Ayodhya

ಶಿಲ್ಪಿ ಅರುಣ್ ಯೋಗಿರಾಜ್ ಗೆ ಅಮೇರಿಕ ವೀಸಾ ನಿರಾಕರಣೆ!
ನಿಬಂಧನೆಗಳನ್ನು ಪೂರ್ಣಗೊಳಿಸದ ಹಿನ್ನೆಲೆಯಲ್ಲಿ ಅರುಣ್ ಯೋಗಿರಾಜ್ ಗೆ ವೀಸಾ ನಿರಾಕರಣೆ ಮಾಡಲಾಗಿದೆ.

ಅಯೋಧ್ಯೆ: ಅಪ್ತಾಪ್ತ ಬಾಲಕಿ ಮೇಲೆ ಅತ್ಯಾಚಾರ, ಎಸ್‌ಪಿ ನಾಯಕನ ಮನೆ, ಬೇಕರಿ ಧ್ವಂಸ!
ಇಂದು ಬೆಳಗ್ಗೆ ಸಹಾಯಕ ಆಹಾರ ಆಯುಕ್ತ ಮಾಣಿಕಚಂದ್ ಸಿಂಗ್ ಬೇಕರಿ ಮೇಲೆ ದಾಳಿ ನಡೆಸಿದರು, ಈ ಸಂದರ್ಭದಲ್ಲಿ ಆಹಾರ ಉತ್ಪನ್ನಗಳ ಮಾದರಿಗಳನ್ನು ಪರೀಕ್ಷೆಗೆ ತೆಗೆದುಕೊಂಡು ನಂತರ ಬೇಕರಿ ಸೀಲ್ ಮಾಡಲಾಯಿತು.

ಅಯೋಧ್ಯೆಯ ರಾಮಮಂದಿರಕ್ಕೆ ಭೇಟಿ ನೀಡಿ, ಪ್ರಾರ್ಥನೆ ಸಲ್ಲಿಸಿದ ಸಿಜೆಐ ಚಂದ್ರಚೂಡ್
ಇಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ಅಯೋಧ್ಯೆ ವಿಮಾನ ನಿಲ್ದಾಣಕ್ಕೆ ಬಂದಿಳಿದ ಚಂದ್ರಚೂಡ್ ಅವರನ್ನು ಜಿಲ್ಲಾ ಮ್ಯಾಜಿಸ್ಟ್ರೇಟ್ ನಿತೀಶ್ ಕುಮಾರ್ ಅವರು ಬರಮಾಡಿಕೊಂಡರು.

'ಅಯೋಧ್ಯೆ ಮಾನಹಾನಿಗೆ ಸಂಚು'; ನಿರಾಶ್ರಿತರಾದವರಿಗೆ 1,733 ಕೋಟಿ ರೂ. ಪರಿಹಾರ ವಿತರಿಸಲಾಗಿದೆ: ರಾಹುಲ್‌ಗೆ ಯೋಗಿ ತಿರುಗೇಟು
ಸದನದಲ್ಲಿ ರಾಹುಲ್ ನೀಡಿರುವ ಹೇಳಿಕೆ ಅತ್ಯಂತ ಖಂಡನೀಯ ಮತ್ತು ನಾಚಿಕೆಗೇಡು. ಅಯೋಧ್ಯೆಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಸಂದರ್ಭದಲ್ಲಿ ನಿರಾಶ್ರಿತರಾದ ಜನರಿಗೆ ಪರಿಹಾರವಾಗಿ 1,733 ಕೋಟಿ ರೂಪಾಯಿ ನೀಡಲಾಗಿದೆ ಎಂದು ಯೋಗಿ ಹೇಳಿದರು.

