ರಾಜಕೀಯ

ಯಡಿಯೂರಪ್ಪ ಮಗನನ್ನು ಗೆಲ್ಲಿಸಿ ಎಂದು 'ಯಜಮಾನರು' ವೇದಿಕೆಯಲ್ಲೇ ಹೇಳಿದ್ದರು; ಆವಾಗ ಏನು ಕ್ರಮ ತಗೊಂಡ್ರಿ? ಡಿಕೆಶಿಗೆ ಜಬ್ಬರ್ ನೇರ ಪ್ರಶ್ನೆ!

ನನಗೆ ಇಲ್ಲಿಯವರೆಗೆ ಅಮಾನತು ಪತ್ರ ಬಂದಿಲ್ಲ. ನನಗೆ ಆದೇಶ ಬರಲಿ ಸರಿಯಾಗಿ ಉತ್ತರ ಕೊಡುತ್ತೇನೆ. ನನ್ನ ಆಡಿಯೋ ವೀಡಿಯೊ ಇದ್ದರೆ ಟಿವಿ ಮೂಲಕ ತೋರಿಸಬೇಕಲ್ಲ. ಯಾವ ಆಧಾರ ಇಟ್ಟುಕೊಂಡು ಅಮಾನತು ಮಾಡಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.

ಯಡಿಯೂರಪ್ಪ ಮಗನನ್ನು ಗೆಲ್ಲಿಸಿ ಎಂದು 'ಯಜಮಾನರು'  ವೇದಿಕೆಯಲ್ಲೇ ಹೇಳಿದ್ದರು; ಆವಾಗ ಏನು ಕ್ರಮ ತಗೊಂಡ್ರಿ? ಡಿಕೆಶಿಗೆ ಜಬ್ಬರ್ ನೇರ ಪ್ರಶ್ನೆ!
ಅಬ್ದುಲ್ ಜಬ್ಬಾರ್
Published On :

ದಾವಣಗೆರೆ: ಯಜಮಾನರು (ಶಾಮನೂರು ಶಿವಶಂಕರಪ್ಪ) ವೇದಿಕೆಯಲ್ಲೇ ಯಡಿಯೂರಪ್ಪ ಅವರ ಮಗನನ್ನು ಗೆಲ್ಲಿಸಿ ಎಂದು ಮಾತನಾಡಿದ್ದರು. ಆವಾಗ ಯಾಕೆ ಕ್ರಮ ಕೈಗೊಳ್ಳಲಿಲ್ಲ ಎಂದು ವಿಧಾನ ಪರಿಷತ್‌ ಸದಸ್ಯ ಅಬ್ದುಲ್ ಜಬ್ಬಾರ್‌ ಪ್ರಶ್ನಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನಗೆ ಇಲ್ಲಿಯವರೆಗೆ ಅಮಾನತು ಪತ್ರ ಬಂದಿಲ್ಲ. ನನಗೆ ಆದೇಶ ಬರಲಿ ಸರಿಯಾಗಿ ಉತ್ತರ ಕೊಡುತ್ತೇನೆ. ನನ್ನ ಆಡಿಯೋ ವೀಡಿಯೊ ಇದ್ದರೆ ಟಿವಿ ಮೂಲಕ ತೋರಿಸಬೇಕಲ್ಲ. ಯಾವ ಆಧಾರ ಇಟ್ಟುಕೊಂಡು ಅಮಾನತು ಮಾಡಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.

ಚುನಾವಣೆಯಲ್ಲಿ ಕಾಂಗ್ರೆಸ್ ಸೋಲುತ್ತದೆ ಎಂದು ನನಗೇನು ಅನ್ನಿಸುತ್ತಿಲ್ಲ. ಶಾಮನೂರು ಕುಟುಂಬದ ಒಬ್ಬರು ಮಂತ್ರಿಯಾಗಿದ್ದಾರೆ. ಮತ್ತೊಬ್ಬರು ಸಂಸದರಾಗಿದ್ದಾರೆ. ಅವರಿಗೆ ಯಾಕೆ ಟಿಕೆಟ್‌ ಕೊಡುತ್ತೀರಿ. ನಮ್ಮ ಸಮುದಾಯದ ಜನಸಂಖ್ಯೆ ಜಾಸ್ತಿ ಇದೆ ನಮಗೆ ಕೊಡಿ ಎಂದು ಕೇಳಿದ್ದೆವು ಎಂದರು.

ಯಾರೂ ಪ್ರಚಾರ ನಡೆಸಿ ಎಂದು ನನ್ನ ಕರೆದಿಲ್ಲ. ಮಲ್ಲಿಕಾರ್ಜುನ್‌ ಕರೆಯದ್ದಕ್ಕೆ ನಾವು ಹೋಗಿಲ್ಲ. ಎಂಎಲ್‌ಸಿಗೂ ಇದಕ್ಕೂ ಏನು ಸಂಬಂಧ, ನಮ್ಮ ಕ್ಷೇತ್ರ ಆದರೂ ಅಭ್ಯರ್ಥಿ ಅಥವಾ ಅವರ ತಾಯಿ ಯಾರೂ ನನ್ನ ಹತ್ತಿರ ಬಂದು ಮಾತನಾಡಿಲ್ಲ. ಅದಕ್ಕೆ ರಾಜೀನಾಮೆ ನೀಡಿದ್ದೇನೆ ಎಂದು ಹೇಳಿದರು.

ನಾನು ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಎಲ್ಲಿಗೂ ಹೋಗಿಲ್ಲ. ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸ್ಥಾನಕ್ಕೆ ನಾನೇ ಸ್ವಇಚ್ಚೆಯಿಂದ ರಾಜೀನಾಮೆ ನೀಡಿದ್ದೆ. ಅಧ್ಯಕ್ಷರು ಯಾವುದು ಅಶಿಸ್ತು ಎಂಬುದನ್ನು ತೋರಿಸಬೇಕಲ್ವಾ ಎಂದು ಪ್ರಶ್ನಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.