Assembly polls

2023ರ ವಿಧಾನಸಭೆ ಚುನಾವಣೆ: ಚಿಕ್ಕನಾಯಕನಹಳ್ಳಿಗೆ ನಾನೇ ಬಿಜೆಪಿ ಅಭ್ಯರ್ಥಿ; ಮಾಧುಸ್ವಾಮಿಗೆ ಮಾಜಿ ಶಾಸಕ ಕಿರಣ್ ಕುಮಾರ್ ಟಾಂಗ್!
ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ಅಧ್ಯಕ್ಷ, ಮಾಜಿ ಶಾಸಕ ಕೆ.ಎಸ್.ಕಿರಣ್ ಕುಮಾರ್ ಅವರು 2023ರ ವಿಧಾನಸಭಾ ಚುನಾವಣಾ ಪ್ರಚಾರವನ್ನು ಚಿಕ್ಕನಾಯಕನಹಳ್ಳಿಯಿಂದ ಪ್ರಾರಂಭಿಸಿದ್ದಾರೆ

ಬಿಜೆಪಿ ಭದ್ರಕೋಟೆ, ಇಂದಿರಾಗಾಂಧಿಗೆ ರಾಜಕೀಯ ಪುನರ್ಜನ್ಮ ನೀಡಿದ ಚಿಕ್ಕಮಗಳೂರಿನಿಂದ ಸ್ಪರ್ಧಿಸಲು ಸಿದ್ದರಾಮಯ್ಯಗೆ ಒತ್ತಾಯ
2023ರ ವಿಧಾನಸಭೆ ಚುನಾವಣೆಯಲ್ಲಿ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿಯುವಂತೆ ಸಿದ್ದರಾಮಯ್ಯ ಅವರಿಗೆ ಕರ್ನಾಟಕ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಸಚಿನ್ ಮೀಗಾ ಮನವಿ ಸಲ್ಲಿಸಿದ್ದಾರೆ.

ಕಾಂಗ್ರೆಸ್ ಗೆ ರಾಜಕೀಯ ವೇದಿಕೆಯಾಗಲಿದ್ಯಾ ಸಿದ್ದರಾಮೋತ್ಸವ? ಒಂದೇ ಫ್ಲೈಟ್ ನಲ್ಲಿ ರಾಹುಲ್ -ಡಿಕೆಶಿ ಆಗಮನ; ಚುನಾವಣೆ ಸಂಬಂಧ ಚರ್ಚೆ?
ಕಾಂಗ್ರೆಸ್ ಪುನಃಶ್ಚೇತನ ಯಾತ್ರೆ ರಾಜ್ಯದಿಂದ ಪುನಾರಂಭವಾಗಲಿದೆ ಎಂಬ ಭರವಸೆಗೆ ಅಡ್ಡಿಯಾಗುತ್ತಿರುವ ಪಕ್ಷ ದೊಳಗಿನ ಭಿನ್ನಾಭಿಪ್ರಾಯ ವಿಸ್ತರಣೆ ತಡೆಗೆ ಹೈಕಮಾಂಡ್ ಮುಂದಾಗಿದೆ.

ಸ್ವಂತ ಬಲದ ಮೇಲೆ 'ಗದ್ದುಗೆ' ಏರುವ ತವಕ: ಉತ್ತರ 'ದಂಡಯಾತ್ರೆ'ಗೆ ಜೆಡಿಎಸ್ ಸಜ್ಜು!
ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗೆದ್ದು ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಲು ಜೆಡಿಎಸ್ ರಣತಂತ್ರ ರೂಪಿಸುತ್ತಿದೆ.

ಬಿಜೆಪಿ ಚಿಂತನ-ಮಂಥನ: ಮುಂದಿನ ಚುನಾವಣೆಗೆ ಕಮಲಪಡೆ ಕಾರ್ಯತಂತ್ರ; ಸಮುದಾಯಗಳನ್ನು ಸೆಳೆಯಲು ಕಸರತ್ತು
2023ರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವನ್ನು ಸ್ವಂತ ಬಲದ ಮೇಲೆ ಅಧಿಕಾರಕ್ಕೆ ತರಲು ಬಿಜೆಪಿ ಎಸ್ಸಿ, ಎಸ್ಟಿ ಹಾಗೂ ಹಿಂದುಳಿದ ವರ್ಗಗಳು ಸೇರಿದಂತೆ ಎಲ್ಲ ಸಮುದಾಯಗಳ ಮತ ಸೆಳೆಯಲು ಕಾರ್ಯತಂತ್ರ ರೂಪಿಸುತ್ತಿದೆ.

