anna bhagya scheme

ಅನ್ನಭಾಗ್ಯ ಯೋಜನೆ: ಫೆಬ್ರವರಿ-ಮಾರ್ಚ್ ತಿಂಗಳ ಅಕ್ಕಿ ಏಕಕಾಲದಲ್ಲಿ ವಿತರಣೆ- ಕೆ.ಎಚ್ ಮುನಿಯಪ್ಪ
ಕೇಂದ್ರ ಸರ್ಕಾರ ರಾಜ್ಯಕ್ಕೆ ಅಕ್ಕಿ ಮಾರಾಟ ಮಾಡಲು ಒಪ್ಪಿಕೊಂಡಿದ. ಆದ್ದರಿಂದ ಕರ್ನಾಟಕವು ಪ್ರತಿ ಕೆಜಿಗೆ 22.5 ರೂ. ಪಾವತಿಸುತ್ತದೆ, ಸಾಗಣೆ ವೆಚ್ಚ ಪ್ರತಿ ಕೆಜಿಗೆ 2.50 ರೂ. ಖರ್ಚು ತಗಲುತ್ತದೆ, ಹೀಗಾಗಿ ಪ್ರತಿ ಕೆಜಿ ಅಕ್ಕಿಗೆ ರಾಜ್ಯಕ್ಕೆ ಕೆಜಿಗೆ 25 ರೂ. ವೆಚ್ಚವಾಗುತ್ತದೆ.

ಅನ್ನಭಾಗ್ಯ ಯೋಜನೆಯ ಶೇ. 20 ರಷ್ಟು ಹಣ ಪುರುಷರ ಕುಡಿತ, ಸ್ಮೋಕಿಂಗ್ ಗೆ ವೆಚ್ಚ!
ಗ್ರಾಮೀಣ ಪ್ರದೇಶಗಳಲ್ಲಿ ಸರಿಸುಮಾರು ಶೇ. 77 ರಷ್ಟು ಮತ್ತು ನಗರ ಪ್ರದೇಶಗಳಲ್ಲಿ ಶೇ. 82 ರಷ್ಟು ಹಣವನ್ನು ಧಾನ್ಯ ಖರೀದಿಸಲು ಖರ್ಚು ಮಾಡಲಾಗಿದೆ.

ಅನ್ನಭಾಗ್ಯ ಯೋಜನೆಗೆ ಅಕ್ಕಿ ನೀಡಲು ಕೇಂದ್ರ ಸರ್ಕಾರ ಸಿದ್ಧ: ಇನ್ನು ಮುಂದೆ 5 ಕೆಜಿ ಅಕ್ಕಿ ಹಣ ಬಂದ್?
ಅನ್ನಭಾಗ್ಯ ಯೋಜನೆಗೆ ಅಕ್ಕಿ ನೀಡಬೇಕೆಂಬ ರಾಜ್ಯ ಸರ್ಕಾರದ ಮನವಿಯನ್ನು ಕಳೆದ ವರ್ಷ ಕೇಂದ್ರ ತಿರಸ್ಕರಿಸಿತ್ತು. ಇದು ರಾಜ್ಯ ಸರ್ಕಾರ ಮತ್ತು ಕೇಂದ್ರದ ನಡುವೆ ವಾಕ್ಸಮರಕ್ಕೆ ಕಾರಣವಾಗಿತ್ತು. ಇದೀಗ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ.

ಅನ್ನಭಾಗ್ಯ ಯೋಜನೆ: ಫಲಾನುಭವಿಗಳಿಗೆ ಹಣ ಬದಲು ಧಾನ್ಯ ನೀಡಲು ಸರ್ಕಾರ ಚಿಂತನೆ..!
ರಾಜ್ಯ ಸರ್ಕಾರ ಕರ್ನಾಟಕದಲ್ಲಿ 13 ಲಕ್ಷ ಬಿಪಿಎಲ್ ಪಡಿತರ ಕಾರ್ಡುಗಳನ್ನು ಹೊಂದಿದ್ದು ಅಂದರೆ 40 ರಿಂದ 50 ಲಕ್ಷ ಫಲಾನುಭವಿಗಳಿಗೆ ರಾಜ್ಯ ಸರ್ಕಾರ ಅಕ್ಕಿಯನ್ನು ಕೊಡುತ್ತಿದೆ.

ಹೊಸ ಪಡಿತರ ಚೀಟಿಗೆ 2.95 ಲಕ್ಷ ಅರ್ಜಿ ಬಂದಿದೆ, ಶೀಘ್ರದಲ್ಲೆ ವಿತರಣೆ: ಸರ್ಕಾರ
ಹೊಸ ಪಡಿತರ ಚೀಟಿ ಕೋರಿ 2.95 ಲಕ್ಷ ಅರ್ಜಿ ಸಲ್ಲಿಕೆಯಾಗಿದ್ದು, ಇವುಗಳನ್ನು ಪರಿಶೀಲಿಸಿ, ಶೀಘ್ರದಲ್ಲೇ ವಿತರಿಸಲಾಗುವುದು’ ಎಂದು ಆಹಾರ ಮತ್ತು ನಾಗರಿಕ ಪೂರೈಕೆಗಳ ಸಚಿವ ಕೆ.ಎಚ್. ಮುನಿಯಪ್ಪ ಅವರು ಶುಕ್ರವಾರ ಹೇಳಿದರು.

