Arvind Kejriwal

ಕೇಜ್ರಿವಾಲ್ ಆರೋಗ್ಯ ತಪಾಸಣೆಗೆ ವೈದ್ಯಕೀಯ ಸಲಹಾ ತಂಡ ರಚಿಸುವಂತೆ AIIMSಗೆ ಕೋರ್ಟ್ ಸೂಚನೆ
ಕೇಜ್ರಿವಾಲ್ ಅವರಿಗೆ ಚಿಕಿತ್ಸೆ ನೀಡುವ ಸಂಬಂಧ ವೈದ್ಯಕೀಯ ತಲಹಾ ತಂಡ ರಚಿಸುವಂತೆ ದೆಹಲಿ ನ್ಯಾಯಾಲಯವು ಸೋಮವಾರ ಏಮ್ಸ್ಗೆ ನಿರ್ದೇಶನ ನೀಡಿದೆ.

ದೆಹಲಿ LG ಕೈಗೆ ಅರವಿಂದ್ ಕೇಜ್ರಿವಾಲ್ ಇನ್ಸುಲಿನ್ ಕುರಿತ ವರದಿ: ಕೇಜ್ರಿವಾಲ್ ಜೀವಕ್ಕೆ ಅಪಾಯವಿದೆ-ಆತಿಶಿ
ಅರವಿಂದ್ ಕೇಜ್ರಿವಾಲ್ ಇನ್ಸುಲಿನ್ ಕುರಿತ ವರದಿಯನ್ನು ತಿಹಾರ ಜೈಲಿನ ಅಧಿಕಾರಿಗಳು ದೆಹಲಿ ಲೆಫ್ಟಿನೆಂಟ್ ಗವರ್ನರ್ ಗೆ ತಲುಪಿಸಿದ್ದಾರೆ.

ತನ್ನ ಆಹಾರದಲ್ಲೂ ಇಡಿಯಿಂದ ಕ್ಷುಲ್ಲಕ ರಾಜಕೀಯ: ಕೋರ್ಟ್ ಮುಂದೆ ಕೆಜ್ರಿವಾಲ್ ಕಿಡಿ
ಜಾರಿ ನಿರ್ದೇಶನಾಲಯ(ಇಡಿ)ವು ತಾನು ಜೈಲಿನಲ್ಲಿ ತಿನ್ನುವ ಆಹಾರದಲ್ಲೂ "ಕ್ಷುಲ್ಲಕ ರಾಜಕೀಯ" ಮಾಡುತ್ತಿದೆ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದೆಹಲಿ ಅಬಕಾರಿ ನೀತಿ ಪ್ರಕರಣ: ಮನೀಶ್ ಸಿಸೋಡಿಯಾ ನ್ಯಾಯಾಂಗ ಬಂಧನ ವಿಸ್ತರಣೆ
ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಬಂದನಕ್ಕೀಡಾಗಿರುವ ದೆಹಲಿ ಮಾಜಿ ಸಚಿವ ಹಾಗೂ ಆಮ್ ಆದ್ಮಿ ಪಕ್ಷದ ಹಿರಿಯ ಮುಖಂಡ ಮನೀಷ್ ಸಿಸೋಡಿಯಾ ನ್ಯಾಯಾಂಗ ಬಂಧನ ಅವಧಿ ವಿಸ್ತರಣೆ ಮಾಡಲಾಗಿದೆ.

Arvind Kejriwal ಕಳ್ಳಾಟ? ಶುಗರ್ ಹೆಚ್ಚಿಸಿಕೊಂಡು ಜಾಮೀನು ಪಡೆಯಲು ಜೈಲಲ್ಲಿ ಹೆಚ್ಚು ಮಾವು, ಸಿಹಿ ಸೇವನೆ: ED ಆರೋಪ
ಅಬಕಾರಿ ಪ್ರಕರಣದಲ್ಲಿ ಜೈಲುಪಾಲಾಗಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಶತಾಯಗತಾಯ ಜಾಮೀನು ಪಡೆಯಲು ಜೈಲಲ್ಲಿ ಮಾವು, ಸಿಹಿ ತಿನಿಸುಗಳನ್ನು ತಿನ್ನುವ ಮೂಲಕ ಬೇಕಂತಲೇ 'ಶುಗರ್' ಹೆಚ್ಚಿಸಿಕೊಳ್ಳಲು ಯತ್ನಿಸಿದ್ದಾರೆ ಎಂದು ಜಾರಿ ನಿರ್ದೇಶನಾಲಯ ಗಂಭೀರ ಆರೋಪ ಮಾಡಿದೆ.

