Agra

ಆಗ್ರಾ: ಮನೆಯ ಮೇಲ್ಛಾವಣಿ ಬೆಂಕಿ, ಇಬ್ಬರು ಸಹೋದರಿಯರು ಸಜೀವ ದಹನ
ಶಾರ್ಟ್ ಸರ್ಕ್ಯೂಟ್‌ನಿಂದ ಮನೆಯ ಮೇಲ್ಛಾವಣಿಗೆ ಬೆಂಕಿ ತಗುಲಿ ಇಬ್ಬರು ಸಹೋದರಿಯರು ಸಜೀವ ದಹನವಾಗಿರುವ ಘಟನೆ ಆಗ್ರಾದ ಗ್ರಾಮವೊಂದರಲ್ಲಿ ಬುಧವಾರ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆಗ್ರಾ: ರಾಮ ನವಮಿಯಂದು ಕೋಮುಗಲಭೆ ಪ್ರಚೋದಿಸಲು ಬಿಹೆಚ್ ಎಂ ಕಾರ್ಯಕರ್ತರಿಂದ ಗೋಹತ್ಯೆ- ಪೊಲೀಸರು
ಮಾರ್ಚ್ 30 ರಂದು ರಾಮನವಮಿ ಆಚರಣೆಯ ಸಂದರ್ಭದಲ್ಲಿ ಉತ್ತರ ಪ್ರದೇಶದ ಆಗ್ರಾದಲ್ಲಿ ಸೌಹಾರ್ದ ವಾತಾವರಣವನ್ನು ಹಾಳು ಮಾಡಲು ಮತ್ತು ಕೋಮುಗಲಭೆಯನ್ನು ಪ್ರಚೋದಿಸಲು ಭಾರತ್ ಹಿಂದೂ ಮಹಾಸಭಾ (ಬಿಎಚ್‌ಎಂ) ನ ಕೆಲವು ಸದಸ್ಯರು ಗೋಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ಶನಿವಾರ ಬಹಿರಂಗಪಡಿಸಿದ್ದಾರೆ.

ಆಗ್ರಾ: 6 ಮನೆಗಳು ಕುಸಿದು ಓರ್ವ ಬಾಲಕಿ ಸಾವು, ಕುಟುಂಬದ ಮತ್ತಿಬ್ಬರಿಗೆ ಗಾಯ!
ಆಗ್ರಾದಲ್ಲಿ ಇಂದು ಬೆಳಗ್ಗೆ ಹೋಟೆಲೊಂದರ ಉತ್ಖನನ ಕಾರ್ಯದ ವೇಳೆ ಆರು ಮನೆಗಳು ಕುಸಿದು ಬಿದ್ದ ಪರಿಣಾಮ ನಾಲ್ಕು ವರ್ಷದ ಬಾಲಕಿ ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಆಗ್ರಾ: ಚೀನಾದಿಂದ ವಾಪಸ್ಸಾದ ವ್ಯಕ್ತಿಗೆ ಕೋವಿಡ್ ಸೋಂಕು ದೃಢ
ಚೀನಾದಿಂದ 2 ದಿನಗಳ ಹಿಂದಷ್ಟೇ ವಾಪಸ್ಸಾಗಿದ್ದ 40 ವರ್ಷದ ವ್ಯಕ್ತಿಗೆ ಕೋವಿಡ್ ಸೋಂಕು ದೃಢಪಟ್ಟಿದ್ದು, ಆಗ್ರಾದಲ್ಲಿ ಆತನನ್ನು ಐಸೊಲೇಷನ್ ಗೆ ಒಳಪಡಿಸಲಾಗಿದೆ ಎಂದು ಮುಖ್ಯ ವೈದ್ಯಾಧಿಕಾರಿ ಅರುಣ್ ಶ್ರೀವಾಸ್ತವ ಹೇಳಿದ್ದಾರೆ.

ಟಿ20 ವಿಶ್ವಕಪ್: ಭಾರತ ವಿರುದ್ಧ ಪಾಕಿಸ್ತಾನ ಗೆಲುವನ್ನು ಸಂಭ್ರಮಿಸಿದ ಕಾಶ್ಮೀರದ ಮೂವರು ವಿದ್ಯಾರ್ಥಿಗಳು ಆಗ್ರಾದಲ್ಲಿ ಬಂಧನ
ಕಳೆದ 24ರಂದು ನಡೆದ ಟಿ20 ವಿಶ್ವಕಪ್ ನಲ್ಲಿ ಭಾರತ ವಿರುದ್ಧ ಪಾಕಿಸ್ತಾನದ ಗೆಲುವನ್ನು ಸಂಭ್ರಮಿಸಿದ ಕಾಶ್ಮೀರದ ಮೂವರು ವಿದ್ಯಾರ್ಥಿಗಳನ್ನು ಆಗ್ರಾ ಪೊಲೀಸರು ಬಂಧಿಸಿದ್ದಾರೆ. ಈ ವಿದ್ಯಾರ್ಥಿಗಳು ಪಾಕಿಸ್ತಾನ ಸೋಷಿಯಲ್ ಮೀಡಿಯಾಗಳಲ್ಲಿ ಭಾರತ ವಿರುದ್ಧ ಸಂದೇಶಗಳನ್ನು ಹಾಕುತ್ತಿದ್ದರು ಎಂದು ಸಹ ಪೊಲೀಸರು ಹೇಳಿದ್ದಾರೆ.

