assembly election

ಅಲುಗಾಡುತ್ತಿದೆ ಬಿಜೆಪಿ ಲಿಂಗಾಯತ ಮೂಲ: ಸಂತೋಷ್ 'ಕು'ತಂತ್ರಕ್ಕೆ ಕೇಸರಿ ಪಡೆ ವಿಲವಿಲ; ಶೆಟ್ಟರ್ ಸೇರ್ಪಡೆಯಿಂದ 'ಕೈ'ಗೆ ಆನೆ ಬಲ!
ಶೆಟ್ಟರ್ ಅವರದ್ದು ರಾಜಕೀಯದಲ್ಲಿ 40 ವರ್ಷಗಳ ತಪಸ್ಸು, ಅವರು ಪಕ್ಕಾ ಜನಸಂಘ-ಆರ್‌ಎಸ್‌ಎಸ್ ಕುಟುಂಬದಿಂದ ಬಂದವರಾಗಿದ್ದರು. ಶೆಟ್ಟರ್ ಅವರ ತಂದೆ ಮೇಯರ್ ಆಗಿದ್ದರು ಮತ್ತು ಅವರ ಚಿಕ್ಕಪ್ಪ ಕೂಡ ರಾಜಕೀಯದಲ್ಲಿದ್ದರು.

ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿ ಬೆಳಗಾವಿಯ ಐವರು ಹಾಲಿ ಶಾಸಕರು: ವಿಶಿಷ್ಟ ದಾಖಲೆ ಸೃಷ್ಟಿಸಲು ರಮೇಶ್ ಜಾರಕಿಹೊಳಿ ಸಜ್ಜು!
ಬಿಜೆಪಿಯ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಸತತ ಆರನೇ ಗೆಲುವು ದಾಖಲಿಸುವ ಹಾದಿಯಲ್ಲಿದ್ದರೆ, ಅವರ ಸಹೋದರ ಗೋಕಾಕ್ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಏಳು ಚುನಾವಣೆಗಳಲ್ಲಿ ಗೆದ್ದು ವಿಶಿಷ್ಟ ದಾಖಲೆ ಸೃಷ್ಟಿಸಲು ಸಜ್ಜಾಗಿದ್ದಾರೆ.

ಮೂಢನಂಬಿಕೆಗೆ ಸೆಡ್ಡು: ಸೂರ್ಯಗ್ರಹಣದಂದು ಆರ್‌ಟಿಐ ಕಾರ್ಯಕರ್ತ ಟಿ. ನರಸಿಂಹ ಮೂರ್ತಿ ನಾಮಪತ್ರ ಸಲ್ಲಿಕೆ!
ಮೇ 10 ರಂದು ನಡೆಯುವ ರಾಜ್ಯ ವಿಧಾನಸಭೆ ಚುನಾವಣೆಗೆ ಏಪ್ರಿಲ್ 20 ರಂದು ಸೂರ್ಯಗ್ರಹಣದ ವೇಳೆ ನಾಮಪತ್ರ ಸಲ್ಲಿಸುವುದಾಗಿ ವಿಚಾರವಾದಿ ಹಾಗೂ ಆರ್‌ಟಿಐ ಕಾರ್ಯಕರ್ತ ಟಿ ನರಸಿಂಹ ಮೂರ್ತಿ ತಿಳಿಸಿದ್ದಾರೆ.

ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದಿಂದ ಶೆಟ್ರು: ಶಿಗ್ಗಾಂವಿಯಿಂದ ಸಿಎಂ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ಯಾರು?
ಕಾಂಗ್ರೆಸ್ ತನ್ನ 15 ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ಮಂಗಳವಾರ ಬಿಡುಗಡೆ ಮಾಡುವ ಸಾಧ್ಯತೆಯಿದೆ. ಕಾಂಗ್ರೆಸ್‌ಗೆ ಸೇರ್ಪಡೆಯಾದ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ.

ಅಸಮಾಧಾನ ಮರೆತು ಚುನಾವಣೆಯನ್ನು ಒಗ್ಗಟ್ಟಾಗಿ ಎದುರಿಸಿ: ಕಾರ್ಯಕರ್ತರಿಗೆ ಬಿ.ಎಲ್ ಸಂತೋಷ್ ಕರೆ
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಉತ್ತಮ ಪ್ರದರ್ಶನ ನೀಡಲಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ ಭಾನುವಾರ ಭವಿಷ್ಯ ನುಡಿದಿದ್ದಾರೆ.

