Almatti dam

ಪ್ರವಾಹ ತಗ್ಗಿಸಲು ಆಲಮಟ್ಟಿ ಜಲಾಶಯದಿಂದ ನೀರು ಬಿಡಿ: ಕರ್ನಾಟಕಕ್ಕೆ ಮಹಾರಾಷ್ಟ್ರ ಸರ್ಕಾರ
ಕೊಯ್ನಾ ನದಿಯು ಕೃಷ್ಣಾ ನದಿಯ ಅತಿದೊಡ್ಡ ಉಪನದಿಯಾಗಿದೆ, ಇದು ದಕ್ಷಿಣಕ್ಕೆ ಹರಿಯುತ್ತದೆ ಮತ್ತು ಸಾಂಗ್ಲಿ ನಗರ ಮತ್ತು ಕೊಲ್ಹಾಪುರ ಜಿಲ್ಲೆಯನ್ನು ದಾಟಿ ಕರ್ನಾಟಕವನ್ನು ಪ್ರವೇಶಿಸುತ್ತದೆ.

ಇನ್ನು ಮುಂದೆ ಪ್ರತಿ ಮೂರು ತಿಂಗಳಿಗೊಮ್ಮೆ 'ಹಕ್ಕಿ ಹಬ್ಬ' ಆಯೋಜನೆಗೆ ಕೆಇಡಿಬಿ ನಿರ್ಧಾರ!
ಕರ್ನಾಟಕ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿಯು (ಕೆಇಡಿಬಿ) ಇನ್ನು ಮುಂದೆ ಪ್ರತಿ ಮೂರು ತಿಂಗಳಿಗೊಮ್ಮೆ ಹಕ್ಕಿ ಹಬ್ಬ ಆಯೋಜಿಸಲು ನಿರ್ಧರಿಸಿದೆ. ಈ ಹಕ್ಕಿ ಹಬ್ಬದಲ್ಲಿ ಆಯ್ದ ಪಕ್ಷಿಗಳನ್ನು ನೋಡಬಹುದು. ವಿವಿಧ ಪ್ರಬೇಧಗಳಿಗೆ ಹೆಸರುವಾಸಿಯಾದ ವಿಶಿಷ್ಟ ಸ್ಥಳದಲ್ಲಿ ಈ ಹಬ್ಬವನ್ನು ನಡೆಸಲಾಗುತ್ತದೆ.

ಬಾಗಲಕೋಟೆ: ಚಿಕ್ಕಸಂಗಮ ಪಕ್ಷಿಧಾಮ ಬಳಿಯ ಆಲಮಟ್ಟಿ ಹಿನ್ನೀರಿನಲ್ಲಿ 'ಕರ್ನಾಟಕ ಹಕ್ಕಿ ಹಬ್ಬ'
ಜನವರಿ 26-28ರವರೆಗೆ ನಡೆಯಲಿರುವ ಈ ಬಾರಿಯ ಹಕ್ಕಿ ಹಬ್ಬ ವಿಭಿನ್ನವಾಗಿರಲಿದೆ. ಈ ಸ್ಥಳ ಚಿಕ್ಕಸಂಗಮ ಪಕ್ಷಿಧಾಮದ ಸಮೀಪದಲ್ಲಿದೆ.

ಆಲಮಟ್ಟಿ ಅಣೆಕಟ್ಟಿನಿಂದ 2.75 ಟಿಎಂಸಿ ನೀರು ಬಿಡಲು ತೀರ್ಮಾನ- ಡಿಕೆ ಶಿವಕುಮಾರ್
ಕೃಷ್ಣಾ ಜಲಾನಯನ ಪ್ರದೇಶದ (ಬಾಗಲಕೋಟೆ, ಕಲ್ಬುರ್ಗಿ ಮತ್ತು ವಿಜಯಪುರ) ರೈತರ ಸಮಸ್ಯೆಗಳನ್ನು ಪರಿಹರಿಸಲು ಆಲಮಟ್ಟಿ ಅಣೆಕಟ್ಟಿನಿಂದ 2.75 ಟಿಎಂಸಿ ನೀರನ್ನು ಬಿಡುಗಡೆ ಮಾಡಲು ತೀರ್ಮಾನಿಸಲಾಗಿದೆ ಎಂದು ಜಲಸಂಪನ್ಮೂಲ ಸಚಿವರು ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭಾನುವಾರ ತಿಳಿಸಿದರು.

