abuse

ದೇಶದ ಜನರಿಗಾಗಿ ಗುಂಡೇಟು ತಿನ್ನಲು ರಾಹುಲ್ ಸಿದ್ದ, ನನ್ನ ತಮ್ಮನನ್ನು ನೋಡಿ ಕಲಿಯಿರಿ: ಮೋದಿಗೆ ಪ್ರಿಯಾಂಕಾ ಟಾಂಗ್
ನನ್ನ ಸಹೋದರನಿಂದ ಪ್ರಧಾನಿ ಮೋದಿ ಕಲಿಯಬೇಕಿದೆ. ಏಕೆಂದ್ರೆ ದೇಶದ ಜನರಿಗಾಗಿ ನನ್ನ ಸಹೋದರ (ರಾಹುಲ್) ಗಾಲಿ, ಗೋಲಿ (ಬೈಗುಳ ಮತ್ತು ಗುಂಡು) ತಿನ್ನಲು ಸಿದ್ಧನಿದ್ದೇನೆ ಅಂತಾರೆ, ಆದರೆ ಮೋದಿ ನಿಂದನೆಗೆ ಹೆದರುತ್ತಿದ್ದಾರೆ.

ದೇವೇಂದ್ರ ಫಡ್ನವಿಸ್ ಪತ್ನಿ ವಿರುದ್ಧ ಫೇಸ್‌ಬುಕ್‌ನಲ್ಲಿ ನಿಂದನೆ: ಮಹಿಳೆಯ ಬಂಧನ
ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರ ಪತ್ನಿ ಅಮೃತಾ ಫಡ್ನವಿಸ್ ಅವರ ಫೇಸ್‌ಬುಕ್ ಪುಟದಲ್ಲಿ ನಿಂದನೀಯ ಮತ್ತು ಅಸಭ್ಯವಾಗಿ ಪೋಸ್ಟ್ ಮಾಡಿದ ಆರೋಪದ ಮೇಲೆ 50 ವರ್ಷದ ಮಹಿಳೆಯನ್ನು ಸೈಬರ್ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ವಜಾಗೊಳಿಸಿದ್ದಕ್ಕೆ ಹತಾಶೆ; ದೂರವಾಣಿ ಕರೆ ಮಾಡಿ ಮಹಿಳಾ ಪ್ರಾಂಶುಪಾಲರನ್ನು ನಿಂದಿಸಿದ ಉಪನ್ಯಾಸಕ
ಮಹಿಳಾ ಸಿಬ್ಬಂದಿ ಮತ್ತು ವಿದ್ಯಾರ್ಥಿನಿಯರೊಂದಿಗೆ ಅಸಭ್ಯವಾಗಿ ವರ್ತಿಸಿದ ಆರೋಪದ ಮೇಲೆ ಕೆಲಸದಿಂದ ವಜಾಗೊಳಿಸಿದ ನಂತರ ಹತಾಶೆಗೊಂಡ 36 ವರ್ಷದ ಕಾಲೇಜು ಉಪನ್ಯಾಸಕರೊಬ್ಬರು, ಕಾಲೇಜು ಪ್ರಾಂಶುಪಾಲರಿಗೆ ವಿವಿಧ ದೂರವಾಣಿ ಸಂಖ್ಯೆಗಳಿಂದ ಕರೆ ಮಾಡಿ ಬೆದರಿಕೆ ಮತ್ತು ನಿಂದನೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ವಿ.ಡಿ. ಸಾವರ್ಕರ್ ಕುರಿತ ಹೇಳಿಕೆ ವಿವಾದ: ಸಮಾಜವಾದಿ ನಾಯಕನಿಗೆ ಅಪರಿಚಿತನಿಂದ ಬೆದರಿಕೆ ಕರೆ
ಶಿವಾನಂದ ತಿವಾರಿ ಅವರು ಜಯಪ್ರಕಾಶ್ ನಾರಾಯಣ್ ಹಾಗೂ ರಾಮಮನೋಹರ್ ಲೋಹಿಯ ಥರದ ಮಹಾನ್ ನಾಯಕರೊಡನೆ ಅವರೊಂದಿಗೆ ಕೆಲಸ ಮಾಡಿದವರು.

ಡ್ರಗ್ಸ್ ಸೇವನೆ ಮನುಷ್ಯನನ್ನು ವಿನಾಶ ಮತ್ತು ಕತ್ತಲೆಯ ಕೂಪಕ್ಕೆ ತಳ್ಳುತ್ತದೆ: ಪ್ರಧಾನಿ ನರೇಂದ್ರ ಮೋದಿ
ಇಂದು ಶನಿವಾರ ಅಂತಾರಾಷ್ಟ್ರೀಯ ಮಾದಕ ವಸ್ತು ವಿರೋಧಿ ದಿನ. ಪ್ರತಿ ವರ್ಷ ಜೂನ್ 26ರಂದು ಅಂತಾರಾಷ್ಟ್ರೀಯ ಮಾದಕ ವಸ್ತು ವಿರೋಧಿ ದಿನವನ್ನಾಗಿ ಆಚರಿಸಲಾಗುತ್ತಿದೆ.

