airports

ವಿಮಾನ ನಿಲ್ದಾಣಗಳಲ್ಲಿ ದಟ್ಟಣೆ ನಿರ್ವಹಣೆಗೆ ಸಿಐಎಸ್ಎಫ್ ನಿಂದ ಹೆಚ್ಚುವರಿ 100 ಸಿಬ್ಬಂದಿ ನಿಯೋಜನೆ
ದೆಹಲಿ, ಮುಂಬೈ ಸೇರಿದಂತೆ ದೇಶದ ದೊಡ್ಡ ವಿಮಾನ ನಿಲ್ದಾಣಗಳಲ್ಲಿ ದಟ್ಟಣೆಯನ್ನು ನಿವಾರಿಸುವುದಕ್ಕಾಗಿ ಕೇಂದ್ರ ಕೈಗಾರಿಕಾ ಭದ್ರತಾ ಪಡೆ ( ಸಿಐಎಸ್ಎಫ್) ಸಜ್ಜುಗೊಂಡಿದೆ.

ರಾಜ್ಯದ ವಿಮಾನ ನಿಲ್ದಾಣಗಳ ನಿರ್ವಹಣೆ ಮತ್ತು ಕಾರ್ಯಾಚರಣೆಗೆ ಮಹಾರಾಷ್ಟ್ರ ಮಾದರಿ ಅಳವಡಿಸಿಕೊಳ್ಳುವ ಸಾಧ್ಯತೆ
ಸರ್ಕಾರ ಸದ್ಯ ನಿರ್ಮಿಸುತ್ತಿರುವ ಮತ್ತು ಭವಿಷ್ಯದಲ್ಲಿ ನಿರ್ಮಿಸಲಿರುವ ವಿಮಾನ ನಿಲ್ದಾಣಗಳ ನಿರ್ವಹಣೆ ಮತ್ತು ಕಾರ್ಯಾಚರಣೆಗೆ ಮಹಾರಾಷ್ಟ್ರದ ಮಾದರಿಯನ್ನು ಪುನರಾವರ್ತಿಸಲು ರಾಜ್ಯ ಸರ್ಕಾರ ಇದೇ ಮೊದಲ ಬಾರಿಗೆ ಚಿಂತನೆ ನಡೆಸಿದೆ.

ವಿಮಾನದಲ್ಲಿ, ವಿಮಾನ ನಿಲ್ದಾಣಗಳಲ್ಲಿ ಭಾರತೀಯ ಸಂಗೀತ ಹಾಕಿ: ವಿಮಾನಯಾನ ಸಚಿವಾಲಯ ಸೂಚನೆ
ವಿಮಾನಗಳು ಮತ್ತು ಟರ್ಮಿನಲ್ ಆವರಣದಲ್ಲಿ ಭಾರತೀಯ ಸಂಗೀತ ಬಿತ್ತರವನ್ನು ಪರಿಗಣಿಸುವಂತೆ ನಾಗರಿಕ ವಿಮಾನಯಾನ ಸಚಿವಾಲಯ ಮಂಗಳವಾರ ಎಲ್ಲಾ ವಿಮಾನಯಾನ ಸಂಸ್ಥೆಗಳು ಮತ್ತು ವಿಮಾನ ನಿಲ್ದಾಣಗಳಿಗೆ ಹೇಳಿದೆ.

ಬೆಳಗಾವಿ, ಕಲಬುರ್ಗಿ ವಿಮಾನ ನಿಲ್ದಾಣಗಳಲ್ಲಿ ವೈಮಾನಿಕ ಚಾಲನಾ ತರಬೇತಿ ಅಕಾಡೆಮಿ ಸ್ಥಾಪನೆ!
ಭಾರತದ ವಿಮಾನ ನಿಲ್ದಾಣ ಪ್ರಾಧಿಕಾರದ ವೈಮಾನಿಕ ಚಾಲನಾ ತರಬೇತಿ ಸಂಸ್ಥೆ ನೀತಿಯ ಅಡಿ ಬೆಳಗಾವಿ, ಕಲಬುರ್ಗಿ ವಿಮಾನ ನಿಲ್ದಾಣಗಳಲ್ಲಿ ವೈಮಾನಿಕ ಚಾಲನಾ ತರಬೇತಿ ಅಕಾಡೆಮಿ ಶೀಘ್ರವೇ ಸ್ಥಾಪನೆಯಾಗಲಿದೆ.

