arrested

ತಮಿಳುನಾಡು: ಶ್ರೀಲಂಕಾ ನೌಕಪಡೆಯಿಂದ ಮೂರು ಭಾರತೀಯ ಮೀನುಗಾರಿಕೆ ದೋಣಿ ವಶಕ್ಕೆ, 34 ಮಂದಿ ಬಂಧನ!
ದೋಣಿಗಳು ಮತ್ತು ಬಂಧಿತ ಮೀನುಗಾರರನ್ನು ಶ್ರೀಲಂಕಾದ ದ್ವೀಪ ಪ್ರದೇಶ ಇರನತೀವುಗೆ ಕರೆದೊಯ್ಯಲಾಯಿತು.

ಕೊಡಿಗೆಹಳ್ಳಿ ಗಲಾಟೆ ಪ್ರಕರಣ: ಬಿಗ್ ಬಾಸ್ ಸ್ಪರ್ಧಿ ಲಾಯರ್ ಜಗದೀಶ್ ಬಂಧನ
ಗಲಾಟೆಯಲ್ಲಿ ಲಾಯರ್ ಜಗದೀಶ್ ಅವರು ಗಾಯಗೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಲೈವ್ ಬಂದು ಮಾತನಾಡಿದ್ದರು. ನಿನ್ನೆ ನಡೆದ ಘಟನೆಯಲ್ಲಿ ಜಗದೀಶ್ ಗಾಯಗೊಂಡಿದ್ದಕ್ಕೆ ಪೊಲೀಸರೇ ಚಿಕಿತ್ಸೆ ಕೊಡಿಸಿದ್ದರು.

ಮಹಾಕುಂಭ ಮೇಳ 2025: ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಮುಸ್ಲಿಂ ವ್ಯಕ್ತಿಯ ಬಂಧನ! ಭದ್ರತೆ ಭೀತಿ
ಮಂಗಳವಾರ ಮಧ್ಯಾಹ್ನ 2 ಗಂಟೆ ಸುಮಾರಿನಲ್ಲಿ ಮುಸ್ಲಿಂ ವ್ಯಕ್ತಿ ತಮ್ಮ ಶಿಬಿರದ ಹೊರಗೆ ಕಾಣಿಸಿಕೊಂಡರು. ಅಲ್ಲಿದ್ದವರು ಆತನನ್ನು ಪ್ರಶ್ನಿಸಿದಾಗ ತನ್ನ ಹೆಸರು ಅಯುಬ್ ಎಂದು ಬಾಯ್ಬಿಟ್ಟಿದ್ದಾನೆ. ಬಳಿಕ ಶಿಬಿರದ ಸ್ವಯಂ ಸೇವಕರು ಆತನನ್ನು ಪೊಲೀಸರ ವಶಕ್ಕೆ ನೀಡಿದ್ದಾರೆ.

ತಿರುಮಲ ದೇವಸ್ಥಾನದಲ್ಲಿ ಚಿನ್ನಾಭರಣ ಕಳ್ಳತನ; ಟಿಟಿಡಿ ಹೊರಗುತ್ತಿಗೆ ಸಿಬ್ಬಂದಿ ಬಂಧನ
ಕಳೆದ ಒಂದು ವರ್ಷದಲ್ಲಿ 10 ರಿಂದ 15 ಬಾರಿ ಬಿಸ್ಕೆಟ್ ಮತ್ತು ಆಭರಣಗಳ ರೂಪದಲ್ಲಿ ರೂ. 46 ಲಕ್ಷ ಮೌಲ್ಯದ 650 ಗ್ರಾಂ ಚಿನ್ನವನ್ನು ಕದ್ದ ಆರೋಪದ ಮೇಲೆ 40 ವರ್ಷದ ವಿ. ಪೆಂಚಲಯ್ಯ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಕಲಬುರಗಿ: ಕಾನ್ಸ್ ಟೇಬಲ್ ಮೇಲೆ ಹಲ್ಲೆಗೆ ಯತ್ನ, ಕಾಲಿಗೆ ಗುಂಡಿಕ್ಕಿ ಡ್ರಗ್ ಸ್ಮಗ್ಲರ್ ಬಂಧಿಸಿದ ಪೊಲೀಸರು
ಆರೋಪಿ ಸುಪ್ರೀತ್ ನವಲೆ ಕಲಬುರಗಿ ನಗರದ ಮುತ್ತಂಪುರ ನಿವಾಸಿಯಾಗಿದ್ದಾನೆ. ಆತನ ಕಾರನ್ನು ತಪಾಸಣೆ ನಡೆಸಿದಾಗ ನೈಟ್ರೊವೆಟ್ ಮಾತ್ರೆಗಳು ಸೇರಿದಂತೆ ಡ್ರಗ್ಸ್ ಕಳ್ಳಸಾಗಣೆ ಮಾಡುತ್ತಿರುವುದು ಕಂಡುಬಂದಿದೆ.