ರಾಮ ಮಂದಿರ ಗರ್ಭಗುಡಿಯಲ್ಲಿ ನೀರು ಸೋರುತ್ತಿಲ್ಲ, ಎಲೆಕ್ಟ್ರಿಕ್ ವೈರ್ ಗಳಿಂದ ನೀರು ಇಳಿಯುತ್ತಿದೆ: ನಿರ್ಮಾಣ ಸಮಿತಿ ಸ್ಪಷ್ಟನೆ
ಇತ್ತೀಚೆಗಷ್ಟೇ ಉದ್ಘಾಟನೆಯಾದ ಅಯೋಧ್ಯೆ ರಾಮಮಂದಿರದ ಗರ್ಭಗುಡಿಯಲ್ಲಿ ಮಳೆ ನೀರು ಸೋರಿಕೆಯಾಗುತ್ತಿದೆ ಎಂಬ ದೇವಾಲಯದ ಮುಖ್ಯ ಅರ್ಚಕರ ಆರೋಪವನ್ನು ರಾಮಮಂದಿರ ನಿರ್ಮಾಣದ ಸಮಿತಿ ತಳ್ಳಿ ಹಾಕಿದ್ದು, ಇದು ಎಲೆಕ್ಟ್ರಿಕ್ ವೈರ್ ಗಳಿಂದ ನೀರು ಇಳಿಯುತ್ತಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಸೋರುತ್ತಿದೆ ಅಯೋಧ್ಯೆ ರಾಮಮಂದಿರದ ಗರ್ಭಗುಡಿ: ದೇಗುಲದ ಪ್ರಧಾನ ಆರ್ಚಕ ಆತಂಕ!
ಜನವರಿ 22 ರಂದು ಪ್ರಾಣ ಪ್ರತಿಷ್ಠೆಯಾಗಿ ಲೋಕಾರ್ಪಣೆಯಾದ ಅಯೋಧ್ಯೆ ರಾಮಮಂದಿರದ ಮಾಳಿಗೆಯಲ್ಲಿ ನೀರು ಸೋರಿಕೆಯಾಗುತ್ತಿದೆ ಎಂದು ಮಂದಿರ ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ರಾಮಲಲ್ಲಾ ಪ್ರತಿಷ್ಠಾಪನೆ ನೆರವೇರಿಸಿದ್ದ ಪ್ರಧಾನ ಅರ್ಚಕ ನಿಧನ
ರಾಮಲಲ್ಲಾನ ಪ್ರತಿಷ್ಠಾಪನೆ ನೆರವೇರಿಸಿದ್ದ ಪ್ರಧಾನ ಅರ್ಚಕ ಲಕ್ಷ್ಮಿಕಾಂತ್ ದೀಕ್ಷಿತ್ ಶನಿವಾರ ಬೆಳಗ್ಗೆ ನಿಧನರಾದರು. 86 ವರ್ಷದ ದೀಕ್ಷಿತ್ ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.

ಅಯೋಧ್ಯೆಯ ರಾಮಮಂದಿರ ಸಂಕೀರ್ಣದಲ್ಲಿ 'ಆಕಸ್ಮಿಕ ಫೈರಿಂಗ್'ನಿಂದ ಕಾನ್‌ಸ್ಟೆಬಲ್ ಸಾವು
ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ಸಂಕೀರ್ಣದಲ್ಲಿ ನಿಯೋಜಿಸಲಾಗಿದ್ದ ಕಾನ್‌ಸ್ಟೆಬಲ್ ಒಬ್ಬರು ಅವರ ಬಳಿ ಇದ್ದ ರೈಫಲ್ ಆಕಸ್ಮಿಕವಾಗಿ ಫೈರ್ ಆಗಿ ಸಾವನ್ನಪ್ಪಿದ ಘಟನೆ ಬುಧವಾರ ಬೆಳಗ್ಗೆ ನಡೆದಿದೆ.

ಬಿಜೆಪಿಯನ್ನು ಸೋಲಿಸುವ ಮೂಲಕ ಅಯೋಧ್ಯೆ ಜನರು 'ದೇಗುಲ ರಾಜಕೀಯ'ವನ್ನು ಸರಿಪಡಿಸಿದ್ದಾರೆ: ಶರದ್ ಪವಾರ್
ಇತ್ತೀಚಿನ ಲೋಕಸಭೆ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಸೋಲಿಸುವ ಮೂಲಕ ಅಯೋಧ್ಯೆಯ ಜನರು 'ದೇವಸ್ಥಾನದ ರಾಜಕೀಯ'ವನ್ನು ಹೇಗೆ ಸರಿಪಡಿಸಬಹುದು ಎಂಬುದನ್ನು ಪ್ರದರ್ಶಿಸಿದ್ದಾರೆ ಎಂದು ಎನ್‌ಸಿಪಿ (ಎಸ್‌ಪಿ) ನಾಯಕ ಶರದ್ ಪವಾರ್ ಮಂಗಳವಾರ ಹೇಳಿದ್ದಾರೆ.

