Aam Aadmi Party

ಗುಜರಾತ್ ಎಎಪಿಗೆ ಮೇಜರ್ ಸರ್ಜರಿ: ಸಿಎಂ ಅಭ್ಯರ್ಥಿ ಇಸುದನ್ ಗಧ್ವಿಗೆ ರಾಜ್ಯಾಧ್ಯಕ್ಷ ಪಟ್ಟ, ಇಟಾಲಿಯಾಗೆ ರಾಷ್ಟ್ರೀಯ ಜವಾಬ್ದಾರಿ!
ಗುಜರಾತ್ ವಿಧಾನಸಭಾ ಚುನಾವಣೆ ಬಳಿಕ ಆಮ್ ಆದ್ಮಿ ಪಕ್ಷಕ್ಕೆ ಮೇಜರ್ ಸರ್ಜರಿ ಮಾಡಲಾಗಿದ್ದು, ಸಿಎಂ ಅಭ್ಯರ್ಥಿ ಇಸುದನ್ ಗಧ್ವಿ, ರಾಜ್ಯಾಧ್ಯಕ್ಷ ಗೋಪಾಲ್ ಇಟಾಲಿಯಾ ಸೇರಿದಂತೆ ಪಕ್ಷದ ಇಡೀ ಸಂಘಟನೆಯ ಮೇಲುಸ್ತುವಾರಿಗಳನ್ನು ಬದಲಿಸಲಾಗಿದೆ.

ರಾಜಕೀಯ ಜಾಹೀರಾತು ಪ್ರಕಟ: ರೂ.97 ಕೋಟಿ ವಸೂಲಿ ಮಾಡುವಂತೆ ಲೆ.ಗವರ್ನರ್ ಆದೇಶ, ಅವರಿಗೆ ಅಧಿಕಾರ ಇಲ್ಲ ಎಂದ ಎಎಪಿ
ಸರ್ಕಾರದ ಹೆಸರಿನಲ್ಲಿ ರಾಜಕೀಯ ಜಾಹೀರಾತುಗಳ ಪ್ರಕಟಿಸಿದ್ದ ಆಮ್ ಆದ್ಮಿ ಪಕ್ಷದಿಂದ 97 ಕೋಟಿ ರೂ.ಗಳನ್ನು ವಸೂಲಿ ಮಾಡುವಂತೆ ಮುಖ್ಯ ಕಾರ್ಯದರ್ಶಿಗೆ ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ ಕೆ ಸಕ್ಸೇನಾ ಆದೇಶ ಹೊರಡಿಸಿದ್ದು, ಈ ಆದೇಶ ಹೊರಡಿಸುವ ಅಧಿಕಾರ ಅವರಿಗಿಲ್ಲ ಎಂದು ಆಮ್ ಆದ್ಮಿ ಪಕ್ಷ ಮಂಗಳವಾರ ಹೇಳಿದೆ.

ಜೈಲಿನೊಳಗೆ ಮಸಾಜ್, ಅದ್ದೂರಿ ಊಟದ ಬಳಿಕ ಸತ್ಯೇಂದ್ರ ಜೈನ್ ಸೆಲ್‌ನಲ್ಲಿ ಕ್ಲೀನಿಂಗ್ ಸೇವೆ: ವಿಡಿಯೋ ವೈರಲ್
ಆಮ್ ಆದ್ಮಿ ಪಕ್ಷದ (ಎಎಪಿ) ಸಚಿವ ಸತ್ಯೇಂದ್ರ ಜೈನ್ ಅವರು ತಿಹಾರ್ ಜೈಲಿನ ಕೊಠಡಿಯೊಳಗೆ ಮಸಾಜ್ ಮಾಡಿಸಿಕೊಳ್ಳುವ ಮತ್ತು ರುಚಿಕರವಾದ ಊಟ ಮಾಡುತ್ತಿರುವ ವೀಡಿಯೊಗಳು ಬಿಡುಗಡೆಯಾದ ಕೆಲವೇ ದಿನಗಳ ಬಳಿಕ ಇದೀಗ ಮತ್ತೊಂದು ವಿಡಿಯೋ ಬಿಡುಗಡೆಯಾಗಿದ್ದು, ಸೆಲ್‌ನಲ್ಲಿ ಕ್ಲೀನಿಂಗ್ ಸೇವೆಯ ಈ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದೆ.

ದೆಹಲಿ ಅಬಕಾರಿ ನೀತಿ ಹಗರಣ: ತನಿಖಾ ಸಂಸ್ಥೆಗಳು ನೀಡಿರುವ ಮಾಧ್ಯಮ ಪ್ರಕಟಣೆಗಳನ್ನು ಕೇಳಿದ ಹೈಕೋರ್ಟ್
ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ತನಿಖಾ ಸಂಸ್ಥೆಗಳು ಹೊರಡಿಸಿರುವ ಎಲ್ಲಾ ಮಾಧ್ಯಮ ಹೇಳಿಕೆಗಳು ಮತ್ತು ಪ್ರಕಟಣೆಗಳನ್ನು ತನ್ನ ಮುಂದಿಡುವಂತೆ ದೆಹಲಿ ಹೈಕೋರ್ಟ್ ಸೋಮವಾರ ಸಿಬಿಐ ಮತ್ತು ಇ.ಡಿಗೆ ಸೂಚಿಸಿದೆ.