ಫೇಸ್ ಬುಕ್ ಇಂಡಿಯಾ ಸಿಬ್ಬಂದಿಯಿಂದ ಪ್ರಧಾನಿ, ಕೇಂದ್ರ ಸಚಿವರುಗಳ ವಿರುದ್ಧ ಅಪಪ್ರಚಾರ: ರವಿಶಂಕರ್ ಪ್ರಸಾದ್
ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೇರಿದಂತೆ ಕೇಂದ್ರ ಸಂಪುಟದ ಹಿರಿಯ ಸಚಿವರನ್ನು ಸೋಷಿಯಲ್ ಮೀಡಿಯಾದಲ್ಲಿ ಅವಹೇಳನಕಾರಿಯಾಗಿ ನಿಂದಿಸುವ ಕೆಲಸವನ್ನು ತಮ್ಮ ಸಂಸ್ಥೆಯ ಹಿರಿಯ ಅಧಿಕಾರಿಗಳು ಮಾಡುತ್ತಿದ್ದಾರೆ ಎಂದು ಆರೋಪಿಸಿ ಫೇಸ್ ಬುಕ್ ಸಿಇಒ ಮಾರ್ಕ್ ಝುಕರ್ ಬರ್ಗ್ ಅವರಿಗೆ ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಖಾತೆ ಸಚಿವ ರವಿಶಂಕರ್ ಪ್ರಸಾದ್ ಪತ್ರ ಬರೆದಿದ್ದಾರೆ.

ಕೊಪ್ಪಳ ಡಿಸಿಯನ್ನು ನಿಂದಿಸಿದ ಮಾಜಿ ಅರ್ಚಕನ ವಿರುದ್ಧ ಎಫ್ಐಆರ್
ಅಂಜನಾದ್ರಿ ಬೆಟ್ಟದ ಆಂಜನೇಯ ದೇಗುಲದ ಪೂಜೆಯ ಹಕ್ಕಿನಂದ ತಮ್ಮನ್ನು ಬಿಡಿಸಿ ಹೊರಗಟ್ಟಿದ ಕೊಪ್ಪಳ ಜಿಲ್ಲಾಧಿಕಾರಿಯನ್ನು ಗೂಂಡಾ ಎಂದು ನಿಂದಿಸಿದ ಅರ್ಚಕರೊಬ್ಬರ ಮೇಲೆ ಗಂಗಾವತಿ ಗ್ರಾಮೀಣ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಸಂಸತ್ ವಾಗ್ದಂಡನೆಗೆ ಡೊನಾಲ್ಡ್ ಟ್ರಂಪ್ ತೀವ್ರ ಆಕ್ರೋಶ
ತಮ್ಮ ವಿರುದ್ಧ ಹೌಸ್ ಆಫ್ ರೆಪ್ರೆಸೆಂಟೇಟಿವ್ ನಲ್ಲಿ ವಾಗ್ದಂಡನೆ ವಿಧಿಸುತ್ತಿದ್ದಂತೆಯೇ ಕೆಂಡಾಮಂಡಲಗೊಂಡಿರುವ ಟ್ರಂಪ್ ಅವರು ಸರಣಿ ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಧಿಕಾರ ದುರುಪಯೋಗ ಆರೋಪ: ಅಮೆರಿಕಾ ಅಧ್ಯಕ್ಷ ಟ್ರಂಪ್'ಗೆ ಸಂಸತ್ ವಾಗ್ದಂಡನೆ
ಅಧಿಕಾರ ದುರುಪಯೋಗಪಡಿಸಿಕೊಂಡ ಆರೋಪಕ್ಕೆ ತುತ್ತಾಗಿರುವ ಅಮೆರಿಕಾ ಆಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಅಮೆರಿಗಾದ ಸಂಸತ್ತಿನ ಕೆಳಮನೆಯಾದ ಹಾಗೂ ಡೆಮಾಕ್ರಟ್ ಬಹುಮತವಿರುವ ಹೌಸ್ ಆಫ್ ರೆಪ್ರೆಸೆಂಟೇಟಿವ್ (ಜನಪ್ರತಿನಿಧಿ ಸಭೆ) ಬುಧವಾರ ವಾಗ್ದಂಡನೆಗೆ ಗುರಿಪಡಿಸಿದೆ.

