accused

ಸೈಫ್ ಆಲಿ ಖಾನ್ ಮೇಲೆ ದಾಳಿ: ಮುಖ್ಯ ಆರೋಪಿ ಬಾಂಗ್ಲಾದೇಶ ಪ್ರಜೆ ಥಾಣೆಯಲ್ಲಿ ಬಂಧನ; ಮುಂಬೈ ಪೊಲೀಸರಿಂದ ತೀವ್ರ ವಿಚಾರಣೆ
ಥಾಣೆ ಪಕ್ಕದ ಪ್ರದೇಶದಿಂದ ಬಂಧಿಸಲ್ಪಟ್ಟ ಸೈಫ್ ಅಲಿ ಖಾನ್ ಮೇಲೆ ಹಲ್ಲೆ ನಡೆಸಿದ ಆರೋಪಿ ಬಾಂಗ್ಲಾದೇಶದವನಾಗಿದ್ದು, ಭಾರತಕ್ಕೆ ಪ್ರವೇಶಿಸಿದ ನಂತರ ತನ್ನ ಹೆಸರನ್ನು ಮೊಹಮ್ಮದ್ ಶರೀಫುಲ್ ಇಸ್ಲಾಂ ಶೆಹಜಾದ್ ನಿಂದ ಬಿಜೋಯ್ ದಾಸ್ ಎಂದು ಬದಲಾಯಿಸಿಕೊಂಡಿದ್ದ ಎಂದು ಅಧಿಕಾರಿ ತಿಳಿಸಿದ್ದಾರೆ.

ಟೆಕ್ಕಿ ಆತ್ಮಹತ್ಯೆ ಪ್ರಕರಣ: ಜಾಮೀನು ಕೋರಿ ಬೆಂಗಳೂರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ ಅತುಲ್ ಪತ್ನಿ, ಸಂಬಂಧಿಕರು
ನಿಕಿತಾ ಸಿಂಘಾನಿಯಾ ಅವರನ್ನು ಹರಿಯಾಣದ ಗುರುಗ್ರಾಮದಲ್ಲಿ, ಆಕೆಯ ತಾಯಿ ನಿಶಾ ಸಿಂಘಾನಿಯಾ ಮತ್ತು ಸಹೋದರ ಅನುರಾಗ್ ಸಿಂಘಾನಿಯಾ ಅವರನ್ನು ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ಡಿಸೆಂಬರ್ 14 ರಂದು ಬಂಧನ

ವಾಲ್ಮೀಕಿ ನಿಗಮ ಹಗರಣ: ಜೈಲಿನಲ್ಲಿ ನಮ್ಮ ಹತ್ಯೆಗೆ ಸಂಚು ರೂಪಿಸಲಾಗಿದೆ: ಆರೋಪಿಗಳು ಆತಂಕ
ಜಾಮೀನು ಅರ್ಜಿಯ ವಿಚಾರಣೆ ವೇಳೆ ವರ್ಮಾ ಅವರು ತಮ್ಮ ವಕೀಲರ ಮೂಲಕ ಹೇಳಿಕೆ ನೀಡಿದ್ದಾರೆ. ಪ್ರಕರಣದಲ್ಲಿ ನನ್ನನ್ನು ಬಲಿಪಶು ಮಾಡಲಾಗಿದೆ. ನಾನು ನಿರಪರಾಧಿ. ನಿಜವಾದ ಅಪರಾಧಿಗಳು ನನಗೆ ಜೀವ ಬೆದರಿಕೆಗಳನ್ನೊಡ್ಡಿದ್ದಾರೆ.

ಹುಬ್ಬಳ್ಳಿ: ಪೊಲೀಸರ ಮೇಲೆ ಹಲ್ಲೆಗೆ ಯತ್ನ; ಇಬ್ಬರು ದರೋಡೆಕೋರರ ಕಾಲಿಗೆ ಗುಂಡೇಟು
ಮೂಲತಃ ಮಂಗಳೂರು ಮೂಲದ ಭರತ್, ಫಾರುಕ್ ಕಾರು ಅಡ್ಡಗಟ್ಟಿ ದರೋಡೆ ಮಾಡುತ್ತಿದ್ದರು. ಇವರ ಗ್ಯಾಂಗ್‌ನಲ್ಲಿ 15 ಜನರಿದ್ದಾರೆ. ಮಹಾರಾಷ್ಟ್ರದ ಸಾಂಗ್ಲಿ ಮೂಲದ ರಾಹುಲ್ ಸುರ್ವೆ ಕಾರು ಅಡ್ಡಗಟ್ಟಿ ಖದೀಮರು ದರೋಡೆ ಮಾಡಿದ್ದರು.

