Ayudha Pooja

ಮೈಸೂರು ಅರಮನೆಯಲ್ಲಿ ಸುಂದರವಾಗಿ ನೆರವೇರಿದ ಆಯುಧ ಪೂಜೆ; Video
ಮೈಸೂರು ರಾಜಸಂಸ್ಥಾನ ಪರಂಪರೆಯಂತೆ ಯದುವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಪೂಜಾ ಕೈಂಕರ್ಯ ನೆರವೇರಿಸಿದರು.

ಆಯುಧ ಪೂಜೆ: ಸ್ವಚ್ಛತಾ ಕಾರ್ಯಗಳಲ್ಲಿ ಕಾವೇರಿ ನೀರನ್ನು ಮಿತವಾಗಿ ಬಳಸಿ; BWSSB ಮನವಿ
ಕುಡಿಯುವ ನೀರಿನ ಮೂಲಗಳು ಸೀಮಿತವಾಗಿರುವುದರಿಂದ ಹಬ್ಬದ ಸಂಭ್ರಮವನ್ನು ಜವಾಬ್ದಾರಿಯಿಂದ ಆಚರಿಸಬೇಕು, ನೀರಿನ ಸಂರಕ್ಷಣೆಯ ಮನೋಭಾವ ಬೆಳೆಸಿಕೊಳ್ಳಬೇಕು.

ದಸರಾ ಆಯುಧಪೂಜೆ: ಮೈಸೂರು ಅರಮನೆಯಲ್ಲಿ ಯದುವೀರ್ ಒಡೆಯರ್ ಸಾಂಪ್ರದಾಯಿಕ ಪೂಜೆ
ರಾಜಪರಂಪರೆಯಂತೆ ಪಲ್ಲಕ್ಕಿಯಲ್ಲಿ ಆಯುಧಗಳನ್ನು ಇಟ್ಟು ಪಟ್ಟದ ಆನೆ, ಪಟ್ಟದ ಹಸು ಜತೆಗೆ ಮಂಗಳವಾದ್ಯಗಳ ಮೂಲಕ ಆಯುಧಗಳನ್ನು ಕಲ್ಯಾಣ ಮಂಟಪಕ್ಕೆ ತೆಗೆದುಕೊಂಡು ಹೋಗಿ ಇಡಲಾಯಿತು.

ನಾಡಿನಾದ್ಯಂತ ಆಯುಧ ಪೂಜೆ ಸಂಭ್ರಮ: ನಾಳೆ ವಿಶ್ವ ಪ್ರಸಿದ್ಧ ಜಂಬೂಸವಾರಿ; ದಸರಾ ಮೆರವಣಿಗೆಗೆ ಅಂತಿಮ ಹಂತದ ತಯಾರಿ
ಮೈಸೂರು ಅರಮನೆ ಸೇರಿದಂತೆ ರಾಜ್ಯಾದ್ಯಂತ ಆಯುಧಪೂಜೆಯ ಸಂಭ್ರಮ ಕಳೆಗಟ್ಟಿದೆ. ಬೆಳಿಗ್ಗೆ 5.30ಕ್ಕೆ ಚಂಡಿಹೋಮದೊಂದಿಗೆ ಮೈಸೂರು ಅರಮನೆಯಲ್ಲಿ ಪೂಜೆಗಳು ಆರಂಭಗೊಂಡಿವೆ. ಆಯುಧ ಪೂಜೆ ನವರಾತ್ರಿ ಹಬ್ಬದ ಒಂದು ಭಾಗವಾಗಿದೆ.

ಮೈಸೂರು ಅರಮನೆಯಲ್ಲಿ ಆಯುಧಪೂಜೆ ಸಡಗರ, ಜಂಬೂ ಸವಾರಿಗೆ ಭರದ ಸಿದ್ಧತೆ; ನಾಡಹಬ್ಬದ ಸಂಭ್ರಮಕ್ಕೆ ಸಜ್ಜಾದ ಸಾಂಸ್ಕೃತಿಕ ನಗರಿ
ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂಸವಾರಿ ವಿಜಯದಶಮಿಯಂದು (ಅ 5) ನಡೆಯಲಿದೆ. ಐತಿಹಾಸಿಕ ಜಂಬೂಸವಾರಿ ಮೆರವಣಿಗೆಯು ಸೇರಿದಂತೆ, ನಾಡಹಬ್ಬ ದಸರಾವನ್ನು ಸಂಭ್ರಮದಿಂದ ಆಚರಿಸಲು ನಾಡು ಸಜ್ಜಾಗಿದೆ. ಕೋವಿಡ್‌ನಿಂದಾಗಿ ಎರಡು ವರ್ಷ ಕಳೆಗುಂದಿದ್ದ ಆಚರಣೆಗೆ ಈ ಬಾರಿ ಅದ್ಧೂರಿತನ ಮೇಳೈಸಿದೆ.

