ಪ್ರಧಾನ ಸುದ್ದಿ

ಭ್ರಷ್ಟ ಅಧಿಕಾರಿಗಳ ಮೇಲೆ ಎಸಿಬಿ ದಾಳಿ, ಹಳೆ ನೋಟು ಸೇರಿ ಕೋಟ್ಯಾಂತರ ರು. ನಗದು ಪತ್ತೆ

ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ದ ಅಧಿಕಾರಿಗಳು ಬುಧವಾರ ರಾಮನಗರ ತಹಶೀಲ್ದಾರ್ ಎಂ.ರಘುಮೂರ್ತಿ ಸೇರಿದಂತೆ ನಾಲ್ವರು...

ಭ್ರಷ್ಟ ಅಧಿಕಾರಿಗಳ ಮೇಲೆ ಎಸಿಬಿ ದಾಳಿ, ಹಳೆ ನೋಟು ಸೇರಿ ಕೋಟ್ಯಾಂತರ ರು. ನಗದು ಪತ್ತೆ
ಸಾಂದರ್ಭಿಕ ಚಿತ್ರ
Published On :
ಬೆಂಗಳೂರು: ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ದ ಅಧಿಕಾರಿಗಳು ಬುಧವಾರ  ರಾಮನಗರ ತಹಶೀಲ್ದಾರ್ ಎಂ.ರಘುಮೂರ್ತಿ ಸೇರಿದಂತೆ ನಾಲ್ವರು ಭ್ರಷ್ಟ ಅಧಿಕಾರಿಗಳ ಮನೆ ಮೇಲೆ ದಾಳಿ ಮಾಡಿದ್ದು, ದಾಳಿಯ ವೇಳೆ ನಿಷೇಧಿತ ನೋಟು ಸೇರಿದಂತೆ ಕೋಟ್ಯಾಂತರ ರುಪಾಯಿ ನಗದು, ಚಿನ್ನಾಭರಣ ಹಾಗೂ ಅಪಾರ ಪ್ರಮಾಣದ ಅಕ್ರಮ ಆಸ್ತಿ-ಪಾಸ್ತಿಯನ್ನು ಪತ್ತೆಹಚ್ಚಿದ್ದಾರೆ.
ಇಂದು ಬೆಳ್ಳಂಬೆಳಗ್ಗೆ ರಾಮನಗರ ತಹಶೀಲ್ದಾರ್‌ ರಘುಮೂರ್ತಿ ನಿವಾಸ ಹಾಗೂ ಕಚೇರಿ, ಕೆಪಿಟಿಸಿಎಲ್‌ ನಿರ್ದೇಶಕ ಎಚ್‌.ನಾಗೇಶ್‌ ಮನೆ, ಕಚೇರಿ ಮತ್ತು ಸಂಬಂಧಿಕರ ನಿವಾಸ ದ ಮೇಲೆ , ತಾಂತ್ರಿಕ ಶಿಕ್ಷಣ ಇಲಾಖೆಯ ಅಧೀಕ್ಷಕ  ರಾಮಕೃಷ್ಣ ರೆಡ್ಡಿ  ನಿವಾಸದ ಮೇಲೆ ,ಬಿಬಿಎಂಪಿ ಪೂರ್ವ ವಿಭಾಗದ ಹೆಚ್ಚುವರಿ ಆಯುಕ್ತ  ಡಾ.ಕೆ.ಸಿ ಯತೀಶ್‌ ಅವರ ನಾಗರಬಾವಿ 2 ನೇ ಹಂತದಲ್ಲಿರುವ ನಿವಾಸದ ಮೇಲೆ ಏಕಕಾಲಕ್ಕೆ ದಾಳಿ ನಡೆಸಿರುವ ಎಸಿಬಿ ಅಧಿಕಾರಿಗಳು ಕೋಟ್ಯಂತರ ರು ಮೌಲ್ಯದ ಅಕ್ರಮ ಆಸ್ತಿ ಪತ್ತೆಹಚ್ಚಿದ್ದಾರೆ.
ಎಚ್. ನಾಗೇಶ್ ಮನೆ ಕಚೇರಿ ಮೇಲೆ ನಡೆದ ಎಸಿಬಿ ದಾಳಿಯಲ್ಲಿ ೧ಕೆಜಿ ಚಿನ್ನ ೫ ಕೆಜಿ ಬೆಳ್ಳಿ ೨.೫ ಲಕ್ಷ ರುಪಾಯಿ ಹೊಸನೋಟು ಹಾಗೂ ಹಳೆಯ ೫೦ ಸಾವಿರ ರುಪಾಯಿ ಮುಖಬೆಲೆಯ ನೋಟುಗಳು ಹಾಗೂ ಪತ್ನಿ ಮಕ್ಕಳ ಹೆಸರಲ್ಲಿದ್ದ ನಿವೇಶನಗಳು ಪತ್ತೆಯಾಗಿವೆ.
ಇನ್ನು ರಘುಮೂರ್ತಿ ಅವರ ರಾಮನಗರದ ಕಚೇರಿ, ನಾಗರಬಾವಿಯ ವಿನಾಯಕ ಬಡಾವಣೆಯ ಮನೆ, ಯತೀಶ್ ಕುಮಾರ್ ಅವರ ಮೇಯೋಹಾಲ್‌ನ ಕಚೇರಿ, ನಾಗರಬಾವಿಯ ೧೦ನೇ ಬ್ಲಾಕ್‌ನ ಮನೆ, ನಾಗೇಶ್ ಅವರ ಕಾವೇರಿ ಭವನದ ಕಚೇರಿ, ಕೋರಮಂಗಲದ ನ್ಯಾಷನಲ್ ಗೇಮ್ಸ್ ವಿಲೇಜ್  ಬಳಿ ಇರುವ ಮನೆ ಹಾಗೂ ರಾಮಕೃಷ್ಣ ರೆಡ್ಡಿ ಅವರ ತಾಂತ್ರಿಕ ಶಿಕ್ಷಣ ಮಂಡಳಿಯ ಕಚೇರಿ, ಬ್ಯಾಟರಾಯನಪುರದ ವಿನಾಯಕ ಬಡಾವಣೆಯ ಮನೆಗಳ ಮೇಲೆ ದಾಳಿ ನಡೆಸಿ ಅಕ್ರಮ ಆಸ್ತಿ ಪಾಸ್ತಿಯನ್ನು ಪರಿಶೀಲನೆ ನಡೆಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.