Abdul Jabbar

ಅಮಾನತು ಅಂತ್ಯವಲ್ಲ, ಅಬ್ದುಲ್ ಜಬ್ಬಾರ್‌ಗೆ ಇನ್ನೂ ಅವಕಾಶ ಇದೆ: ಸಚಿವ ದಿನೇಶ್ ಗುಂಡೂರಾವ್
ಜಬ್ಬಾರ್ ಅಮಾನತುಗೊಂಡಿದ್ದಾರೆ. ಆದರೆ, ಅವರು ಇನ್ನೂ ವಿಧಾನ ಪರಿಷತ್ ಸದಸ್ಯರಾಗಿದ್ದಾರೆ. ಅವರನ್ನು ಮೂರೂ ಬಾರಿ ಎಂಎಲ್ಸಿಯಾಗಿ ಮಾಡಿದ್ದು ಪಕ್ಷವೇ.

'ನಮ್ಮ ವಿರುದ್ಧ ಶಿಸ್ತು ಕ್ರಮ ಕೈಗೊಂಡಿದ್ದೇಕೆ?': ಕಾಂಗ್ರೆಸ್ ಹೈಕಮಾಂಡ್ ಗೆ ಮುಸ್ಲಿಂ ನಾಯಕರ ಪತ್ರ
ನಿನ್ನೆ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಕರ್ನಾಟಕ ರಾಜ್ಯ ಮುಸ್ಲಿಂ ಸಂಘಟನೆಗಳ ಫೆಡರೇಷನ್ ಪ್ರತಿನಿಧಿಗಳು, ಸೋನಿಯಾ ಗಾಂಧಿ ಸೇರಿದಂತೆ ಕಾಂಗ್ರೆಸ್ ಹೈಕಮಾಂಡ್‌ಗೆ ಬರೆದ ಪತ್ರಗಳ ಪ್ರತಿಗಳನ್ನು ಬಿಡುಗಡೆ ಮಾಡಿದರು.

ಯಡಿಯೂರಪ್ಪ ಮಗನನ್ನು ಗೆಲ್ಲಿಸಿ ಎಂದು 'ಯಜಮಾನರು' ವೇದಿಕೆಯಲ್ಲೇ ಹೇಳಿದ್ದರು; ಆವಾಗ ಏನು ಕ್ರಮ ತಗೊಂಡ್ರಿ? ಡಿಕೆಶಿಗೆ ಜಬ್ಬರ್ ನೇರ ಪ್ರಶ್ನೆ!
ನನಗೆ ಇಲ್ಲಿಯವರೆಗೆ ಅಮಾನತು ಪತ್ರ ಬಂದಿಲ್ಲ. ನನಗೆ ಆದೇಶ ಬರಲಿ ಸರಿಯಾಗಿ ಉತ್ತರ ಕೊಡುತ್ತೇನೆ. ನನ್ನ ಆಡಿಯೋ ವೀಡಿಯೊ ಇದ್ದರೆ ಟಿವಿ ಮೂಲಕ ತೋರಿಸಬೇಕಲ್ಲ. ಯಾವ ಆಧಾರ ಇಟ್ಟುಕೊಂಡು ಅಮಾನತು ಮಾಡಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.

ಪಕ್ಷ ವಿರೋಧಿ ಚಟುವಟಿಕೆ: ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವದಿಂದಲೇ ಅಬ್ದುಲ್ ಜಬ್ಬಾರ್ ಅಮಾನತು!
ವಿಧಾನ ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಕಾಂಗ್ರೆಸ್ ಪಕ್ಷದ (INC) ಪ್ರಾಥಮಿಕ ಸದಸ್ಯತ್ವದಿಂದ ಅಮಾನತುಗೊಳಿಸಿ ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆದೇಶಿಸಿದ್ದಾರೆ.

