attack

ಬೆಂಗಳೂರು: ಉಬರ್ ಕ್ಯಾಬ್ ಚಾಲಕನಿಂದ ಮಹಿಳೆ ಮೇಲೆ ಹಲ್ಲೆ, ದೂರು ದಾಖಲು
ತಿಳಿಯದೆ ಬೇರೆ ಕ್ಯಾಬ್ ಹತ್ತಿದ್ದಕ್ಕೆ ಮಹಿಳೆಯೊಬ್ಬರ ಮೇಲೆ ಉಬರ್ ಚಾಲಕ ಹಲ್ಲೆ ನಡೆಸಿರುವ ಆಘಾತಕಾರಿ ಘಟನೆ ಬೆಂಗಳೂರಿನಲ್ಲಿ ಗುರುವಾರ ಬೆಳಕಿಗೆ ಬಂದಿದೆ.

ಬೆಂಗಳೂರು: ಮನೆ ಮುಂದೆ ಮೂತ್ರ ವಿಸರ್ಜನೆ ಮಾಡದಂತೆ ಎಚ್ಚರಿಕೆ ನೀಡಿದ ತಂದೆ ಮಗನ ಮೇಲೆ ಐವರಿಂದ ಹಲ್ಲೆ!
ತಮ್ಮ ಮನೆ ಮುಂದೆ ಮೂತ್ರ ವಿಸರ್ಜಿಸದಂತೆ ಎಚ್ಚರಿಕೆ ನೀಡಿದ ನಂತರ ಐವರು ಪಾನಮತ್ತ ವ್ಯಕ್ತಿಗಳು 65 ವರ್ಷದ ವ್ಯಕ್ತಿಯನ್ನು ಮೊದಲ ಮಹಡಿಯ ಮನೆಯಿಂದ ಹೊರಗೆ ಎಳೆದು ಹಲ್ಲೆ ನಡೆಸಿರುವ ಘಟನೆ ಆರ್ ಟಿ ನಗರದಲ್ಲಿ ನಡೆದಿದೆ.

ಮೇಘಾಲಯ ಸಿಎಂ ಕಚೇರಿ ಮೇಲೆ ದಾಳಿ: ಇಬ್ಬರು ಬಿಜೆಪಿ ಕಾರ್ಯಕರ್ತರ ಬಂಧನ
ಪಶ್ಚಿಮ ಮೇಘಾಲಯದ ತುರಾ ಪಟ್ಟಣದಲ್ಲಿರುವ ಮುಖ್ಯಮಂತ್ರಿ ಕಚೇರಿ ಮೇಲೆ ದಾಳಿಗೆ ಸಂಬಂಧಿಸಿದಂತೆ ಇಬ್ಬರು ಬಿಜೆಪಿ ಮಹಿಳಾ ಮೋರ್ಚಾ ಪದಾಧಿಕಾರಿಗಳು ಸೇರಿದಂತೆ ಕನಿಷ್ಠ 18 ಜನರನ್ನು ಬಂಧಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.

ರಾಜಸ್ಥಾನ: ಕಾಂಗ್ರೆಸ್ ನಲ್ಲಿ ಆಂತರಿಕ ಕಿತ್ತಾಟ; ಗೆಹ್ಲೋಟ್ ಶಾಸಕರಿಂದ ಹಲ್ಲೆ- ಮಾಜಿ ಸಚಿವ ರಾಜೇಂದ್ರ ಸಿಂಗ್ ಗುಧಾ ಆರೋಪ
ಮಹಿಳೆಯರ ಸುರಕ್ಷತೆಯ ವಿಷಯದಲ್ಲಿ ತಮ್ಮದೇ ಸರ್ಕಾರವನ್ನು ಪ್ರಶ್ನಿಸಿದ್ದಕ್ಕಾಗಿ ಸಚಿವ ಸ್ಥಾನದಿಂದ ವಜಾಗೊಂಡಿರುವ ರಾಜಸ್ಥಾನದ ಮಾಜಿ ಸಚಿವ ರಾಜೇಂದ್ರ ಸಿಂಗ್ ಗುಧಾ ಅವರಿಗೆ ಸೋಮವಾರ ಅವರ ಪಕ್ಷದ ಸಹೋದ್ಯೋಗಿಗಳು ರಾಜಸ್ಥಾನ ವಿಧಾನಸಭೆಗೆ ಪ್ರವೇಶಿಸಲು ಅವಕಾಶ ನೀಡಲಿಲ್ಲ.

