Article 370

370ನೇ ವಿಧಿ ರದ್ದತಿ ಬೆಂಬಲಕ್ಕೆ ಬದಲಾಗಿ ನನ್ನ ವಿರುದ್ಧದ ಆರೋಪ ಹಿಂದೆಗೆತಕ್ಕೆ ಭಾರತ ಸರ್ಕಾರ ಸಿದ್ದವಿತ್ತು: ಝಾಕೀರ್ ನಾಯಕ್
ಸಂವಿಧಾನದ 370 ನೇ ವಿಧಿಯನ್ನು ಹಿಂತೆಗೆದುಕೊಳ್ಳುವ ಸರ್ಕಾರದ ಕ್ರಮಕ್ಕೆ ಬೆಂಬಲ ನೀಡಿದ್ದಾದರೆ ಭಾರತೀಯ ಜನತಾ ಪಕ್ಷದ ನೇತೃತ್ವದ ಸರ್ಕಾರವು ಅವರ ವಿರುದ್ಧ ಹಣ ವರ್ಗಾವಣೆ ಆರೋಪಗಳನ್ನು ಕೈಬಿಡಲು ಹಾಗೂ "ಭಾರತಕ್ಕೆ ಸುರಕ್ಷಿತ ಹಿಂದಿರುಗುವಿಕೆಗೆ" ಮಾರ್ಗ ತೆರೆಯಲು ಒಪ್ಪಿದೆ ಎಂದು ವಿವಾದಾತ್ಮಕ ಇಸ್ಲಾಮಿಕ್ ಬೋಧಕ ಝಾಕೀರ್ ನಾಯಕ್ ಗಂಬೀರ ಆರೋಪ ಮಾಡಿದ್ದಾರೆ.

ಕಾಶ್ಮೀರ ಪರಿಸ್ಥಿತಿ ಸುಧಾರಣೆಗೆ ಸರ್ಕಾರದ ಕ್ರಮಗಳ ಅವಲೋಕನಕ್ಕೆ ವಿದೇಶಿ ರಾಯಭಾರಿಗಳ ಭೇಟಿ: ಎಂಇಎ
ಜಮ್ಮು ಮತ್ತು ಕಾಶ್ಮೀರಕ್ಕೆ ವಿದೇಶಿ ರಾಯಭಾರಿಗಳ ಭೇಟಿಯ ಉದ್ದೇಶವು ಅಲ್ಲಿನ ಪರಿಸ್ಥಿತಿಯನ್ನು ಸುಧಾರಿಸುವುದರಲ್ಲಿ ಕೇಂದ್ರ ಸರ್ಕಾರ ತೆಗೆದುಕೊಂಡ ಪ್ರಾಥಮಿಕ ಪ್ರಯತ್ನಗಳ ಅವಲೋಕನವಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿದೆ.

ಡಿ.31 ಮಧ್ಯರಾತ್ರಿಯಿಂದ ಕಾಶ್ಮೀರದಲ್ಲಿ ಎಸ್‌ಎಂಎಸ್ ಸೇವೆ ಪುನಾರಂಭ
ಮೊಬೈಲ್ ಸಂದೇಶ (ಎಸ್.ಎಂ.ಎಸ್)ಸ್ಥಗಿತಗೊಳಿಸಿದ ಸುಮಾರು ಐದು ತಿಂಗಳ ನಂತರ, ಡಿಸೆಂಬರ್ 31 ಮಧ್ಯರಾತ್ರಿಯಿಂದ ಕಾಶ್ಮೀರ ಕಣಿವೆಯಲ್ಲಿ ಮತ್ತೆ ಎಸ್‌ಎಂಎಸ್ ಸೇವೆಗಳನ್ನು ಪುನಃಸ್ಥಾಪಿಸಲಾಗುವುದು ಎಂದು ಜಮ್ಮು ಮತ್ತು ಕಾಶ್ಮೀರ ಪ್ರಧಾನ ಕಾರ್ಯದರ್ಶಿ ರೋಹಿತ್ ಕನ್ಸಾಲ್ ಮಂಗಳವಾರ ತಿಳಿಸಿದ್ದಾರೆ.

370 ವಿಧಿ ರದ್ದು: 145 ದಿನಗಳ ಬಳಿಕ ಕಾರ್ಗಿಲ್'ನಲ್ಲಿ ಮೊಬೈಲ್ ಇಂಟರ್ನೆಟ್ ಸೇವೆ ಪುನರಾರಂಭ
ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುತ್ತಿದ್ದ 370 ವಿಧಿ ರದ್ದುಗೊಂಡು 145 ದಿನಗಳ ಬಳಿಕ ಲಡಾಖ್'ನ ಕಾರ್ಗಿಲ್ ನಲ್ಲಿ ಮೊಬೈಲ್ ಇಂಟರ್ನೆಟ್ ಸೇವೆಗಳನ್ನು ಪುನರಾರಂಭಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೋದಿ ಕ್ರಮ ಕೊಂಡಾಡಿದ ಅಮೆರಿಕ ಕಾಂಗ್ರೆಸ್ ಸದಸ್ಯ ಜೋ ವಿಲ್ಸನ್
ಜಮ್ಮು ಕಾಶ್ಮಿರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ವಾಪಸ್ ತೆಗೆದುಕೊಂಡ ಕ್ರಮವನ್ನು ಅಮೆರಿಕ ಕಾಂಗ್ರೆಸ್ ಸದಸ್ಯ ಜೋ ವಿಲ್ಸನ್ ಬೆಂಬಲಿಸಿದ್ದು, ಉತ್ತಮ ಆಡಳಿತ ಮತ್ತು ಸಾಮಾಜಿಕ-ಆರ್ಥಿಕ ಬೆಳವಣಿಗೆ ಇದು ಕಾರಣವಾಗಲಿದೆ ಎಂದು ಹಾಡಿ ಹೊಗಳಿದ್ದಾರೆ

