Baby

ಎದೆ ಹಾಲುಣಿಸುವುದು ತಾಯಿಯಿಂದ ಬೇರ್ಪಡಿಸಲಾಗದ ಹಕ್ಕು, ಅಪಹೃತ ಮಗುವನ್ನು ಹೆತ್ತ ತಾಯಿಗೆ ಹಿಂತಿರುಗಿಸುವಂತೆ 'ಹೈ' ಆದೇಶ
ಮಗುವಿಗೆ ಎದೆಹಾಲುಣಿಸುವುದು ತಾಯಿಯಿಂದ ಬೇರ್ಪಡಿಸಲಾಗದ ಹಕ್ಕು. ಇದನ್ನು ಸಂವಿಧಾನದ ಪರಿಚ್ಛೇದ 21ರ ಮೂಲಭೂತ ಹಕ್ಕು ಖಚಿತಪಡಿಸುತ್ತದೆ. ಇದೇ ಹಕ್ಕನ್ನು ಮಗುವಿಂದಲೂ ಪ್ರತ್ಯೇಕಿಸಲಾಗದು ಎಂದು ಹೈಕೋರ್ಟ್ ಪ್ರಕರಣವೊಂದನ್ನು ಇತ್ಯರ್ಥಪಡಿಸುವ ವೇಳೆ ಅಭಿಪ್ರಾಯಪಟ್ಟಿದೆ.

ಛತ್ತೀಸ್ಗಢ: ನಿರಂತರ ಸ್ತನ್ಯಪಾನದಿಂದ ಬೇಸತ್ತ ಮಹಿಳೆ, 2 ವರ್ಷದ ಮಗುವಿನ ಹತ್ಯೆ!
ನಿರಂತರ ಸ್ತನ್ಯಪಾನದಿಂದ ಬೇಸತ್ತ ಮಹಿಳೆಯೊಬ್ಬಳು ತನ್ನ 2 ವರ್ಷದ ಮಗುವನ್ನು ಹೊಡೆದು ಹತ್ಯೆ ಮಾಡಿರುವ ಘಟನೆಯೊಂದು ಛತ್ತೀಸ್ಗಢದ ಕೊರ್ಬಾ ಜಿಲ್ಲೆಯಲ್ಲಿ ನಡೆದಿದೆ.

ಕಾಬೂಲ್ ನಿಂದ ಭಾರತಕ್ಕೆ ಆಗಮಿಸಿದ ನಂತರ ಶಿಶುವಿಗೆ ಮುತ್ತಿಕ್ಕಿ ಮುದ್ದಾಡಿದ ಬಾಲಕಿ: ಹೃದಯಸ್ಪರ್ಶಿ ವಿಡಿಯೋ
ಇಬ್ಬರು ಅಫ್ಘಾನ್ ಸೆನೆಟರ್, 107 ಭಾರತೀಯ ನಾಗರಿಕರು ಸೇರಿದಂತೆ 168 ಜನರನ್ನು ಇಂದು ವಿಶೇಷ ವಾಯುಪಡೆ ವಿಮಾನವೊಂದರ ಮೂಲಕ ಕಾಬೂಲ್ ನಿಂದ ಭಾರತಕ್ಕೆ ಸ್ಥಳಾಂತರಿಸಲಾಗಿದೆ. ದೆಹಲಿ ಬಳಿಯ ಗಾಜಿಯಾಬಾದ್ ನ ಹಿಂಡಾನ್ ವಾಯುನೆಲೆಯಲ್ಲಿ ವಿಮಾನ ಸುರಕ್ಷಿತವಾಗಿ ಬಂದು ಆಗಮಿಸಿತು.

ಬಿಗ್ ಬಾಸ್ ಖ್ಯಾತಿಯ ನಯನಾ ಪುಟ್ಟಸ್ವಾಮಿಗೆ ಗಂಡು ಮಗು ಜನನ
ನಟಿ ಹಾಗೂ ಬಿಗ್ ಬಾಸ್ ಖ್ಯಾತಿಯ ನಯನಾ ಪುಟ್ಟಸ್ವಾಮಿ ಅವರ ಮನೆಗೆ ಹೊಸ ಅತಿಥಿ ಆಗಮನವಾಗಿದ್ದು, ನಯನಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆಂದು ತಿಳಿದುಬಂದಿದೆ.

