B C Nagesh

ಎಸ್ಎಸ್ ಎಲ್ ಸಿ ಫಲಿತಾಂಶ: 145 ವಿದ್ಯಾರ್ಥಿಗಳಿಗೆ 625 ಅಂಕ; 3,920 ಶಾಲೆಗಳಲ್ಲಿ ಶೇ.100, 20 ಶಾಲೆಗಳಲ್ಲಿ ಶೂನ್ಯ ಫಲಿತಾಂಶ
ರಾಜ್ಯ

ಎಸ್ಎಸ್ ಎಲ್ ಸಿ ಫಲಿತಾಂಶ: 145 ವಿದ್ಯಾರ್ಥಿಗಳಿಗೆ 625 ಅಂಕ; 3,920 ಶಾಲೆಗಳಲ್ಲಿ ಶೇ.100, 20 ಶಾಲೆಗಳಲ್ಲಿ ಶೂನ್ಯ ಫಲಿತಾಂಶ

ಕಳೆದ ಹತ್ತು ವರ್ಷಗಳಲ್ಲಿಯೇ ದಾಖಲೆಯ ಫಲಿತಾಂಶ ಈ ಬಾರಿಯ ಹತ್ತನೇ ತರಗತಿ ಫಲಿತಾಂಶದಲ್ಲಿ ಬಂದಿದೆ. 2021-22ನೇ ಶೈಕ್ಷಣಿಕ ಸಾಲಿನ ಹತ್ತನೇ ತರಗತಿ ಫಲಿತಾಂಶ ಪ್ರಕಟವಾಗಿದ್ದು, ಶೇಕಡಾ 90.29 ಬಾಲಕಿಯರು, ಶೇಕಡಾ 81.03 ಬಾಲಕರು ತೇರ್ಗಡೆಗೊಂಡಿದ್ದಾರೆ. 

ಮೈಸೂರು ಹುಲಿ ಟಿಪ್ಪು ಪಠ್ಯ ಗೊಂದಲಕ್ಕೆ ಇಂದು ಬ್ರೇಕ್?: ಸದನದಲ್ಲಿ ಉತ್ತರಿಸಲಿದ್ದಾರೆ ಶಿಕ್ಷಣ ಸಚಿವ ಬಿ ಸಿ ನಾಗೇಶ್
ರಾಜ್ಯ

ಮೈಸೂರು ಹುಲಿ ಟಿಪ್ಪು ಪಠ್ಯ ಗೊಂದಲಕ್ಕೆ ಇಂದು ಬ್ರೇಕ್?: ಸದನದಲ್ಲಿ ಉತ್ತರಿಸಲಿದ್ದಾರೆ ಶಿಕ್ಷಣ ಸಚಿವ ಬಿ ಸಿ ನಾಗೇಶ್

ಶಾಲಾ ಪಠ್ಯಪುಸ್ತಕದಲ್ಲಿ ಟಿಪ್ಪು ಪಠ್ಯ ಪರಿಷ್ಕರಣೆ ಕುರಿತ ವಿಚಾರ ದಿನೇದಿನೇ ತಾರಕಕ್ಕೇರುತ್ತಿದೆ. ಈ ಮಧ್ಯೆ ಇಂದು ಸೋಮವಾರ ಶಿಕ್ಷಣ ಸಚಿವ ಬಿ ಸಿ ನಾಗೇಶ್ ವಿಧಾನಸಭೆಯಲ್ಲಿ ಕಲಾಪ ವೇಳೆ ಈ ಕುರಿತು ಉತ್ತರಿಸಲಿದ್ದು ಟಿಪ್ಪು ಪಠ್ಯ ಪರಿಷ್ಕರಣೆಯೋ, ಅಥವಾ ಟಿಪ್ಪು ಕುರಿತ ವಿಷಯವನ್ನು ಪಠ್ಯದಿಂದ ತೆಗೆದುಹಾಕುವುದೋ ಎಂಬ ಗೊಂದಲಗಳಿಗೆ ತೆರೆ ಎಳೆಯಲಿದ್ದಾರೆ.

