Atishi, Saurabh Bharadwaj

ದೆಹಲಿ ಜಲ ಸಚಿವೆ ಅತಿಶಿ LNJP ಆಸ್ಪತ್ರೆಯಿಂದ ಡಿಸ್ಚಾರ್ಜ್
ಸಚಿವೆ ಅತಿಶಿ ಅವರು ಇಂದು ಬೆಳಗ್ಗೆ 10.30ಕ್ಕೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ ಎಂದು ಆಸ್ಪತ್ರೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನವದೆಹಲಿಯಲ್ಲಿ ನೀರಿನ ಸಮಸ್ಯೆ: ಅತಿಶಿ ಅನಿರ್ದಿಷ್ಟಾವಧಿ ಉಪವಾಸ 2ನೇ ದಿನಕ್ಕೆ!

ದೆಹಲಿಯ ಜಲ ಬಿಕ್ಕಟ್ಟು: ಹೆಚ್ಚು ನೀರಿಗೆ ಆಗ್ರಹಿಸಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸಿದ ಸಚಿವೆ ಅತಿಶಿ
ಕಳೆದ ಎರಡು ವಾರಗಳಿಂದ ಹರಿಯಾಣ 613 MGD ಯ ಬದಲಾಗಿ ದೆಹಲಿಗೆ ದಿನಕ್ಕೆ 100 ಮಿಲಿಯನ್ ಗ್ಯಾಲನ್ ಕಡಿಮೆ ನೀರನ್ನು ಬಿಡುಗಡೆ ಮಾಡುತ್ತಿದೆ ಎಂದು ಸಚಿವೆ ಹೇಳಿಕೊಂಡಿದ್ದಾರೆ.

ಕೇಜ್ರಿವಾಲ್ ಇನ್ಸುಲಿನ್ ಅಗತ್ಯತೆ ಕುರಿತು ಏಮ್ಸ್ ವೈದ್ಯರ ಸಲಹೆ ಪಡೆದಿರುವುದಾಗಿ ಇಡಿ ಸುಳ್ಳು ಹೇಳಿದೆ: AAP ಆರೋಪ
ಮಧುಮೇಹಿಯಾಗಿರುವ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ಗೆ ಇನ್ಸುಲಿನ್ ಅಗತ್ಯತೆ ಕುರಿತು ಬಗ್ಗೆ ಏಮ್ಸ್‌ನ ತಜ್ಞರಿಂದ ಸಲಹೆ ಪಡೆಯಲಾಗಿದೆ ಎಂದು ಜಾರಿ ನಿರ್ದೇಶನಾಲಯ ನ್ಯಾಯಾಲಯದಲ್ಲಿ "ಸುಳ್ಳು" ಹೇಳುತ್ತಿದೆ ಎಂದು ಎಎಪಿ ಸಚಿವೆ ಅತಿಶಿ ಅವರು ಸೋಮವಾರ ಆರೋಪ ಮಾಡಿದ್ದಾರೆ.

ದೆಹಲಿಯಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲು ಸಂಚು ನಡೆದಿದೆ: ದೆಹಲಿ ಸಚಿವೆ ಅತಿಶಿ
ರಾಷ್ಟ್ರ ರಾಜಧಾನಿಯಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ದೊಡ್ಡ ರಾಜಕೀಯ ಸಂಚು ರೂಪಿಸುತ್ತಿದೆ ಎಂದು ದೆಹಲಿ ಸಚಿವ ಅತಿಶಿ ಶುಕ್ರವಾರ ಆರೋಪಿಸಿದ್ದಾರೆ.

ಬಿಜೆಪಿ ಸೇರುವಂತೆ ಆಪ್ತರ ಮೂಲಕ ಆಹ್ವಾನ: ದೆಹಲಿ ಸಚಿವೆ ಅತಿಶಿಗೆ ಚುನಾವಣಾ ಆಯೋಗ ನೋಟಿಸ್
ದೆಹಲಿ ಸಚಿವೆ ಮತ್ತು ಎಎಪಿ ನಾಯಕಿ ಅತಿಶಿ ಅವರಿಗೆ ಚುನಾವಣಾ ಆಯೋಗ ಶುಕ್ರವಾರ ಶೋಕಾಸ್ ನೋಟಿಸ್ ಜಾರಿ ಮಾಡಿದ್ದು, ಪಕ್ಷ ಸೇರಲು ಬಿಜೆಪಿ ತನ್ನನ್ನು ಆಪ್ತರ ಮೂಲಕ ಸಂಪರ್ಕಿಸಿದೆ ಎಂಬ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡುವಂತೆ ಕೇಳಿದೆ.

