assembly

ಭೂ ಕಂದಾಯ ತಿದ್ದುಪಡಿ ಮಸೂದೆ ಅಂಗೀಕಾರ: ಅರಣ್ಯ ಭೂಮಿಯಲ್ಲಿ ಕೃಷಿ, ಮನೆ ನಿರ್ಮಿಸಿದವರಿಗೆ ಅನುಕೂಲ
2020 ನೇ ಸಾಲಿನ ಕರ್ನಾಟಕ ಭೂ ಕಂದಾಯ ತಿದ್ದುಪಡಿ ವಿಧೇಯಕವನ್ನು ವಿಧಾನಸಭೆಯಲ್ಲಿ ಧ್ವನಿಮತದಿಂದ ಅಂಗೀಕರಿಸಲಾಯಿತು.

ಪಂಚಾಯತ್ ರಾಜ್ ಕಾಯ್ದೆ ತಿದ್ದುಪಡಿ ಅಂಗೀಕಾರ: ಸದಸ್ಯರ ಮೀಸಲು ಅವಧಿ 5 ವರ್ಷಕ್ಕೆ ಇಳಿಕೆ
ಗ್ರಾಮಪಂಚಾಯಿತಿ,ತಾಲೂಕು ಹಾಗೂ ಜಿಲ್ಲಾ ಪಂಚಾಯತಿ ಸದಸ್ಯರ ಮೀಸಲಾತಿ ಅವಧಿಯನ್ನು 10.ವರ್ಷಗಳಿಂದ 5 ವರ್ಷಕ್ಕೆ ಬದಲಾಯಿಸುವ ಕರ್ನಾಟಕ ಗ್ರಾಮ್ ಸ್ವರಾಜ್ ಮತ್ತು ಪಂಚಾಯತ್ ರಾಜ್ ತಿದ್ದುಪಡಿ ವಿಧೇಯಕಕ್ಕೆ ವಿಧಾನಸಭೆಯಲ್ಲಿ ಅಂಗೀಕಾರ ನೀಡಲಾಯಿತು.

2.15 ಲಕ್ಷ ಆಟೋ, ಕ್ಯಾಬ್ ಚಾಲಕರು ಕೋವಿಡ್ ಆರ್ಥಿಕ ನೆರವು ಪಡೆದುಕೊಂಡಿದ್ದಾರೆ: ವಿಧಾನಸಭೆಗೆ ಸರ್ಕಾರ ಮಾಹಿತಿ
ರಾಜ್ಯದಲ್ಲಿ ಈ ವರೆಗೂ 2.15 ಲಕ್ಷ ಆಟೋ, ಕ್ಯಾಬ್ ಚಾಲಕರು ಕೋವಿಡ್ ಆರ್ಥಿಕ ನೆರವು ಪಡೆದುಕೊಂಡಿದ್ದಾರೆಂದು ವಿಧಾನಸಭೆಗೆ ಸರ್ಕಾರ ಗುರುವಾರ ಮಾಹಿತಿ ನೀಡಿತು.

ವಿಧಾನಸಭೆಯಲ್ಲಿ ಸುರೇಶ್ ಅಂಗಡಿಗೆ ಸಂತಾಪ: ಒಡನಾಟ ಸ್ಮರಿಸಿದ ಸದಸ್ಯರು
ನಿನ್ನೆ ನಿಧನರಾದ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಅವರಿಗೆ ವಿಧಾನಸಭೆಯಲ್ಲಿಂದು ಸಂತಾಪ ನಿರ್ಣಯ ಮಂಡಿಸಿ ಸದಸ್ಯರು ಗೌರವ ಸಲ್ಲಿಸಿದರು. ಎಲ್ಲ ಸದಸ್ಯರು ಒಂದು ನಿಮಿಷ ಮೌನಾಚರಿಸಿ ಗೌರವ ಸಲ್ಲಿಸಿದರು.

ಐಸಿಯು ಉಪಕರಣ, ಪಿಪಿಇ ಕಿಟ್, ಎನ್-95 ಮಾಸ್ಕ್ ಖರೀದಿ ಸೇರಿ 4008.50 ಕೋಟಿ ರೂ. ಪೂರಕ ಅಂದಾಜು ಮಂಡನೆ
ಮಹಾಮಾರಿ ಕೋವಿಡ್ ಸೋಂಕು ನಿಯಂತ್ರಣ ಸಂಬಂಧ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಗೆ ಐಸಿಯು ಉಪಕರಣ, ಎನ್-೯೫, ಪಿಪಿಇ ಕಿಟ್ ಖರೀದಿಗೆ ಒಟ್ಟು ೧,೦೯೦.೬೧ ಕೋಟಿ ರೂ. ಹೆಚ್ಚುವರಿಯಾಗಿ ಒದಗಿಸುವುದು ಸೇರಿ ಒಟ್ಟು ೪೦೦೮.೫೦ ಕೋಟಿ ರೂಪಾಯಿಯನ್ನು ೨೦೨೦-೨೧ನೇ ಸಾಲಿನ ಪೂರಕ ಅಂದಾಜಿನಲ್ಲಿ (ಮೊದಲನೆ ಕಂತು) ಒದಗಿಸಲಾಗಿದೆ.