370ನೇ ವಿಧಿ: ಕಾಶ್ಮೀರದಲ್ಲಿ ನಿರ್ಬಂಧ ಕುರಿತು ತೀರ್ಪು ಕಾಯ್ದಿರಿಸಿದ ಸುಪ್ರೀಂಕೋರ್ಟ್
ಜಮ್ಮು ಮತ್ತು ಕಾಶ್ಮೀರಕ್ಕೆ ಸ್ವಾಯತ್ತತೆ ನೀಡಿದ್ದ ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿದ ನಂತರ ಕಣಿವೆ ರಾಜ್ಯದಲ್ಲಿ ವಿಧಿಸಿರುವ ನಿರ್ಬಂಧ ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಬುಧವಾರ ತೀರ್ಪು ಕಾಯ್ದರಿಸಿದೆ.

ಕಣಿವೆ ರಾಜ್ಯ ಜಮ್ಮು-ಕಾಶ್ಮೀರದಲ್ಲಿ ಅಂತರ್ಜಾಲ ಸೇವೆ ಸ್ಥಗಿತ ಆದೇಶ ಕಾನೂನುಬಾಹಿರ: ಸುಪ್ರೀಂ ಕೋರ್ಟ್ ಗರಂ
ಜಮ್ಮು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ವಾಪಸ್ಸು ಪಡೆದುಕೊಂಡ ನಂತರ ಕಣಿವೆ ರಾಜ್ಯದಲ್ಲಿ ಮೊಬೈಲ್, ಲ್ಯಾಂಡ್ ಲೈನ್, ಇಂಟರ್ ನೆಟ್ ಸೇವೆಗಳನ್ನು ಸ್ಥಗಿತಗೊಳಿಸಿದ್ದ...

ರಾಜಕೀಯ ಕೈದಿಗಳ ಬಿಡುಗಡೆ ಮಾಡಿ, ಕಾಶ್ಮೀರ ಸಹಜಸ್ಥಿತಿಗೆ ತನ್ನಿ: ನ್ಯಾಷನಲ್ ಕಾನ್ಫರೆನ್ಸ್
ವಿಧಿ 370ರ ರದ್ಧತಿ ಬಳಿಕ ಉಂಟಾದ ಪ್ರತಿಭಟನೆಗಳಲ್ಲಿ ಬಂಧಿಸಲ್ಪಟ್ಟಿರುವ ರಾಜಕೀಯ ಕೈದಿಗಳನ್ನು ಕೂಡಲೇ ಬಿಡುಗಡೆ ಮಾಡಿ ಕಾಶ್ಮೀರವನ್ನು ಸಹಜಸ್ಛಿತಿಗೆ ತರುವಂತೆ ನ್ಯಾಷನಲ್ ಕಾನ್ಫರೆನ್ಸ್ ಹೇಳಿದೆ.

ಜಮ್ಮು ಕಾಶ್ಮೀರದ ಸಮಸ್ಯೆಯನ್ನು ಯಶಸ್ವಿಯಾಗಿ ನಿಭಾಯಿಸಿದ್ದೇನೆ: ಸತ್ಯಪಾಲ್ ಮಲಿಕ್
ತಾನು ಈ ಹಿಂದೆ ಬಹಳವೇ ವಿವಾದಾತ್ಮಕವೂ, ಸಮಸ್ಯೆಗಳಿಂದ ಕೂಡಿದ ಸ್ಥಳವೊಂದರ ರಾಜ್ಯಪಾಲನಾಗಿಯೂ ಸಹ ಅದನ್ನು ಯಶಸ್ವಿಯಾಗಿ ನಿಭಾಯಿಸಿದ್ದೇನೆ ಎಂದು ಗೋವಾದ ನೂತನ ರಾಜ್ಯಪಾಲ ಸತ್ಯಪಾಲ್ ಮಲಿಕ್ ಹೇಳಿದ್ದಾರೆ. ಭಾನುವಾರ ಸತ್ಯಪಾಲ್ ಮಲಿಕ್ ಗೋವಾ ರಾಜ್ಯಪಾಲರಾಗಿ ಪ್ರಮಾಣವಚನ ಸ್ವೀಕರಿಸಿದರು.