ಬಿಜೆಪಿ ಆಂತರಿಕ ಸಮೀಕ್ಷೆ ವರದಿ: ಬೆಳಗಾವಿಯ ಹಲವು ಶಾಸಕರಿಗೆ ವಿಧಾನಸಭೆ ಚುನಾವಣೆಯಿಂದ ಗೇಟ್ ಪಾಸ್; ಹೊಸ ಮುಖಗಳಿಗೆ ಮಣೆ!
ಹದಿನೆಂಟು ವಿಧಾನಸಭೆ ಕ್ಷೇತ್ರಗಳಿರುವ ಬೆಳಗಾವಿಯಲ್ಲಿ ಬಿಜೆಪಿಯ ಶಾಸಕರು ಮತ್ತು ಪ್ರಭಾವಿ ನಾಯಕರುಗಳಿದ್ದು, ಇವರಲ್ಲಿ ಕೆಲವರಿಗೆ 2023ರ ಚುನಾವಣೆಯಲ್ಲಿ ಟಿಕೆಟ್ ನಿರಾಕರಿಸುವ ಸಾಧ್ಯತೆಗಳು ದಟ್ಟವಾಗಿವೆ.

ವಿಧಾನಸಭೆ ಚುನಾವಣೆಗೂ ಮುನ್ನ ಇಮೇಜ್ ಸರಿಪಡಿಸಿಕೊಳ್ಳಲು ಬಿಜೆಪಿ ರಣತಂತ್ರ: ನಂದಿ ಬೆಟ್ಟದ ಬಳಿ ಚಿಂತನ-ಮಂಥನ ಸಭೆ!
ಮುಂದಿನ ವರ್ಷ ನಡೆಯಲಿರುವ ರಾಜ್ಯ ವಿಧಾನಸಭೆ ಚುನವಣೆ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ಎರಡು ದಿನಗಳ ಚಿಂತನಾ ಮಂಥನ ಸಭೆ ಹಮ್ಮಿಕೊಂಡಿದೆ.

ಕರ್ನಾಟಕ ವಿಧಾನಸಭಾ ಕ್ಷೇತ್ರಗಳನ್ನು ಬಲಪಡಿಸಲು ರಾಜ್ಯದ 25 ಬಿಜೆಪಿ ಸಂಸದರ ಪಣ!
ರಾಜ್ಯ ವಿಧಾನಸಭೆ ಚುನಾವಣೆಗೆ ಇನ್ನೂ 8 ತಿಂಗಳು ಸಮಯವಿದ್ಗು, ಈಗಾಗಲೇ ಬಿಜೆಪಿ ತಳಮಟ್ಟದ ಸಂಘಟನೆ ಆರಂಭಿಸಿದೆ. ಪಕ್ಷ ಸಂಘಟನೆಗಾಗಿ ಬಿಜೆಪಿ ಮತ್ತೊಂದು ತಂತ್ರ ರೂಪಿಸಿದೆ.

ರಾಜ್ಯಕ್ಕೆ ಪ್ರಧಾನಿ ಮೋದಿ ಭೇಟಿ: ಮುಂಬರುವ ಬಿಬಿಎಂಪಿ, ಅಸೆಂಬ್ಲಿ ಚುನಾವಣೆ ಮೇಲೆ ಪರಿಣಾಮ ಸಾಧ್ಯತೆ
ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ರಾಜ್ಯದಲ್ಲಿ 33,000 ಕೋಟಿ ರೂ.ಗಳ ಯೋಜನೆಗಳಿಗೆ ಚಾಲನೆ ನೀಡುವ ಮೂಲಕ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಅಗತ್ಯವಾದ ಉತ್ತೇಜನವನ್ನು ನೀಡಿದರು.