ಅತಿಶಿಗೆ ಮಾನನಷ್ಟ ನೋಟಿಸ್ ಕಳುಹಿಸಿದ ದೆಹಲಿ ಬಿಜೆಪಿ; ಸಾರ್ವಜನಿಕವಾಗಿ ಕ್ಷಮೆಯಾಚಿಸುವಂತೆ ಒತ್ತಾಯ
ಕೇಸರಿ ಪಕ್ಷವನ್ನು ಸೇರುವಂತೆ ತನ್ನನ್ನು ಆಪ್ತ ವ್ಯಕ್ತಿಯ ಮೂಲಕ ಸಂಪರ್ಕಿಸಿದೆ ಎಂಬ ಹೇಳಿಕೆಗೆ ಸಂಬಂಧಿಸಿದಂತೆ ದೆಹಲಿ ಬಿಜೆಪಿ ಘಟಕವು ಹಿರಿಯ ಎಎಪಿ ನಾಯಕಿ ಮತ್ತು ಸಚಿವೆ ಅತಿಶಿ ಅವರಿಗೆ ಮಾನನಷ್ಟ ನೋಟಿಸ್ ಕಳುಹಿಸಿದ್ದು, ಸಾರ್ವಜನಿಕವಾಗಿ ಕ್ಷಮೆಯಾಚಿಸುವಂತೆ ಒತ್ತಾಯಿಸಿದೆ.

ಅರವಿಂದ ಕೇಜ್ರಿವಾಲ್ ತೂಕ ಇಳಿಕೆ; ಅವರ ಆರೋಗ್ಯ ಅಪಾಯದಲ್ಲಿ: BJP ವಿರುದ್ಧ ಸಚಿವೆ ಅತಿಶಿ ಆರೋಪ
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಮಾರ್ಚ್ 21 ರಂದು ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೊಳಗಾದಾಗಿನಿಂದ ವೇಗವಾಗಿ ತೂಕವನ್ನು ಕಳೆದುಕೊಳ್ಳುತ್ತಿದ್ದಾರೆ ಮತ್ತು ಅವರನ್ನು ಜೈಲಿನಲ್ಲಿ ಇರಿಸುವ ಮೂಲಕ ಬಿಜೆಪಿ ಅವರ ಆರೋಗ್ಯವನ್ನು ಅಪಾಯಕ್ಕೆ ಸಿಲುಕಿಸಿದೆ ಎಂದು ಸಚಿವೆ ಅತಿಶಿ ಬುಧವಾರ ಆರೋಪಿಸಿದ್ದಾರೆ.

ಬಿಜೆಪಿ ಸೇರದಿದ್ದರೆ ED ತನ್ನನ್ನು ಸೇರಿ ಇತರ 3 AAP ನಾಯಕರನ್ನು ಬಂಧಿಸಲಿದೆ: ದೆಹಲಿ ಸಚಿವೆ ಅತಿಶಿ
ಬಿಜೆಪಿ ಸೇರುವಂತೆ ನನ್ನ ಆಪ್ತರ ಮೂಲಕ ನನ್ನನ್ನು ಸಂಪರ್ಕಿಸಲಾಗಿದ್ದು, ಬಿಜೆಪಿಗೆ ಸೇರದೆ ಹೋದರೆ ಮುಂದಿನ ದಿನಗಳಲ್ಲಿ ಜಾರಿ ನಿರ್ದೇಶನಾಲಯ (ಇ.ಡಿ) ಎಎಪಿ ನಾಯಕರಾದ ಸೌರಭ್ ಭಾರದ್ವಾಜ್, ದುರ್ಗೇಶ್ ಪಾಠಕ್ ಮತ್ತು ರಾಘವ್ ಚಡ್ಡಾ ಅವರೊಂದಿಗೆ ನನ್ನನ್ನು ಬಂಧಿಸುವ ಸಾಧ್ಯತೆಯಿದೆ ಎಂದು ದೆಹಲಿ ಸಚಿವೆ ಅತಿಶಿ ಮಂಗಳವಾರ ಹೇಳಿದ್ದಾರೆ.

