AAP

'ಕೇಜ್ರಿವಾಲ್ ಉತ್ತಮ ಕೆಲಸ ಮಾಡುತ್ತಿದ್ದರು, ಆದರೆ... ಮದ್ಯದಂಗಡಿ ತೆರೆದು ದಾರಿತಪ್ಪಿದರು': ಅಣ್ಣಾ ಹಜಾರೆ
ರೇಖಾ ಗುಪ್ತಾ ಎಂಬ ಮಹಿಳೆ ರಾಷ್ಟ್ರ ರಾಜಧಾನಿಯ ಹೊಸ ಮುಖ್ಯಮಂತ್ರಿಯಾಗುವುದು ಹೆಮ್ಮೆಯ ವಿಷಯ. ಅವರ ಶುದ್ಧ ಆಲೋಚನೆಗಳು ಮತ್ತು ಕಾರ್ಯಗಳಿಂದಾಗಿ ಜನರು ಅವರಿಗೆ ಮತ ಹಾಕಿದರು ಎಂದು ಬಣ್ಣಿಸಿದ್ದಾರೆ.

ಟೀಕೆ ಬಿಟ್ಟು ನಿಮ್ಮ ಪಕ್ಷ ನೋಡಿಕೊಳ್ಳಿ: ವಿಪಕ್ಷಗಳ ವಿರುದ್ಧ ದೆಹಲಿ ನೂತನ ಸಿಎಂ ರೇಖಾ ಗುಪ್ತಾ ವಾಗ್ದಾಳಿ
ಅವರು ಮೊದಲು ತಮ್ಮ ತಮ್ಮ ಪಕ್ಷಗಳನ್ನು ನೋಡಿಕೊಳ್ಳಲಿ. ಸಾಕಷ್ಟು ಮಂದಿ ಪಕ್ಷಗಳ ತೊರೆಯಲು ಬಯಸಿದ್ದಾರೆ. ಸಿಎಜಿ ವರದಿಯನ್ನು ಸದನದಲ್ಲಿ ಮಂಡಿಸಿದಾಗ ಹಲವರ ಬಂಡವಾಳ ಬಯಲಾಗುತ್ತದೆ.

ಪಂಜಾಬ್ ಸರ್ಕಾರದಿಂದ ದೊಡ್ಡ ಕ್ರಮ: 52 ಪೊಲೀಸ್ ಅಧಿಕಾರಿಗಳ ವಜಾ; ಮುಕ್ತಸರ್ ಜಿಲ್ಲಾಧಿಕಾರಿ ಅಮಾನತು!
ಪಂಜಾಬ್ ಸರ್ಕಾರ ಭ್ರಷ್ಟಾಚಾರದ ವಿರುದ್ಧ ದೊಡ್ಡ ದಾಳಿ ನಡೆಸಿದೆ. ಎಎಪಿ ಸರ್ಕಾರ ಪೊಲೀಸ್ ಇಲಾಖೆಯಲ್ಲಿನ ಭ್ರಷ್ಟಾಚಾರದ ವಿರುದ್ಧ ಪ್ರಮುಖ ಕ್ರಮ ಕೈಗೊಂಡಿದೆ.

ದೆಹಲಿಯ ನೂತನ ಸಿಎಂ ಆಗಿ ರೇಖಾ ಗುಪ್ತಾ ಆಯ್ಕೆ, ಪರ್ವೇಶ್ ಡಿಸಿಎಂ; ನಾಳೆ ಪ್ರಮಾಣವಚನ ಸ್ವೀಕಾರ
ಫೆಬ್ರವರಿ 5ರಂದು ನಡೆದ ವಿಧಾನಸಭಾ ಚುನಾವಣೆಯಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ 27 ವರ್ಷಗಳ ವನವಾಸ ಅಂತ್ಯಗೊಂಡಿತ್ತು.

