Arvind Kejriwal

ಅರವಿಂದ ಕೇಜ್ರಿವಾಲ್ ತೂಕ ಇಳಿಕೆ; ಅವರ ಆರೋಗ್ಯ ಅಪಾಯದಲ್ಲಿ: BJP ವಿರುದ್ಧ ಸಚಿವೆ ಅತಿಶಿ ಆರೋಪ
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಮಾರ್ಚ್ 21 ರಂದು ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೊಳಗಾದಾಗಿನಿಂದ ವೇಗವಾಗಿ ತೂಕವನ್ನು ಕಳೆದುಕೊಳ್ಳುತ್ತಿದ್ದಾರೆ ಮತ್ತು ಅವರನ್ನು ಜೈಲಿನಲ್ಲಿ ಇರಿಸುವ ಮೂಲಕ ಬಿಜೆಪಿ ಅವರ ಆರೋಗ್ಯವನ್ನು ಅಪಾಯಕ್ಕೆ ಸಿಲುಕಿಸಿದೆ ಎಂದು ಸಚಿವೆ ಅತಿಶಿ ಬುಧವಾರ ಆರೋಪಿಸಿದ್ದಾರೆ.

ಕೇಜ್ರಿವಾಲ್ ಸಿಎಂ ಆಗಿ ಮುಂದುವರಿಯಬೇಕು: ಪತ್ನಿ ಸುನೀತಾಗೆ ಆಪ್ ಶಾಸಕರ ಆಗ್ರಹ
ಅರವಿಂದ್ ಕೇಜ್ರಿವಾಲ್ ಅವರು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಯಬಾರದು ಮತ್ತು ಜೈಲಿನಿಂದಲೇ ಸರ್ಕಾರ ನಡೆಸಬೇಕು ಎಂದು ಎಎಪಿ ಶಾಸಕರು ಪ್ರತಿಪಾದಿಸಿದರು.

ತಿಹಾರ್ ಜೈಲಿನಲ್ಲಿ ರಾತ್ರಿ ಕಳೆದ ಅರವಿಂದ ಕೇಜ್ರಿವಾಲ್, ವೈದ್ಯಕೀಯ ಪರೀಕ್ಷೆಯಲ್ಲಿ ಕಡಿಮೆ ಸಕ್ಕರೆ ಮಟ್ಟ ಪತ್ತೆ!
ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಏಪ್ರಿಲ್ 15 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಳಗಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ತಿಹಾರ್ ಜೈಲಿನಲ್ಲಿ ಮೊದಲ ರಾತ್ರಿ ಕಳೆದಿದ್ದಾರೆ. 14X8 ಅಡಿ ಸೆಲ್ನಲ್ಲಿದ್ದ ಅವರು, ತಮ್ಮ ಸೆಲ್ನಲ್ಲೇ ನಡೆದಾಡುತ್ತಿದ್ದರು ಮತ್ತು ಸ್ವಲ್ಪ ಸಮಯ ಮಾತ್ರ ನಿದ್ರಿಸಿದರು ಎಂದು ಜೈಲು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಬಕಾರಿ ನೀತಿ ಪ್ರಕರಣ: ದೆಹಲಿ ಸಿಎಂ ಕೇಜ್ರಿವಾಲ್ ಗೆ 15 ದಿನ ನ್ಯಾಯಾಂಗ ಬಂಧನ
ಮನಿ ಲಾಂಡರಿಂಗ್ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಸೋಮವಾರ ದೆಹಲಿ ನ್ಯಾಯಾಲಯ 15 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ದೆಹಲಿಗೆ ರಾಜ್ಯ ಸ್ಥಾನಮಾನ, ಉಚಿತ ವಿದ್ಯುತ್: ಅರವಿಂದ್ ಕೇಜ್ರಿವಾಲ್ ನೀಡಿದ 6 ಚುನಾವಣಾ ಭರವಸೆಗಳು ಇಲ್ಲಿವೆ...
ಮುಂಬರುವ ಲೋಕಸಭೆ ಚುನಾವಣೆಗೆ ಮುನ್ನ ಆರು ಚುನಾವಣಾ ಭರವಸೆಗಳನ್ನು ಘೋಷಿಸಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ದೆಹಲಿಗೆ ಸಂಪೂರ್ಣ ರಾಜ್ಯದ ಸ್ಥಾನಮಾನ ಮತ್ತು ದೇಶದ ಪ್ರತಿಯೊಬ್ಬರಿಗೂ ಉಚಿತ ಆರೋಗ್ಯ ಸೇವೆ ನೀಡುವುದು ಸೇರಿದಂತೆ ಆರು ಭರವಸೆಗಳನ್ನು ನೀಡಿದ್ದಾರೆ.