ಡಿಹೆಚ್ಎ ಎಂದರೇನು? ಗರ್ಭಿಣಿ ಮಹಿಳೆಯರಿಗೆ ಇದು ಎಷ್ಟು ಮುಖ್ಯ? ಇಲ್ಲಿದೆ ಮಾಹಿತಿ...
ತಾಯಿಯ ಹೊಟ್ಟೆಯಲ್ಲಿದ್ದಾಗ ಮಗು ಎಲ್ಲಾ ರೀತಿಯ ಪೋಷಕಾಂಶಗಳನ್ನು ಪಡೆದುಕೊಳ್ಳುತ್ತಿರುತ್ತದೆ. ಈ ಸಂದರ್ಭದಲ್ಲಿ ಮಹಿಳೆಯರು ಅತೀ ಹೆಚ್ಚು ಪೋಷಕಾಂಶ ಇರುವಂತಹ ಆಹಾರವನ್ನು ಸೇವನೆ ಮಾಡುವುದು ಅತ್ಯವಶ್ಯಕವಾಗಿರುತ್ತದೆ. ಇದರಿಂದ ತಾಯಿಯ ಮತ್ತು ಮಗುವಿನ ಆರೋಗ್ಯ ಉತ್ತಮವಾಗಿರುವುದಲ್ಲದೆ, ಮಗುವಿನ ಬೆಳವಣಿಗೆ ಕೂಡ ಉತ್ತಮವಾಗಿರುತ್ತದೆ.

ಬೆಂಗಳೂರು: ನವಜಾತ ಶಿಶು ಕದ್ದು ರೂ.15 ಲಕ್ಷಕ್ಕೆ ಮಾರಾಟ, ವೈದ್ಯೆ ಬಂಧನ!
ಚಾಮರಾಜಪೇಟೆಯ ಬಿಬಿಎಂಪಿ ಆಸ್ಪತ್ರೆಯಲ್ಲಿ ನಡೆದಿದ್ದ ನವಜಾತ ಶಿಶು ಅಪಹರಣ ಪ್ರಕರಣ ಭೇದಿಸುವಲ್ಲಿ ದಕ್ಷಿಣ ವಿಭಾಗದ ಪೊಲೀಸರು ಯಶಸ್ವಿಯಾಗಿದ್ದು, ಈ ಸಂಬಂಧ ವೈದ್ಯೆಯೊಬ್ಬರನ್ನು ಬಂಧನಕ್ಕೊಳಪಡಿಸಿದ್ದಾರೆ.

ವಾರಣಾಸಿ: ನವಜಾತ ಶಿಶುವಿಗೆ ಕೊರೋನಾ ಪಾಸಿಟಿವ್, ಆದರೆ ತಾಯಿಗೆ ನೆಗೆಟಿವ್!
ಹೆರಿಗೆಗೆ ಮುಂಚಿತವಾಗಿ ನಡೆಸಿದ ಕೊರೋನಾ ಪರೀಕ್ಷೆಯಲ್ಲಿ ತಾಯಿಗೆ ನೆಗೆಟಿವ್ ವರದಿ ಬಂದಿದ್ದು, ಹೆರಿಗೆಯ ಬಳಿಕ ನವಜಾತ ಶಿಶುವಿಗೆ ಕೊರೋನಾ ಸೋಂಕು ದೃಢಪಟ್ಟಿರುವ ಘಟನೆಯೊಂದು ಉತ್ತರಪ್ರದೇಶದ ವಾರಣಾಸಿಯಲ್ಲಿ ನಡೆದಿದೆ.

ಬೆಂಗಳೂರು: ರೈಲು ಇಳಿಯುವ ಆತುರದಲ್ಲಿ ಮಲಗಿದ್ದ ಮಗುವನ್ನೇ ಮರೆತ ಪೋಷಕರು!
ರೈಲು ಇಳಿಯುವ ಆತುರದಲ್ಲಿ ಕುಟುಂಬವೊಂದು ಮಲಗಿದ್ದ ಮಗುವನ್ನೇ ಮರೆತು ರೈಲು ಇಳಿದಿರುವ ಘಟನೆಯೊಂದು ನಗರದಲ್ಲಿ ನಡೆದಿದೆ.

ನನಗೆ ನನ್ನ ಮಗನೇ ಶಕ್ತಿ, ಸ್ಫೂರ್ತಿ... ಮಗನನ್ನು ನೋಡಿದರೆ ಚಿರು ಕಾಣಿಸ್ತಾರೆ: ನಟಿ ಮೇಘನಾ ರಾಜ್
ನನಗೆ ನನ್ನ ಮಗನೇ ಶಕ್ತಿ, ಸ್ಪೂರ್ತಿ. ಚಿರು ಎಲ್ಲಾ ನನ್ನ ಕೈಯಿಂದ ಮಾಡಿಸಿದ್ದಾರೆ. ಚಿರು ಅಗಲಿಕೆಯ ನೋವು ಮರೆಯೋದು ಅಸಾಧ್ಯ. ಮಗನನ್ನು ನೋಡಿದರೆ ಚಿರು ಕಾಣಿಸುತ್ತಿದ್ದಾರೆಂದು ನಟಿ ಮೇಘನಾ ರಾಜ್ ಅವರು ಹೇಳಿದ್ದಾರೆ.