ವೈಟ್‌ಫೀಲ್ಡ್‌ನಲ್ಲಿ ಐಟಿ ಉದ್ಯೋಗಿ ಕಾರಿನ ಮೇಲೆ ಆಟೋ ಚಾಲಕ ದಾಳಿ; ಟೆಕ್ಕಿ, ಆತನ ಕುಟುಂಬದ ಹತ್ಯೆಗೆ ಪ್ರಯತ್ನ
ಆಟೋರಿಕ್ಷಾ ಚಾಲಕರೊಬ್ಬರು 42 ವರ್ಷದ ಐಟಿ ಉದ್ಯೋಗಿಯೊಬ್ಬರ ಕಾರಿನ ಮೇಲೆ ದಾಳಿ ನಡೆಸಿ, ಗಾಜನ್ನು ಒಡೆದುಹಾಕುವ ಮೂಲಕ ಕಾರಿನಲ್ಲಿದ್ದ ಐಟಿ ಉದ್ಯೋಗಿ ಪತ್ನಿ ಹಾಗೂ ಐದು ವರ್ಷದ ಮಗುವಿಗೆ ಜೀವ ಭಯವನ್ನುಂಟು ಮಾಡಿದ ಘಟನೆ ನಗರದ ವೈಟ್ ಫೀಲ್ಡ್ ನಲ್ಲಿ ನಡೆದಿದೆ.

ಹುಣಸೂರು: ಬೈಕ್'ನಲ್ಲಿ ತೆರಳುತ್ತಿದ್ದ ದಂಪತಿ ಮೇಲೆ ಚಿರತೆ ದಾಳಿ
ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ದಂಪತಿ ಮೇಲೆ ಚಿರತೆ ದಾಳಿ ನಡೆಸಿದ್ದು, ಪರಿಣಾಮ ಬೈಕಿನಿಂದ ಕೆಳಗೆ ಬಿದ್ದ ಮಹಿಳೆಗೆ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಹುಣಸೂರು ತಾಲೂಕಿನ ಗೊಮ್ಮಟಗಿರಿ ಬೆಟ್ಟದ ರಸ್ತೆಯಲ್ಲಿ ನಡೆದಿದೆ.

ಬೆಂಗಳೂರು: ಕುಡಿದ ಮತ್ತಿನಲ್ಲಿ ಅಟ್ಟಾಡಿಸಿಕೊಂಡು ಹೋಗಿ ವೈದ್ಯರ ಮೇಲೆ ಹಲ್ಲೆ; ಶೌಚಾಲಯದಲ್ಲಿ ಅವಿತು ಕುಳಿತ ಡಾಕ್ಟರ್!
ಕುಡಿದ ಮತ್ತಿನಲ್ಲಿದ್ದ ಇಬ್ಬರು ವ್ಯಕ್ತಿಗಳು ವೈದ್ಯರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆ.

ಅವರ ಹೇಳಿಕೆಯಿಂದ ನಮಗೆ ನೋವುಂಟಾಗಿತ್ತು: ಚಂದ್ರಶೇಖರ್ ಆಜಾದ್ ಮೇಲೆ ದಾಳಿ ನಡೆಸಿದ ಆರೋಪಿಗಳ ಹೇಳಿಕೆ
ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಅವರ ಮೇಲೆ ದಾಳಿ ನಡೆಸಿ ಬಂಧನಕ್ಕೊಳಗಾಗಿರುವ ನಾಲ್ವರು ಆರೋಪಿಗಳು ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.

ಇಷ್ಟೊಂದು ಸುಳ್ಳು' ಹೇಳುವ ಪ್ರಧಾನಿಯನ್ನು ನೋಡಿಲ್ಲ: ಸಾಂಗ್ಲಿಯಲ್ಲಿ ಮೋದಿ ವಿರುದ್ಧ ಗುಡುಗಿದ ಸಿಎಂ ಸಿದ್ದರಾಮಯ್ಯ
ತಮ್ಮ 40 ವರ್ಷಗಳ ರಾಜಕೀಯ ಜೀವನದಲ್ಲಿ ಇಷ್ಟೊಂದು ‘ಸುಳ್ಳು’ ಹೇಳುವ ಪ್ರಧಾನಿಯನ್ನು ನೋಡಿಲ್ಲ ಎಂದು ಹೇಳುವ ಮೂಲಕ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ವಾಗ್ದಾಳಿ ನಡೆಸಿದ್ದಾರೆ.

