ಬೀಫ್ ವಿವಾದ: ನಟಿ ಕಾಜೋಲ್ ಬೆಂಬಲಕ್ಕೆ ನಿಂತ ಮಮತಾ ಬ್ಯಾನರ್ಜಿ
ಬೀಫ್ ಖಾದ್ಯದ ವಿಡಿಯೋ ಹಾಕಿದ್ದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಪರಿಹಾಸ್ಯಕ್ಕೆ ಗುರಿಯಾಗಿದ್ದ ನಟಿ ಕಾಜೋಲ್ ಅವರನ್ನು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪರೋಕ್ಷವಾಗಿ...

Published On :
ದಕ್ಷಿಣ ದೀನಜಪುರ್: ಬೀಫ್ ಖಾದ್ಯದ ವಿಡಿಯೋ ಹಾಕಿದ್ದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಪರಿಹಾಸ್ಯಕ್ಕೆ ಗುರಿಯಾಗಿದ್ದ ನಟಿ ಕಾಜೋಲ್ ಅವರನ್ನು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪರೋಕ್ಷವಾಗಿ ಬೆಂಬಲಿಸಿದ್ದಾರೆ. ಮತ್ತೊಬ್ಬರ ಆಹಾರ ಅಭ್ಯಾಸದ ಬಗ್ಗೆ ಕೆಲವರು ಅಸಹಿಷ್ಣುಗಳಾಗಿರುವದು ಆತಂಕಕಾರಿ ಎಂದಿದ್ದಾರೆ.
"ನಾನು ಆ ನಟಿಯ ಹೆಸರನ್ನು ಹೇಳುವುದಿಲ್ಲ. ಅವರು ಶಾರುಖ್ ಖಾನ್ ಜೊತೆಗೆ ಹಲವು ಸಿನೆಮಾಗಳಲ್ಲಿ ನಟಿಸಿದ್ದಾರೆ. ಅವರು ಇತ್ತೀಚಿಗೆ ಒಂದು ವಿಡಿಯೋ ಹಾಕಿದ್ದರು ಮತ್ತು ಅದ್ಕಕಾಗಿ ಜನ ಅವರನ್ನು ಸಾಮಾಜಿಕ ಜಾಲತಾಣಗಳಲ್ಲಿ ಟ್ರೊಲ್ ಮಾಡಿದ್ದರು. ಅದು ಗೋಮಾಂಸ ಅಲ್ಲ ಬದಲಿಗೆ ಎಮ್ಮೆಯದ್ದು ಎಂದು ಅವರು ಸ್ಪಷ್ಟೀಕರಣ ನೀಡಬೇಕಾಗಿ ಬಂತು. ಇದು ಆತಂಕಕಾರಿ ಸನ್ನಿವೇಶ" ಎಂದು ಕೂಡ ಅವರು ಹೇಳಿದ್ದಾರೆ.
ಕೆಲವರು ಅಸಹಿಷ್ಣುಗಳಾಗುತ್ತಿರವುದು ಆತಂಕಕಾರಿ ಸನ್ನಿವೇಶ ಮತ್ತು "ಅವರು ಮತ್ತೊಬ್ಬರು ಏನನ್ನು ತಿನ್ನಬೇಕು ಎನ್ನುವುದನ್ನು ಆದೇಶಿಸುತ್ತಿದ್ದಾರೆ" ಎಂದಿದ್ದಾರೆ.
ವಿಡಿಯೋ ತೆಗೆದುಹಾಕಿದ್ದ ೪೨ ವರ್ಷದ ನಟಿ ಕಾಜೋಲ್ ಧಾರ್ಮಿಕ ಭಾವನೆಗಳನ್ನು ಘಾಸಿ ಮಾಡುವ ಯಾವುದೇ ಇರಾದೆ ಇರಲಿಲ್ಲ ಎಂದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