ಉಡುಪಿ: ಹಿಟ್ ಅಂಡ್ ರನ್ ಪ್ರಕರಣ; ಆರೋಪಿ ಬಂಧನ
ಬೆಳಪುವಿನ ಕಾಂಗ್ರೆಸ್ ಮುಖಂಡ ದೇವಿಪ್ರಸಾದ್ ಶೆಟ್ಟಿ ಅವರ ಪುತ್ರ ಪ್ರಜ್ವಲ್ ಶೆಟ್ಟಿ ಬಂಧಿತ ಆರೋಪಿ. ಅವರು ಚಲಾಯಿಸುತ್ತಿದ್ದ ಕಾರು ಮೊಹಮ್ಮದ್ ಹುಸೇನ್ ಎಂಬವರ ಬೈಕ್‌ಗೆ ಡಿಕ್ಕಿ ಹೊಡೆದಿತ್ತು. ಆದರೆ ಅವರು ಕಾರು ನಿಲ್ಲಿಸದೆ ವೇಗವಾಗಿ ಚಲಾಯಿಸಿಕೊಂಡು ಹೋಗಿದ್ದರು.

ಬೆಂಗಳೂರು: ಮದುವೆ ನೆಪದಲ್ಲಿ ಅತ್ಯಾಚಾರ; ಯುವಕನ ಬಂಧನ
ಛತ್ತೀಸ್ ಗಢ ಮೂಲದ ಸಂತ್ರಸ್ತೆ ಹೆಬ್ಬಾಳದ ಖಾಸಗಿ ಆಸ್ಪತ್ರೆಯ ನರ್ಸಿಂಗ್ ಸಿಬ್ಬಂದಿಯಾಗಿದ್ದು, ರಫೀಕ್ ಅವರೊಂದಿಗೆ ನೇರ ಸಂಬಂಧ ಹೊಂದಿದ್ದರು. 2021 ರಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಪರಸ್ಪರ ಪರಿಚಿತರಾಗಿದ್ದು, ಬಳಿಕ ಫೋನ್‌ನಲ್ಲಿ ಚಾಟಿಂಗ್, ಮಾತುಕತೆ ಮೂಲಕ ಪ್ರೀತಿಸುತ್ತಿದ್ದರು.

ಲೋಕಾಯುಕ್ತ ಪೊಲೀಸರ ಕೆಟ್ಟ ತನಿಖೆಯಿಂದಾಗಿ ಆರೋಪಿಗಳು ಖುಲಾಸೆ: ನ್ಯಾಯಾಧೀಶ ಕೆ.ಎಂ ರಾಧಾಕೃಷ್ಣ ಬೇಸರ
ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ)ಗೆ ಸಂಬಂಧಿಸಿದ ಭ್ರಷ್ಟಾಚಾರ ಪ್ರಕರಣದಲ್ಲಿ ಲೋಕಾಯುಕ್ತ ಅಧಿಕಾರಿಯ ಕಳಪೆ ತನಿಖೆಯಿಂದಾಗಿ ಆರೋಪಿಗಳನ್ನು ಖುಲಾಸೆಗೊಳಿಸುವಾಗ ನ್ಯಾಯಾಧೀಶರು ಈ ರೀತಿ ಅಭಿಪ್ರಾಯಪಟ್ಟಿದ್ದಾರೆ.

ಕೋಲ್ಕತ್ತಾ: ಅನಾರೋಗ್ಯ ಪೀಡಿತ ಮಗನ ಪಕ್ಕದಲ್ಲಿದ್ದ ಮಹಿಳೆ ಮೇಲೆ ಅತ್ಯಾಚಾರ!
ಆರೋಪಿ ತನಯ್ ಪಾಲ್ (26) ಆಸ್ಪತ್ರೆಯ ಮಾಜಿ ವಾರ್ಡ್ ಬಾಯ್ ಆಗಿದ್ದು, ವಾರ್ಡ್ ಗೆ ನುಗ್ಗಿದ ಆತ ಮಲಗಿದ್ದ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿ ಆಕೆಯನ್ನು ವಿವಸ್ತ್ರಗೊಳಿಸಿದ್ದಾನೆ.

ಮೊವ್ ದಾಳಿ: ಎಲ್ಲಾ 6 ಆರೋಪಿಗಳ ಬಂಧನ, ಇಬ್ಬರು ಅಧಿಕಾರಿಗಳ ವಿರುದ್ಧ ತನಿಖೆಗೆ ಆದೇಶ!
ದಾಳಿಯ ವೇಳೆ ಪ್ರವಾಸಿ ತಾಣದಲ್ಲಿ ಇದ್ದ 23, 24 ವಯಸ್ಸಿನ ಅಧಿಕಾರಿಗಳು ಮೊವ್ ಕಂಟೋನ್ಮೆಂಟ್ ಟೌನ್‌ನಲ್ಲಿರುವ ಇನ್‌ಫೆಂಟ್ರಿ ಸ್ಕೂಲ್‌ನಲ್ಲಿ ಯುವ ಅಧಿಕಾರಿಗಳ ಕೋರ್ಸ್ ನ ಭಾಗವಾಗಿದ್ದಾರೆ.