ಕೇರಳ: ದಲಿತ ಯುವತಿ ಮೇಲೆ 60ಕ್ಕೂ ಹೆಚ್ಚು ಮಂದಿಯಿಂದ ಲೈಂಗಿಕ ದೌರ್ಜನ್ಯ, 12 ಮಂದಿ ಬಂಧನ
ಪ್ರಾಥಮಿಕ ತನಿಖೆಯ ಪ್ರಕಾರ 60 ಕ್ಕೂ ಹೆಚ್ಚು ಆರೋಪಿಗಳಿದ್ದಾರೆ ಎಂದು ಯುವತಿ ತಿಳಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ 15 ಮಂದಿಯನ್ನು ಬಂಧಿಸಲಾಗಿದೆ.

ಸಾಪ್ಟ್ ವೇರ್ ಕಂಪನಿ ಮಹಿಳಾ ಉದ್ಯೋಗಿಗೆ 58 ಲಕ್ಷ ರೂ ವಂಚನೆ; ನಾಲ್ವರು CA ಇಂಟರ್ನ್ ಗಳು ಸೇರಿ ಆರು ಮಂದಿ ಬಂಧನ
ಆರೋಪಿಗಳು ವಾಟ್ಸಾಪ್‌ನಲ್ಲಿ ಕಂಪನಿಯ ಲೋಗೋ ಮತ್ತು ಅದರ ವ್ಯವಸ್ಥಾಪಕ ನಿರ್ದೇಶಕರ ವಾಟ್ಸಾಪ್ ಪ್ರೊಫೈಲ್ ಚಿತ್ರವನ್ನು ಬಳಸಿಕೊಂಡು 50 ವರ್ಷದ ಹಿರಿಯ ಅಕೌಂಟೆಂಟ್ ಮಹಿಳೆಯಿಂದ ರೂ. 58 ಲಕ್ಷ ರೂ.ಗಳನ್ನು ತಮ್ಮ ಖಾತೆಗೆ ವರ್ಗಾಯಿಸಿಕೊಂಡು ವಂಚಿಸಿದ್ದಾರೆ.

ರಾಮೇಶ್ವರಂ: ಅಗ್ನಿತೀರ್ಥಂ ಬೀಚ್ ಬಳಿ ಹಿಡನ್ ಕ್ಯಾಮರಾ ಇಟ್ಟು ಮಹಿಳೆಯರ ಚಿತ್ರೀಕರಣ, ಇಬ್ಬರ ಬಂಧನ
ಬಂಧಿತ ಇಬ್ಬರನ್ನು ರಾಜೇಶ್ ಕಣ್ಣನ್ ಮತ್ತು ಆತನ ಸ್ನೇಹಿತ ಮೀರಾನ್ ಮೊಯ್ದೀನ್ ಎಂದು ಗುರುತಿಸಲಾಗಿದೆ.

ಕೃಷಿ ಹೊಂಡದಲ್ಲಿ ಸ್ಫೋಟ ಪ್ರಕರಣ: ಮಾಜಿ ಬಿಗ್ ಬಾಸ್ ಸ್ಪರ್ಧಿ ಡ್ರೋನ್ ಪ್ರತಾಪ್ ಗೆ ಜಾಮೀನು ಮಂಜೂರು!
ಸೋಡಿಯಂ ಮೆಟಲ್ ಬಳಸಿ ಕೃಷಿ ಹೊಂಡದಲ್ಲಿ ಸ್ಫೋಟ ಮಾಡಿದ್ದ ಪ್ರಕರಣದಲ್ಲಿ ಡ್ರೋನ್ ಪ್ರತಾಪ್ ಅವರನ್ನು ಮಿಡಿಗೇಶಿ ಠಾಣೆಯ ಪೊಲೀಸರು ಬಂಧಿಸಿದ್ದರು. ಬಳಿಕ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು.

