assembly

ಮಾರ್ಚ್ ಅಂತ್ಯದೊಳಗೆ ಸಾಲಮನ್ನಾ ಸಂಬಂಧದ ಗೊಂದಲಕ್ಕೆ ತೆರೆ: ಎಸ್.ಟಿ.ಸೋಮಶೇಖರ್
ಇದಕ್ಕೆ ಉತ್ತರಿಸಿದ ಸಚಿವರು, ಇಂಥ ಪ್ರಕರಣಗಳ ಬಗ್ಗೆ ವಿಶೇಷ ಗಮನಹರಿಸ್ತೇವೆ. ಗೊಂದಲಗಳನ್ನು ಪರಿಹರಿಸಲು ಕ್ರಮ ತಗೋತೇವೆ. ಈ ಸಂಬಂಧ ಸಿಎಂ ಜತೆ ಚರ್ಚಿಸಿ ಮಾರ್ಚ್ ಒಳಗೆ ಸಮಸ್ಯೆಯನ್ನು ಬಗೆಹರಿಸುತ್ತೇನೆ ಎಂದು ತಿಳಿಸಿದರು.

ವಿಧಾನಸಭಾ ಅಧಿವೇಶನ: ಸಂವಿಧಾನ ಕುರಿತು ಸದಸ್ಯರಿಂದ ವಿಸ್ತೃತ ಚರ್ಚೆ
ವಿಧಾನಸಭೆಯಲ್ಲಿಂದು ಸಂವಿಧಾನ ಕುರಿತು ವಿಶೇಷ ಕಲಾಪದಲ್ಲಿ ಬಹುತೇಕ ಸದಸ್ಯರು ತಮ್ಮ ಅಭಿಪ್ರಾಯ ಹಂಚಿಕೊಂಡರು.

ಚುನಾಯಿತ ಪ್ರತಿನಿಧಿಗಳ ದ್ವಂದ್ವ; ಸಂವಿಧಾನದ ಆಶಯಗಳಿಗೆ ಪೆಟ್ಟು- ರಮೇಶ್ ಕುಮಾರ್
ಸಂವಿಧಾನದ ಆಶಯ, ಗುರಿ ನಿಜವಾದ ಅರ್ಥದಲ್ಲಿ ಜಾರಿಗೆ ಬಾರದೇ ಇರಲು ಚುನಾಯಿತ ಪ್ರತಿನಿಧಿಗಳಲ್ಲಿರುವ ದ್ವಂದ್ವ ನೀತಿಗಳೇ ಕಾರಣ ಎಂದು ಕಾಂಗ್ರೆಸ್ ಹಿರಿಯ ಸದಸ್ಯ ಹಾಗೂ ಮಾಜಿ ಸ್ಪೀಕರ್ ಕೆ.ಆರ್ ರಮೇಶ್ ಕುಮಾರ್ ವಿಷಾದ ವ್ಯಕ್ತಪಡಿಸಿದ್ದಾರೆ

'ಅಂದು ಈಸ್ಟ್ ಇಂಡಿಯಾ ಕಂಪನಿ ಇಂದು ಈಟ್ ಇಂಡಿಯಾ ಕಂಪನಿ: ರಕ್ತಕ್ಕಿಂತ ಹಣ ದೊಡ್ಡದು'
ದೇಶವನ್ನು ಈಸ್ಟ್ ಇಂಡಿಯಾ ಕಂಪನಿ 1947ರಲ್ಲಿ ತೊರೆದು ಹೋದ ನಂತರ ಈಗ ಈಟ್ ಇಂಡಿಯಾ ಕಂಪನಿಗಳು ದೇಶವನ್ನು ಲೂಟಿ ಮಾಡುತ್ತಿವೆ ಎಂದು ಜೆಡಿಎಸ್ ಶಾಸಕ ಎ.ಟಿ ರಾಮಸ್ವಾಮಿ ವಿಧಾನಸಭೆಯಲ್ಲಿಂದು ತಮ್ಮದೇ ಆದ ಮಾತಿನ ಮೂಲಕ ಚಾಟಿ ಬೀಸಿದರು.

