Ayodhya

ರಾಮರಾಜ್ಯಕ್ಕೆ ಅಯೋಧ್ಯೆ ರಾಮಮಂದಿರ ಅಡಿಪಾಯ: ಮಾಜಿ ಸಿಎಂ ಬೊಮ್ಮಾಯಿ
ಅಯೋಧ್ಯೆಯ ರಾಮಮಂದಿರದಲ್ಲಿ ರಾಮನ ಮೂರ್ತಿ ಪ್ರತಿಷ್ಠಾಪನೆ ಮೂಲಕ ರಾಮ ರಾಜ್ಯಕ್ಕೆ ಅಡಿಗಲ್ಲು ಹಾಕಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶುಕ್ರವಾರ ಹೇಳಿದರು.

ರಾಮಲಲ್ಲಾ ವಿಗ್ರಹದ ಶಿಲೆ, ರಾಮ ಮಂದಿರದ ಕಲ್ಲು, ಆಯ್ಕೆ ಮಾಡಿದ್ದೇ ಕೆಜಿಎಫ್ ವಿಜ್ಞಾನಿಗಳು!
ರಾಮಲಲ್ಲಾ ವಿಗ್ರಹ ಕೆತ್ತನೆಗೆ ಯಾವ ಕಲ್ಲನ್ನು ಬಳಸಬೇಕು, ಯಾವ ಗುಣಮಟ್ಟದ ಶಿಲೆಯನ್ನು ಬಳಸಬೇಕು ಮತ್ತು ಯಾವ ಕಲ್ಲಿನಲ್ಲಿ ರಾಮ ಮಂದಿರ ನಿರ್ಮಾಣ ಮಾಡಬೇಕು ಎನ್ನುವುದನ್ನು ಅಂತಿಮಗೊಳಿಸಿದ್ದು ಚಿನ್ನದ ನಾಡು ಕೋಲಾರದ ವಿಜ್ಞಾನಿಗಳು.

ಮಂದಸ್ಮಿತ ಅಯೋಧ್ಯಾಧಿಪತಿ ಬಾಲರಾಮ: ಮಹಾ ತೇಜಸ್ಸಿನ 'ರಾಮಲಲ್ಲಾ' ಮೂರ್ತಿ ಅನಾವರಣ
ಸೋಮವಾರದಂದು ಅಯೋಧ್ಯೆಯಲ್ಲಿ ರಾಮಮಂದಿರದ ಪ್ರತಿಷ್ಠಾಪನೆ ನಡೆಯಲಿದೆ, ಅದಕ್ಕೆ ಮುಂಚಿತವಾಗಿ, ಶುಕ್ರವಾರದಂದು ಹೊಸ ರಾಮ ಲಲ್ಲಾ ವಿಗ್ರಹದ ಪೂರ್ಣ ಮುಖದ ಮೊದಲ ಚಿತ್ರವು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿತು.
ಅಯೋಧ್ಯೆ ರಾಮಮಂದಿರದ ಕೆಳಗೆ 2 ಸಾವಿರ ಅಡಿಯಲ್ಲಿ 'TIME CAPSULE': ಟೈಮ್ ಕ್ಯಾಪ್ಸುಲ್ ನ ವಿಶೇಷತೆಗಳೇನು?
ಅಯೋಧ್ಯೆಯ ರಾಮ ಮಂದಿರದ ಭವ್ಯ ಕಟ್ಟಡದ ಕೆಳಗೆ 2000 ಅಡಿಗಳಷ್ಟು ಆಳದಲ್ಲಿ 'ಟೈಮ್ ಕ್ಯಾಪ್ಸೂಲ್ʼ ಇರಿಸಲಾಗುತ್ತಿದೆ. ಇದು ರಾಮ ಜನ್ಮ ಭೂಮಿ ಭವ್ಯ ಇತಿಹಾಸವನ್ನು ಒಳಗೊಂಡಿರುವ ಮಾಹಿತಿ ಕೋಶವಾಗಿರಲಿದೆ ಎಂದು ಹೇಳಲಾಗಿದೆ.

ಅಯೋಧ್ಯೆ ರಾಮ ಲಲ್ಲಾ ಪ್ರತಿಮೆಗೆ ಬಳಸಿದ ಅದೇ ಕಲ್ಲು ಬಳಸಿ ಹನುಮನ ಮೂರ್ತಿ ಕೆತ್ತಲು ಕೊಪ್ಪಳ ಶಿಲ್ಪಿ ನಿರ್ಧಾರ
ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರತಿಮೆ ನಿರ್ಮಾಣಕ್ಕೆ ಬಳಸಿರುವ ಅದೇ ಕಲ್ಲಿನ ಭಾಗಗಳಿಂದ ಹನುಮಾನ್ ದೇವರ ಸಣ್ಣ ವಿಗ್ರಹವನ್ನು ಕೆತ್ತಲು ಕೊಪ್ಪಳದ ಶಿಲ್ಪಿಯೊಬ್ಬರು ಪ್ರಯತ್ನಿಸುತ್ತಿದ್ದಾರೆ.