ವಿಧಾನಸಭೆಯಲ್ಲಿ 2018-19ನೇ ಸಾಲಿನ ಲೆಕ್ಕಪರಿಶೋಧನಾ ಸಮಿತಿ ವರದಿ ಸೇರಿದಂತೆ ವಿವಿಧ ವಿಧೇಯಕಗಳ ಮಂಡನೆ
ರಾಜ್ಯದ ವಿಧಾನಮಂಡಲ ಅಧಿವೇಶನದ ಎರಡನೇ ದಿನವಾದ ಮಂಗಳವಾರ ಭಾರತ ಲೆಕ್ಕ ನಿಯಂತ್ರಕರು ಹಾಗೂ ಮಹಾ ಲೆಕ್ಕ ಪರಿಶೋಧಕರು ನೀಡಿರುವ ವರದಿಗಳು, ಧನ ವಿನಿಯೋಗ ಹಾಗೂ ಹಣಕಾಸು ಲೆಕ್ಕಗಳ ಪರಿಶೋಧನಾ ವರದಿಗಳು, ಕರ್ನಾಟಕ ಭೂ ಸುಧಾರಣಾ ತಿದ್ದುಪಡಿ ವಿಧೇಯಕ, ಕೈಗಾರಿಕೆಗಳ ಸೌಲಭ್ಯ ತಿದ್ದುಪಡಿ ವಿಧೇಯಕ ಸೇರಿದಂತೆ ಹತ್ತಕ್ಕೂ ಹೆಚ್ಚು ವಿಧೇಯಕಗಳನ್ನ ವಿಧಾನಸಭೆಯಲ್ಲಿ ಮಂಡಿಸಲಾಯಿತು.

ಡ್ರಗ್ಸ್ ದಂಧೆ: ವಿಧಾನಸಭಾ ಅಧಿವೇಶನದಲ್ಲಿ ಕಾಂಗ್ರೆಸ್ ಪ್ರಸ್ತಾಪ ಸಾಧ್ಯತೆ
ಈ ತಿಂಗಳ 21 ರಿಂದ ವಿಧಾನಸಭಾ ಅಧಿವೇಶನ ಆರಂಭವಾಗಲಿದ್ದು, ಡ್ರಗ್ಸ್ ದಂಧೆ ಸೇರಿದಂತೆ ಹಲವು ವಿಚಾರಗಳ ಕುರಿತು ಅಧಿವೇಶನದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಹರಿಹಾಯಲು ಕಾಂಗ್ರೆಸ್ ಸಿದ್ಧತೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.

ರಕ್ಷಣೆಗಾಗಿ ಬಲಿಷ್ಠ ಸೈನಿಕನನ್ನು ಗಡಿಗೆ ಕಳಿಸುತ್ತಾರೆ: ಬದಲಾದ ಆಸನದ ಕುರಿತು 'ರೆಬೆಲ್' ಕೈ ನಾಯಕ ಸಚಿನ್ ಪೈಲಟ್ ಸ್ವಾರಸ್ಯಕರ ಹೇಳಿಕೆ
ರಾಜಸ್ಥಾನ ವಿಧಾನಸಭೆಯ ವಿಶೇಷ ಅಧಿವೇಶನ ಆರಂಭವಾಗಿದ್ದು, ಕಾಂಗ್ರೆಸ್ ಬಂಡಾಯಗಾರ ಸಚಿನ್ ಪೈಲಟ್ ಅವರಿಗೆ ಬದಲಾದ ಆಸನವು ಚರ್ಚೆಯ ವಿಷಯವಾಯಿತು.

ಮಣಿಪುರ: ವಿಶ್ವಾಸ ಮತಕ್ಕೆ ಗೈರಾಗಿದ್ದ 8 ಮಂದಿ ಪೈಕಿ ಆರು ಕಾಂಗ್ರೆಸ್ ಶಾಸಕರ ರಾಜಿನಾಮೆ
ಮಣಿಪುರ ವಿಧಾನಸಭೆಯಲ್ಲಿ ವಿಶ್ವಾಸ ಮತಯಾಚನೆಗೆ ಗೈರಾಗಿದ್ದ 8 ಮಂದಿ ಪೈಕಿ ಆರು ಶಾಸಕರು ಸ್ಪೀಕರ್ ಗೆ ರಾಜಿನಾಮೆ ನೀಡಿದ್ದಾರೆ