ಕೋವಿಡ್-19 ಲಸಿಕೆ ವಿತರಣೆ ಕಾರ್ಯಕ್ಕಾಗಿ ಭಾರತೀಯ ವಿಮಾನಯಾನ ಸಂಸ್ಥೆಗಳು, ವಿಮಾನ ನಿಲ್ದಾಣಗಳು ಸಜ್ಜು!
ಜಗತ್ತಿನಾದ್ಯಂತ ಕೆಲ ಕೊರೋನಾವೈರಸ್ ಲಸಿಕೆಗಳ ಪ್ರಯೋಗ ಅಂತಿಮ ಹಂತದಲ್ಲಿರುವಂತೆಯೇ, ದೇಶದಲ್ಲಿ ತಾಪಮಾನ ಸೂಕ್ಷ್ಮ ಲಸಿಕೆಗಳ ವಿತರಣೆ ಕಾರ್ಯಕ್ಕಾಗಿ ಭಾರತೀಯ ವಿಮಾನ ನಿಲ್ದಾಣಗಳು ಹಾಗೂ ಭಾರತೀಯ ವಿಮಾನಯಾನ ಸಂಸ್ಥೆಗಳು ಸಜ್ಜುಗೊಂಡಿವೆ.

ಅದಾನಿ ಗ್ರೂಪ್ ಗೆ ದೇಶದ 3 ವಿಮಾನ ನಿಲ್ದಾಣ ಗುತ್ತಿಗೆ: ಕೇಂದ್ರ ಸಂಪುಟ ಒಪ್ಪಿಗೆ
ಸಾರ್ವಜನಿಕ ಖಾಸಗಿ ಸಹಭಾಗಿತ್ವದ(ಪಿಪಿಪಿ) ಮೂಲಕ ಭಾರತದ ವಿಮಾನ ನಿಲ್ದಾಣ ಪ್ರಾಧಿಕಾರದ ಜೈಪುರ, ಗುವಾಹಟಿ ಮತ್ತು ತಿರುವನಂತಪುರಂ ವಿಮಾನ ನಿಲ್ದಾಣಗಳನ್ನು ಗುತ್ತಿಗೆ ನೀಡುವ ಪ್ರಸ್ತಾಪಕ್ಕೆ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ.

ಕೊರೋನಾ ವೈರಸ್ ಆತಂಕ: ಕೇಂದ್ರ ಆರೋಗ್ಯ ಸಚಿವಾಲಯದಿಂದ ಪರಾಮರ್ಶೆ
ಈಗ ಎಲ್ಲೆಲ್ಲೂ ಕೊರೋನಾ ವೈರಸ್ ದ್ದೇ ಮಾತು. ಎಲ್ಲಿ ವೈರಸ್ ಸೋಂಕು ತಗುಲುತ್ತದೋ ಎಂಬ ಭೀತಿಯಲ್ಲಿ ಜನತೆ ಇರುವಾಗ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ವಿಶೇಷ ಕಾರ್ಯದರ್ಶಿ ಸಂಜೀವ್ ಕುಮಾರ್ ವಿಮಾನ ನಿಲ್ದಾಣಗಳಲ್ಲಿ ಮತ್ತು ಆಸ್ಪತ್ರೆಗಳಲ್ಲಿ ಮಾಡಿರುವ ಸಿದ್ದತೆಗಳ ಬಗ್ಗೆ ಪರಾಮರ್ಶೆ ನಡೆಸಿದ್ದಾರೆ.

ಬಾಂಬ್ ಪತ್ತೆ ಹಿನ್ನೆಲೆ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಹೆಚ್ಚಿದ ಭದ್ರತೆ, ರಾಜ್ಯದ ಹಲವೆಡೆ ಹೈಅಲರ್ಟ್
ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆಯಾದ ಹಿನ್ನೆಲೆಯಲ್ಲಿ ಬೆಂಗಲೂರು ಸೇರಿದಂತೆ ರಾಜ್ಯದಾದ್ಯಂತ ಹೈಅಲರ್ಟ್ ಘೋಷಿಸಲಾಗಿದ್ದು, ಎಲ್ಲೆಡೆ ಖಾಕಿಪಡೆಗಳು ಕಚ್ಚೆಚ್ಚರ ವಹಿಸಿದೆ.

ವಾಯು ಚಂಡಮಾರುತ ವಿಮಾನ ನಿಲ್ದಾಣ, ರೈಲು ನಿಲ್ದಾಣಗಳಲ್ಲಿ ಸೇವೆ ವ್ಯತ್ಯಯ
ವಾಯು ಚಂಡಮಾರುತದ ಪರಿಣಾಮವಾಗಿ ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ ಗುಜರಾತ್ ನ 5 ವಿಮಾನ ನಿಲ್ದಾಣಗಳಲ್ಲಿ ಸೇವೆ ವ್ಯತ್ಯಯವಾಗಲಿದೆ ಎಂದು ಹೇಳಿದೆ.