AAP ನಾಯಕ, ಮಾಜಿ ಸಚಿವ ಸತ್ಯೇಂದ್ರ ಜೈನ್ ವಿರುದ್ಧ ತನಿಖೆಗೆ ರಾಷ್ಟ್ರಪತಿ ಒಪ್ಪಿಗೆ!
ಭೂ ವ್ಯವಹಾರ ಹಗರಣದಲ್ಲಿ ಹಣ ವರ್ಗಾವಣೆ ಪ್ರಕರಣದಲ್ಲಿ ಎಎಪಿ ನಾಯಕ ಸತ್ಯೇಂದ್ರ ಜೈನ್ ವಿರುದ್ಧ ಮೊಕದ್ದಮೆ ವಿಚಾರಣೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅನುಮತಿ ನೀಡಿದ್ದಾರೆ. ಫೆಬ್ರವರಿ 14ರಂದು ಕೇಂದ್ರ ಗೃಹ ಸಚಿವಾಲಯವು ಈ ವಿಚಾರವಾಗಿ ರಾಷ್ಟ್ರಪತಿಗಳಿಂದ ಅನುಮೋದನೆ ಕೋರಿತ್ತು.

ದೆಹಲಿ ಮುಖ್ಯಮಂತ್ರಿ ಹುದ್ದೆಗೆ ಬಿಜೆಪಿಯಲ್ಲಿ ಸೂಕ್ತ ನಾಯಕರ ಕೊರತೆ: ಹಂಗಾಮಿ ಸಿಎಂ, ಆಪ್ ನಾಯಕಿ ಆತಿಶಿ ಟೀಕೆ
ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹಿರಿಯ ಎಎಪಿ ನಾಯಕಿ ಮತ್ತು ದೆಹಲಿಯ ಹಂಗಾಮಿ ಮುಖ್ಯಮಂತ್ರಿ ಅತಿಶಿ, ರಾಷ್ಟ್ರ ರಾಜಧಾನಿಯನ್ನು ಆಳಲು ಬಿಜೆಪಿಗೆ ವಿಶ್ವಾಸಾರ್ಹ ನಾಯಕರ ಕೊರತೆ ಇದೆ ಎಂದರು.

ಎಎಪಿಗೆ ಮತ್ತೊಂದು ಶಾಕ್; ದೆಹಲಿ ಮೇಯರ್ ಚುನಾವಣೆಗೂ ಮುನ್ನ 3 ಕೌನ್ಸಿಲರ್‌ಗಳು ಬಿಜೆಪಿ ಸೇರ್ಪಡೆ
ಆಪ್ ಕೌನ್ಸಿಲರ್‌ಗಳನ್ನು ಪಕ್ಷಕ್ಕೆ ಸ್ವಾಗತಿಸಿದ ನಗರ ಬಿಜೆಪಿ ಅಧ್ಯಕ್ಷ ವೀರೇಂದ್ರ ಸಚ್‌ದೇವ ಅವರು, ದೆಹಲಿಯು ಕೇಂದ್ರ, ವಿಧಾನಸಭೆ ಮತ್ತು ಪುರಸಭೆ ಮಟ್ಟದಲ್ಲಿ "ತ್ರಿವಳಿ ಎಂಜಿನ್" ಸರ್ಕಾರವನ್ನು ಹೊಂದಲಿದೆ ಎಂದರು.

'ಪಂಜಾಬ್‌ನಲ್ಲಿ AAP ವಿಭಜನೆ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ': ಕಾಂಗ್ರೆಸ್ ನಾಯಕ ಪ್ರತಾಪ್ ಸಿಂಗ್ ಬಾಜ್ವಾ

ದೆಹಲಿ ಚುನಾವಣೆಯಲ್ಲಿ ಸೋಲು; INDIA bloc ಬಿರುಕು ವದಂತಿ; ಕಾಂಗ್ರೆಸ್ ನಾಯಕರ ಭಿನ್ನ ನಿಲುವು
ಕೆಲವು ಕಾಂಗ್ರೆಸ್ ನಾಯಕರು, ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಎಎಪಿ ಮೈತ್ರಿ ಮಾಡಿಕೊಳ್ಳಲು ಇಷ್ಟ ಹೊಂದಿರಲಿಲ್ಲ ಎಂದು ಪಕ್ಷದ ನಿಲುವನ್ನು ಸಮರ್ಥಿಸಿಕೊಂಡರೆ, ಮತ್ತೊಂದು ವರ್ಗವು ಆತ್ಮಾವಲೋಕನ ಮತ್ತು ಸುಸಂಬದ್ಧ ರಾಜಕೀಯ ತಂತ್ರಕ್ಕೆ ಕರೆ ನೀಡಿದ್ದಾರೆ.