ಆಗ್ರಾ ಪೊಲೀಸ್ ಠಾಣೆಯಲ್ಲಿ 25 ಲಕ್ಷ ರೂಪಾಯಿ ಕಳ್ಳತನ: ಆರು ಪೊಲೀಸರ ಅಮಾನತು
ಜಗದೀಶಪುರ ಪೊಲೀಸ್ ಠಾಣೆಯಲ್ಲಿದ್ದ 25 ಲಕ್ಷ ರೂಪಾಯಿ ನಗದು ಕಳ್ಳತನವಾದ ನಂತರ ಆರು ಪೊಲೀಸ್ ಸಿಬ್ಬಂದಿಯನ್ನು ಭಾನುವಾರ ಅಮಾನತುಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೋವಿಡ್ ಮುಂಜಾಗ್ರತೆಗಳೊಂದಿಗೆ ಇಂದಿನಿಂದ ತಾಜ್ ಮಹಲ್ ಪ್ರವಾಸಿಗರಿಗೆ ಮುಕ್ತ, ಆದರೆ ಷರತ್ತು ಅನ್ವಯ!
ಪ್ರೇಮಸೌಧವೆಂದೇ ಖ್ಯಾತಿಗಳಿಸಿರುವ ತಾಜ್ ಮಹಲ್ ಸತತ 6 ತಿಂಗಳ ಬಳಿಕ ಇದೇ ಮೊದಲ ಬಾರಿಗೆ ಪ್ರವಾಸಿಗರ ವೀಕ್ಷಣೆಗೆ ಇಂದಿನಿಂದ ಮುಕ್ತವಾಗಿದೆ.

ಉತ್ತರಪ್ರದೇಶ: ಸಾಲ ವಸೂಲಿಗಾಗಿ ಹೈಜಾಕ್ ಮಾಡಲಾಗಿದ್ದ ಬಸ್ ಪತ್ತೆ, ಪ್ರಯಾಣಿಕರು ಸುರಕ್ಷಿತ
ಸಾಲ ವಸೂಲಿಗಾಗಿ 34 ಪ್ರಯಾಣಿಕರು ಸಂಚರಿಸುತ್ತಿದ್ದ ಬಸ್ಸನ್ನೇ ಫೈನಾನ್ಸ್ ಒಂದರ ಸಿಬ್ಬಂದಿಗಳು ಹೈಜಾಕ್ ಮಾಡಿದ ಆಘಾತಕಾರಿ ಘಟನೆ ಉತ್ತರಪ್ರದೇಶದ ಆಗ್ರಾ ಬಳಿ ಮಂಗಳವಾರ ತಡರಾತ್ರಿ ನಡೆದಿದ್ದು, ಹೈಜಾಕ್ ಆಗಿದ್ದ ಬಸ್ ಮತ್ತು ಅದರಲ್ಲಿದ್ದ ಪ್ರಯಾಣಿಕರು ಸುರಕ್ಷಿತವಾಗಿ ಪತ್ತೆಯಾಗುವುದರೊಂದಿಗೆ ಪ್ರಕರಣ ಸುಖಾಂತ್ಯವಾಗಿದೆ.

ಇಳಿ ವಯಸ್ಸಿನಲ್ಲೂ ಕೊರೋನಾ ಗೆದ್ದು ರೋಗಿಗಳಿಗೆ ಭರವಸೆಯ ಆಶಾಕಿರಣವಾದ 97ರ ವೃದ್ಧ!
1923 ರಲ್ಲಿ ಜನಿಸಿದ್ದ ವ್ಯಕ್ತಿ ಬುಧವಾರ ಕೊರೋನಾದಿಂದ ಗುಣಮುಖರಾಗಿ ಖಾಸಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ವಯಸ್ಸಾದ ರೋಗಿಗಳಲ್ಲಿ ದೇಶದಲ್ಲೇ ಇವರೇ ಮೊದಲು ಕೊರೋನಾ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.