ನಾಡಿನೆಲ್ಲೆಡೆ ಆಯುಧಪೂಜೆ, ವಿಜಯದಶಮಿ ಸಂಭ್ರಮ: ಮುಖ್ಯಮಂತ್ರಿ ಸೇರಿದಂತೆ ಗಣ್ಯರಿಂದ ಶುಭಾಶಯ
ಕೋವಿಡ್-19 ಸಾಂಕ್ರಾಮಿಕ ರೋಗದ ಆತಂಕ ಕಡಿಮೆಯಾಗಿರುವುದರಿಂದ ನಾಡಿನೆಲ್ಲೆಡೆ ದಸರಾ ಹಬ್ಬದ ಪ್ರಮುಖ ದಿನಗಳಾದ ಕೊನೆಯ ಎರಡು ದಿನ ಸಂಭ್ರಮ ಕಳೆಕಟ್ಟಿದೆ.

ಆಯುಧಪೂಜೆ; ರಾಜ್ಯದ ಜನತೆಗೆ ಶುಭಾಶಯ ಕೋರಿದ ಗಣ್ಯರು
ನವರಾತ್ರಿ ಹಿನ್ನೆಲೆಯಲ್ಲಿ ಹಲವು ಗಣ್ಯರು ನಾಡಿನ ಜನತೆಗೆ ಭಾನುವಾರ ಶುಭಾಶಯಗಳನ್ನು ಕೋರಿದ್ದಾರೆ.

ವಿಧಾನಸೌಧ, ವಿಕಾಸಸೌಧದಲ್ಲಿ ಆಯುಧ ಪೂಜೆಗೆ ರಾಸಾಯನಿಕ ಮಿಶ್ರಿತ ಬಣ್ಣ ಬಳಸಿದರೆ ಕ್ರಮ
ವಿಧಾನಸೌಧ, ವಿಕಾಸ ಸೌಧ ಹಾಗೂ ಬಹುಮಹಡಿ ಕಟ್ಟಡಗಳಲ್ಲಿ ಆಯುಧ ಪೂಜೆ ಮಾಡುವ ಸಂದರ್ಭದಲ್ಲಿ ರಸಾಯನಿಕಯುಕ್ತ ಬಣ್ಣಗಳನ್ನು ಕಚೇರಿಗಳ ಒಳಗೆ ಹಾಗೂ ಕಾರಿಡಾರ್ಗಳಲ್ಲಿ ಬಳಸಿದರೆ ಅಂತಹ ಇಲಾಖೆಯ ಮುಖ್ಯಸ್ಥರನ್ನೇ ಜವಾಬ್ದಾರರನ್ನಾಗಿ ಮಾಡುವುದಾಗಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಆದೇಶ ಹೊರಡಿಸಿದೆ.

ಬೆಂಗಳೂರು: 'ಅಕ್ಸಿಡೆಂಟ್ ಗಣೇಶ ದೇವಾಲಯ' ಬಳಿ ವಾಹನಗಳಿಗೆ ಪೂಜೆ
ಅಯುಧ ಪೂಜೆ ಪ್ರಯುಕ್ತ ಅಕ್ಸಿಡೆಂಟ್ ಗಣೇಶ ದೇವಾಲಯ ಎಂದೇ ಪ್ರಸಿದ್ಧಿಯಾಗಿರುವ ಬೆಂಗಳೂರು ನಗರದ ಪ್ರಸನ್ನ ಗಣಪತಿ ದೇವಾಲಯದ ಬಳಿ ವಾಹನಗಳಿಗೆ ಮಾಲೀಕರು ಹಾಗೂ ಚಾಲಕರು ಪೂಜೆ ಸಲ್ಲಿಸಿದರು.

