Adani group

NDTV ಪ್ರತಿ ಷೇರಿಗೆ ಹೆಚ್ಚುವರಿ 48.65 ರೂ..; ಅದಾನಿ ಗ್ರೂಪ್ ಆಫರ್
ಖ್ಯಾತ ರಾಷ್ಟ್ರೀಯ ಸುದ್ದಿವಾಹಿನಿ ಎನ್ ಡಿಟಿವಿ ಷೇರು ಖರೀದಿ ಪ್ರಕ್ರಿಯೆಗೆ ಮುಂದಾಗಿರುವ ಅದಾನಿ ಸಮೂಹ ಇದೀಗ ಸುದ್ದಿವಾಹಿನಿ ಸಂಸ್ಥೆಗೆ ಮತ್ತೊಂದು ಆಫರ್ ನೀಡಿದ್ದು, ಈ ಹಿಂದೆ ತಾನು ಘೋಷಣೆ ಮಾಡಿದ್ದ ದರಕ್ಕಿಂತ ಪ್ರತೀ ಷೇರಿಗೆ ಹೆಚ್ಚುವರಿ 48.65 ರೂ ನೀಡುವುದಾಗಿ ಘೋಷಣೆ ಮಾಡಿದೆ.

ಷೇರು ಬೆಲೆಗಳು ಏರಿಕೆ; ಗೌತಮ್ ಅದಾನಿ ಈಗ ವಿಶ್ವದ ಎರಡನೇ ಶ್ರೀಮಂತ ವ್ಯಕ್ತಿ
ಅಮೆಜಾನ್‌ನ ಜೆಫ್ ಬೆಜೋಸ್ ಮತ್ತು ಫ್ರಾನ್ಸ್‌ನ ಲೂಯಿಸ್ ವಿಟ್ಟನ್‌ನ ಬರ್ನಾರ್ಡ್ ಅರ್ನಾಲ್ಟ್ ಇಬ್ಬರನ್ನೂ ಹಿಂದಿಕ್ಕಿರುವ ಭಾರತದ ಬಿಲಿಯನೇರ್ ಗೌತಮ್ ಅದಾನಿ ಈಗ ವಿಶ್ವದ ಎರಡನೇ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಅವರ ಸಂಪತ್ತು ಸುಮಾರು 154.7 ಬಿಲಿಯನ್ ಡಾಲರ್ (12.35 ಲಕ್ಷ ಕೋಟಿ ರೂ.)ಗೆ ಏರಿಕೆಯಾಗಿದೆ.

ಅದಾನಿ ಗ್ರೂಪ್‌ನ ಗೌತಮ್ ಅದಾನಿ ಈಗ ವಿಶ್ವದ 3ನೇ ಶ್ರೀಮಂತ ವ್ಯಕ್ತಿ!
ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್‌ನ ಪ್ರಕಾರ ಅದಾನಿ ಗ್ರೂಪ್‌ನ ಅಧ್ಯಕ್ಷ ಗೌತಮ್ ಅದಾನಿ ಈಗ ಫ್ರಾನ್ಸ್‌ನ ಬರ್ನಾರ್ಡ್ ಅರ್ನಾಲ್ಟ್ ಅವರನ್ನು ಹಿಂದಿಕ್ಕಿ ವಿಶ್ವದ ಮೂರನೇ ಅತಿದೊಡ್ಡ ಶ್ರೀಮಂತ ವ್ಯಕ್ತಿಯಾಗಿದ್ದಾರೆ.

ಎನ್ ಡಿಟಿವಿಯ ಶೇ. 26 ರಷ್ಟು ಷೇರು ಖರೀದಿಗೆ ಮುಂದಾದ ಅದಾನಿ ಗ್ರೂಪ್
ಅದಾನಿ ಸಮೂಹದ ಎಎಮ್‌ಜಿ ಮೀಡಿಯಾ, ಪರೋಕ್ಷವಾಗಿ ಎನ್‌ಡಿಟಿವಿಯ ಶೇ. 26 ರಷ್ಟು ಷೇರುಗಳ ಖರೀದಿ ಮಾಡಲು ನಿರ್ಧರಿಸಿದೆ.