'ನನ್ನನ್ನು ಬಲಿಪಶು ಮಾಡಲಾಯಿತು; ರಿಜ್ವಾನ್ ಅರ್ಷಾದ್, ಸಲೀಂ ಅಹ್ಮದ್ 20 ದಿನಗಳಲ್ಲಿ ಸಾಧಿಸದ್ದನ್ನು ಜಮೀರ್ ಖಾನ್ 2 ಗಂಟೆಗಳಲ್ಲಿ ಮಾಡಿ ತೋರಿಸಿದ್ದಾರೆ': ಅಬ್ದುಲ್ ಜಬ್ಬಾರ್
ರಿಜ್ವಾನ್ ಅರ್ಷಾದ್ ಮತ್ತು ಸಲಿಂ ಅಹ್ಮದ್ ಅವರು ಆಡಿದ ಮಾತುಗಳು ನನಗೆ ತುಂಬಾ ನೋವುಂಟುಮಾಡಿವೆ. ನಾನು ಆ ಸ್ಥಾನಕ್ಕೆ ಅರ್ಹನಲ್ಲ ಎಂದು ಹೇಳಿದ್ದರಿಂದ ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ಆದರೆ ನಾನು ಪಕ್ಷಕ್ಕೆ ರಾಜೀನಾಮೆ ನೀಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ದಾವಣಗೆರೆ: ಹಾಗಿದ್ದರೆ MLC ಸ್ಥಾನಕ್ಕೂ ರಾಜಿನಾಮೆ ಕೊಟ್ಬಿಡಿ; ಅಬ್ದುಲ್ ಜಬ್ಬಾರ್ ವಿರುದ್ಧ ಹರಿಹಾಯ್ದ ಮಾಜಿ ಮೇಯರ್
ದಾವಣಗೆರೆ ಲೋಕಸಭಾ ಚುನಾವಣೆಯ ವೇಳೆ ಅಬ್ದುಲ್ ಜಬ್ಬಾರ್ ಅವರು ಕಾಣಿಸಿಕೊಳ್ಳದ ಬಗ್ಗೆ ಚಮನ್‌ಸಾಬ್ ಆಕ್ಷೇಪ ವ್ಯಕ್ತಪಡಿಸಿದರು. ಇದು ಶಾಮನೂರು ಶಿವಶಂಕರಪ್ಪ ಅವರ ಮೊಮ್ಮಗನ ಲಗ್ನ ಅಲ್ಲ, ಬದಲಾಗಿ ಇದು ಚುನಾವಣೆ. ದೇಶದ ಹಿತದೃಷ್ಟಿಯಿಂದ ನಡೆಯುವ ಯುದ್ದ.

ಅಲ್ಪಸಂಖ್ಯಾತ ಪದಾಧಿಕಾರಿಗಳ ಸಾಮೂಹಿಕ ರಾಜೀನಾಮೆ: ಪಕ್ಷದ ಅನ್ನ ತಿಂದ ಮೇಲೆ ಕೆಲಸ ಮಾಡಬೇಕಿತ್ತು; ಜಬ್ಬಾರ್ ವಿರುದ್ಧ ಮಲ್ಲಿಕಾರ್ಜುನ್ ಕಿಡಿ
ಅಬ್ದುಲ್ ಜಬ್ಬಾರ್ ರಾಜೀನಾಮೆ ನೀಡಿದ್ದರಿಂದ ಮನನೊಂದು ಅಲ್ಪಸಂಖ್ಯಾತರ ವಿಭಾಗದ ರಾಜ್ಯ ಮಟ್ಟದ ಐವರು ರಾಜೀನಾಮೆ ನೀಡುತ್ತಿದ್ದೇವೆ ಎಂದಿದ್ದಾರೆ.

ಪಕ್ಷ ವಿರೋಧಿ ಚಟುವಟಿಕೆ: ಜಬ್ಬಾರ್ ರಾಜೀನಾಮೆ ಬೆನ್ನಲ್ಲೇ ಮತ್ತೊಂದು ಶಾಕ್; KPCC ಅಲ್ಪಸಂಖ್ಯಾತ ಘಟಕವನ್ನೇ ವಿಸರ್ಜಿಸಿದ DK Shivakumar
ದಾವಣಗೆರೆ ದಕ್ಷಿಣ ಉಪ ಚುನಾವಣೆಯ ಮತದಾನ ಮುಕ್ತಾಯ ಬೆನ್ನಲ್ಲೇ ಕಾಂಗ್ರೆಸ್ ನಲ್ಲಿ ಆಂತರಿಕ ಭಿನ್ನಮತ ಸ್ಫೋಟಗೊಂಡಿದ್ದು, ಕಾಂಗ್ರೆಸ್ ಮುಸ್ಲಿಂ ನಾಯರ ನಡುವಿನ ಅಸಮಾಧಾನ ಇದೀಗ ವ್ಯಾಪಕ ಸುದ್ದಿಗೆ ಗ್ರಾಸವಾಗಿದೆ.

