Assembly polls

ಎಎಪಿ ಮೂರನೇ ಬಾರಿಗೆ ಅಧಿಕಾರಕ್ಕೆ ಬರುವುದು ಎಲ್ಲರಿಗೂ ಗೊತ್ತಿದೆ- ಕಾಂಗ್ರೆಸ್
ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಆಪ್ ನಾಗಾಲೋಟದಲ್ಲಿ ಮುನ್ನಡೆ ಕಾಯ್ದುಕೊಂಡಿರುವಂತೆ ಆ ಪಕ್ಷವನ್ನು ಕಾಂಗ್ರೆಸ್ ಮುಖಂಡ ಅಧೀರ್ ರಂಜನ್ ಚೌಧರಿ ಅಭಿನಂದಿಸಿದ್ದಾರೆ

ದೆಹಲಿ ಚುನಾವಣಾ ಫಲಿತಾಂಶದ ನಡುವೆ ಶಾಹೀನ್ ಬಾಗ್ ನಲ್ಲಿ ಮೌನ ಪ್ರತಿಭಟನೆ
ದೆಹಲಿ ವಿಧಾನಸಭಾ ಚುನಾವಣೆಗೆ ಮತ ಎಣಿಕೆ ನಡೆಯುತ್ತಿರುವಂತೆ ರಾಜಧಾನಿ ಶಾಹೀನ್ ಬಾಗ್ ನಲ್ಲಿ ರಾಷ್ಟ್ರೀಯ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಕಳೆದ ಎರಡು ತಿಂಗಳಿನಿಂದ ಪ್ರತಿಭಟನೆ ನಡೆಸುತ್ತಿರುವ ಮಹಿಳಾ ಪ್ರತಿಭಟನಾಕಾರರು ಇಂದು ಮೌನ ಪ್ರತಿಭಟನೆ ನಡೆಸುತ್ತಿದ್ದಾರೆ.

ದೆಹಲಿ ಚುನಾವಣೆ: ಎಎಪಿ ಪ್ರಚಂಡ ಗೆಲುವು ದಾಖಲಿಸಲಿದೆ- ಸಂಜಯ್ ಸಿಂಗ್
ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಪ್ರಚಂಡ ಗೆಲುವು ದಾಖಲಿಸಲಿದೆ ಎಂದು ಎಎಪಿ ಮುಖಂಡ ಸಂಜಯ್ ಸಿಂಗ್ ಹೇಳಿದ್ದಾರೆ.

ದೆಹಲಿಯಲ್ಲಿ ಆಪ್ ಆರ್ಭಟ: ಗೆಲುವಿನ ನಿರೀಕ್ಷೆಯಲ್ಲಿ ಕೇಜ್ರಿವಾಲ್ ಪಕ್ಷ
ಇಡೀ ರಾಷ್ಟ್ರ ಕುತುಹೂಲದಿಂದ ಎದುರು ನೋಡುತ್ತಿರುವ ದೆಹಲಿ ವಿಧಾನಸಭಾ ಚುನಾವಣೆ ಮತ ಎಣಿಕೆ ಕಾರ್ಯ ನಡೆಯುತ್ತಿದ್ದು, ಮೊದಲ ಹಂತದಲ್ಲಿ ಆಪ್ ಆರ್ಭಟ ಮುಂದುವರೆದಿದೆ.

ಒಂದು ವೇಳೆ ಕೇಜ್ರಿವಾಲ್ ಗೆಲುವಾದರೆ ಅಭಿವೃದ್ಧಿ ಅಜೆಂಡಾಕ್ಕೆ ಸಿಕ್ಕ ಜಯ- ಅಧೀರ್ ರಂಜನ್ ಚೌದರಿ
ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಒಂದು ವೇಳೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಜಯ ಗಳಿಸಿದರೆ ಅಭಿವೃದ್ಧಿ ಅಜೆಂಡಾಕ್ಕೆ ದೊರೆತ ಗೆಲುವಾಗಲಿದೆ. ಬಿಜೆಪಿ ಸೋಲಿನೊಂದಿಗೆ ಕೋಮು ಅಜೆಂಡಾಕ್ಕೆ ಕೊನೆಯಾಗಲಿದೆ ಎಂದು ಕಾಂಗ್ರೆಸ್ ಮುಖಂಡ ಅಧಿರ್ ರಂಜನ್ ಚೌದರಿ ಹೇಳಿದ್ದಾರೆ.