ದೇಶದಲ್ಲಿ ಅಕ್ಕಿ ಉತ್ಪಾದನೆ ಕುಸಿತ: ರಾಜ್ಯದ ಅನ್ನ ಭಾಗ್ಯ ಯೋಜನೆಗೆ ಹಿನ್ನಡೆ ಸಾಧ್ಯತೆ!
ದೇಶದಲ್ಲಿ ಒಟ್ಟಾರೆ ಅಕ್ಕಿ ಉತ್ಪಾದನೆ ಶೇ.9ರಷ್ಟು ಕುಸಿದಿದೆ. ಇದು ಈಗಾಗಲೇ ಅನ್ನ ಭಾಗ್ಯ ಯೋಜನೆಗೆ ಅಕ್ಕಿ ಸಂಗ್ರಹಿಸಲು ಹೆಣಗಾಡುತ್ತಿರುವ ರಾಜ್ಯ ಸರ್ಕಾರಕ್ಕೆ ಕೆಟ್ಟ ಸುದ್ದಿಯಾಗಿದೆ. ಒಂದು ವೇಳೆ ಅಕ್ಕಿ ಸಂಗ್ರಹಣೆಯಲ್ಲಿ ಮಾರುಕಟ್ಟೆ ಶಕ್ತಿಗಳು...

ಜಾಗತಿಕ ಮಾರುಕಟ್ಟೆಯಲ್ಲಿ ಅಕ್ಕಿ ಬೆಲೆ ಏರಿಕೆ: ಕರ್ನಾಟಕ ಕಾಂಗ್ರೆಸ್ ಸರ್ಕಾರಕ್ಕೆ ಹೊಸ ಆತಂಕ!
ಅನ್ನ ಭಾಗ್ಯ ಯೋಜನೆಯಡಿ ತಲಾ 10 ಕೆಜಿ ಅಕ್ಕಿ ಪಡೆಯಲು ಬಿಪಿಎಲ್ ಮತ್ತು ಎಪಿಎಲ್ ಕಾರ್ಡುದಾರರು ಕಾಯುತ್ತಿದ್ದರು, ಅಕ್ಕಿ ಸಿಗದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಪ್ರತಿ ಫಲಾನುಭವಿಗೆ 5 ಕೆಜಿ ಅಕ್ಕಿ ಬದಲಿಗೆ ನಗದು ನೀಡುತ್ತಿದೆ.

'ಅನ್ನ ಭಾಗ್ಯ' ಯೋಜನೆಯ ಪರಿಣಾಮ ಇನ್ನೊಂದು ವರ್ಷದಲ್ಲಿ ಗೊತ್ತಾಗುತ್ತದೆ: ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ ಹೆಚ್ ಮುನಿಯಪ್ಪ (ಸಂದರ್ಶನ)
'ಅನ್ನ ಭಾಗ್ಯ' ಯೋಜನೆಯಡಿ 5 ಕೆಜಿ ಅಕ್ಕಿ ಬದಲಿಗೆ ಪ್ರತಿ ವ್ಯಕ್ತಿಗೆ ತಿಂಗಳಿಗೆ 170 ರೂಪಾಯಿ ನಗದು ನೀಡುತ್ತಿರುವ ರಾಜ್ಯ ಸರ್ಕಾರ ಶೀಘ್ರದಲ್ಲೇ ಆಹಾರಧಾನ್ಯವನ್ನು ಅಗತ್ಯ ಪ್ರಮಾಣದಲ್ಲಿ ಸಂಗ್ರಹಿಸಿ ಪ್ರತಿ ತಿಂಗಳು 10 ಕೆಜಿ ಅಕ್ಕಿ ನೀಡುವ ಭರವಸೆಯನ್ನು ಹೊಂದಿದೆ.

ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಫಲಶ್ರುತಿ: ಕೊನೆಗೂ ಎಂಎಂ ಹಿಲ್ಸ್ ಹಳ್ಳಿಗಳಿಗೆ ಧಾವಿಸಿದ 'ಅನ್ನಭಾಗ್ಯ'!
ಚಾಮರಾಜನಗರ ಜಿಲ್ಲೆಯ ನಾಗಮಲೆ ಹಾಗೂ ಎಂ.ಎಂ. ಹಿಲ್ಸ್ ಸಮೀಪದ ಗ್ರಾಮಗಳಲ್ಲಿ ವಾಸಿಸುವ ಬುಡಕಟ್ಟು ಕುಟುಂಬಗಳಿಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ಶುಕ್ರವಾರ ಆಹಾರಧಾನ್ಯ ಮತ್ತು ಇತರ ಅಗತ್ಯ ವಸ್ತುಗಳನ್ನು ರವಾನಿಸಿದರು.

