Arvind Bellad

ಸಾಮಾಜಿಕ ಮಾಧ್ಯಮಗಳಲ್ಲಿ ಸರ್ಕಾರದ ಸಾಧನೆ-ಯೋಜನೆಗಳ ಪ್ರಚಾರಕ್ಕೆ ಒಪ್ಪಂದ; ಪಾರದರ್ಶಕತೆ ಮಾಯ ಎಂದ ಅರವಿಂದ್ ಬೆಲ್ಲದ್
ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರವನ್ನು ಪ್ರತಿನಿಧಿಸುವ ಬೆಲ್ಲದ್, ಕಾಂಗ್ರೆಸ್ ಸರ್ಕಾರವು ಸಾಮಾಜಿಕ ಜಾಲತಾಣಗಳಲ್ಲಿ ಸರ್ಕಾರದ ಸಾಧನೆಗಳು ಮತ್ತು ಯೋಜನೆಗಳನ್ನು ಪ್ರಚಾರ ಮಾಡಲು ಪಾಲಿಸಿ ಫ್ರಂಟ್ ಎಂಬ ಸಂಘಟನೆಯೊಂದಿಗೆ ಒಪ್ಪಂದ ಮಾಡಿಕೊಂಡಿದೆ ಮತ್ತು ಒಪ್ಪಂದಕ್ಕೆ ಸಹಿ ಹಾಕಿದೆ ಎಂದು ಆರೋಪಿಸಿದರು.

ಹುಲಿ ಉಗುರು ಪ್ರಕರಣ: ಹಿಂದೂಗಳಷ್ಟೇ ಏಕೆ, ಮೌಲ್ವಿಗಳ ವಿರುದ್ಧವೂ ಕೇಸ್ ಹಾಕಿ; ಶಾಸಕ ಅರವಿಂದ್ ಬೆಲ್ಲದ್ ಆಗ್ರಹ
ರಾಜ್ಯದಲ್ಲಿ ನವಿಲುಗರಿ ಬಳಸುವ ಮಸೀದಿ, ದರ್ಗಾಗಳ ಮೇಲೆ ದಾಳಿ ಮಾಡಿ ಮೌಲ್ವಿಗಳ ವಿರುದ್ಧವೂ ದೂರು ದಾಖಲಿಸಿ 7 ವರ್ಷ ಜೈಲಿನಲ್ಲಿಡಿ ಎಂದು ರಾಜ್ಯ ಸರಕಾರಕ್ಕೆ ಬಿಜೆಪಿ ಶಾಸಕ ಅರವಿಂದ್ ಬೆಲ್ಲದ್ ಅವರು ಗುರುವಾರ ಆಗ್ರಹಿಸಿದ್ದಾರೆ.

ಆಶ್ರಯ ಯೋಜನೆ ಮನೆ ಖಾಲಿ ಮಾಡುವಂತೆ ಅರವಿಂದ್ ಬೆಲ್ಲದ್ ಬೆಂಬಲಿಗರಿಂದ ಕಿರುಕುಳ: ಆರೋಪಕ್ಕೆ ಶಾಸಕರ ಸ್ಪಷ್ಟನೆ !
ಆಶ್ರಯ ಯೋಜನೆಯಡಿ ಮಂಜೂರಾಗಿರುವ ಮನೆಗಳನ್ನು ಖಾಲಿ ಮಾಡುವಂತೆ ಬಿಜೆಪಿ ಶಾಸಕ ಅರವಿಂದ್ ಬೆಲ್ಲದ್ ಬೆಂಬಲಿಗರು ಕಿರುಕುಳ ನೀಡುತ್ತಿದ್ದಾರೆ ಎಂದು ಇತ್ತೀಚೆಗೆ ರಾಜ್ಯ ಸರ್ಕಾರ ನಡೆಸಿದ ಜನತಾ ದರ್ಶನದ ವೇಳೆ ಜನರು ಆರೋಪಿಸಿದ್ದಾರೆ.