MCD ಚುನಾವಣೆ: ಟಿಕೆಟ್ ನಿರಾಕರಣೆ ವಿರೋಧಿಸಿ ವಿದ್ಯುತ್ ಕಂಬ ಏರಿದ AAP ಮಾಜಿ ಕೌನ್ಸಿಲರ್!
ದೆಹಲಿ ಮಹಾನಗರ ಪಾಲಿಕೆ (ಎಂಸಿಡಿ) ಚುನಾವಣೆಯಲ್ಲಿ ಟಿಕೆಟ್ ನಿರಾಕರಿಸಿರುವ ಹಿನ್ನೆಲೆಯಲ್ಲಿ ಆಮ್ ಆದ್ಮಿ ಪಕ್ಷದ (ಎಎಪಿ) ಮಾಜಿ ಕೌನ್ಸಿಲರ್ ಟವರ್ ಏರಿ ಪ್ರತಿಭಟನೆ ನಡೆಸಿರುವ ಘಟನೆ ನಡೆದಿದೆ.

"ಸ್ವರಾಜ್ ಇಂಡಿಯಾ" ಪಕ್ಷ ಸ್ಥಾಪಿಸಿದ ಪ್ರಶಾಂತ್ ಭೂಷಣ್, ಯೋಗೇಂದ್ರ ಯಾದವ್
ಆಮ್ ಆದ್ಮಿ ಪಕ್ಷದಿಂದ ಉಚ್ಛಾಟನೆಗೊಂಡು ರಾಜಕೀಯದಿಂದ ದೂರ ಉಳಿದಿದ್ದ ಉಚ್ಚಾಟಿತ ನಾಯಕರಾದ ಯೋಗೇಂದ್ರ ಯಾದವ್ ಹಾಗೂ ಪ್ರಶಾಂತ್ ಭೂಷಣ್ "ಸ್ವರಾಜ್ ಇಂಡಿಯಾ' ಎಂಬ ರಾಜಕೀಯ ಪಕ್ಷವನ್ನು ಸ್ಥಾಪಿಸಿದ್ದಾರೆ.

ಗುಜರಾತ್ ಚುನಾವಣೆ: 21 ಅಭ್ಯರ್ಥಿಗಳ 11ನೇ ಪಟ್ಟಿ ಪ್ರಕಟಿಸಿದ ಆಮ್ ಆದ್ಮಿ ಪಕ್ಷ
ಡಿಸೆಂಬರ್ 1 ಮತ್ತು ಡಿಸೆಂಬರ್ 5 ರಂದು ನಡೆಯಲಿರುವ ಗುಜರಾತ್ ವಿಧಾನಸಭೆ ಚುನಾವಣೆಗೆ ಆಮ್ ಆದ್ಮಿ ಪಕ್ಷ(ಎಎಪಿ) ಶನಿವಾರ ತನ್ನ 21 ಅಭ್ಯರ್ಥಿಗಳ 11ನೇ ಪಟ್ಟಿಯನ್ನು ಶನಿವಾರ ಪ್ರಕಟಿಸಿದೆ.

ಉತ್ತರ ಕರ್ನಾಟಕದ ಹಲವು ನಾಯಕರು ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆ!
ಉತ್ತರ ಕರ್ನಾಟಕ ಭಾಗದ ಹಲವು ರಾಜಕೀಯ ನಾಯಕರು, ಸಾಮಾಜಿಕ ಹೋರಾಟಗಾರರು ಹಾಗೂ ಗಣ್ಯ ವ್ಯಕ್ತಿಗಳು ಗುರುವಾರ ಆಮ್ ಆದ್ಮಿ ಪಾರ್ಟಿಗೆ ರಾಜ್ಯ ಚುನಾವಣಾ ಉಸ್ತುವಾರಿ ದಿಲೀಪ್ ಪಾಂಡೆ.

ಬಿಬಿಎಂಪಿ ಚುನಾವಣೆಗೆ ಎಎಪಿ ಪಕ್ಷದ ಪ್ರಣಾಳಿಕೆ ಸಿದ್ಧಪಡಿಸುವ ಜವಾಬ್ದಾರಿ ಅಶ್ವಿನ್ ಮಹೇಶ್‌ಗೆ
ಬಿಬಿಎಂಪಿ ಚುನಾವಣೆಗೆ ಪಕ್ಷದ ಪ್ರಣಾಳಿಕೆ ಸಿದ್ಧಪಡಿಸುವ ಜವಾಬ್ದಾರಿಯನ್ನು ಆಮ್ ಆದ್ಮಿ ಪಕ್ಷವು ನಗರವಾಸಿ ಅಶ್ವಿನ್ ಮಹೇಶ್ ಅವರಿಗೆ ನೀಡಿದೆ.