ಪ್ರಧಾನಿ ಮೋದಿ, ಅದಾನಿ ವಿರುದ್ಧ ವಿವಾದಾತ್ಮಕ ಆರೋಪ: ಲಂಕಾದ ಉನ್ನತ ಅಧಿಕಾರಿ ರಾಜೀನಾಮೆ!
ಪವನ ವಿದ್ಯುತ್ ಯೋಜನೆಯನ್ನು ಅದಾನಿ ಗ್ರೂಪ್‌ಗೆ ಮಂಜೂರು ಮಾಡುವಂತೆ ಭಾರತದ ಪ್ರಧಾನಿ ನರೇಂದ್ರ ಮೋದಿ ಶ್ರೀಲಂಕಾ ಸರ್ಕಾರದ ಮೇಲೆ ಒತ್ತಡ ಹೇರಿದ್ದಾರೆ ಎಂದು ಆರೋಪಿಸಿದರು.

ಈ ವರ್ಷ ಅದಾನಿ ಆದಾಯ ದಿನವೊಂದಕ್ಕೆ 1,000 ಕೋಟಿ: ಶ್ರೀಮಂತರ ಪಟ್ಟಿ ಹೀಗಿದೆ...
ಈ ವರ್ಷ ಭಾರತ 179 ಮಂದಿ ಸೂಪರ್ ರಿಚ್ ವ್ಯಾಪ್ತಿಗೆ ಬಂದಿದ್ದು, ಅದಾನಿ ಸಮೂಹದ ಗೌತಮ್ ಅದಾನಿ ವಾರ್ಷಿಕ 3,65700 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಅಥವಾ ದಿನವೊಂದಕ್ಕೆ 1,000 ಕೋಟಿಗಿಂತಲೂ ಹೆಚ್ಚಿನ ಹಣವನ್ನು ಸಂಪಾದಿಸಿದ್ದಾರೆ.

ನವಿ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಯೋಜನೆಯಲ್ಲಿ ಶೇ.74ರಷ್ಟು ಷೇರು ಪಡೆದ ಅದಾನಿ ಗ್ರೂಪ್
ನವಿ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಷೇರುಗಳಲ್ಲಿ ಶೇಕಡಾ 74ನ್ನು ಅದಾನಿ ಗ್ರೂಪ್ ಅಧಿಕೃತವಾಗಿ ಸೋಮವಾರ ಪಡೆದಿದೆ.

ಅದಾನಿ ಗ್ರೂಪ್ ಗೆ ವಿಮಾನ ನಿಲ್ದಾಣ ಗುತ್ತಿಗೆ ನೀಡುವ ನಿರ್ಧಾರಕ್ಕೆ ಸಹಕರಿಸುವುದು ಕಷ್ಟ:ಪ್ರಧಾನಿಗೆ ಕೇರಳ ಸಿಎಂ ಪತ್ರ
ಕೇರಳ ರಾಜಧಾನಿ ತಿರುವನಂತಪುರಂ ವಿಮಾನ ನಿಲ್ದಾಣದ ನಿರ್ವಹಣೆಯನ್ನು ಅದಾನಿ ಗ್ರೂಪ್ ಗೆ ಹಸ್ತಾಂತರ ಮಾಡುವ ನಿರ್ಧಾರವನ್ನು ಮರುಪರಿಶೀಲಿಸುವಂತೆ ಮತ್ತು ಈ ವಿಷಯದಲ್ಲಿ ಮಧ್ಯೆ ಪ್ರವೇಶಿಸುವಂತೆ ಕೇರಳ ಮುಖ್ಯಮಂತ್ರಿ ಪಿನರಾಯಿ ವಿಜಯನ್ ಪ್ರಧಾನಿ ನರೇಂದ್ರ ಮೋದಿಯವರನ್ನು ಪತ್ರದ ಮೂಲಕ ಒತ್ತಾಯಿಸಿದ್ದಾರೆ.

ಅದಾನಿ ಗ್ರೂಪ್ ಗೆ ದೇಶದ 3 ವಿಮಾನ ನಿಲ್ದಾಣ ಗುತ್ತಿಗೆ: ಕೇಂದ್ರ ಸಂಪುಟ ಒಪ್ಪಿಗೆ
ಸಾರ್ವಜನಿಕ ಖಾಸಗಿ ಸಹಭಾಗಿತ್ವದ(ಪಿಪಿಪಿ) ಮೂಲಕ ಭಾರತದ ವಿಮಾನ ನಿಲ್ದಾಣ ಪ್ರಾಧಿಕಾರದ ಜೈಪುರ, ಗುವಾಹಟಿ ಮತ್ತು ತಿರುವನಂತಪುರಂ ವಿಮಾನ ನಿಲ್ದಾಣಗಳನ್ನು ಗುತ್ತಿಗೆ ನೀಡುವ ಪ್ರಸ್ತಾಪಕ್ಕೆ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ.