ಅಭಿಮಾನದ ಅತಿರೇಕವೋ ಚುನಾವಣೆ ಗಿಮಿಕ್ಕೋ?: ಅಭಿಮಾನಿ ನೀಡಿದ ಪಾದರಕ್ಷೆ ತಲೆ ಮೇಲಿಟ್ಟುಕೊಂಡ ಬೆಲ್ಲದ್!
ಹುಬ್ಬಳ್ಳಿ ಧಾರವಾಡ ಪಶ್ಚಿಮ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅರವಿಂದ್ ಬೆಲ್ಲದ್ ಭಾನುವಾರ ತಮ್ಮ ನಿವಾಸದಲ್ಲಿ ಸಮ್ಗರ್ (ಚಮ್ಮಾರ) ಸಮುದಾಯದ ನಿಯೋಗವು ಉಡುಗೊರೆಯಾಗಿ ನೀಡಿದ ಪಾದರಕ್ಷೆಯನ್ನು ತಮ್ಮ ತಲೆಯ ಮೇಲೆ ಇರಿಸಿಕೊಂಡಿದ್ದು ಎಲ್ಲರ ಹುಬ್ಬೇರುವಂತೆ ಮಾಡಿದೆ.

ಮುಂದಿನ ಸಿಎಂ ಅರವಿಂದ್ ಬೆಲ್ಲದ್… ಫೇಸ್‌ಬುಕ್‌ನಲ್ಲಿ ಹರಿದಾಡುತ್ತಿರುವ ಪೋಸ್ಟ್…!
ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಚರ್ಚೆ ಮತ್ತೆ ಗರಿಗೆದರಿರುವ ಬೆನ್ನಲ್ಲೇ ಶಾಸಕ ಅರವಿಂದ್ ಬೆಲ್ಲದ್ ದೆಹಲಿಗೆ ಪ್ರಯಾಣಿಸಿದ್ದು ಹಲವು ಕುತೂಹಲವನ್ನು ಮೂಡಿಸಿತ್ತು. ಈ ನಡುವೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಅರವಿಂದ್ ಬೆಲ್ಲದ್ ಮುಂದಿನ ಸಿಎಂ ಎಂಬ ಪೋಸ್ಟ್ ಗಳು ವೈರಲ್ ಆಗುತ್ತಿವೆ.

ಶಾಸಕ ಅರವಿಂದ್ ಬೆಲ್ಲದ್ ದೆಹಲಿ ಭೇಟಿ ಮರ್ಮವೇನು? ನಾಯಕತ್ವ ಬದಲಾವಣೆ ಚರ್ಚೆ, ವರಿಷ್ಠರ ಭೇಟಿ ಸಾಧ್ಯತೆ?
ಎರಡು ದಿನಗಳ ಹಿಂದೆ ಮಾಧ್ಯಮಗಳ ಎದುರು ಯಾವುದೇ ಕಾರಣಕ್ಕೂ ಸಿಎಂ ಬದಲಾವಣೆ ಇಲ್ಲ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಸ್ಪಷ್ಟಪಡಿಸಿದ್ದರು.

ದೆಹಲಿ ಭೇಟಿಯ ಹಿಂದೆ ರಾಜಕೀಯ ಉದ್ದೇಶ ಇಲ್ಲ: ಶಾಸಕ ಅರವಿಂದ ಬೆಲ್ಲದ್ ಸ್ಪಷ್ಟನೆ
ನಾನು ಖಾಸಗಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ದೆಹಲಿಗೆ ಭೇಟಿ ನೀಡಿದ್ದು, ಈ ಭೇಟಿಯ ಹಿಂದೆ ಯಾವುದೇ ರಾಜಕೀಯ ಉದ್ದೇಶ ಇಲ್ಲ ಎಂದು ಶಾಸಕ ಅರವಿಂದ ಬೆಲ್ಲದ್ ಅವರು ಶನಿವಾರ ಸ್ಪಷ್ಟನೆ ನೀಡಿದ್ದಾರೆ.

