ರೈತರು ಅನಿಶ್ಚಿತ ಭವಿಷ್ಯವನ್ನು ಎದುರಿಸುತ್ತಿದ್ದಾರೆ. ಕಾರಣ ಅಫ್ಗಾನ್ ಮೇಲೆ ಹಿಡಿತ ಸಾಧಿಸಿದ ತಾಲಿಬಾನಿಗಳು ಅಂಜುರ್ ಸೇರಿದಂತೆ ಎಲ್ಲಾ ಆಮದುಗಳನ್ನು ನಿಷೇಧಿಸಿದ್ದಾರೆ.