ಕಲ್ಯಾಣ ಕರ್ನಾಟಕ ವಲಯ, ವಿಜಯಪುರ ಜಿಲ್ಲೆಯಲ್ಲಿ ಶಾಲಾ ಮಕ್ಕಳಲ್ಲಿ ಅಪೌಷ್ಠಿಕತೆ ನಿಯಂತ್ರಣಕ್ಕೆ  ಪ್ರಯತ್ನ-ಬಿ.ಸಿ. ನಾಗೇಶ್
ರಾಜ್ಯ

ಕಲ್ಯಾಣ ಕರ್ನಾಟಕ ವಲಯ, ವಿಜಯಪುರ ಜಿಲ್ಲೆಯಲ್ಲಿ ಶಾಲಾ ಮಕ್ಕಳಲ್ಲಿ ಅಪೌಷ್ಠಿಕತೆ ನಿಯಂತ್ರಣಕ್ಕೆ  ಪ್ರಯತ್ನ-ಬಿ.ಸಿ. ನಾಗೇಶ್

ಆಹಾರ ಪದ್ಧತಿಯಲ್ಲಿ ಬದಲಾವಣೆಯೊಂದಿಗೆ ಮಕ್ಕಳಲ್ಲಿ ಅಪೌಷ್ಠಿಕತೆ ನಿಯಂತ್ರಣ ಮತ್ತು ಅವರ ಆರೋಗ್ಯ ವೃದ್ಧಿ ಖಾತ್ರಿಗಾಗಿ ಕಲ್ಯಾಣ ಕರ್ನಾಟಕ ವಲಯ ಮತ್ತು ವಿಜಯಪುರ ಜಿಲ್ಲೆಯ ಶಾಲಾ ಮಕ್ಕಳಿಗೆ ಮೊಟ್ಟೆ, ಬಾಳೆಹಣ್ಣಿನಂತಹ ಹೆಚ್ಚಿನ ಶಕ್ತಿ ಮತ್ತು ಪೌಷ್ಠಿಕಾಂಶ ಯುಕ್ತ ಆಹಾರವನ್ನು ಪೂರೈಸಲು ಸರ್ಕಾರ ಪ್ರಯತ್ನಿಸುತ್ತಿದೆ.

ಅನಿವಾರ್ಯ ಪರಿಸ್ಥಿತಿ ಉಂಟಾದರೆ ಶಾಲೆ ಬಂದ್, ಮಕ್ಕಳ ಜೀವದ ಜೊತೆ ಚೆಲ್ಲಾಟವಾಡುವುದಿಲ್ಲ: ಶಿಕ್ಷಣ ಸಚಿವ ಬಿ ಸಿ ನಾಗೇಶ್
ರಾಜ್ಯ

ಅನಿವಾರ್ಯ ಪರಿಸ್ಥಿತಿ ಉಂಟಾದರೆ ಶಾಲೆ ಬಂದ್, ಮಕ್ಕಳ ಜೀವದ ಜೊತೆ ಚೆಲ್ಲಾಟವಾಡುವುದಿಲ್ಲ: ಶಿಕ್ಷಣ ಸಚಿವ ಬಿ ಸಿ ನಾಗೇಶ್

ರಾಜ್ಯದ ಕೆಲವು ಶಾಲಾ-ಕಾಲೇಜುಗಳಲ್ಲಿ ಅದರಲ್ಲೂ ವಸತಿ ಶಾಲೆಗಳಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಈ ಸಂದರ್ಭದಲ್ಲಿ ಮಕ್ಕಳ ಪೋಷಕರು ಆತಂಕಗೊಳ್ಳುವುದು ಸಹಜ. ಆದರೆ ಮಕ್ಕಳ ಜೀವದ ಜೊತೆ ನಾವು ಚೆಲ್ಲಾಟವಾಡುವುದಿಲ್ಲ, ಕಾಳಜಿ ವಹಿಸುತ್ತೇವೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಅಭಯ ನೀಡಿದ್ದಾರೆ. 

ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಅನುಮತಿ ನೀಡಿದರೆ ದಸರಾ ರಜೆ ಬಳಿಕ 1ನೇ ತರಗತಿಯಿಂದ ಶಾಲೆ ಆರಂಭ: ಶಿಕ್ಷಣ ಸಚಿವ ಬಿ.ಸಿ. ನಾಗೇಶ್
ರಾಜ್ಯ

ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಅನುಮತಿ ನೀಡಿದರೆ ದಸರಾ ರಜೆ ಬಳಿಕ 1ನೇ ತರಗತಿಯಿಂದ ಶಾಲೆ ಆರಂಭ: ಶಿಕ್ಷಣ ಸಚಿವ ಬಿ.ಸಿ. ನಾಗೇಶ್

ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಅನುಮತಿ ನೀಡಿದರೆ ದಸರಾ ಹಬ್ಬ ರಜೆ ಬಳಿಕ 1ರಿಂದ 5ನೇ ತರಗತಿಯವರೆಗೆ ಶಾಲೆಗಳನ್ನು ಆರಂಭಿಸುತ್ತೇವೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ತಿಳಿಸಿದ್ದಾರೆ.

6ನೇ ತರಗತಿಯಿಂದ ಶಾಲೆಗಳ ಆರಂಭದ ಅನುಭವದ ಆಧಾರದ ಮೇಲೆ 1ನೇ ತರಗತಿಯಿಂದ ಆರಂಭ ಕುರಿತು ನಿರ್ಧಾರ: ಬಿ.ಸಿ. ನಾಗೇಶ್
ರಾಜ್ಯ

6ನೇ ತರಗತಿಯಿಂದ ಶಾಲೆಗಳ ಆರಂಭದ ಅನುಭವದ ಆಧಾರದ ಮೇಲೆ 1ನೇ ತರಗತಿಯಿಂದ ಆರಂಭ ಕುರಿತು ನಿರ್ಧಾರ: ಬಿ.ಸಿ. ನಾಗೇಶ್

ರಾಜ್ಯದ ಕೆಲವು ಕುಗ್ರಾಮ, ಹಳ್ಳಿಗಳಲ್ಲಿ ಶೂನ್ಯ ಕೊರೋನಾ ಪಾಸಿಟಿವ್ ಪ್ರಕರಣಗಳಿದ್ದು ಅಂತಹ ಕಡೆಗಳಲ್ಲಿ ಶಾಲೆಗಳನ್ನು ಆರಂಭ ಮಾಡುವಂತೆ ಸಾರ್ವಜನಿಕರು, ಶಿಕ್ಷಕರು, ಪೋಷಕರು ಬೇಡಿಕೆಯಿಟ್ಟ ಹಿನ್ನೆಲೆಯಲ್ಲಿ ಇಂದು 6ರಿಂದ 8ನೇ ತರಗತಿಯವರೆಗೆ ಶಾಲೆಗಳನ್ನು ತೆರೆಯುತ್ತಿದ್ದೇವೆ ಎಂದು ಶಿಕ್ಷಣ ಸಚಿವ ಬಿ ಸಿ ನಾಗೇಶ್ ಹೇಳಿದ್ದಾರೆ.

ಶಾಲೆಗಳ ಆವರಣದ ಮೂಲಕ ಹಾದುಹೋಗುವ ಎಲ್ಲಾ ಹೈ-ಟೆನ್ಶನ್ ಲೈನ್‌ಗಳನ್ನು ತೆರವುಗೊಳಿಸಿ: ಇಂಧನ ಇಲಾಖೆಗೆ ಶಿಕ್ಷಣ ಸಚಿವ ಪತ್ರ
ರಾಜ್ಯ

ಶಾಲೆಗಳ ಆವರಣದ ಮೂಲಕ ಹಾದುಹೋಗುವ ಎಲ್ಲಾ ಹೈ-ಟೆನ್ಶನ್ ಲೈನ್‌ಗಳನ್ನು ತೆರವುಗೊಳಿಸಿ: ಇಂಧನ ಇಲಾಖೆಗೆ ಶಿಕ್ಷಣ ಸಚಿವ ಪತ್ರ

ಶಾಲಾ ಆವರಣದ ಪಕ್ಕದಲ್ಲಿ ಹಾದುಹೋಗುವ ಎಲ್ಲಾ ಹೈ ಟೆನ್ಷನ್ ಲೈನ್ ಗಳನ್ನು ತೆರವುಗೊಳಿಸುವಂತೆ ಇಂಧನ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಹೇಳಿದ್ದಾರೆ.