ಜೆಡಿಎಸ್ ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆ: ಟಿಕೆಟ್ ಘೋಷಣೆಗೂ ಮುನ್ನವೇ ಸ್ವರೂಪ್ಗೆ ಬಿ ಫಾರಂ
ಮೇ 10 ರಂದು ನಡೆಯಲಿರುವ ವಿಧಾನಸಭೆ ಚುನಾವಣೆಗೆ ಜೆಡಿಎಸ್ ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಶುಕ್ರವಾರ ಬಿಡುಗಡೆ ಮಾಡಿದ್ದು, ತೀವ್ರ ಕುತೂಹಲ ಕೆರಳಿಸಿದ್ದ ಹಾಸನ ಕ್ಷೇತ್ರದಲ್ಲಿ ಭವಾನಿ ರೇವಣ್ಣ ಅವರಿಗೆ ಟಿಕೆಟ್ ಕೈತಪ್ಪಿದೆ.

ಬಿಜೆಪಿಯಲ್ಲಿ ಲಿಂಗಾಯತ ನಾಯಕರ ಸಾಮ್ರಾಜ್ಯ ಪತನ: ವಯಸ್ಸಿನ ನೆಪ ಹೇಳಿ ನೇಪಥ್ಯಕ್ಕೆ ಸಮರ್ಥ ಮುಖಂಡರು!
ಯಡಿಯೂರಪ್ಪ ಈಗಾಗಲೇ 75 ವರ್ಷ ದಾಟಿರುವಾಗ ಅವರನ್ನು ಸಿಎಂ ಮಾಡುವುದರ ಹಿಂದೆ ಬಿಜೆಪಿಯ ತರ್ಕವನ್ನು ರಾಜ್ಯದ ಹಲವಾರು ನಾಯಕರು ಪ್ರಶ್ನಿಸಿದಾಗಲೂ, ವಯಸ್ಸನ್ನು ಒಂದು ಅಂಶವಾಗಿ ಉಲ್ಲೇಖಿಸಿ, ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ತೊರೆಯುವಂತೆ ಮಾಡಲಾಯಿತು.

ವಿಧಾನಸಭೆ ಚುನಾವಣೆಯಲ್ಲಿ ಹಳೆ ಮುಖಗಳಿಗೆ ಮತ್ತೆ ಬಿಜೆಪಿ ಮಣೆ: ರಾಜ್ಯ ರಾಜಧಾನಿ ಗೆಲ್ಲುವ ಹೊಣೆ!
ರಾಜ್ಯ ರಾಜಧಾನಿಯಲ್ಲಿ ತನ್ನ ಹಿಡಿತವನ್ನು ಉಳಿಸಿಕೊಳ್ಳಲು ಆಡಳಿತಾರೂಢ ಬಿಜೆಪಿ ಕಾರ್ಯತಂತ್ರ ರೂಪಿಸಿದೆ, ತನ್ನ ಹೆಚ್ಚಿನ ಹಾಲಿ ಶಾಸಕರಿಗೆ ಟಿಕೆಟ್ ನೀಡಿದೆ ಮತ್ತು ಬಿಜೆಪಿಯೇತರ ಶಾಸಕರು ಪ್ರತಿನಿಧಿಸುವ ಕ್ಷೇತ್ರಗಳಲ್ಲಿ ಮಾಜಿ ಬಿಬಿಎಂಪಿ ಕೌನ್ಸಿಲರ್‌ಗಳನ್ನು ಕಣಕ್ಕಿಳಿಸುತ್ತಿದೆ.

ಬಿಜೆಪಿಯಲ್ಲಿ 'ಬಂಡಾಯ'ದ ಬಿರುಗಾಳಿ: ಟಿಕೆಟ್ ವಂಚಿತರ ರೋಷಾವೇಶ; ಬೆಂಬಲಿಗರ ಆಕ್ರೋಶ
ಹಲವು ಕ್ಷೇತ್ರಗಳಲ್ಲಿ ಬಿಜೆಪಿ ಕಾರ್ಯಕರ್ತರು ತಮ್ಮ ನಾಯಕರಿಗೆ ಟಿಕೆಟ್ ನಿರಾಕರಿಸಿದ ಹಿನ್ನೆಲೆಯಲ್ಲಿ ಪಕ್ಷದ ನಾಯಕತ್ವದ ವಿರುದ್ಧ ಪ್ರತಿಭಟನೆ ನಡೆಸಿದರು. ಪಕ್ಷದ ವಿರುದ್ಧ ಘೋಷಣೆಗಳನ್ನು ಕೂಗಿ ರಸ್ತೆಗಳಲ್ಲಿ ಟೈರ್‌ಗಳಿಗೆ ಬೆಂಕಿ ಹಚ್ಚಿದರು. ಕೆಲವರು ತಮ್ಮ ನಾಯಕರಿಗೆ ಮಾಡಿದ ಅನ್ಯಾಯಕ್ಕಾಗಿ ಕಣ್ಣೀರು ಹಾಕಿದರು.