ದೆಹಲಿ: ಚುನಾವಣಾ ಫಲಿತಾಂಶದ ಆಧಾರದ ಮೇಲೆ ಕಾಂಗ್ರೆಸ್ -ಎಎಪಿ ಮೈತ್ರಿ ಸಾಧ್ಯತೆ- ಪಿ ಸಿ ಚಾಕೋ
ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಆಡಳಿತಾರೂಢ ಎಎಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂಬ ಚುನಾವಣಾ ಪೂರ್ವ ಸಮೀಕ್ಷೆಗಳ ಬೆನ್ನಲ್ಲೇ ಕಾಂಗ್ರೆಸ್ ಹಾಗೂ ಎಎಪಿ ಮೈತ್ರಿ ಸಾಧ್ಯತೆ ಬಗ್ಗೆ ಹಿರಿಯ ಕಾಂಗ್ರೆಸ್ ಮುಖಂಡ ಪಿ ಸಿ ಚಾಕೋ ಹೇಳಿದ್ದಾರೆ.

ದೆಹಲಿ ಚುನಾವಣೆ: ಟ್ವಿಟರ್ ನಲ್ಲಿ 'ಹಿಂದೂ-ಮುಸ್ಲಿಂ' ವಿಡಿಯೋ ಶೇರ್ ಮಾಡಿದ ಕೇಜ್ರಿವಾಲ್ ಗೆ ನೋಟಿಸ್ ನೀಡಿದ ಆಯೋಗ
ಪ್ರತಿಪಕ್ಷಗಳನ್ನು ಗುರಿಯಾಗಿಟ್ಟುಕೊಂಡು ಹಿಂದೂ- ಮುಸ್ಲಿಂ ವಿಡಿಯೋವೊಂದನ್ನು ಟ್ವೀಟರ್ ನಲ್ಲಿ ಶೇರ್ ಮಾಡಿರುವ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಚುನಾವಣಾ ಆಯೋಗ ನೋಟಿಸ್ ನೀಡಿದ್ದು, ಇದು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಎಂದು ಹೇಳಿದೆ

ದೆಹಲಿ ವಿಧಾನಸಭಾ ಚುನಾವಣೆಗೆ ವೇದಿಕೆ ಸಜ್ಜು: ಇವಿಎಂ ತಿರುಚಲು ಅಸಾಧ್ಯ-ಮುಖ್ಯ ಚುನಾವಣಾಧಿಕಾರಿ
70 ಸದಸ್ಯ ಬಲದ ದೆಹಲಿ ವಿಧಾನಸಭಾ ಚುನಾವಣೆಗೆ ವೇದಿಕೆ ಸಜ್ಜುಗೊಂಡಿದ್ದು, ರಾಷ್ಟ್ರ ರಾಜಧಾನಿಯಾದ್ಯಂತ ಬಿಗಿ ಭದ್ರತೆ ಏರ್ಪಡಿಸಲಾಗಿದೆ. ಶಾಹೀನ್ ಬಾಗ್ ಮತ್ತಿತರ ಸೂಕ್ಷ್ಮ ಪ್ರದೇಶಗಳಲ್ಲಿ ವಿಶೇಷ ನಿಗಾ ವಹಿಸಲಾಗಿದೆ

ವಾರದಲ್ಲಿ ಎರಡನೇ ಬಾರಿ, ಬಿಜೆಪಿ ಸಂಸದ ಪರ್ವೇಶ್ ವರ್ಮಾ 24 ಗಂಟೆ ಪ್ರಚಾರ ಮಾಡದಂತೆ ಆಯೋಗ ನಿರ್ಬಂಧ
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಭಯೋತ್ಪಾದಕ ಹೇಳಿಕೆ ನೀಡಿದ್ದ ಬಿಜೆಪಿ ಸಂಸದ ಪರ್ವೇಶ್ ವರ್ಮಾ 24 ಗಂಟೆ ಚುನಾವಣಾ ಪ್ರಚಾರ ಮಾಡದಂತೆ ಆಯೋಗ ನಿರ್ಬಂಧ ವಿಧಿಸಿದೆ.