ತಮ್ಮ ವೈದ್ಯರನ್ನು ಸಂಪರ್ಕಿಸಲು ಅನುಮತಿ ಕೋರಿ ಕೋರ್ಟ್ ಮೊರೆ ಹೋದ ಕೇಜ್ರಿವಾಲ್
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ತಮ್ಮ ಸಾಮಾನ್ಯ ವೈದ್ಯರನ್ನು ಸಂಪರ್ಕಿಸಲು ಅನುಮತಿ ಕೋರಿ ನ್ಯಾಯಾಲಯದ ಮೊರೆ ಹೋಗಿದ್ದಾರೆ.

'ನನ್ನ ಹೆಸರು ಅರವಿಂದ್ ಕೇಜ್ರಿವಾಲ್, ನಾನು ಭಯೋತ್ಪಾದಕನಲ್ಲ': ಜೈಲಿನಿಂದ ದೆಹಲಿ ಸಿಎಂ ಸಂದೇಶ ಹಂಚಿಕೊಂಡ ಎಎಪಿ
"ನನ್ನ ಹೆಸರು ಅರವಿಂದ್ ಕೇಜ್ರಿವಾಲ್ ಮತ್ತು ನಾನು ಭಯೋತ್ಪಾದಕನಲ್ಲ" ಎಂದು ತಿಹಾರ್ ಜೈಲಿನಿಂದ ದೆಹಲಿ ಮುಖ್ಯಮಂತ್ರಿಗಳು ದೇಶವಾಸಿಗಳಿಗೆ ಸಂದೇಶ ಕಳುಹಿಸಿದ್ದಾರೆ.

ಸುಪ್ರೀಂ ಕೋರ್ಟ್ನಲ್ಲಿ ಕೇಜ್ರಿವಾಲ್ಗೆ ಹಿನ್ನಡೆ: ಏಪ್ರಿಲ್ 29 ವರೆಗೆ ಜೈಲೇ ಗತಿ; ಇಡಿಗೆ ನೋಟಿಸ್
ದೆಹಲಿ ಮದ್ಯ ನೀತಿ ಹಗರಣದಲ್ಲಿ ಜೈಲು ಸೇರಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಗೆ ಸುಪ್ರೀಂ ಕೋರ್ಟ್ ನಲ್ಲಿ ಹಿನ್ನೆಡೆಯಾಗಿದೆ. ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಸಲ್ಲಿಸಿದ್ದ ಅರ್ಜಿಯ ತುರ್ತು ವಿಚಾರಣೆ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.

ಬಂಧನ ಪ್ರಶ್ನಿಸಿ ಕೇಜ್ರಿವಾಲ್ ಮೇಲ್ಮನವಿ: ಏಪ್ರಿಲ್ 15 ರಂದು ಸುಪ್ರೀಂ ಕೋರ್ಟ್ ವಿಚಾರಣೆ
ಬಂಧನ ಮತ್ತು ರಿಮಾಂಡ್ ವಿರುದ್ಧದ ಅರ್ಜಿಯನ್ನು ವಜಾಗೊಳಿಸಿದ ದೆಹಲಿ ಹೈಕೋರ್ಟ್ ಆದೇಶ ಪ್ರಶ್ನಿಸಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಸಲ್ಲಿಸಿರುವ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ಏಪ್ರಿಲ್ 15 ರಂದು ವಿಚಾರಣೆ ನಡೆಸಲಿದೆ.