ಕಲಾಪ ನುಂಗಿದ ಯತ್ನಾಳ್: ಸಿದ್ದರಾಮಯ್ಯ ಅವರನ್ನು ಹೊರಹಾಕಿ: ಸ್ಪೀಕರ್ -ಸಿದ್ದು ಜುಗಲ್ ಬಂದಿ
ವಿಧಾನಸಭೆಯ ಬಜೆಟ್ ಅಧಿವೇಶನದ ಮೊದಲ ದಿನವೇ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನಡುವೆ ಮಾತಿನ ಸಮರ, ಜುಗಲ್ ಬಂದಿ ನಡೆದುಹೋಯಿತು.

ಪ್ರತಿಯೊಬ್ಬ ಶಾಸಕರಿಗೂ ಸಂವಿಧಾನದ ಕನ್ನಡ ಪ್ರತಿ ನೀಡುತ್ತೇವೆ: ಯಡಿಯೂರಪ್ಪ
ಈ ಬಾರಿಯ ಬಜೆಟ್ ವೇಳೆ ಸಂವಿಧಾನವನ್ನು ಅನುವಾದಿಸಿ ಕನ್ನಡಕ್ಕೆ ಮುದ್ರಿಸಿ ಎಲ್ಲ ಶಾಸಕರಿಗೂ ಓದಿ ಮಾತನಾಡಲು ಅವಕಾಶ ಕಲ್ಪಿಸಲಾಗುತ್ತಿದೆ ಎಂದು ಬಿ.ಎಸ್ ಯಡಿಯೂರಪ್ಪ ಅವರು ಹೇಳಿದ್ದಾರೆ.

ವಿಧಾನಸಭೆ: ಮಾ. 2ರಂದು ಸಿಎಂ ಯಡಿಯೂರಪ್ಪರಿಂದ ಉತ್ತರ- ಸ್ಪೀಕರ್ ಘೋಷಣೆ
ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲಿನ ಚರ್ಚೆಗೆ ಹೆಚ್ಚಿನ ಕಾಲಾವಕಾಶ ನೀಡಬೇಕು ಎಂಬ ವಿಪಕ್ಷಗಳ ಒತ್ತಡಕ್ಕೆ ಮಣಿದ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮಾ. 2ರಂದು ಉತ್ತರ ನೀಡಲಿದ್ದಾರೆ ಎಂದು ಪ್ರಕಟಿಸಿದ್ದಾರೆ.

ಮಲೆಮಹಾದೇಶ್ವರ ಬೆಟ್ಟದ ಸೋಲಾರ್ ಸಮಸ್ಯೆ: ಅಧಿಕಾರಿಗಳ ತಂಡ ರವಾನೆಗೆ ಸಚಿವರ ಸೂಚನೆ
ರಾಜ್ಯದ ಪ್ರಮುಖ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾಗಿರುವ ಮಲೆಮಹಾದೇಶ್ವರ ಬೆಟ್ಟ ಹಾಗೂ ಸುತ್ತಮುತ್ತ ಸೋಲಾರ್ ವಿದ್ಯುತ್ ದೀಪಗಳ ದುರಸ್ತಿಗೆ ಶಿವರಾತ್ರಿ ಒಳಗೆ ಅಧಿಕಾರಿಗಳ ತಂಡ ರವಾನಿಸುವುದಾಗಿ ಮುಜುರಾಯಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಮೇಲ್ಮನೆ ಸದನಕ್ಕೆ ಭರವಸೆ ನೀಡಿದ್ದಾರೆ.

ಉಗ್ರ ಅಜರ್ ನನ್ನು ಪಾಕಿಸ್ತಾನಕ್ಕೆ ಕಳುಹಿಸಿದ್ದು ಯಾರು? ಲಾಹೋರ್ ನಲ್ಲಿ ಬಿರಿಯಾನಿ ತಿಂದಿದ್ದು ಯಾರು?
ಪಾಕಿಸ್ತಾನದ ಉಗ್ರ ಮಸೂದ್ ಅಜರ್ ನನ್ನು ಕಂದಹಾರ್ ಗೆ ಬಿಟ್ಟು ಬಂದವರು ಯಾರು " ನೀವು ನಮಗೆ ದೇಶ ಪ್ರೇಮದ ಬಗ್ಗೆ ಪಾಠ ಮಾಡುತ್ತೀರಾ ಎಂದು ಕೆಪಿಸಿಸಿ ಅಧ್ಯಕ್ಷ, ಕಾಂಗ್ರೆಸ್ ಶಾಸಕ ದಿನೇಶ್ ಗುಂಡೂರಾವ್ ವಿಧಾನಸಭೆಯಲ್ಲಿಂದು ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.

