Ashok

ಕಾಳಸಂತೆಯಲ್ಲಿ ಸಬ್ಸಿಡಿ ಯೂರಿಯಾ ಮಾರಾಟ: ಸರ್ಕಾರದ ವಿರುದ್ಧ BJP ವಾಗ್ದಾಳಿ
ಕೇಂದ್ರ ಸರ್ಕಾರವು ರೈತರಿಗೆ ಯೂರಿಯಾವನ್ನು ಕೆಜಿಗೆ 280 ರೂ. ಸಬ್ಸಿಡಿ ಬೆಲೆಯಲ್ಲಿ ನೀಡುತ್ತಿದೆ. ಆದರೆ, ಅದನ್ನು ಕಾಳಸಂತೆಯಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿದೆ.

ಸರ್ಕಾರ ರಚನೆಗೆ ಕೆಲ ಕಾಂಗ್ರೆಸ್ ನಾಯಕರು ನಮ್ಮನ್ನು ಸಂಪರ್ಕಿಸಿದ್ದಾರೆ: ಆರ್.ಅಶೋಕ್ ಹೊಸ ಬಾಂಬ್
ಸಿಎಂ ಹುದ್ದೆ ಗುದ್ದಾಟಕ್ಕಾಗಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ ನಡುವಿನ ಸಂಘರ್ಷ ನೋಡಿದರೆ ಯಾವುದೇ ಸಂದರ್ಭದಲ್ಲಿ ಏನು ಬೇಕಾದರೂ ಆಗಬಹುದು.

ರಾಜ್ಯ ರಾಜಕಾರಣ ಕುರಿತು ಹೈಕಮಾಂಡ್ ನಿರ್ಧಾರ ಎಂದ ಖರ್ಗೆ: ಸುಮ್ಮನೆ ನಾಮಕಾವಸ್ತೆಗೆ ಕಾಂಗ್ರೆಸ್ ಅಧ್ಯಕ್ಷರಾಗಿದ್ದೀರಿ ಎಂದು BJP-JDS ವ್ಯಂಗ್ಯ
ರಾಜ್ಯ ರಾಜಕಾರಣದ ಪರಿಸ್ಥಿತಿ ಬಗ್ಗೆ "ನನಗೇನೂ ಗೊತ್ತಿಲ್ಲ, ನನ್ನನೇನೂ ಕೇಳಬೇಡಿ" ಎನ್ನುವ ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆಯಲ್ಲಿರುವ ಅಸಹಾಯಕತೆ ಕಾಂಗ್ರೆಸ್ ಪಕ್ಷದಲ್ಲಿ ಅವರಿಗಿರುವ ನಿಜವಾದ ಸ್ಥಾನಮಾನವನ್ನು ತೋರಿಸುತ್ತದೆ.

ಎರಡೂವರೆ ವರ್ಷಗಳ ಕಾಂಗ್ರೆಸ್ ಆಡಳಿತ ಕನ್ನಡಿಗರಿಗೆ ಕೊಟ್ಟಿದ್ದು ಕೇವಲ ದೌರ್ಭಾಗ್ಯಗಳನ್ನ: ಆರ್.ಅಶೋಕ್
ಕಾಂಗ್ರೆಸ್ ಸರ್ಕಾರ ಜನರ ವಿಶ್ವಾಸವನ್ನು ಸಂಪೂರ್ಣವಾಗಿ ಕಳೆದುಕೊಂಡಿದೆ. ರೈತರು ಆಕ್ರೋಶದಲ್ಲಿದ್ದಾರೆ, ಯುವಕರು ನಿರುದ್ಯೋಗ, ಅಭಿವೃದ್ಧಿ ಶೂನ್ಯತೆಯಿಂದ ಬೇಸತ್ತಿದ್ದಾರೆ ಮತ್ತು ಕಾನೂನು ಸುವ್ಯವಸ್ಥೆ ಕುಸಿತದಿಂದ ಜನಸಾಮಾನ್ಯರು, ಮಹಿಳೆಯರು ಕಂಗಾಲಾಗಿದ್ದಾರೆ.

