attack

ಬೆಂಗಳೂರು: ಪೊಲೀಸ್ ಎಂದು ಹೇಳಿಕೊಂಡು ಫೈನಾನ್ಸ್ ಸಂಸ್ಥೆಯ ಮ್ಯಾನೇಜರ್ ಮೇಲೆ ಬ್ಲೇಡ್‌ನಿಂದ ಹಲ್ಲೆ
ಜಯನಗರ 7ನೇ ಬ್ಲಾಕ್‌ನಲ್ಲಿ ತಾನು ಪೊಲೀಸ್ ಎಂದು ಹೇಳಿಕೊಂಡ ವ್ಯಕ್ತಿ, ತನಗೆ ಹಣ ನೀಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ಖಾಸಗಿ ಫೈನಾನ್ಸ್ ಸಂಸ್ಥೆಯೊಂದರ ವಲಯ ವ್ಯವಸ್ಥಾಪಕರೊಬ್ಬರ (35) ಮೇಲೆ ಬ್ಲೇಡ್ ಮತ್ತು ಹರಿತವಾದ ವಸ್ತುವಿನಿಂದ ಹಲ್ಲೆ ನಡೆಸಲಾಗಿದೆ.

14 ಭಾರತೀಯ ಮೀನುಗಾರರ ಬಂಧಿಸಿದ ಶ್ರೀಲಂಕಾ ನೌಕಾಪಡೆ
ಸಮುದ್ರ ಗಡಿ ಉಲ್ಲಂಘನೆ ಆರೋಪದ ಮೇಲೆ ಶ್ರೀಲಂಕಾ ನೌಕಾಪಡೆಯು 14 ಭಾರತೀಯ ಮೀನುಗಾರರನ್ನು ಬಂಧನಕ್ಕೊಳಪಡಿಸಿದೆ ಎಂದು ತಿಳಿದುಬಂದಿದೆ.

ಚಿಕ್ಕಬಳ್ಳಾಪುರ: ಎಎಸ್ಐ ಮನೆ ಮೇಲೆ ಸಿನಿಮೀಯ ರೀತಿಯಲ್ಲಿ ದುಷ್ಕರ್ಮಿಗಳ ದಾಳಿ, ಪುತ್ರನ ಸ್ಥಿತಿ ಗಂಭೀರ
ಎಎಸ್ಐ ಮನೆ ಮೇಲೆಯೇ ದುಷ್ಕರ್ಮಿಗಳು ದಾಳಿ ನಡೆಸಿದ್ದು, ಮನೆ ಮಂದಿ ಮೇಲೆ ಗುಂಡಿ ಹಾರಿಸಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ನಗದು ದೋಚಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಪೆರೇಸಂದ್ರ ಗ್ರಾಮದಲ್ಲಿ ಬುಧವಾರ ನಡೆದಿದೆ.

ಬೆಂಗಳೂರು: ವ್ಯಕ್ತಿ ಮೇಲೆ ಪತ್ನಿಯ ಮಾಜಿ ಸಹೋದ್ಯೋಗಿಯಿಂದ ಹಲ್ಲೆ!
30 ವರ್ಷದ ವ್ಯಕ್ತಿಯೊಬ್ಬರ ಮೇಲೆ ಆತನ ಪತ್ನಿಯ ಮಾಜಿ ಸಹೋದ್ಯೋಗಿ ಮತ್ತು ಇಬ್ಬರು ವ್ಯಕ್ತಿಗಳು ಕಬ್ಬಿಣದ ರಾಡ್‌ಗಳಿಂದ ಅಮಾನುಷವಾಗಿ ಹಲ್ಲೆ ನಡೆಸಿರುವ ಘಟನೆ ಕನಕಪುರ ರಸ್ತೆಯಲ್ಲಿ ನಡೆದಿದೆ.

ಮಂಗಳೂರಿನಲ್ಲಿ ಬೆಡ್‌ಶೀಟ್ ಮಾರಾಟಗಾರರ ಮೇಲೆ ಹಲ್ಲೆ ನಡೆಸಿದ 6 ಮಂದಿ ಬಂಧನ
ಕಳೆದ ವಾರ ಕಡಬ ತಾಲೂಕಿನ ಎಡಮಂಗಲದಲ್ಲಿ ಇಬ್ಬರು ಬೀದಿ ವ್ಯಾಪಾರಿಗಳ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.