ಅಯೋಧ್ಯೆ ರಾಮ ಮಂದಿರ: ಗರ್ಭಗುಡಿಯೊಳಗೆ ರಾಮಲಲ್ಲಾ ವಿಗ್ರಹ ಪ್ರತಿಷ್ಠಾಪನೆ; ಫೋಟೋ ವೈರಲ್
ಅಯೋಧ್ಯೆ ರಾಮ ಮಂದಿರದ ಗರ್ಭಗೃಹದಲ್ಲಿ ಇರಿಸಲಾದ ರಾಮ್ ಲಲ್ಲಾನ ವಿಗ್ರಹದ ಮೊದಲ ಚಿತ್ರಗಳು ಹೊರಬಂದಿವೆ. 51 ಇಂಚಿನ ರಾಮ್ ಲಲ್ಲಾ ವಿಗ್ರಹವನ್ನು ಬಿಳಿ ಬಟ್ಟೆಯಲ್ಲಿ ಸುತ್ತಿ ನಿಲ್ಲಿಸಿರುವ ಭಂಗಿಯಲ್ಲಿ ಕಾಣಬಹುದು. ರಾಮ್ ಲಲ್ಲಾ ವಿಗ್ರಹವು 150 ಕೆಜಿಗಿಂತ ಹೆಚ್ಚು ತೂಕವಿದ್ದು, ಇದನ್ನು ಮೈಸೂರಿನ ಖ್ಯಾತ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತಿದ್ದಾರೆ.

ಸಾವಿರ ವರ್ಷ ಕಳೆದರೂ ಇನ್ನೆಂದೂ ವಿವಾದವಾಗದು: ರಾಮಮಂದಿರದ ಕೆಳಗೆ 2 ಸಾವಿರ ಅಡಿಯಲ್ಲಿ 'ಟೈಮ್ ಕ್ಯಾಪ್ಸುಲ್'; ಏನಿದರ ವಿಶೇಷತೆ?
500 ವರ್ಷಗಳಿಗೂ ಅಧಿಕ ಕಾಲದ ಹೋರಾಟದ ಬಳಿಕ ಇದೀಗ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗುತ್ತಿದ್ದು, ಭವಿಷ್ಯದಲ್ಲಿ ಇನ್ನೆಂದೂ ಇಂತಹ ವಿವಾದವಾಗದಂತೆ ಮಂದಿರ ನಿರ್ಮಾಣದ ಉಸ್ತುವಾರಿ ರಾಮ ಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ 'ಮಾಸ್ಟರ್ ಪ್ಲಾನ್' ರೂಪಿಸಿದೆ.

ರಾಮಮಂದಿರ ನಿರ್ಮಾಣಕ್ಕೆ 2 ಕೋಟಿ ರೂ. ಸಂಗ್ರಹಿಸಿ ಕೊಟ್ಟೆ; ನನಗೆ ಆಹ್ವಾನ ಕೊಟ್ಟಿಲ್ಲ, ನಾನು ಹೋಗಲ್ಲ: ಜಗದೀಶ್ ಶೆಟ್ಟರ್
ರಾಮ ಮಂದಿರ ವಿಚಾರವಾಗಿ ಯಾರೂ ರಾಜಕೀಯ ಮಾಡಬಾರದು ಎಂದು ಹೇಳಿರುವ ಕಾಂಗ್ರೆಸ್ MLC ಜಗದೀಶ್ ಶೆಟ್ಟರ್ ಅವರು, ಮಂದಿರ ನಿರ್ಮಾಣಕ್ಕಾಗಿ ನಿಧಿ ಸಂಗ್ರಹ ಮಾಡುವಾಗ 2 ಕೋಟಿ ರೂಪಾಯಿ ಸಂಗ್ರಹ ಕೊಟ್ಟಿದ್ದೆ. ಆದರೆ ನನಗೆ ಆಹ್ವಾನ ಬಂದಿಲ್ಲ. ಹೀಗಾಗಿ ನಾನು ಪ್ರಾಣ ಪ್ರತಿಷ್ಠಾಪನೆ ಸಮಾರಂಭಕ್ಕೆ ಹೋಗುವುದಿಲ್ಲ ಎಂದು ಹೇಳಿದ್ದಾರೆ.

ಅಯೋಧ್ಯೆ ಮೇಲೆ ಉಗ್ರರ ಕರಿನೆರಳು: 3 ಅನುಮಾನಾಸ್ಪದ ವ್ಯಕ್ತಿಗಳ ಬಂಧನ
ಅಯೋಧ್ಯೆ ಶ್ರೀರಾಮ ಮಂದಿರ ಉದ್ಘಾಟನೆಗೆ ಸಿದ್ಧತೆಗಳು ಭರದಿಂದ ಸಾಗಿದ್ದು, ಈ ನಡುವಲ್ಲೇ ಭಯೋತ್ಪಾದಕ ನಿಗ್ರಹ ದಳ ಮೂವರು ಅನುಮಾನಾಸ್ಪದ ವ್ಯಕ್ತಿಗಳನ್ನು ಬಂಧನಕ್ಕೊಳಪಡಿಸಿದೆ ಎಂದು ಶುಕ್ರವಾರ ತಿಳಿದುಬಂದಿದೆ.