ವೋಟಿಗಾಗಿ ಮತಾಂಧರ ಮೇಲೆ ಮೃದು ಧೋರಣೆ ತೋರುವುದು ದೇಶಕ್ಕೆ ಒಳ್ಳೆಯದಲ್ಲ: ಆರ್.ಅಶೋಕ್
ರಾಜ್ಯ ಸರ್ಕಾರ ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿ ಜೈಲಿನಲ್ಲಿರುವ ಕೈದಿಗಳು ಮೊಬೈಲ್ ಫೋನ್ ಬಳಸುತ್ತಿರುವ ವೀಡಿಯೋ ಹೇಗೆ ಸೋರಿಕೆಯಾಯಿತು ಎಂಬುದರ ಬಗ್ಗೆ ತನಿಖೆ ನಡೆಸುತ್ತಿದೆಯೇ ವಿನಃ ಅವರಿಗೆ ಫೋನ್ ಹೇಗೆ ಸಿಕ್ಕಿತು ಎಂಬುದರ ಬಗ್ಗೆ ತನಿಖೆ ನಡೆಸುತ್ತಿಲ್ಲ.

ಮೂಲಸೌಕರ್ಯ ಸಮಸ್ಯೆ ಸರಿಪಡಿಸಲಾಗದಿದ್ದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ: ಡಿ.ಕೆ ಶಿವಕುಮಾರ್'ಗೆ ಆರ್.ಅಶೋಕ್
ನಗರದ ಮೂಲಸೌಕರ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಸರಿಪಡಿಸಲು ಶಿವಕುಮಾರ್ ವಿಫಲರಾದರೆ, ಬೆಂಗಳೂರು ಅಭಿವೃದ್ಧಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು.

ಟೆಕ್ ಶೃಂಗಸಭೆ ಬೆಂಗಳೂರಿಗೆ ಮತ್ತೊಂದು ಜಾಗತಿಕ ಮುಜುಗರ ತರುವುದಿಲ್ಲವೆಂಬ ಗ್ಯಾರೆಂಟಿ ನೀಡುವಿರಾ?
ಸಚಿವ ಪ್ರಿಯಾಂಕ್ ಖರ್ಗೆ ಅವರು ಆರ್‌ಎಸ್‌ಎಸ್ ಬಗ್ಗೆ ಟೀಕಿಸುವ ಹೊರತಾಗಿಯೂ ತಮಗೆ ಒಂದು ಖಾತೆಯ ಜವಾಬ್ದಾರಿ ಇದೆ ಎಂದು ಕಡೆಗೂ ನೆನಪಿಸಿಕೊಂಡಿದ್ದಕ್ಕೆ ಸಂತೋಷ.

ಟನಲ್ ರಸ್ತೆ ಯೋಜನೆ ಸಮಿತಿ ಅಧ್ಯಕ್ಷನಾಗಲು ಸಿದ್ಧ, ಮೊದಲು ನಗರದ ಕಸ-ರಸ್ತೆಗುಂಡಿ ಸಮಸ್ಯೆ ಬಗೆಹರಿಸಿ: ಡಿ.ಕೆ ಶಿವಕುಮಾರ್'ಗೆ ಆರ್.ಅಶೋಕ್ ಸವಾಲು
ನನ್ನನ್ನೇ ಸಮಿತಿ ಅಧ್ಯಕ್ಷರನ್ನಾಗಿ ಮಾಡುತ್ತಾರೆಂದು ಹೇಳಿದ್ದಾರೆ. ಇಂತಹ ಯೋಜನೆ ಮಾಡಲು ಇವರಿಗೆ ನೈಪುಣ್ಯತೆ ಇದೆಯೇ ಎಂದು ಸಾಬೀತುಪಡಿಸಲು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ರಸ್ತೆಗುಂಡಿಗಳನ್ನು ಮುಚ್ಚಿಸಲಿ. ಗುಂಡಿ ಮುಚ್ಚಲು ಆಗದವರು ಸುರಂಗ ಹೇಗೆ ಮಾಡುತ್ತಾರೆ?

ಸುರಂಗ ಯೋಜನೆ ಮೂಲಕ ಕಾಂಗ್ರೆಸ್ ಲಾಲ್‌ಬಾಗ್‌ಗೆ ಸಮಾಧಿ ಅಗೆಯುತ್ತಿದೆ: ಆರ್.ಅಶೋಕ್ ಆಕ್ರೋಶ
ಇದು ಟನಲ್ ರಸ್ತೆ ಅಲ್ಲ ವಿಐಪಿ ಕಾರಿಡಾರ್ ಆಗುತ್ತದೆ. ಶೇ.90ರಷ್ಟು ಬಡವರು, ಮಧ್ಯಮ ವರ್ಗದವರು ಬಳಸುವ ಬೈಕ್, ಸೈಕಲ್‍ಗೆ ಪ್ರವೇಶವಿಲ್ಲ. ಕೇವಲ ಕಾರಿಗೆ ಮಾತ್ರ ಪ್ರವೇಶವಿದೆ. ಹಾಗಾಗಿ ಇದು ವಿಐಪಿ ರಸ್ತೆ.