ಮಾರಣಾಂತಿಕ ದಾಳಿ: ಒಂದು ಕಣ್ಣಿನ ದೃಷ್ಟಿ, ಕೈ ಸ್ವಾಧೀನ ಕಳೆದುಕೊಂಡ ಲೇಖಕ ಸಲ್ಮಾನ್ ರಶ್ದಿ
ಇತ್ತೀಚೆಗಷ್ಟೇ ದಾಳಿಗೆ ಒಳಗಾಗಿದ್ದ ಲೇಖಕ ಸಲ್ಮಾನ್ ರಶ್ದಿ ಒಂದು ಕಣ್ಣಿನ ದೃಷ್ಟಿ ಹಾಗೂ ಒಂದು ಕೈ ಸ್ವಾಧೀನ ಕಳೆದುಕೊಂಡಿದ್ದಾರೆ.

ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್ ಮನೆ ಮೇಲೆ ದಾಳಿ: 2 ಕಾರುಗಳು ಧ್ವಂಸ
ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್ ಅವರ ನಿವಾಸದ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ್ದು, ಎರಡು ಕಾರುಗಳನ್ನು ಧ್ವಂಸಗೊಳಿಸಿದ್ದಾರೆಂದು ಸೋಮವಾರ ತಿಳಿದುಬಂದಿದೆ.

ಕೋಲಾರ: ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ್ದಕ್ಕೆ ದಲಿತ ವ್ಯಕ್ತಿಯ ಮೇಲೆ ಮೇಲ್ಜಾತಿಯವರಿಂದ ಹಲ್ಲೆ, ಇಬ್ಬರ ಬಂಧನ
ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ್ದಕ್ಕಾಗಿ ದಲಿತ ವ್ಯಕ್ತಿಯೊಬ್ಬನ ಮೇಲೆ ಮೇಲ್ಜಾತಿ ಸಮುದಾಯದ 15ಕ್ಕೂ ಹೆಚ್ಚು ಮಂದಿಗೆ ಥಳಿಸಿದ ಘಟನೆ ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ದೊಡ್ಡೂರು ಗ್ರಾಮದಲ್ಲಿ ನಡೆದಿದೆ. ಬೂದಿಕೋಟೆ ಪೊಲೀಸರು ಹಲ್ಲೆ ಮತ್ತು ದೌರ್ಜನ್ಯ ಪ್ರಕರಣ ದಾಖಲಿಸಿಕೊಂಡು ಇಬ್ಬರನ್ನು ಬಂಧಿಸಿದ್ದಾರೆ. ತಲೆಮರೆಸಿಕೊಂಡಿರುವ ಇತರರಿಗಾಗಿ ಶೋಧ ನಡೆಯುತ್ತಿದೆ.

ಗುಜರಾತ್ ಕಾಂಗ್ರೆಸ್ ಶಾಸಕನ ಮೇಲೆ ಬಿಜೆಪಿ ಕಾರ್ಯಕಾರಿಯಿಂದ ಹಲ್ಲೆ; ಎಫ್‌ಐಆರ್ ದಾಖಲು
ನವಸಾರಿ ಜಿಲ್ಲೆಯಲ್ಲಿ ಗುಜರಾತ್ ಕಾಂಗ್ರೆಸ್ ಶಾಸಕ ಮತ್ತು ಬುಡಕಟ್ಟು ಜನಾಂಗದ ಮುಖಂಡ ಅನಂತ್ ಪಟೇಲ್ ಅವರ ಮೇಲೆ ಸ್ಥಳೀಯ ಬಿಜೆಪಿ ಕಾರ್ಯಕಾರಿ ಮತ್ತು ಅವರ ಬೆಂಬಲಿಗರು ಹಲ್ಲೆ ನಡೆಸಿದ್ದು, ಗಾಯಗೊಂಡಿದ್ದಾರೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.