ಭಾರತ ಮಾತೆ ನೋವಿನಲ್ಲಿದ್ದಾಳೆ, ಈ ದೌರ್ಜನ್ಯ ಹೆಚ್ಚುದಿನ ನಡೆಯುವುದಿಲ್ಲ: ಕೇಜ್ರಿವಾಲ್ ಸಂದೇಶ ಓದಿದ ಸುನೀತಾ ಕೇಜ್ರಿವಾಲ್
ಭಾರತ ಮಾತೆ ನೋವಿನಲ್ಲಿದ್ದಾರೆ ಮತ್ತು ಸದ್ಯದ ಈ ದಬ್ಬಾಳಿಕೆಯ ಆಡಳಿತವು ಸ್ವೀಕಾರಾರ್ಹವಲ್ಲ ಎಂದು ಸುನೀತಾ ಕೇಜ್ರಿವಾಲ್ ಅವರು ಭಾನುವಾರ ರಾಮಲೀಲಾ ಮೈದಾನದಲ್ಲಿ ನಡೆದ ಇಂಡಿಯಾ ಮೈತ್ರಿಕೂಟದ ರ್ಯಾಲಿಯಲ್ಲಿ ಜೈಲಿನಲ್ಲಿರುವ ತಮ್ಮ ಪತಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಸಂದೇಶವನ್ನು ಓದಿದರು.

'ಒಟ್ಟಾಗಿ ಹೋರಾಡೋಣ': ಕಲ್ಪನಾ ಸೊರೆನ್, ಸುನಿತಾ ಕೇಜ್ರಿವಾಲ್ ಭೇಟಿ, ಒಗ್ಗೂಡಿ ಹೋರಾಟದ ಪ್ರತಿಜ್ಞೆ!
ವಿವಿಧ ಪ್ರಕರಣಗಳಲ್ಲಿ ಜಾರ್ಖಂಡ್ನ ಮಾಜಿ ಮುಖ್ಯಮಂತ್ರಿ ಹೇಮಂತ್ ಸೋರೆನ್ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಜೈಲುಪಾಲಾಗಿರುವಂತೆಯೇ ಇತ್ತ ಉಭಯ ನಾಯಕರ ಪತ್ನಿಯರು ಪರಸ್ಪರ ಭೇಟಿಯಾಗಿ ಮಹತ್ವದ ಚರ್ಚೆ ನಡೆಸಿದರು.

ನವದೆಹಲಿ: ಕೇಜ್ರಿವಾಲ್ ಬದಲಾಗಿ ಪತ್ನಿ ಸುನೀತಾ ಸಿಎಂ ಸ್ಥಾನಕ್ಕೆ? ಹೀಗೊಂದು ವದಂತಿ!
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ಬಂಧಿಸಿದ ನಂತರ ಒಂದು ವಾರದಲ್ಲಿ ಮೂರು ಬಾರಿ ಸುದ್ದಿಗೋಷ್ಠಿ ನಡೆಸಿರುವ ಅವರ ಪತ್ನಿ ಸುನೀತಾ ಅವರು ಸಂಭಾವ್ಯ ಮುಖ್ಯಮಂತ್ರಿ ಅಭ್ಯರ್ಥಿಯಾಗುವ ಸಾಧ್ಯತೆ ಹೆಚ್ಚಾಗಿದೆ.

ಕೇಜ್ರಿವಾಲ್ ಪತ್ನಿಯನ್ನು ಬಿಹಾರ ಮಾಜಿ ಸಿಎಂ ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ
ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಶುಕ್ರವಾರ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಪತ್ನಿಯನ್ನು ಬಿಹಾರದ ಮಾಜಿ ಮುಖ್ಯಮಂತ್ರಿ ರಾಬ್ರಿ ದೇವಿಗೆ ಹೋಲಿಸಿದ್ದಾರೆ ಮತ್ತು ಅವರು (ಸುನೀತಾ ಕೇಜ್ರಿವಾಲ್) ಬಹುಶಃ ತಮ್ಮ ಪತಿಯ (ಕೇಜ್ರಿವಾಲ್) ಹುದ್ದೆಯನ್ನು ಅಲಂಕರಿಸಲು ತಯಾರಿ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ.