ಖಾರಿಫ್ ಬೆಳೆಗಳಿಗೆ ನೀರು ಬಿಡದಿರಲು ಕೃಷ್ಣಾ ಮೇಲ್ದಂಡೆ ನೀರಾವರಿ ಯೋಜನೆ ಸಲಹಾ ಸಮಿತಿ ನಿರ್ಧಾರ!
ಕೃಷ್ಣಾ ನದಿಗೆ ಅಡ್ಡಲಾಗಿರುವ ಆಲಮಟ್ಟಿ ಅಣೆಕಟ್ಟಿನಲ್ಲಿ ನೀರಿನ ಸೀಮಿತ ಸಂಗ್ರಹಣೆ ಇರುವ ಕಾರಣ ಪ್ರಸ್ತುತ ಖಾರಿಫ್ ಹಂಗಾಮಿಗೆ ನೀರಾವರಿಗಾಗಿ ಕಾಲುವೆಗಳಿಗೆ ನೀರು ಬಿಡದೆ ಮತ್ತು ಕುಡಿಯುವ ಉದ್ದೇಶಕ್ಕೆ ಮಾತ್ರ ನೀರನ್ನು ಬಳಸಿಕೊಳ್ಳುವಂತೆ ರಾಜ್ಯ ಸರ್ಕಾರವನ್ನು ಕೃಷ್ಣ ಮೇಲ್ದಂಡೆ ಯೋಜನೆಯ (ಯುಕೆಪಿ) ನೀರಾವರಿ ಸಲಹಾ ಸಮಿತಿ ಒತ್ತಾಯಿಸಿದೆ.

ಮಳೆಯ ಕೊರತೆಯ ನಡುವೆಯೂ ಆಲಮಟ್ಟಿ ಜಲಾಶಯ ಭರ್ತಿ: ಉತ್ತರ ಕರ್ನಾಟಕ ರೈತರಲ್ಲಿ ಮಂದಹಾಸ
ಮುಂಗಾರು ಮಳೆಯ ಕೊರತೆಯ ನಡುವೆಯೂ ರಾಜ್ಯದ ಅತಿ ದೊಡ್ಡ ಜಲಾಶಯಗಳಲ್ಲಿ ಒಂದಾದ ಆಲಮಟ್ಟಿ ಅಣೆಕಟ್ಟು ಬುಧವಾರ ಸಂಜೆಯ ವೇಳೆಗೆ ಸಂಪೂರ್ಣ ಭರ್ತಿಯಾಗಿದೆ. ನೀರಿನ ಮಟ್ಟವು ಅಣೆಕಟ್ಟಿನ ಗರಿಷ್ಠ 519.60 ಮೀಟರ್‌ಗೆ ತಲುಪಿದೆ.

ಆಲಮಟ್ಟಿ ಜಲಾಶಯದ ಹಿನ್ನೀರಿನಲ್ಲಿ ಹೂಳು ಸಂಗ್ರಹ: ತಜ್ಞರಿಂದ ಅಧ್ಯಯನ
ಜಲಾಶಯಗಳಲ್ಲಿ ಹೂಳು ಶೇಖರಣೆಯಾಗುತ್ತಿದ್ದು, ಅಣೆಕಟ್ಟುಗಳಲ್ಲಿ ನೀರಿನ ಸಂಗ್ರಹ ಪ್ರಮಾಣ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಈ ಬೆಳವಣಿಗೆಗೆ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.

ಆಲಮಟ್ಟಿ ಡ್ಯಾಂ 524 ಅಡಿಗೆ ಎತ್ತರಿಸಲು ಕ್ರಮ: ಸಿಎಂ ಬೊಮ್ಮಾಯಿ
ಕೃಷ್ಣಾ ಮೇಲ್ದಂಡೆ ಯೋಜನೆಯಡಿ ಆಲಮಟ್ಟಿ ಜಲಾಶಯವನ್ನು 524 ಅಡಿಗೆ ಏರಿಕೆ ಮಾಡಲು ತಜ್ಞರ ತಂಡದ ಜತೆ ದೆಹಲಿಯಲ್ಲಿ ಚರ್ಚಿಸುತ್ತೇನೆ. ಪ್ರಕರಣ ಸುಪ್ರೀಂ ಕೋರ್ಟ್ ನಲ್ಲಿದೆ. ಆದಷ್ಟು ಬೇಗ ನೋಟಿಫಿಕೇಷನ್ ಮಾಡಲು ಕ್ರಮ...

ಭಾರೀ ಮಳೆಯಿಂದ ಗರಿಷ್ಠ ಮಟ್ಟದ ಸನಿಹದಲ್ಲಿ ಆಲಮಟ್ಟಿ ಜಲಾಶಯ, ರೈತರಲ್ಲಿ ಸಂತಸ!
ಪಶ್ಚಿಮ ಘಟ್ಟಗಳು ಮತ್ತು ಕೃಷ್ಣ ನದಿಯ ಜಲಾನಯನ ಪ್ರದೇಶಗಳಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ ಲಾಲ್ ಬಹದ್ದೂರ್ ಶಾಸ್ತ್ರಿ ಜಲಾಶಯದ (ಆಲಮಟ್ಟಿ ಅಣೆಕಟ್ಟು) ನೀರಿನ ಮಟ್ಟ ಸೋಮವಾರ ಗರಿಷ್ಠ ಮಟ್ಟಕ್ಕೆ ಹತ್ತಿರ ತಲುಪಿದೆ.

